Ugadi 2025: ಯುಗಾದಿಯಂದು ಸ್ನಾನ ಮಾಡುವ ನೀರಿಗೆ ಇದೆಲ್ಲಾ ಹಾಕಿ ಯಾಕೆಂದರೆ...
ಯುಗಾದಿ ಹಬ್ಬ ಇನ್ನೇನು ದೂರವಿಲ್ಲ. ಹಬ್ಬಕ್ಕಾಗಿ ಈಗಾಗಲೇ ಮನೆಗಳಲ್ಲಿ ತಯಾರಿ ಶುರುವಾಗಿದೆ. ಮನೆ ಸ್ವಚ್ಚಗೊಳಿಸುವುದು, ಬಗೆ ಬಗೆಯ ಖಾದ್ಯಗಳನ್ನು ತಯಾರಿಸುವುದು, ಮನೆಯನ್ನು ಅಲಂಕಾರಗೊಳಿಸುವುದಕ್ಕೂ ಸಿದ್ಧತೆಗಳು ಆರಂಭವಾಗಿವೆ. ಅಲ್ಲದೆ ಹೊಸ ಬಟ್ಟೆ, ಆಭರಣ ಖರೀದಿ ಭರಾಟೆ ಕೂಡ ಜೋರಾಗಿದೆ. ಆದರೆ ಇಷ್ಟೆಲ್ಲಾ ತಯಾರಿ ಮಾಡಿಕೊಳ್ಳುವ ನಾವು ಮುಖ್ಯವಾದ ವಿಷಯವನ್ನು ಮರೆತುಬಿಡುತ್ತೇವೆ. ಹಾಗಾದರೆ ಏನದು?
ಯುಗಾದಿ ಭಾರತೀಯರ ಹೊಸ ವರ್ಷ. ಈ ದಿನ ಕೆಟ್ಟದನ್ನು ತೊಡೆದು ಹಾಕಿ ಒಳ್ಳೆದರ ಆಗಮನವಾಗುತ್ತದೆ. ಹೊಸ ಚಿಗುರು ಕಂಗೊಳಿಸುತ್ತದೆ. ಮನೆ ಮನಗಳನ್ನು ಬೆಳಗುತ್ತಾ ಸಂಬಂಧಗಳನ್ನು ಹತ್ತಿರವಾಗಿಸುತ್ತಾ ಕೆಟ್ಟದ್ದನ್ನು ಮರೆತು ಹೊಸ ಜೀವನ ಶುರು ಮಾಡುವ ಹಬ್ಬ. ಇದಕ್ಕಾಗಿ ನಾವು ಎಲ್ಲಾ ತಯಾರಿ ಮಾಡಿಕೊಂಡರೂ ಕೂಡ ಈ ದಿನ ಸ್ನಾನ ಮಾಡುವಾಗ ಸ್ನಾನದ ನೀರಿಗೆ ಹಾಕುವ ವಸ್ತುಗಳನ್ನು ಮರೆತುಬಿಡುತ್ತೇವೆ. ಹಾಗಾದರೆ ಅವು ಯಾವವು? ಅದರಿಂದ ಏನು ಲಾಭ?

ಸಾಮಾನ್ಯವಾಗಿ ಯುಗಾದಿಯಂದು ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಹಾಕಲಾಗುತ್ತದೆ. ಬೇವಿನ ಎಲೆ 130 ಕ್ಕೂ ಹೆಚ್ಚು ವಿಭಿನ್ನ ಜೈವಿಕವಾದ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಬೇವಿನ ಎಲೆಗಳನ್ನು ಉರಿಯೂತ, ಸೋಂಕು ಜ್ವರ, ಚರ್ಮರೋಗ ಮತ್ತು ಹಲ್ಲಿನ ಕಾಯಿಲೆಗಳಿಂದ ಹಿಡಿದು ಅನೇಕ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಬ್ಯಾಕ್ಟೀರಿಯಾ ನಿರೋಧಕ, ಸೂಕ್ಷ್ಮಜೀವಿ ನಿರೋಧಕ, ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್, ನಂಜುನಿರೋಧಕ, ಮಲೇರಿಯಾ ನಿವಾರಕ, ಮತ್ತು ವೈರಸ್ ನಿವಾರಕ ಗುಣಲಕ್ಷಣಗಳಿಂದ ತುಂಬಿರುವ ಬೇವು ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಬಹುತೇಕ ಪರಿಹಾರವಾಗಿದೆ. ಹೀಗಾಗಿ ಬೇವನ್ನು ಔಷಧವಾಗಿಯೂ ಬಳಕೆ ಮಾಡಲಾಗುವುದು.

ಬೇವು ಮತ್ತು ಬೆಲ್ಲವನ್ನು ಸೇವನೆ ಅರ್ಥ
ಯುಗಾದಿ ಹಬ್ಬದಂದು ಬೇವು ಮತ್ತು ಬೆಲ್ಲವನ್ನು ಸೇವನೆಯ ಹಿಂದೆ ವಿಶೇಷ ಅರ್ಥವಿದೆ. ಇದರ ಅರ್ಥ ಮನುಷ್ಯನ ಜೀವನದಲ್ಲಿ ಬೇವಿನಂತಹ ನೋವುಗಳು ಹಾಗೂ ಬೆಲ್ಲದಂತಹ ಸುಖಗಳು ಬರುವುದು ಸಾಮಾನ್ಯ. ಹಾಗಾಗಿ ಇವೆರಡನ್ನು ಸಮತೋಲನ ಮಾಡಿಕೊಂಡು ಹೋಗುವುದೇ ಜೀವನದ ಪರಮೋದ್ದೇಶ ಎಂಬುದನ್ನು ಈ ಹಬ್ಬದಲ್ಲಿ ಬಳಸಲ್ಪಡುವ ಬೇವು ಹಾಗೂ ಬೆಲ್ಲ ಸಾಂಕೇತಿಕವಾಗಿದೆ. ಅಲ್ಲದೆ ಬೇವಿನ ಎಲೆ ಅಥವಾ ಹೂವುಗಳನ್ನು ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಮಾಟ ಮಂತ್ರ, ದೃಷ್ಟ ಶಕ್ತಿ ನಿವಾರಣೆಯಾಗಿ ಸಕಾರತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ.
ಯುಗಾದಿಯಂದು ಸ್ನಾನ ಮಾಡುವ ನೀರಿಗೆ ಹಾಕಬೇಕಾದ ವಸ್ತುಗಳಿವು...
*ಹೀಗೆ ಆಧ್ಯಾತ್ಮಿಕವಾಗಿ ವಿಶೇಷ ಮಹತ್ವ ಪಡೆದ ಬೇವು ಆರೋಗ್ಯಕ್ಕೆ ಸಂಜೀವಿನಿಯಾಗಿದೆ. ಯುಗಾದಿಯಂದು ಹೊಸದಾಗಿ ಚಿಗುರುವ ಬೇವಿನ ಎಲೆಯನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಲಾಗುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಅನೇಕ ಚರ್ಮ ಸಂಬಂಧಿ ಕಾಯಿಲೆಗಳನ್ನು ವಾಸಿ ಮಾಡಿ ಹೊಸತನವನ್ನು ನೀಡುತ್ತದೆ.
*ಬೇವಿನ ಹೂವು ಕೂಡ ಎಲೆಯಂತೆ ಔಷಧಿಯ ಗುಣಗಳನ್ನು ಹೊಂದಿದ್ದು, ಇದನ್ನು ವಿವಿಧ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ.
* ಬೇವಿನ ಮರದ ಹಸಿ ಕಟ್ಟಿಗೆಯ ತುಂಡನ್ನು ಕೂಡ ನೀರು ಬಿಸಿ ಮಾಡುವಾಗ ಹಾಕುವ ಪದ್ಧತಿ ಕೆಲವೆಡೆ ಇದೆ.
* ಬೇವಿನ ಬೇರನ್ನೂ ಕೂಡ ಕೆಲವರು ಸ್ನಾನದ ನೀರಿಗೆ ಬಳಕೆ ಮಾಡುತ್ತಾರೆ.
* ಸ್ನಾನದ ಬಳಿಕ ಕೊಬ್ಬರಿಯನ್ನು ಹಚ್ಚುವುದು ಕೆಲವೆಡೆ ರೂಢಿಯಲ್ಲಿದೆ.












Click it and Unblock the Notifications