Lakshmi Photo Vastu: ದೀಪಾವಳಿ ದಿನ ಲಕ್ಷ್ಮೀ ಫೋಟೋ ಈ ದಿಕ್ಕಿಗೆ ಇಡಲೇಬೇಡಿ.. ದುಡಿದ ದುಡ್ಡು ಕೈಯಲ್ಲಿ ನಿಲ್ಲೋದೇ ಇಲ್ಲ!
ಲಕ್ಷ್ಮಿ ದೇವಿ ಸಂಪತ್ತು, ವೈಭವ ಮತ್ತು ಸಮೃದ್ಧಿಯ ದೇವತೆಯಾಗಿದ್ದಾಳೆ. ಆಕೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದು ಮಾತ್ರವಲ್ಲದೆ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ಅಲ್ಲದೆ ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ನೆಲೆಸಲಿದೆ.
ಕುಟುಂಬದಲ್ಲಿ ಪರಸ್ಪರ ಪ್ರೀತಿ ಮತ್ತು ಸಹೋದರತ್ವ ಹೆಚ್ಚಾಗಲು ಭಕ್ತರು ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಆಕೆ ಅದೃಷ್ಟದ ದೇವತೆಯಾದ ಕಾರಣ ಹಿಂದೂ ಧರ್ಮದಲ್ಲಿ ಆಕೆಯ ವಿಗ್ರಹ ಮತ್ತು ಫೋಟೋವನ್ನು ಮನೆ ಹಾಗೂ ಕಚೇರಿಯಲ್ಲಿ ಇಟ್ಟು ಪೂಜಿಸಲಾಗುತ್ತದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಜನರು ತಮ್ಮ ಮನೆಗಳಲ್ಲಿ ಮತ್ತು ಪೂಜಾ ಕೊಠಡಿಗಳಲ್ಲಿ ಲಕ್ಷ್ಮಿ ದೇವಿಯ ಹೊಸ ಫೋಟೋಗಳನ್ನು ಇಡುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಕಾಪಾಡಿಕೊಳ್ಳಬಹುದು. ಇದರಿಂದಾಗಿ ಮನೆ ಹಾಗೂ ಕಚೇರಿಯಲ್ಲಿ ಹಣದ ಸುರಿಮಳೆಯಾಗುತ್ತದೆ. ಪ್ರತಿಯೊಂದು ಆಸೆಯೂ ಈಡೇರುತ್ತದೆ.
ವಾಸ್ತು ಶಾಸ್ತ್ರದಲ್ಲಿ ಲಕ್ಷ್ಮಿ ದೇವಿಯ ಫೋಟೋವನ್ನು ತಪ್ಪು ದಿಕ್ಕಿನಲ್ಲಿ ಇರಿಸಿದರೆ ಪೂಜೆಯಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ಲಕ್ಷ್ಮೀ ದೇವಿಯ ಫೋಟೋವನ್ನು ಕೆಲ ದಿಕ್ಕಿನಲ್ಲಿ ಹಾಕುವುದನ್ನು ನಿಷೇಧಿಸಲಾಗಿದೆ. ತಪ್ಪಾದ ದಿಕ್ಕಿನಲ್ಲಿ ಲಕ್ಷ್ಮೀ ಫೋಟೋವನ್ನು ಹಾಕಿದರೆ ಕುಟುಂಬದಲ್ಲಿ ಯಾವಾಗಲೂ ಆರ್ಥಿಕ ಬಿಕ್ಕಟ್ಟು ನೆಲೆಸಿರುತ್ತದೆ. ಇದರಿಂದ ಒಬ್ಬ ವ್ಯಕ್ತಿ ಬಡವನೂ ಆಗಬಹುದು. ಹಾಗಾದರೆ ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭ ಮತ್ತು ಯಾವ ದಿಕ್ಕಿನಲ್ಲಿ ಅದನ್ನು ಇಡಬಾರದು ಎಂದು ತಿಳಿಯೋಣ.
ತಪ್ಪಾಗಿಯೂ ಈ ದಿಕ್ಕಿನಲ್ಲಿ ಫೋಟೋಗಳನ್ನು ಇಡಬೇಡಿ..
ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿಯ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭವಲ್ಲ. ಈ ದಿಕ್ಕು ಮರಣ ಮತ್ತು ಯಮನ ದಿಕ್ಕು. ಈ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ಫೋಟೋವನ್ನು ಇಡುವುದರಿಂದ ಮನೆಯಿಂದ ಸಂತೋಷ ಮತ್ತು ಸಮೃದ್ಧಿ ದೂರವಾಗುತ್ತದೆ. ಮನೆಯಲ್ಲಿ ಶಾಶ್ವತ ಬಡತನ ನೆಲೆಸಬಹುದು.

ಹಾಗೆಯೇ ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋವನ್ನು ನಿಂತಿರುವ ಭಂಗಿಯಲ್ಲಿ ಇಡಬಾರದು. ಏಕೆಂದರೆ ಲಕ್ಷ್ಮಿ ದೇವಿಯ ಸ್ವಭಾವವು ಚಂಚಲವಾಗಿರುತ್ತದೆ. ಆಕೆಯ ಒಂದು ಹೆಸರು ಕೂಡ 'ಚಂಚಲ'. ಇಂತಹ ಫೋಟೋ ಒಬ್ಬ ವ್ಯಕ್ತಿಯ ಸಣ್ಣ ತಪ್ಪು ಆತನನ್ನು ಹೆಚ್ಚು ಬಾದಿಸುವಂತೆ ಮಾಡುತ್ತದೆ. ಜೀವನದಲ್ಲಿ ಸಂಪತ್ತಿನ ಒಳಹರಿವಿಗಾಗಿ ಲಕ್ಷ್ಮಿ ದೇವಿಯ ಫೋಟೋವನ್ನು ಕುಳಿತ ಭಂಗಿಯಲ್ಲಿ ಇರುವುದನ್ನು ಮಾತ್ರ ಇಡಬೇಕು.
ಈ ದಿಕ್ಕು ಲಕ್ಷ್ಮೀ ದೇವಿಯ ಫೋಟೋ ಇಡಲು ಮಂಗಳಕರ...
ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಇರಿಸಲು ಉತ್ತರ ದಿಕ್ಕು ಅತ್ಯಂತ ಮಂಗಳಕರವಾಗಿದೆ. ಆದರೆ ಇದನ್ನು ಹೊರತುಪಡಿಸಿ ಇತರ ಹಲವು ದಿಕ್ಕುಗಳಲ್ಲಿಯೂ ಇರಿಸಬಹುದು. ಇದು ನೀವು ಲಕ್ಷ್ಮಿ ದೇವಿಯನ್ನು ಯಾವ ಉದ್ದೇಶಕ್ಕಾಗಿ ಪೂಜಿಸುತ್ತಿರುವಿರಿ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.
ಉತ್ತರ ದಿಕ್ಕು: ಉತ್ತರ ದಿಕ್ಕನ್ನು ಸಂಪತ್ತಿನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಆದ್ದರಿಂದ, ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇಡಬೇಕು.
ಪೂರ್ವ ದಿಕ್ಕು: ಪೂರ್ವ ದಿಕ್ಕನ್ನು ಧರ್ಮ ಮತ್ತು ದೇವರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಇರಿಸುವುದು ಯಾವಾಗಲೂ ಮನೆಗೆ ಆಶೀರ್ವಾದವನ್ನು ತರುತ್ತದೆ.
ಈಶಾನ್ಯ ದಿಕ್ಕು: ಈ ದಿಕ್ಕನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮಿ ದೇವಿಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.












Click it and Unblock the Notifications