Tricolor Coconut Chutney Recipe: ಇಂದು ಇಡ್ಲಿ ಮತ್ತು ದೋಸೆಗಾಗಿ ಈ ತ್ರಿವರ್ಣ ತೆಂಗಿನಕಾಯಿ ಚಟ್ನಿ ಪ್ರಯತ್ನಿಸಿ..
ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ನಿಮ್ಮ ಕುಟುಂಬಕ್ಕಾಗಿ ಏನಾದರೂ ವಿಶೇಷವಾದ ಅಡುಗೆ ಮಾಡಲು ನೀವು ಬಯಸಿದ್ದರೆ, ಇಲ್ಲಿದೆ ಒಂದು ಗುಡ್ ಐಡಿಯಾ. ನಿಮ್ಮ ಮನೆಯಲ್ಲಿ ಬೆಳಿಗ್ಗೆ ಎಂದಿನಂತೆ ದೋಸೆ ಅಥವಾ ಇಡ್ಲಿ ಮಾಡ್ತಾಯಿದ್ದರೆ, ತ್ರಿವರ್ಣ ತೆಂಗಿನಕಾಯಿ ಚಟ್ನಿಯನ್ನು ತಯಾರಿಸಬಹುದು. ಈ ಚಟ್ನಿ ತಯಾರಿಸುವುದು ತುಂಬಾ ಸುಲಭ ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ಸೂಕ್ತವಾದ ಚಟ್ನಿ ಆಗೋದರಲ್ಲಿ ಅನುಮಾನ ಇಲ್ಲ.
ನೀವು ಸಾಮಾನ್ಯವಾಗಿ ಇಡ್ಲಿ ದೋಸೆಗೆ ಮನೆಯಲ್ಲಿ ತೆಂಗಿನಕಾಯಿ ಚಟ್ನಿ ತಯಾರಿಸಿರುತ್ತೀರಿ. ಅದನ್ನು ಇಂದು ಕೊಂಚ ವಿಭಿನ್ನವಾಗಿ ತಯಾರಿಸಿದರೆ ಆಯ್ತು. ಹಾಗಾದರೆ ತ್ರಿವರ್ಣ ತೆಂಗಿನಕಾಯಿ ಚಟ್ನಿ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಹಾಗಾದರೆ ಈ ತ್ರಿವರ್ಣ ತೆಂಗಿನಕಾಯಿ ಚಟ್ನಿ ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು: ಬಿಳಿ ತೆಂಗಿನಕಾಯಿ ಚಟ್ನಿಗೆ...
* ತೆಂಗಿನಕಾಯಿ - 1/4 ಕಪ್
* ಕಡಲೆಕಾಯಿ - 2 ಟೇಬಲ್ಸ್ಪೂನ್
*ಗೋಡಂಬಿ - 6
* ಶುಂಠಿ - 1 ಇಂಚು
* ಹಸಿರು ಮೆಣಸಿನಕಾಯಿ - 2
* ಉಪ್ಪು - ರುಚಿಗೆ ತಕ್ಕಂತೆ
* ನೀರು - ಸ್ವಲ್ಪ
ಹಸಿರು ತೆಂಗಿನಕಾಯಿ ಚಟ್ನಿಗಾಗಿ...
* ತೆಂಗಿನಕಾಯಿ - 1/4 ಕಪ್
* ಕಡಲೆಕಾಯಿ - 2 ಟೇಬಲ್ಸ್ಪೂನ್
* ಹಸಿರು ಮೆಣಸಿನಕಾಯಿ - 2
* ಶುಂಠಿ - 1 ಇಂಚು
* ಕರಿಬೇವಿನ ಎಲೆಗಳು - ಸ್ವಲ್ಪ
* ಕೊತ್ತಂಬರಿ ಸೊಪ್ಪು - ಸ್ವಲ್ಪ
* ಉಪ್ಪು - ರುಚಿಗೆ ತಕ್ಕಂತೆ
* ನೀರು - ಅಗತ್ಯವಿರುವ ಪ್ರಮಾಣ
ಕೇಸರಿ ತೆಂಗಿನಕಾಯಿ ಚಟ್ನಿಗಾಗಿ...
* ಮೆಣಸಿನಕಾಯಿ- 4
* ಬೆಳ್ಳುಳ್ಳಿ - 4
* ಹುಣಸೆಹಣ್ಣು - ಸಣ್ಣ ತುಂಡು
* ಕಡಲೆಬೇಳೆ - 2 ಟೇಬಲ್ಸ್ಪೂನ್
* ತೆಂಗಿನಕಾಯಿ - 1/4 ಕಪ್
* ಉಪ್ಪು - ರುಚಿಗೆ ತಕ್ಕಂತೆ
* ನೀರು - ಅಗತ್ಯವಿರುವ ಪ್ರಮಾಣ
* ಕೇಸರಿ ಆಹಾರ ಬಣ್ಣ ಚಿಟಿಕೆ

ಒಗ್ಗರಣೆಗಾಗಿ...
* ಎಣ್ಣೆ - 2 ಟೇಬಲ್ಸ್ಪೂನ್
* ಸಾಸಿವೆ - 1 ಚಮಚ
* ಕರಿಬೇವಿನ ಎಲೆಗಳು - ಸ್ವಲ್ಪ
* ಇಂಗು ಪುಡಿ - ಸ್ವಲ್ಪ
ತಯಾರಿಸುವ ವಿಧಾನ:
* ಮೊದಲನೆಯದಾಗಿ ಬಿಳಿ ತೆಂಗಿನಕಾಯಿ ಚಟ್ನಿಗೆ ತೆಂಗಿನಕಾಯಿ, ಶೇಂಗಾ, ಹಸಿಮೆಣಸಿನಕಾಯಿ, ಗೋಡಂಬಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಮಿಕ್ಸರ್ ಜಾರ್ ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.
* ನಂತರ ಅದೇ ಜಾರ್ ನಲ್ಲಿ ಹಸಿರು ತೆಂಗಿನಕಾಯಿ ಚಟ್ನಿಗೆ ತೆಂಗಿನಕಾಯಿ, ಶೇಂಗಾ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿ ಇನ್ನೊಂದು ಪಾತ್ರೆಗೆ ತೆಗೆದುಕೊಳ್ಳಿ.

* ನಂತರ ಕೆಂಪು ಮೆಣಸಿನಕಾಯಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿಡಿ.
* ನಂತರ ಅದೇ ಜಾರ್ ನಲ್ಲಿ ಕೇಸರಿ ತೆಂಗಿನಕಾಯಿ ಚಟ್ನಿ ತಯಾರಿಸಿ. ಮೊದಲಿಗೆ ಜಾರ್‌ನಲ್ಲಿ ನೆನೆಸಿದ ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆ, ಕಡಲೆಬೇಳೆ, ತೆಂಗಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
* ಕೊನೆಗೆ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು, ಅದರಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ, ಕರಿಬೇವಿನ ಸೊಪ್ಪು ಮತ್ತು ಇಂಗು ಹಾಕಿ ಒಗ್ಗರಣೆ ಮಾಡಿ ಚಟ್ನಿಗಳ ಮೇಲೆ ಸ್ವಲ್ಪ ಸ್ವಲ್ಪ ಹಾಕಿದರೆ ರುಚಿಯಾದ ತ್ರಿವರ್ಣ ತೆಂಗಿನಕಾಯಿ ಚಟ್ನಿ ಸವಿಯಲು ಸಿದ್ಧ.












Click it and Unblock the Notifications