Ghee For Skin Care: ಚಳಿಗಾಲದಲ್ಲಿ ಚರ್ಮ ಮತ್ತು ಕೂದಲು ರಕ್ಷಣೆಗೆ ತುಪ್ಪ ಬೆಸ್ಟ್!
ಚಳಿ..ಚಳಿ .. ಚಳಿ ಈಗ ಎಲ್ಲಿ ನೋಡಿದರೂ ಚಳಿಯದ್ದೇ ಸುದ್ದಿ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಮೈಕೊರೆಯುವ ಚಳಿ ಇದೆ. ಚಳಿಗಾಲದಲ್ಲಿ ಚರ್ಮ ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸ. ಚಳಿಯಿಂದ ತಪ್ಪಿಸಿಕೊಳ್ಳಲು ಬೆಚ್ಚನೆಯ ಬಟ್ಟೆ ಹಾಕಿಕೊಳ್ಳುವಂತೆ ದೇಹದ ಕಾಳಜಿ ವಹಿಸುವುದು ಕೂಡ ತುಂಬಾನೇ ಮುಖ್ಯ.
ಈ ಚಳಿಗಾಲದಲ್ಲಿ ತುಪ್ಪವನ್ನು ಬಳಸುವ ಮೂಲಕ ನೀವು ಚರ್ಮ ಹಾಗೂ ದೇಶದ ಕಾಳಜಿಯನ್ನು ಒಟ್ಟೊಟ್ಟಿಗೆ ಮಾಡಬಹುದಾಗಿದೆ. ಅದು ಯಾವ ರೀತಿ ಹಾಗೂ ಚಳಿಗಾಲದಲ್ಲಿ ತ್ವಚ್ಛೆ ರಕ್ಷಣೆ ಮಾಡುವುದು ಹೇಗೆ ಹಾಗೂ ತುಪ್ಪ ಹೇಗೆಲ್ಲಾ ಇದಕ್ಕೆ ಸಹಕಾರಿಯಾಗಲಿದೆ ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.

ತುಪ್ಪ ಹಲವು ಪ್ರಯೋಜನಗಳನ್ನು ಹೊಂದಿದೆ. ಇನ್ನು ಭಾರತದಲ್ಲಿ ತುಪ್ಪದ ಶ್ರೀಮಂತಿಕೆಗೆ ಇತಿಹಾಸವೇ ಇದೆ. ಭಾರತೀಯರ ಅಡುಗೆ ಮನೆಯಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ. ಈ ಹಿಂದೆಲ್ಲ ತುಪ್ಪವನ್ನೇ ಭಾರತೀಯರು ಬಳಸುತ್ತಿದ್ದರು ಕ್ರಮೇಣ ಅಲ್ಲಿ ರಿಫಂಡ್ ಆಯಿಲ್ ಬಂದಿದೆ. ಇನ್ನು ಚಳಿಗಾಲದಲ್ಲಿ ತುಪ್ಪವನ್ನು ಬಳಸುವುದರಿಂದ ತುಂಬಾನೇ ಅನುಕೂಲಗಳಿವೆ. ದೇಹದ ಆರೋಗ್ಯದ ಜೊತೆಗೆ ಚರ್ಮ ಹಾಗೂ ಸಮೃದ್ಧ ಕೂದಲಿಗೂ ತುಪ್ಪ ಸಹಕಾರಿಯಾಗಿದೆ.
ತುಪ್ಪದಲ್ಲಿ ಚರ್ಮವನ್ನು ಒಳಗಿನಿಂದ ಕೋಮಲವಾಗಿರಲು ಸಹಕರಿಸುತ್ತದೆ. ತುಪ್ಪದಲ್ಲಿ ದೇಹಕ್ಕೆ ಅಗತ್ಯವಾದ ಕೊಬ್ಬಿನಾಮ್ಲಗಳು ಇರುವುದರಿಂದ ಬೆಳಗ್ಗೆ ತುಪ್ಪ ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ತುಪ್ಪದಲ್ಲಿ ನೈಸರ್ಗಿಕ ಮಾಯಿಶ್ಚರೈಸರ್ ಇರುವುದರಿಂದ ದಿನವಿಡೀ ಚರ್ಮಕ್ಕೆ ತೇವಾಂಶ ಸಿಗಲಿದೆ. ಇದರಿಂದ ನಿಮ್ಮ ಚರ್ಮ ಬೇಗನೆ ಡ್ರೈನ್ ಆಗಲ್ಲ.
ಇನ್ನು ತುಪ್ಪದಲ್ಲಿ ವಿಟಮಿನ್ ಇ ಸೇರಿದಂತೆ ಪೌಷ್ಟಿಕಾಂಶದ ಅಂಶಗಳು ಇರುವುದರಿಂದ ಕೂದಲು ಗಟ್ಟಿಯಾಗಲು ಹಾಗೂ ಕೂದಲು ಹೊಳಪಿಗೂ ಸಹಕಾರಿಯಾಗಿದೆ. ತುಪ್ಪದಲ್ಲಿ ವಿಟಮಿನ್ ಇ ಜೊತೆಗೆ ವಿಟಮಿನ್ ಎ, ಡಿ ಮತ್ತು ಕೆ ಎನ್ನುವ ಅಂಶಗಳು ಇವೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲದೆ ತುಪ್ಪ ಸೇವೆನೆಯಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಚುರುಕಾಗುತ್ತದೆ.
ಬೆಳಗ್ಗೆ ಸಮಯದಲ್ಲಿ ತುಪ್ಪವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯ ಆಗುತ್ತದೆ ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಇದು ಅತ್ಯಂತ ಸಹಕಾರಿಯಾಗಿದೆ. ತುಪ್ಪವು ದೇಹದಲ್ಲಿ ಕೊಬ್ಬಿನಲ್ಲಿ ಕರಗುವ ಜೀವಸತ್ವಗಳ ಹೀರಿಕೊಳ್ಳುಲು ಉತ್ತಮವಾಗಿದೆ.
ತುಪ್ಪವನ್ನು ಈ ರೀತಿ ಬಳಸಿ: ಚಳಿಗಾಲದಲ್ಲಿ ತುಪ್ಪ ಆರೋಗ್ಯ ಹಾಗೂ ಚರ್ಮಕ್ಕೆ ಒಳ್ಳೆಯದು ಸರಿ ಅದನ್ನು ಬಳಸುವುದು ಹೇಗೆ ಎನ್ನುವ ಪ್ರಶ್ನೆ ನಿಮಗೆ ಬರಬಹುದು. ಅದಕ್ಕೆ ಸರಳ ಹಾಗೂ ಸಿಂಪಲ್ ಉತ್ತರ ಇಲ್ಲಿದೆ. ಬೆಚ್ಚಗಿನ ನೀರಿನಲ್ಲಿ ಒಂದು ಟೀ ಚಮಚ ತುಪ್ಪವನ್ನು ಬೆರೆಸಿ ಬೆಳಗ್ಗೆ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ಚಯಾಪಚಯ ಕ್ರಿಯೆಗೆ ಸಹಕರಿಸುತ್ತೆ. ಅಲ್ಲದೆ ದಿನವಿಡೀ ನಿಮಗೆ ಶಕ್ತಿಯನ್ನು ಕೊಡುತ್ತದೆ.
ಇನ್ನೊಂದು ವಿಧಾನವೂ ಇದೆ. ಆದರೆ, ಇದು ನಿಮಗೆ ತುಸು ವಿಚಿತ್ರ ಎಂದೆನಿಸಬಹುದು. ಬೆಳಗ್ಗೆ ಕಾಫಿ ಅಥವಾ ಟೀನೊಂದಿಗೆ ಒಂದು ಚಮಚ ತುಪ್ಪ ಸೇರಿಸಿ ಸಹ ನೀವು ಕುಡಿಯಬಹುದು. ಇದು ಸಹ ದೇಹದ ಚರ್ಮದಲ್ಲಿ ತೇವಾಂಶ ಉಳಿಯಲು ಹಾಗೂ ಚರ್ಮದ ರಕ್ಷಣೆಗೆ ಸಹಕಾರಿಯಾಗಿದೆ. ತುಪ್ಪ ಸೇವನೆ ಚಳಿಗಾಲದಲ್ಲಿ ಆರೋಗ್ಯಕ್ಕೆ ಉತ್ತಮವಾಗಿದ್ದರೂ ಇತಮಿತವಾಗಿ ಬಳಸುವುದು ಉತ್ತಮ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications