Garlic: ಬೆಳ್ಳುಳ್ಳಿ ನೀರನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಜನ ಈಗ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಹೆಲ್ತಿ ಆಗಿರಲು ಶ್ರಮಿಸುತ್ತಾರೆ. ತಮ್ಮ ಆರೋಗ್ಯ ಸುಧಾರಿಸಿಕೊಂಡು, ಮುಂದೆ ಬರಬಹುದಾದ ದೊಡ್ಡ ಕಾಯಿಲೆಗಳಿಂದ ಪಾರಾಗಲು ಹರಸಾಹಸ ಪಡುತ್ತಾರೆ. ಅದೆಷ್ಟೋ ಜನರು ಬೆಳಗ್ಗೆ ಎದ್ದ ಮೇಲೆ ಬಿಸಿ ನೀರು, ಸೋಂಪು ಮಿಶ್ರಿತ ನೀರು, ಜೇನು ತುಪ್ಪದ ನೀರನ್ನು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ.
ಈಗಂತೂ ಅಂಗೈಯಲ್ಲಿ ಪ್ರಪಂಚ ಕೇಳಬೇಕೆ ಗೂಗಲ್ ಗೂರುವನ್ನು ಸಂಪರ್ಕಿಸಿ ತಮಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾರೆ. ಹೀಗೆ ನೋಡುತ್ತಿರುವಾಗ ಜನರಿಗೆ ಈ ಒಂದು ವಸ್ತುವನ್ನು ನೀರಿನಲ್ಲಿ ಬೆರಸಿ ಕುಡಿದರೆ ಸಾಕಷ್ಟು ಬೆನಿಫಿಟ್ ಇದೆ ಎಂದು ತಿಳಿದುಕೊಂಡು ಮುಂದಿನ ಶೋಧ ಕಾರ್ಯ ಮುಂದುವರೆಸುತ್ತಾರೆ. ಇದರಿಂದ ಆಗುವು ಲಾಭವೇನು, ದೇಹಕ್ಕೆ ಏನು ಪ್ರಯೋಜನ ಹೀಗೆ ನಾನಾ ರೀತಿಯ ಪ್ರಯೋಜನವನ್ನು ತಿಳಿದು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಾರೆ.

ಇನ್ನು ಹರಳಿ ಕಟ್ಟಿಯಲ್ಲಿ ಕುಳಿತ ಜನರ ಗುಂಪು ಸಹ ಇಂತಹದ್ದನ್ನು ಮಾಡಿದೆ, ನನಗೆ ಈ ಸಮಸ್ಯೆ ಕಡಿಮೆ ಆಯಿತು ಎಂದು ಹೇಳುವವರು ಇದ್ದಾರೆ. ಇದನ್ನು ಕೇಳಿ ಮನೆಯಲ್ಲಿ ಪ್ರಯೋಗಿಸುವವರು ಇದ್ದಾರೆ. ಇಂಹತದ್ದೇ ಒಂದು ಮದ್ದನ್ನು ನಾವು ಸಹ ಇಲ್ಲಿ ಹೇಳುತ್ತಿದ್ದೆವೆ ಸಾಧ್ಯಾದರೆ ಟ್ರೈ ಮಾಡಿ ನೋಡಿ.
ಏನು ಮಾಡಬೇಕು?
ಬೆಳ್ಳುಳ್ಳಿ ನಮ್ಮ ದೇಹಕ್ಕೆ ಎಷ್ಟು ಉಪಯೋಗಕಾರಿ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ತಜ್ಞರು ಇದನ್ನು ದಿನವೂ ಸೇವಿಸುವುದರಿಂದ ಆಗುವ ಲಾಭದ ಬಗ್ಗೆ ಪರಿಪರಿಯಾಗಿ ಹೇಳಿದ್ದಾರೆ. ಇನ್ನು ಇದನ್ನು ಸಹ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುವ ಪಾನೀಯ.
ಇದನ್ನು ಮಾಡುವುದು ಹೇಗೆ?
ಬೆಳ್ಳುಳ್ಳಿಯನ್ನು ತೆಗೆದುಕೊಂಡು, ಅದನ್ನು ಜಜ್ಜಿ, ನೀರಿನಲ್ಲಿ ಹಾಕಿ ಕುದಿಸಿ. ನಂತರ ಆ ನೀರನ್ನು ಫಿಲ್ಟರ್ ಮಾಡಿ. ಆ ನೀರು ತಣ್ಣಗಾದ ಮೇಲೆ ಸೇವಿಸಿ. ಇದರಿಂದ ಹಲವು ಲಾಭಗಳನ್ನು ಪಡೆಯಬಹುದು.

ಹೀಗೆ ಮಾಡುವುದರಿಂದ ಏನೆಲ್ಲಾ ಲಾಭ?
ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ದೇಹದಲ್ಲಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್ ಡಿಎಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಾಘಾತವನ್ನು ತಡೆಯುತ್ತದೆ.
ಬೆಳ್ಳುಳ್ಳಿ ನೀರು ಕುಡಿಯುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದಲ್ಲದೇ ಬೆಳ್ಳುಳ್ಳಿ ನೀರು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ ನೀರು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ದೇಹವು ರೋಗಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಬೆಳ್ಳುಳ್ಳಿಯ ನೀರು ಕೂಡ ದೇಹದಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೆಚ್ಚಿಸುತ್ತದೆ. ಇದು ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ದೀರ್ಘಕಾಲದ ಕಾಯಿಲೆಗಳ ಅಪಾಯವು ಕಡಿಮೆ.
ನಿಮ್ಮ ದೇಹಕ್ಕೆ ಹಾಗೂ ನಿಮ್ಮ ಆರೋಗ್ಯ ಸ್ಥಿತಿಗೆ ಇದನ್ನು ಮಾಡಬಹುದಾ ಎಂದು ಒಮ್ಮೆ ವೈದ್ಯರನ್ನು ಕೇಳಿ ಪ್ರಾರಂಭಿಸಿ.












Click it and Unblock the Notifications