Rice: ಅನ್ನ ಮಾಡುವ ಮುನ್ನ ಅಕ್ಕಿ ತೊಳೆಯಬೇಕಾ? ಇದರಿಂದ ಆಗುವ ಲಾಭವೇನು? ಇಲ್ಲಿದೆ ಮಾಹಿತಿ
ಅನ್ನ.. ಭಾರತದ ಜನ ಸಮಾನ್ಯವಾಗಿ ತಿನ್ನುವ ಆಹಾರ.. ಇದು ಜನರ ಜೀವನದಲ್ಲಿ ಹಾಸಿ ಹೊಕ್ಕಿದೆ. ಅನ್ನವನ್ನು ಸಾಮಾನ್ಯವಾಗಿ ಬಿಳ ಹಾಗೂ ಕಂದು ಬಣ್ಣದ ಅಕ್ಕಿಯಲ್ಲಿ ಮಾಡಲಾಗುತ್ತದೆ. ವಿಶ್ವದಲ್ಲೇ ಅತ್ಯಂತ ಜನಪ್ರೀಯ ಖಾದ್ಯಗಳಲ್ಲಿ ಇದು ಒಂದು.
ಕರ್ನಾಟಕದಲ್ಲಂತೂ ಅನ್ನ ಇಲ್ಲದೆ ದಿನವೇ ಮುಗಿಯುವುದಿಲ್ಲ. ಹಳೆ ಮೈಸೂರು ಪ್ರಾಂತ್ಯದಲ್ಲಿ ಮುದ್ದೆ ಊಟ ಆದ ಮೇಲೆ ಅನ್ನವನ್ನು ಊಟ ಮಾಡಿದರೆ, ಉತ್ತರ ಕರ್ನಾಟಕದ ಭಾಗದಲ್ಲಿ ರೊಟ್ಟಿ ತಿಂದು ಅನ್ನ ಸೇವಿಸುತ್ತಾರೆ. ದಕ್ಷಿಣ ಕನ್ನಡದಲ್ಲಿ ಕುಚಲಕ್ಕಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ನಾವು ನೀವೆಲ್ಲಾ ಇಷ್ಟು ಇಷ್ಟ ಪಡಲು ಕಾರಣ, ಇದು ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅಲ್ಲದೆ ಮಾಡುವ ವಿಧಾನ ತುಂಬ ಸುಲಭ.

ಸಾಮಾನ್ಯವಾಗಿ ಅನ್ನವನ್ನು ಕುಕ್ಕರ ಅಥವಾ ಪಾತ್ರೆಯಲ್ಲಿ ತಯಾರಿಸುತ್ತಾರೆ. ಕುಕ್ಕರ್‌ನಲ್ಲಿ ಮಾಡಿದರೆ ಪದೆ ಪದೆ ನೋಡುವ ಕಿರಿಕಿರಿ ಇರುವುದಿಲ್ಲ. ಪಾತ್ರೆಯಲ್ಲಿ ಮಾಡಿದರೆ, ಅದಕ್ಕೆ ಸಮಯಕ್ಕೆ ಅನುಗುಣವಾಗಿ ನೋಡಿ ನೀರನ್ನು ಹಾಕಬೇಕು. ಅಲ್ಲದೆ ಒಲೆಯನ್ನು ಜೋರಾಗಿ ಹಚ್ಚಿದರೆ ಅನ್ನ ಹೊತ್ತುತ್ತದೆ ಅನ್ನುವ ಭಯವೂ ಇರುತ್ತದೆ. ಇಷ್ಟೆಲ್ಲಾ ಓಕೆ ನೀವು ಅನ್ನವನ್ನು ಮಾಡುವಾಗ ಅಕ್ಕಿಯನ್ನು ತೊಳೆಯುತ್ತೀರಾ. ಒಂದು ವೇಳೆ ಅಕ್ಕಿಯನ್ನು ತೊಳೆಯುವುದಿಲ್ಲ ಎಂದಾದಲ್ಲಿ ಈ ವರದಿಯನ್ನು ಒಮ್ಮೆ ಓದಿ. ಅದರಿಂದ ಆಗುವ ಪ್ರಯೋಜನವನ್ನು ತಿಳಿದು, ನೀವು ಇದನ್ನು ಟ್ರೈ ಮಾಡಬಹುದು.
ಇದಕ್ಕೆ ಒಂದು ಕಾರಣವೆಂದರೆ ಅನ್ನವನ್ನು ತಯಾರಿಸುವುದು ತುಂಬಾ ಸುಲಭ. ಇದು ಸಂಪೂರ್ಣವಾಗಿ ಮೃದುವಾಗುವವರೆಗೆ ಸಾಕಷ್ಟು ನೀರಿನಿಂದ ಪಾತ್ರೆಯಲ್ಲಿ ಸರಳವಾಗಿ ಕುದಿಸಲಾಗುತ್ತದೆ. ಹೆಚ್ಚಿನ ಜನರು ಅಕ್ಕಿಯನ್ನು ತಯಾರಿಸುವ ಮೊದಲು ನೀರಿನಲ್ಲಿ ಚೆನ್ನಾಗಿ ತೊಳೆಯುತ್ತಾರೆಯಾದರೂ, ಕೆಲವರು ಅಕ್ಕಿ ತಯಾರಿಕೆಯ ಈ ಹಂತವನ್ನು ಬಿಟ್ಟುಬಿಡುತ್ತಾರೆ. ನೀವೂ ಇದರಲ್ಲಿ ತೊಡಗಿಸಿಕೊಂಡಿದ್ದರೆ ಅಕ್ಕಿಯನ್ನು ತೊಳೆದು ಬೇಯಿಸುವುದರಿಂದ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಎಂಬುದನ್ನು ಇಲ್ಲಿ ತಿಳಿಯಿರಿ.

ಅಕ್ಕಿಯನ್ನು ತೊಳೆದರೆ ಏನು ಲಾಭ?
ಜರ್ನಲ್ ಆಫ್ ಹೆಜಾರ್ಡಸ್ ಮೆಟೀರಿಯಲ್ಸ್‌ನಲ್ಲಿ ಪ್ರಕಟವಾದ 2021 ಅಧ್ಯಯನವು ಅಡುಗೆ ಮಾಡುವ ಮೊದಲು ಅಕ್ಕಿಯನ್ನು ತೊಳೆಯುವುದು ಪ್ಯಾಕೇಜಿಂಗ್ ಸಮಯದಲ್ಲಿ ಸೇರಿಸಲಾದ ಮೈಕ್ರೋಪ್ಲಾಸ್ಟಿಕ್‌ಗಳ ಪ್ರಮಾಣವನ್ನು 20-40% ರಷ್ಟು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಹೀಗಾಗಿ ಅನ್ನವನ್ನು ಮಾಡುವಾಗ ಅಕ್ಕಿಯನ್ನು ತೊಳೆಯುವುದು ತುಂಬ ಒಳ್ಳೆಯದು.
ತೊಳೆದು ಅನ್ನ ಮಾಡಿ
ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಕ್ಕಿಯನ್ನು ತಂದು ತೊಳೆದಾಗ ಅದರಲ್ಲಿ ವಿಷಕಾರಿ ಅಂಶಗಳು ಇದ್ದಲ್ಲಿ ಇದು ಕಡಿಮೆ ಆಗುತ್ತದೆ ಎಂಬುದಕ್ಕೆ ಪುರಾವೆಗಳಿವೆ. ಮಣ್ಣು ಹಾಗೂ ನೀರಿನಲ್ಲಿ ಕಂಡು ಬರುವ ಕೆಲವು ಸಣ್ಣ ಸಣ್ಣ ಕೀಟಗಳು ಹಾಗೂ ಹೊಲಸು ಇದಲ್ಲಿ ನೀರಿನಲ್ಲಿ ಸೇರಿ ಹೊರ ಹೋಗುತ್ತದೆ. ಹೀಗಾಗಿ ಅಕ್ಕಿಯನ್ನು ಅನ್ನ ಮಾಡುವ ಅಕ್ಕಿಯನ್ನು ತೊಳೆದರೆ ಇದರಲ್ಲಿ ವಿಷಕಾರಿ ಅಂಶಗಳು ನಾಶವಾಗುತ್ತವೆ. ಅಡುಗಡೆ ಮಾಡುವಾಗ ಅಕ್ಕಿಯನ್ನು ತೊಳೆಯುವುದು ಉತ್ತಮ..
ಇನ್ನು ಕಂದು ಬಣ್ಣದ ಅಂಕಿ ಅಥವಾ ಬಿಳಿ ಅಕ್ಕಿಯನ್ನು ಅನ್ನವನ್ನು ಮಾಡುವ ಮೊದಲು ಬೀಸಿ ನೀರಿನಲ್ಲಿ ಬೇಯಿಸುವುದು ಸಹಜ ಉತ್ತಮ. ಹೀಗೆ ಐದು ನಿಮಿಷ ಮಾಡುವುದರಿಂದ ಅಕ್ಕಿಯೊಂದಿಗೆ ಸೇರಿಕೊಂಡಿದ್ದ ವಿಷಕಾರಿ ಅಂಶಗಳು ನಾಶವಾಗುತ್ತವೆ. ಇನ್ನು ಉತ್ತಮ ಆರೋಗ್ಯದ ದೃಷ್ಟಿಯಿಂದ ಅಕ್ಕಿಯನ್ನು ಐದರಿಂದ ಹತ್ತು ಸಾರಿ ತೊಳೆದು ಬಳಸಿದರೆ ಉತ್ತಮ. ಇದರಿಂದ ಅಕ್ಕಿಯೊಂದಿಗೆ ಸೇರಿಕೊಂಡಿದ್ದ ಕಸ, ವಿಷಕಾರಿ ಪದಾರ್ಥಗಳು ನಾಶವಾಗುತ್ತವೆ.












Click it and Unblock the Notifications