Get Updates
Get notified of breaking news, exclusive insights, and must-see stories!

Relationship Tips: ನವವಿವಾಹಿತರು ಮದುವೆಯ ಹೊಸತರಲ್ಲಿಯೆ ಸಂಬಂಧ ಗಟ್ಟಿ ಮಾಡಿಕೊಳ್ಳಲು ಇಲ್ಲಿವೆ ಸಲಹೆಗಳು

ಈಗ ಮದುವೆಯ ಸೀಸನ್ ನಡೆಯುತ್ತಿದೆ. ಎಲ್ಲಿ ನೋಡಿದರು ಮದುವೆಯದ್ದೆ ಸುದ್ದಿ. ಆದರೆ, ಮದುವೆ ಎಷ್ಟು ಗ್ರಾಂಡ್ ಆಗಿ ಮಾಡುತ್ತೇವೆ ಎಂಬುದು ಮುಖ್ಯವಲ್ಲ. ಮದುವೆಯಾದ ನವವಿವಾಹಿತರು ಹೇಗೆ ಹೊಂದಿಕೊಂಡು ಹೋಗುತ್ತಾರೆ ಎಂಬುದು ಮುಖ್ಯ. ಇಬ್ಬರ ನಡುವಿನ ಬಾಂಧವ್ಯ ಎಷ್ಟು ಗಟ್ಟಿ ಎಂಬುದು ಕೂಡ ಮುಖ್ಯವಾಗುತ್ತದೆ.

ಮದುವೆಯಾದ ಆರಂಭದ ತಿಂಗಳುಗಳಲ್ಲಿಯೇ ಇಬ್ಬರ ನಡುವೆ ಸಂಬಂಧ ಗಟ್ಟಿಯಾಗಿದ್ದರೆ ಭವಿಷ್ಯದಲ್ಲಿಯೂ ಅವರ ಜೀವನ ಉತ್ತಮವಾಗಿರುತ್ತದೆ. ಹೀಗಾಗಿಯೇ ಮದುವೆಯಾದ ಆರಂಭದಲ್ಲೇ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೋಗಬೇಕು. ಮೊದಲ ದಿನಗಳಲ್ಲಿ ಇಬ್ಬರು ಖುಷಿಯಾಗಿದ್ದರೂ ಕೂಡ ಏಳುಬೀಳುಗಳನ್ನು ಅನುಭವಿಸುವುದು ಸಾಮಾನ್ಯ. ಮೊದಲ ಎರಡು ವರ್ಷಗಳಲ್ಲಿ ಸವಾಲುಗಳನ್ನು ಎದುರಿಸುವುದು ಸಹಜ, ಆದರೆ ಅದಕ್ಕೆ ಭಯಪಡುವ ಅಗತ್ಯವಿಲ್ಲ.

Tips for Newlyweds to Build Good Relationship

ನವವಿವಾಹಿತರ ಜೀವನದ ಭದ್ರ ಬುನಾದಿಗೆ ಸಲಹೆಗಳು

ಮೊದ ಮೊದಲೇ ಇಬ್ಬರ ನಡುವೆ ಉಂಟಾಗಬಹುದಾದ ಸಮಸ್ಯೆಗಳು ಮತ್ತು ಅಡೆತಡೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನವವಿವಾಹಿತರು ಒಟ್ಟಾಗಿ ತಮ್ಮ ಭವಿಷ್ಯಕ್ಕಾಗಿ ಭದ್ರ ಬುನಾದಿಯನ್ನು ನಿರ್ಮಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬಹುದು. ತಮ್ಮ ತಮ್ಮ ಹೊಸ ಜವಾಬ್ದಾರಿಗಳು ಮತ್ತು ಬದಲಾವಣೆಗೆ ಹೊಂದಿಕೊಳ್ಳಲು ಪ್ರಯತ್ನಪಡಬೇಕು.

ಮದುವೆಯಿಂದ ಇಬ್ಬರ ಜೀವನದಲ್ಲಿ ಆಗುವ ಅನೇಕ ಬದಲಾವಣೆಗಳು ಮತ್ತು ಹೊಂದಾಣಿಕೆಗಳ ಕಾರಣದಿಂದಾಗಿ ಮದುವೆಯ ಮೊದಲ ವರ್ಷವು ಸವಾಲು ಅನ್ನಿಸಬಹುದು. ಈ ವೇಳೆ ದಂಪತಿ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಈ ಸಮಸ್ಯೆಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದು ಅವರ ಮದುವೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅನೇಕ ಮನಶಾಸ್ತ್ರಜ್ಞರು.

ನವವಿವಾಹಿತರಿಗೆ ಅಗತ್ಯ ಸಲಹೆಗಳು

ಉತ್ತಮ ಸಂವಹನ (ಮಾತುಕತೆ)

ಪ್ರತಿಯೊಂದು ಸಂಬಂಧದಲ್ಲಿ ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ಯಾವುದೇ ಸಂಬಂಧಕ್ಕೆ ಭದ್ರ ಅಡಿಪಾಯ ಹಾಕುತ್ತದೆ. ಹೊಸದಾಗಿ ಮದುವೆಯಾದ ಇಬ್ಬರ ಭಾವನೆಗಳು, ನಿರೀಕ್ಷೆಗಳು ಮತ್ತು ಕಾಳಜಿ ಇಬ್ಬರ ನಡುವೆ ಬಲವಾದ ಬಂಧಕ್ಕೆ ಮುನ್ನುಡಿಯಾಗುತ್ತದೆ. ನಿಮ್ಮ ಸಂಗಾತಿಯ ಮಾತುಗಳನ್ನು ಗಮನವಿಟ್ಟು ಆಲಿಸುವುದು ಮತ್ತು ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವುದು ಸಹ ಗಟ್ಟಿ ಸಂಬಂಧಕ್ಕೆ ಭದ್ರ ಬುನಾದಿ.

Tips for Newlyweds to Build Good Relationship

ಒಟ್ಟಿಗೆ ಸಮಯ ಕಳೆಯಿರಿ

ನಾವು ನಮ್ಮ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿರುತ್ತೇವೆ ನಿಜ. ಆದರೆ, ನಮ್ಮ ಸಂಗಾತಿಗೆ ಸಮಯ ನೀಡುವುದು ಕೂಡ ತುಂಬಾನೆ ಮುಖ್ಯವಾಗಬೇಕು. ಹೀಗಾಗಿ ಆ ಸಮಯವನ್ನು ಹೇಗೆ ನೀಡುತ್ತೇವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದರೆ ಎಲ್ಲವನ್ನೂ ಹೇಗೆ ನಿಭಾಯಿಸುವುದು ಎಂಬುದನ್ನು ನಾವು ಕಲಿಯಬೇಕಾಗಿದೆ. ಒಬ್ಬರಿಗೊಬ್ಬರು ಸಮಯ ನೀಡುವುದು ಬಹಳ ಮುಖ್ಯ. ಇದು ನಿಮ್ಮ ಜೀವನದಲ್ಲಿ ನಿಮ್ಮ ಸಂಗಾತಿಗೆ ನೀಡುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಒಬ್ಬರು ಮತ್ತೊಬ್ಬರ ಗುರಿಗಳನ್ನು ಬೆಂಬಲಿಸಬೇಕು

ಮದುವೆಯ ಆರಂಭಿಕ ತಿಂಗಳುಗಳಲ್ಲಿ ಜಗಳಕ್ಕೆ ಕಾರಣವಾಗುವ ಪ್ರಮುಖ ಅಂಶಗಳೆಂದರೆ ವೃತ್ತಿ ಆಕಾಂಕ್ಷೆ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳು. ಯಾವುದನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರದ ನಡುವೆ ಇಬ್ಬರ ನಡುವೆ ದೊಡ್ಡ ಸಮಸ್ಯೆಗಳೆ ಉದ್ಭವವಾಗುತ್ತದೆ. ಹೀಗಾಗಿ ಇಬ್ಬರ ಗುರಿಗಳು ಮತ್ತು ಆಕಾಂಕ್ಷೆಗಳಿಗೆ ಬೆಂಬಲವಾಗಿರುವುದು ತುಂಬಾ ಮುಖ್ಯ. ಇದು ಇಬ್ಬರ ಜೀವನ ಉತ್ತಮವಾಗಿರಲು ಸಹಾಯ ಮಾಡುತ್ತದೆ.

ತಾಳ್ಮೆ ಮತ್ತು ಕ್ಷಮೆ

ಮದುವೆ, ಸಂಸಾರ ಎಂದ ಮೇಲೆ ಕೆಲವೊಮ್ಮೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಪರಸ್ಪರ ತಾಳ್ಮೆಯಿಂದಿರುವುದು ಮುಖ್ಯ. ಸೊಸೆ, ಅಳಿಯ ಎಂಬ ಹೊಸ ಪಾತ್ರಗಳು ಮತ್ತು ಜವಾಬ್ದಾರಿಗಳಿಗೆ ಹೊಂದಿಕೊಳ್ಳುವುದು ನಿಮ್ಮ ಜೀವನ ಪ್ರಯಾಣವನ್ನು ಸುಗಮಗೊಳಿಸುತ್ತದೆ. ಹೀಗಾಗಿ ಇಬ್ಬರು ಮಾಡುವ ಯಾವುದೇ ತಪ್ಪುಗಳನ್ನು ಕ್ಷಮಿಸುವುದು ಕಲಿಯಿರಿ.

ಒಂದು ಉತ್ತಮ ಅಂತರ ಇರಲಿ

ವಿವಾಹಿತರಾದರೂ ಒಬ್ಬರು ಮತ್ತೊಬ್ಬರ ವೈಯಕ್ತಿಕ ಸಮಯಕ್ಕೆ ಅವಕಾಶ ನೀಡಬೇಕು. ಮೊಬೈಲ್‌ಗಳನ್ನು ಚೆಕ್ ಮಾಡುವುದು, ಕುಟುಂಬದವರು, ಸ್ನೇಹಿತರ ಜೊತೆ ಮಾತಾಡುವಾಗ ಅವರ ಪರ್ಸನಲ್ ಸ್ಪೇಸ್‌ಗೆ ಗೌರವ ನೀಡಬೇಕು. ಹಣಕಾಸು ಮತ್ತು ವೈಯಕ್ತಿಕ ವಿಷಯಗಳನ್ನು ಚರ್ಚಿಸಬೇಕು. ಮದುವೆಯ ಮೊದಲ ಕೆಲ ವರ್ಷ ಸಮಯವು ಹೊಂದಾಣಿಕೆ ಮತ್ತು ಒಟ್ಟಿಗೆ ಜೀವನ ಕಟ್ಟಿಕೊಳ್ಳುವ ಸಮಯವಾಗಿದೆ. ಹೀಗಾಗಿ ಯಾವಾಗಲು ಸಂವಹನ, ತಿಳುವಳಿಕೆ ಮತ್ತು ಪರಸ್ಪರ ಬೆಂಬಲ ನೀಡುವುದಕ್ಕೆ ಆದ್ಯತೆ ನೀಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+