Get Updates
Get notified of breaking news, exclusive insights, and must-see stories!

ಕಾಂಗರೂ ಮದರ್ ಕೇರ್‌ನಲ್ಲಿ ತಂದೆಯ ಪಾತ್ರ: ಶಿಶುಗಳ ಯೋಗಕ್ಷೇಮಕ್ಕೆ ಇದರ ಪ್ರಯೋಜನ ತಿಳಿಯಿರಿ...

ಕಾಂಗರೂ ಮದರ್ ಕೇರ್ (KMC)ಯಲ್ಲಿ ತಂದೆಯಂದಿರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದರೆ ಈ ಪಾತ್ರವನ್ನು ಸಾಮಾನ್ಯವಾಗಿ ಗುರುತಿಸುವುದಿಲ್ಲ ಅಥವಾ ಕಡಿಮೆ ಅಂದಾಜು ಮಾಡಲಾಗುತ್ತದೆ. ಸಾಂಪ್ರದಾಯಿಕವಾಗಿ ಕೆಎಂಸಿಯ ಗಮನವು ಪ್ರಾಥಮಿಕವಾಗಿ ತಾಯಂದಿರ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಆದರೆ, ಈ ಆರೈಕೆ ಮಾದರಿಯಲ್ಲಿ ತಂದೆಯನ್ನು ಸೇರಿಸುವುದು ಕುಟುಂಬ ಮತ್ತು ಶಿಶುಗಳ ಯೋಗಕ್ಷೇಮಕ್ಕೆ ಬಹುಮುಖವಾದ ಪ್ರಯೋಜನವನ್ನು ತರುತ್ತದೆ. ಕಾಂಗರೂ ಮದರ್ ಕೇರ್ ನಲ್ಲಿ ತಂದೆಯ ಪಾತ್ರಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕುವುದು ಅತ್ಯಗತ್ಯವಾಗಿದೆ. ಈ ಮೂಲಕ ತಂದೆಯನ್ನು ಶಿಶುವಿನ ಆರೈಕೆಯಲ್ಲಿ ಇನ್ನಷ್ಟು ಒಳಗೊಳ್ಳುವ ಮತ್ತು ಬೆಂಬಲ ನೀಡುವ ಆರೈಕೆಯ ವಾತಾವರಣವನ್ನು ಪೋಷಿಸುತ್ತದೆ.

What is the fathers role in kangaroo mother care?

ಕೆಎಂಸಿಯಲ್ಲಿ ತಂದೆಯಂದಿರನ್ನು ಸಕ್ರಿಯಗೊಳಿಸಲು ಉತ್ತೇಜಿಸುವುದರಿಂದ ಅನೇಕ ಪರಿವರ್ತನೆಯ ಫಲಿತಾಂಶಗಳನ್ನು ತರಲು ಸಾಧ್ಯ:

1.ಪೋಷಕರ ಪಾತ್ರಗಳನ್ನು ಪುನರ್ ವ್ಯಾಖ್ಯಾನಗೊಳಿಸುವುದು: ಕೆಎಂಸಿಯಲ್ಲಿ ತಂದೆಯಂದಿರನ್ನು ಸಕ್ರಿಯರಾಗುವ ಮೂಲಕ ಸಾಂಪ್ರದಾಯಿಕ ಆರೈಕೆಯ ಸವಾಲಿನ ಪಾತ್ರಗಳನ್ನು ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ. ಅವರ ನವಜಾತ ಶಿಶುವನ್ನು ಪೋಷಿಸುವಲ್ಲಿ ಪೋಷಕರಿಬ್ಬರೂ ಸಮಾನವಾದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.

2.ಬಾಂಧವ್ಯ ಮತ್ತು ಸಂಪರ್ಕ: ಕೆಎಂಸಿಯಲ್ಲಿನ ತಂದೆಯಂದಿರು ತಮ್ಮ ಶಿಶುಗಳೊಂದಿಗೆ ನಿಕಟವಾದ ದೈಹಿಕ ಸಂಪರ್ಕದ ಮೂಲಕ ಬಲವಾದ ಭಾವನಾತ್ಮಕ ಬಂಧಗಳನ್ನು ಅಭಿವೃದ್ಧಿಪಡಿಸುತ್ತಾರೆ ಹಾಗೂ ನಂಬಿಕೆ ಮತ್ತು ಬಾಂಧವ್ಯವನ್ನು ಬೆಳೆಸುತ್ತಾರೆ.

What is the fathers role in kangaroo mother care?

3.ಜವಾಬ್ದಾರಿ ಹಂಚಿಕೆ: ತಂದೆಯಂದಿರ ಸಕ್ರಿಯ ಒಳಗೊಳ್ಳುವಿಕೆಯು ಒಂದು ಪೋಷಕ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಅದೇ ರೀತಿ, ಪೋಷಕರಲ್ಲಿ ಆರೈಕೆಯ ಹಂಚಿಕೆ ಜವಾಬ್ದಾರಿಗಳು ಮತ್ತು ಪರಸ್ಪರ ನೆರವಿನ ಬೆಂಬಲವನ್ನು ಉತ್ತೇಜಿಸುತ್ತದೆ.

4.ಶಿಶುವಿನ ಆರೋಗ್ಯ ಸುಧಾರಣೆ: ಕೆಎಂಸಿಯಲ್ಲಿ ತಂದೆಯ ಒಳಗೊಳ್ಳುವಿಕೆಯು ಶಿಶುವಿನ ಆರೋಗ್ಯದಲ್ಲಿ ಉತ್ತಮ ಸುಧಾರಣೆಯನ್ನು ತರಲು ಕಾರಣವಾಗುತ್ತದೆ. ಪ್ರಮುಖವಾಗಿ ಶಿಶುವಿನ ತೂಕದಲ್ಲಿ ಹೆಚ್ಚಳ, ಸ್ಥಿರವಾದ ಬೆಳವಣಿಗೆ ಮತ್ತು ಯಶಸ್ವಿ ಸ್ತನ್ಯಪಾನ ಹಾಗೂ ಒಟ್ಟಾರೆ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.

5.ಕುಟುಂಬದಲ್ಲಿ ಧನಾತ್ಮಕ ಬೆಳವಣಿಗೆ: ಶಿಶುವಿನ ಪೋಷಣೆಯಲ್ಲಿ ತಂದೆಯ ಸೇರ್ಪಡೆಯು ಒಂದು ತಂಡದ ಸಂವಹನವನ್ನು ಉತ್ತೇಜಿಸುತ್ತದೆ ಮತ್ತು ಕೌಟುಂಬಿಕ ಬಂಧಗಳನ್ನು ಬಲಪಡಿಸುತ್ತದೆ. ಇದು ಶಿಶುವಿನ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣವನ್ನು ಪೋಷಣೆ ಮಾಡುತ್ತದೆ.

6.ಆತ್ಮವಿಶ್ವಾಸದ ವೃದ್ಧಿ: ಸಕ್ರಿಯ ಕೆಎಂಸಿ ಒಳಗೊಳ್ಳುವಿಕೆಯು ತಂದೆಯ ಪೋಷಕತ್ವದ ಆತ್ಮವಿಶ್ವಾಸವನ್ನು ಮತ್ತು ಪೋಷಣೆಯ ಕೌಶಲ್ಯಗಳನ್ನು ವೃದ್ಧಿಸುತ್ತದೆ ಹಾಗೂ ಶಿಶುವಿನ ಅಗತ್ಯತೆಗಳನ್ನು ಉತ್ತಮವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ.

7.ದೀರ್ಘಾವಧಿ ಪ್ರಯೋಜನಗಳು: ತಂದೆಯ ಆರಂಭಿಕ ಒಳಗೊಳ್ಳುವಿಕೆ ನಿರಂತರ ಪೋಷಕರ ಪಾಲ್ಗೊಳ್ಳುವಿಕೆ ಮತ್ತು ಮಗುವಿನ ಬೆಳವಣಿಗೆ, ಸಂಬಂಧವನ್ನು ಧನಾತ್ಮಕವಾಗಿ ಗಟ್ಟಿಗೊಳಿಸುವಲ್ಲಿ ಪರಿಣಾಮ ಬೀರುತ್ತದೆ.

8.ಸಾಮಾಜಿಕ ಪರಿಣಾಮ: ತಂದೆ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದರಿಂದ ಪೋಷಕರ ಒಳಗೊಳ್ಳುವಿಕೆ ಮತ್ತು ಬೆಂಬಲವನ್ನು ಪೋಷಣೆ ಮಾಡಿದಂತಾಗುತ್ತದೆ. ಪೋಷಕರ ಪಾತ್ರಗಳ ಕಡೆಗೆ ಸಮಾಜದ ವರ್ತನೆಗಳನ್ನು ಸಮರ್ಥವಾಗಿ ಮರುರೂಪಿಸುತ್ತದೆ.

ಕೆಎಂಸಿಯಲ್ಲಿ ತಂದೆಯಂದಿರ ಪಾಲ್ಗೊಳ್ಳುವಿಕೆಯ ಮಹತ್ವ

ಕಾಂಗರೂ ಮದರ್ ಕೇರ್ (KMC) ಯಲ್ಲಿ ತಂದೆಯಂದಿರ ಸಕ್ರಿಯ ಪಾಲ್ಗೊಳ್ಳುವಿಕೆಯು ಒಂದು ಪೋಷಣೆಯ ವಾತಾವರಣವನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಮೂಲಕ ಪರಿವರ್ತನಾಕಾರಿ ಫಲಿತಾಂಶಗಳನ್ನು ತರುತ್ತದೆ. ಇದರಲ್ಲಿ ತಂದೆಯಂದಿರು ತಮ್ಮ ಶಿಶುಗಳೊಂದಿಗೆ ಚರ್ಮದಿಂದ ಚರ್ಮಕ್ಕೆ ಅಂದರೆ ದೇಹದಿಂದ ದೇಹ ಸ್ಪರ್ಶ ಮತ್ತು ನಿಕಟತೆಯ ಮೂಲಕ ಆಳವಾದ ಭಾವನಾತ್ಮಕ ಬಂಧಗಳನ್ನು ಹೆಚ್ಚಿಸಿಕೊಳ್ಳುತ್ತಾರೆ. ಈ ಪಾಲ್ಗೊಳ್ಳುವಿಕೆಯು ಸಾಂಪ್ರದಾಯಿಕ ಪೋಷಣೆಯನ್ನು ಉತ್ತಮವಾಗಿಸುತ್ತದೆ.

ಆರೈಕೆಯ ಹಂಚಿಕೆಯ ಜವಾಬ್ದಾರಿಯನ್ನು ಉತ್ತೇಜಿಸುತ್ತದೆ, ತಂದೆಯಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಕುಟುಂಬದಲ್ಲಿ ಧನಾತ್ಮಕ ಬೆಳವಣಿಗೆಯನ್ನು ಬಲಪಡಿಸುತ್ತದೆ. ಸುಧಾರಿತ ಆರೋಗ್ಯ, ಸ್ಥಿರವಾದ ಪ್ರಮುಖ ಚಿಹ್ನೆಗಳು ಮತ್ತು ಸುರಕ್ಷಿತ ಬಾಂಧವ್ಯಗಳಿಂದ ಶಿಶುಗಳು ಉತ್ತಮ ಪ್ರಯೋಜನವನ್ನು ಪಡೆಯುತ್ತವೆ. ಇದೇ ವೇಳೆ, ತಂದೆಯಂದಿರುವ ಪೋಷಕತ್ವದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಭವಿಷ್ಯದಲ್ಲಿನ ಒಳಗೊಳ್ಳುವಿಕೆಗೆ ಧನಾತ್ಮಕವಾದ ಉದಾಹರಣೆಯಾಗಿರುತ್ತಾರೆ ಮತ್ತು ಕುಟುಂಬಗಳು ಹಾಗೂ ಸಮಾಜದಲ್ಲಿ ಕಾಳಜಿಯನ್ನು ವಹಿಸಲು ಹೆಚ್ಚು ಅಂತರ್ಗತ ಮತ್ತು ಬೆಂಬಲದ ವಿಧಾನಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ.

ಕುಟುಂಬದ ಡೈನಾಮಿಕ್ಸ್ ಮತ್ತು ಶಿಶುವಿನ ಯೋಗಕ್ಷೇಮದ ಮೇಲೆ ತಂದೆಯ ಪ್ರಭಾವ:

•ಸಂವಹನ: ತಂದೆಯ ಸಕ್ರಿಯ ಪಾತ್ರವು ಮುಕ್ತ ಚರ್ಚೆಗಳು ಮತ್ತು ಜಂಟಿ ನಿರ್ಧಾರ ತೆಗೆದುಕೊಳ್ಳುವ ವೇದಿಕೆಯಾಗಿರುತ್ತದೆ.

•ಟೀಂವರ್ಕ್: ಪೋಷಕರಿಬ್ಬರ ಪಾಲ್ಗೊಳ್ಳುವಿಕೆಯು ಬೆಂಬಲದ ವಾತಾವರಣವನ್ನು ಸೃಷ್ಟಿಸುತ್ತದೆ.

2.ಶಿಶುವಿನ ಭಾವನಾತ್ಮಕ ಯೋಗಕ್ಷೇಮ:

•ಬಾಂಧವ್ಯ: ತಂದೆಯ ಪಾಲ್ಗೊಳ್ಳುವಿಕೆಯು ಶಿಶು ಮತ್ತು ಪೋಷಕರ ನಡುವಿನ ಸುರಕ್ಷಿತವಾದ ಬಂಧಗಳನ್ನು ಪೋಷಿಸುತ್ತದೆ.

•ಬೆಳವಣಿಗೆ: ತಂದೆಯ ಪಾಲ್ಗೊಳ್ಳುವಿಕೆಯು ಶಿಶುವಿನ ಅರಿವು ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

3.ಶಿಶುವಿಗೆ ಆರೋಗ್ಯ ಪ್ರಯೋಜನಗಳು:

•ಪ್ರಮುಖ ಚಿಹ್ನೆಗಳು: ಚರ್ಮದಿಂದ ಚರ್ಮದ ಸಂಪರ್ಕವು ಶಿಶುವಿನ ಪ್ರಮುಖ ಚಿಹ್ನೆಗಳನ್ನು ಸ್ಥಿರವಾಗಲು ನೆರವಾಗುತ್ತದೆ.

•ಬೆಳವಣಿಗೆ: ಕೆಎಂಸಿಯಡಿ ಬೆಳೆಯುವ ಶಿಶುಗಳು ಸಾಮಾನ್ಯವಾಗಿ ಉತ್ತಮ ತೂಕವನ್ನು ಹೊಂದುತ್ತವೆ.

4.ತಂದೆಯ ವಿಶ್ವಾಸ ಮತ್ತು ಒಳಗೊಳ್ಳುವಿಕೆ:

•ವಿಶ್ವಾಸ ವೃದ್ಧಿ: ಸಕ್ರಿಯ ಒಳಗೊಳ್ಳುವಿಕೆಯಿಂದ ತಂದೆಯಲ್ಲಿ ಪೋಷಕತ್ವದ ವಿಶ್ವಾಸ ವೃದ್ಧಿಯಾಗುತ್ತದೆ.

•ದೀರ್ಘಾವಧಿ ಪರಿಣಾಮ: ಸಕ್ರಿಯವಾಗಿ ಪಾಲ್ಗೊಳ್ಳುವ ತಂದೆಯಂದಿರು ಮಗುವಿನ ದೀರ್ಘಾವಧಿ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದ್ದಾರೆ.

5.ಲಿಂಗ ಪಾತ್ರಗಳು ಮತ್ತು ಸಾಮಾಜಿಕ ಪರಿಣಾಮಗಳ ಪುನರ್ ವ್ಯಾಖ್ಯಾನ:

•ಪಾತ್ರದ ಸವಾಲು: ತಂದೆಯ ಪಾಲ್ಗೊಳ್ಳುವಿಕೆಯು ಸಾಂಪ್ರದಾಯಿಕ ಪೋಷಕ ಪಾತ್ರಗಳಿಗೆ ಸವಾಲು ನೀಡುತ್ತದೆ.

•ಉದಾಹರಣೆಗಳು: ಪಾಲ್ಗೊಳ್ಳುವಿಕೆಯ ತಂದೆಯಂದಿರು ಪೋಷಕತ್ವದ ಸೇರ್ಪಡೆಯ ಬಗ್ಗೆ ಇರುವ ಸಾಮಾಜಿಕ ದೃಷ್ಟಿಕೋನಗಳನ್ನು ಪುನರ್ ರೂಪಿಸುತ್ತಾರೆ.

ಸಕ್ರಿಯವಾಗಿ ಪಾಲ್ಗೊಳ್ಳಲು ತಂದೆಯಂದಿರನ್ನು ಪ್ರೋತ್ಸಾಹಿಸುವುದು ಅವರ ಪಾತ್ರದ ಅಗತ್ಯತೆಗಳನ್ನು ಎತ್ತಿ ತೋರಿಸುತ್ತದೆ ಮತ್ತು ಕುಟುಂಬದ ಡೈನಾಮಿಕ್ಸ್, ಶಿಶುಗಳ ಯೋಗಕ್ಷೇಮದಲ್ಲಿ ಗುರುತರವಾದ ರೂಪಾಂತರದ ಪರಿಣಾಮಗಳನ್ನು ತರುತ್ತದೆ. ಕೆಎಂಸಿಯಲ್ಲಿ ತೊಡಗಿರುವ ತಂದೆಯಂದಿರು ಶಿಶುವಿನಲ್ಲಿ ಆಳವಾದ ಭಾವನಾತ್ಮಕ ಸಂಪರ್ಕಗಳನ್ನು ಬೆಳೆಸುತ್ತಾರೆ. ಪೋಷಕತ್ವದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕುತ್ತಾರೆ. ಈ ಮೂಲಕ ಪೋಷಕತ್ವದ ಜವಾಬ್ದಾರಿ ಹಂಚಿಕೆ ಮತ್ತು ಆರೈಕೆಯಲ್ಲಿನ ಬೆಂಬಲವನ್ನು ಒತ್ತಿ ಹೇಳುತ್ತಾರೆ. ಈ ಸಕ್ರಿಯವಾದ ಒಳಗೊಳ್ಳುವಿಕೆಯು ಶಿಶುಗಳ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ನು ಬೀರುವುದಲ್ಲದೇ, ಉತ್ತಮ ಫಲಿತಾಂಶಗಳನ್ನೂ ನೀಡುತ್ತದೆ ಹಾಗೂ ಕುಟುಂಬದ ಸಂಬಂಧಗಳ ಬಂಧಗಳನ್ನು ಬಲಪಡಿಸುತ್ತದೆ. ಅದೇ ರೀತಿ ಕುಟುಂಬದಲ್ಲಿ ಉತ್ತಮ ಬದಲಾವಣೆಗಳನ್ನು ಉತ್ತೇಜಿಸುತ್ತದೆ. ತಂದೆಯ ವಿಶ್ವಾಸ ಮತ್ತು ಕೌಶಲ್ಯಗಳನ್ನು ಬೆಳೆಸುವ ಮೂಲಕ ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಮೂಲಕ ಇದು ಪೋಷಕರು ಮತ್ತು ಶಿಶುಗಳಿಗೆ ನಿರಂತರವಾದ ಪ್ರಯೋಜನಗಳನ್ನು ಒದಗಿಸುತ್ತದೆ.

ಡಾ.ವಿಕಾಸ್ ಸಾತ್ವಿಕ್, ಕನ್ಸಲ್ಟೆಂಟ್- ಪೀಡಿಯಾಟ್ರಿಶಿಯನ್ ಅಂಡ್ ನಿಯೋನ್ಯಾಟೋಲಾಜಿಸ್ಟ್, ಮದರ್ ಹುಡ್ ಹಾಸ್ಪಿಟಲ್ಸ್, ಹೆಬ್ಬಾಳ, ಬೆಂಗಳೂರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+