Rotti Mutagi Recipe: ಅಜ್ಜ-ಅಜ್ಜಿಯನ್ನು ನೆನಪಿಸುವ ಜೋಳದ ರೊಟ್ಟಿ ಮುಟಗಿ: ತಿಂದು ನೋಡಿ ಕಳೆದೇ ಹೋಗ್ತೀರಾ...
ಉತ್ತರ ಕರ್ನಾಟಕ ಜನಗಳಿಗೆ ರೊಟ್ಟಿ ಮುಟಗಿ ಅಂದರೆ ಸಾಮಾನ್ಯವಾಗಿ ಗೊತ್ತಿರುತ್ತದೆ. ಈ ರೊಟ್ಟಿ ಮುಟಗಿಯನ್ನು ಚಿಕ್ಕವರಿರುವಾಗ ಮನೆಯಲ್ಲಿ ಅಜ್ಜಿ-ಅಜ್ಜ ಪುಟ್ಟ ಮಕ್ಕಳಿಗೆ ಮಾಡಿ ತಿನಿಸುತ್ತಿದ್ದರು. ಈಗಲೂ ಕೆಲವೆಡೆ ಇದು ಪ್ರಸಿದ್ಧವಾಗಿದೆ. ಈ ರೊಟ್ಟಿ ಮುಟಗಿ ಪೀಜಾ ಬರ್ಗರ್‌ಗಿಂತಲೂ ತಿನ್ನಲು ಸಖತ್ ರುಚಿಯಾಗಿರುತ್ತದೆ. ಬಿಸಿ ಬಿಸಿ ರೊಟ್ಟಿಯನ್ನು ಸ್ವಲ್ಪ ದಪ್ಪಗೆ ಮಾಡಿ ಅದರ ಮೇಲೆ ಮಸಾಲೆ ಹಾಕಿ ಚೆನ್ನಾಗಿ ಕಲಿಸಿ ಉಂಡೆ ಮಾಡಿ ತಿನ್ನಲಾಗುತ್ತದೆ.
ಹಾಗಾದರೆ ಉತ್ತರ ಕರ್ನಾಟಕ ಭಾಗದ ಈ ರೊಟ್ಟಿ ಮುಟಗಿ ತಯಾರಿಸುವ ವಿಧಾನವನ್ನು ನಾವು ನಿಮಗೆ ಹೇಳಿ ಕೊಡುತ್ತೇವೆ. ನೀವು ಮನೆಯಲ್ಲಿ ಒಂದು ಬಾರಿ ತಯಾರಿಸಿ, ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ರೊಟ್ಟಿ ಮುಟಗಿ ತಯಾರಿಸುವ ಹೇಗೆ ಎಂದು ತಿಳಿಯೋಣ.

ತಯಾರಿಸಲು ಬೇಕಾಗುವ ಪದಾರ್ಥಗಳು:
* ರೊಟ್ಟಿ 2
* ಎಣ್ಣೆ 2 ಚಮಚ
* ಉಪ್ಪು ರುಚಿಗೆ ತಕ್ಕಷ್ಟು
* ಕೆಂಪು ಖಾರದ ಪುಡಿ ಸ್ವಲ್ಪ
* ಈರುಳ್ಳಿ ಅರ್ಧ ಸ್ಪೂನ್(ಸಣ್ಣಕೆ ಹೆಚ್ಚಿದ)
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಮೆಣಸಿನಕಾಯಿ (ಸಣ್ಣಕೆ ಹೆಚ್ಚಿದ)
* ಗರಂ ಮಸಾಲ ಪುಡಿ ಚಿಟಿಕೆಯಷ್ಟು

* ಬೆಳ್ಳುಳ್ಳಿ 2
* ಜೀರಿಗೆ ಸ್ವಲ್ಪ
ಮಸಾಲ ರೊಟ್ಟಿ ಮುಟಗಿ ತಯಾರಿಸುವ ವಿಧಾನ:
* ನಿಮಗೆ ರೊಟ್ಟಿ ಮುಟಗಿ ಮಾಡಲು ರೊಟ್ಟಿ ತಯಾರಿಸಲು ಬರಬೇಕು. ಚಪಾತಿಯಷ್ಟು ತಪ್ಪದಾಗಿ ರೊಟ್ಟಿಯನ್ನು ಮೊದಲು ಬೇಸಿಕೊಳ್ಳಿ.
* ನಂತರ ಅದನ್ನು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ. ಬಿಸಿ ಇರುವಾಗಲೇ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
* ಬಳಿಕ ಖಾರದ ಪುಡಿ, ಗರಂ ಮಸಾಲ ಪುಡಿ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಜೀರಿಗೆ, ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಳ್ಳಿ
* ಇದನ್ನು ಎಣ್ಣೆ ಹಾಕಿ ನಾಡಿಕೊಂಡ ನಂತರ ಉಂಡೆಗಳನ್ನಾಗಿ ಮಾಡಿದರೆ ರುಚಿಯಾದ ರೊಟ್ಟಿ ಮುಟಗಿ ಸವಿಯಲು ಸಿಧ್ಧ.

ಸಾದಾ ರೊಟ್ಟಿ ಮುಟಗಿ ತಯಾರಿಸುವ ವಿಧಾನ:
* ನಿಮಗೆ ಮಸಾಲ ಮುಟಗಿ ತಿನ್ನಲು ಮನಸ್ಸಿಲ್ಲಾ ಅಂತಾದರೆ ಸಾದ ಮುಟಗಿ ಕೂಡ ತಯಾರಿಸಿಕೊಳ್ಳಬಹುದು. ಇದಕ್ಕೆ ಎರಡು ರೊಟ್ಟಿ ತೆಗೆದುಕೊಳ್ಳಿ
* ನಂತರ ಎಣ್ಣೆ ಹಾಕಿ ಬೆಳ್ಳುಳ್ಳಿ, ಜೀರಿಗೆ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ರೊಟ್ಟಿಯೊಂದಿಗೆ ಚೆನ್ನಾಗಿ ಕಲಸಿದ ನಂತರ ಅದನ್ನು ಉಂಡೆ ಕಟ್ಟಿದರೆ ಸಾದಾ ರೊಟ್ಟಿ ಮುಟಗಿ ಸವಿಯಲು ಸಿದ್ದ.












Click it and Unblock the Notifications