Rice: ಒಂದು ತಿಂಗಳು ಅನ್ನ ಸೇವಿಸದೇ ಇದ್ದರೆ ಆರೋಗ್ಯದ ಮೇಲೆ ಆಗುವ ಏನು ಪರಿಣಾಮ?

ಅನ್ನ ಭಾರತೀಯರ ದಿನನಿತ್ಯದ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಆಹಾರವಾಗಿದೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ಅನ್ನವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ, ಡಯಟ್‌ ಮತ್ತು ಆರೋಗ್ಯದ ಕಾರಣಗಳಿಂದ ಕೆಲವರು ಅನ್ನ ಸೇವಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ. ಹಾಗಾದರೆ ಒಂದು ತಿಂಗಳು ಸಂಪೂರ್ಣವಾಗಿ ಅನ್ನವನ್ನು ಸೇವಿಸದೆ ಇದ್ದರೆ ದೇಹದಲ್ಲಿ ಏನು ಬದಲಾವಣೆಗಳು ಆಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

ತೂಕ ಇಳಿಕೆಗೆ ಸಹಕಾರಿ

ಅನ್ನ ಹೆಚ್ಚು ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್‌ ಹೊಂದಿರುವ ಆಹಾರವಾಗಿದೆ. ಆದ್ದರಿಂದ ಒಂದು ತಿಂಗಳು ಅನ್ನ ಸೇವಿಸದೇ ಇದ್ದರೆ ದೇಹಕ್ಕೆ ಸೇರುವ ಕ್ಯಾಲೊರಿ ಪ್ರಮಾಣವು ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಸಹಜವಾಗಿ ಕೆಲವರಲ್ಲಿ ತೂಕ ಇಳಿಕೆಯಾಗುವ ಸಾಧ್ಯತೆ ಇದೆ.

Rice

ಆದರೆ ಅನ್ನ ಸೇವಿಸುವುದು ಬಿಟ್ಟ ನಂತರ ಹೆಚ್ಚು ಎಣ್ಣೆ, ಜಂಕ್‌ ಫುಡ್‌ ಅಥವಾ ಬೇಕರಿ ಪದಾರ್ಥಗಳನ್ನು ಸೇವಿಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಅನ್ನದ ಬದಲು ಪ್ರೋಟೀನ್‌, ತರಕಾರಿ ಮತ್ತು ಹಣ್ಣುಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸುವುದು ಉತ್ತಮ.

Soft Jowar Roti Tips: ಮೃದುವಾದ ಜೋಳದ ರೊಟ್ಟಿ ಮಾಡಬೇಕಾ, ಈ ಟಿಪ್ಸ್‌ ಫಾಲೋ ಮಾಡಿ
Soft Jowar Roti Tips: ಮೃದುವಾದ ಜೋಳದ ರೊಟ್ಟಿ ಮಾಡಬೇಕಾ, ಈ ಟಿಪ್ಸ್‌ ಫಾಲೋ ಮಾಡಿ

ಜೀರ್ಣಕ್ರಿಯೆಯಲ್ಲಿ ಬದಲಾವಣೆ

ಅನ್ನದಲ್ಲಿ ಕೆಲವು ಪ್ರಮಾಣದ ಫೈಬರ್‌ ಅಂಶವೂ ಇರುತ್ತದೆ. ವಿಶೇಷವಾಗಿ ಬ್ರೌನ್‌ ರೈಸ್‌ ದೇಹದ ಜೀರ್ಣಕ್ರಿಯೆಗೆ ಸಹಕಾರಿ. ಒಂದು ತಿಂಗಳು ಅನ್ನ ಸೇವಿಸದೇ ಇದ್ದರೆ ಕೆಲವರಿಗೆ ಮಲಬದ್ಧತೆ, ಹೊಟ್ಟೆ ಉಬ್ಬರ ಅಥವಾ ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಅನ್ನ ಬಿಡುವವರು ಆಹಾರದಲ್ಲಿ ಹಣ್ಣುಗಳು, ಸೊಪ್ಪುಗಳು, ಓಟ್ಸ್‌, ಮಿಲ್ಲೆಟ್ಸ್‌ ಮತ್ತು ಹೆಚ್ಚು ನೀರು ಸೇವಿಸುವುದು ಮುಖ್ಯ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಾಯ

ಅನ್ನದಲ್ಲಿ ಕಾರ್ಬೋಹೈಡ್ರೇಟ್‌ ಪ್ರಮಾಣ ಹೆಚ್ಚಿರುವುದರಿಂದ ಅದು ದೇಹದಲ್ಲಿ ಬೇಗ ಗ್ಲೂಕೋಸ್‌ ಆಗಿ ಪರಿವರ್ತನೆಗೊಳ್ಳುತ್ತದೆ. ಮಧುಮೇಹ ಇರುವವರು ಹೆಚ್ಚು ಪ್ರಮಾಣದಲ್ಲಿ ಬಿಳಿ ಅನ್ನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುತ್ತದೆ.

ಹೀಗಾಗಿ ಒಂದು ತಿಂಗಳು ಅನ್ನ ಸೇವನೆ ಕಡಿಮೆ ಮಾಡಿದರೆ ಕೆಲವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ತರಲು ಸಹಾಯವಾಗಬಹುದು. ಜೊತೆಗೆ ಸಿಹಿ ತಿಂಡಿಗಳ ಮೇಲೆ ಇರುವ ಆಸೆಯೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದರೆ ವೈದ್ಯರ ಸಲಹೆಯಿಲ್ಲದೆ ಸಂಪೂರ್ಣವಾಗಿ ಅನ್ನ ಬಿಟ್ಟುಬಿಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಬೇಸಿಗೆಯ ಸ್ಪೆಷಲ್‌ ಮಾವಿನಕಾಯಿ ಉಪ್ಪಿನಕಾಯಿ: ಸರಿಯಾದ ಅಳತೆಯಲ್ಲಿ ಮಾಡಿದರೆ ರುಚಿ ಡಬಲ್‌
ಬೇಸಿಗೆಯ ಸ್ಪೆಷಲ್‌ ಮಾವಿನಕಾಯಿ ಉಪ್ಪಿನಕಾಯಿ: ಸರಿಯಾದ ಅಳತೆಯಲ್ಲಿ ಮಾಡಿದರೆ ರುಚಿ ಡಬಲ್‌

ದೇಹದಲ್ಲಿ ಶಕ್ತಿ ಕಡಿಮೆಯಾಗುವುದು

ಅನ್ನ ದೇಹಕ್ಕೆ ತ್ವರಿತವಾಗಿ ಶಕ್ತಿ ನೀಡುವ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ. ಹೆಚ್ಚು ಶಾರೀರಿಕ ಕೆಲಸ ಮಾಡುವವರು ಅಥವಾ ದಿನಪೂರ್ತಿ ಬ್ಯುಸಿಯಾಗಿರುವವರಿಗೆ ಅನ್ನ ಉತ್ತಮ ಎನರ್ಜಿಯ ಮೂಲವೆಂದೇ ಹೇಳಲಾಗುತ್ತದೆ. ಹೀಗಾಗಿ ಏಕಾಏಕಿ ಅನ್ನ ಸೇವನೆ ನಿಲ್ಲಿಸಿದರೆ ಕೆಲವರಿಗೆ ನಿಶ್ಯಕ್ತಿ, ಆಯಾಸ ಅಥವಾ ಅಶಕ್ತಿಯ ಕೊರತೆ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಆರಂಭದ ದಿನಗಳಲ್ಲಿ ದೇಹಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಬೇಕಾಗುತ್ತದೆ.

ವಿಟಮಿನ್‌ ಕೊರತೆ ಮತ್ತು ಆಹಾರ ಆಸೆ ಹೆಚ್ಚಾಗಬಹುದು

ಅನ್ನದಲ್ಲಿ ವಿಟಮಿನ್‌ ಬಿ ಸೇರಿದಂತೆ ಕೆಲವು ಪ್ರಮುಖವಾದ ಪೋಷಕಾಂಶಗಳಿವೆ. ಒಂದು ತಿಂಗಳು ಸಂಪೂರ್ಣವಾಗಿ ಅನ್ನ ತಿನ್ನದೇ ಇದ್ದರೆ ಕೆಲವರಿಗೆ ಪೋಷಕಾಂಶದ ಕೊರತೆ ಉಂಟಾಗುತ್ತದೆ. ಜೊತೆಗೆ ಹಸಿವು ಹೆಚ್ಚಾಗಿ ಬೇರೆ ಕಾರ್ಬೋಹೈಡ್ರೇಟ್‌ ಆಹಾರಗಳನ್ನು ಹೆಚ್ಚು ತಿನ್ನುವ ಆಸೆಯೂ ಉಂಟಾಗಬಹುದು.

ಮಾಹಿತಿ ಕೃಪೆ: ಈ ಮಾಹಿತಿಯನ್ನು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್‌) ಪ್ರಕಟಿಸಿರುವ ಆರೋಗ್ಯ ಮಾಹಿತಿಗಳ ಆಧಾರದ ಮೇಲೆ ನೀಡಲಾಗಿದೆ. ಆದರೆ ಆಹಾರ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು ತಜ್ಞ ಡಯಟಿಷಿಯನ್‌ ಅಥವಾ ವೈದ್ಯರ ಸಲಹೆ ಪಡೆಯುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+