Hair Care: ತಲೆ ಕೂದಲ ಸೌಂದರ್ಯಕ್ಕೆ ಮನೆಮದ್ದು ಈರುಳ್ಳಿ- ಉಪಯೋಗಿಸಿದರೆ ಎಲ್ಲರ ಗಮನ ನಿಮ್ಮ ಕಡೆಗೆ ಗ್ಯಾರಂಟಿ

ಕೂದಲು ಸುಂದರವಾಗಿ, ಆಕರ್ಷಕವಾಗಿ, ದಟ್ಟವಾಗಿರಬೇಕು ಅಂತ ಯಾರಿಗೆ ತಾನೆ ಆಸೆ ಇರೋದಿಲ್ಲ ಹೇಳಿ. ಎಲ್ಲರಿಗೂ ತಮ್ಮ ಕೂದಲು ತುಂಬಾ ಚೆನ್ನಾಗಿರಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಜನ ನಾನಾ ಬಗೆಯ ಶಾಂಪೂ, ಎಣ್ಣೆ ಹಾಗೂ ಕಂಡೀಷನರ್ ಬಳಕೆ ಮಾಡುತ್ತಾರೆ. ಆದರೆ ನಿಮ್ಮ ಕೂದಲಿನ ಸೌಂದರ್ಯವನ್ನು ಕಾಪಾಡುವ ಶಕ್ತಿ ನಿಮ್ಮ ಅಡುಗೆ ಮನೆಯಲ್ಲಿ ಇದೆ. ಅದನ್ನು ನಿಯಮಿತವಾಗಿ ಬಳಕೆ ಮಾಡಿದರೆ ನಿಮ್ಮ ಕೂದಲ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು. ಹಾಗಾದರೆ ತಲೆ ಕೂದಲಿಗಾಗಿ ಈರುಳ್ಳಿ ಪ್ರಯೋಜನಗಳು ಯಾವುವು?

ನಿಮ್ಮ ಕೂದಲನ್ನು ಉದ್ದವಾಗಿ ಬೆಳೆಸಲು ಬಯಸುತ್ತಿದ್ದರೆ ಅದಕ್ಕೆ ಈರುಳ್ಳಿ ರಸವನ್ನು ಹಚ್ಚಿ. ಈರುಳ್ಳಿ ರಸವು ಕೂದಲಿನ ಬೆಳವಣಿಗೆಗೆ ಮಾಂತ್ರಿಕವಾಗಿ ಕೆಲಸ ಮಾಡುತ್ತದೆ. ಇದರ ನಿಯಮಿತ ಬಳಕೆಯು ಕ್ಯಾಟಲೇಸ್ ಎಂಬ ಉತ್ಕರ್ಷಣ ನಿರೋಧಕ ಕಿಣ್ವದ ಮಟ್ಟವನ್ನು ಹೆಚ್ಚಿಸುತ್ತದೆ.

ಈರುಳ್ಳಿ ರಸ ಸಲ್ಫರ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ತಲೆ ಕೂದಲ ರಂಧ್ರಗಳನ್ನು ಪೋಷಿಸುತ್ತದೆ. ಅವುಗಳನ್ನು ಪುನಃ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಸಲ್ಫರ್ ಕೂದಲು ತೆಳುವಾಗುವುದನ್ನು ಮತ್ತು ಒಡೆಯುವುದನ್ನು ತಡೆಯುತ್ತದೆ. ಈರುಳ್ಳಿ ರಸದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತವೆ. ನೀವು ಕೂದಲು ಬೆಳವಣಿಗೆಗೆ ಶಾರ್ಟ್‌ಕಟ್‌ ಮಾರ್ಗ ಹುಡುಕುತ್ತಿದ್ದರೆ ಈರುಳ್ಳಿ ರಸವನ್ನು ಈ ಕೆಳಗಿನ ವಿಧಾನದಲ್ಲಿ ಬಳಸಿ.

onion juice benefits for hair know here how to use it

ಈರುಳ್ಳಿ ರಸ ಮತ್ತು ಕ್ಯಾಸ್ಟರ್ ಆಯಿಲ್

2 ಟೇಬಲ್ಸ್ಪೂನ್ ಕ್ಯಾಸ್ಟರ್ ಆಯಿಲ್ ಮತ್ತು ಈರುಳ್ಳಿ ರಸವನ್ನು ಮಿಶ್ರಣ ಮಾಡಿ. ನಂತರ ಅದನ್ನು ತಲೆಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ಬಿಟ್ಟು, ಸೌಮ್ಯವಾದ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ. ಎರಡು ದಿನಕ್ಕೊಮ್ಮೆ ಈ ಎಣ್ಣೆಯನ್ನು ಹಚ್ಚಿ. ಕ್ಯಾಸ್ಟರ್ ಆಯಿಲ್ ಅನ್ನು ಈರುಳ್ಳಿ ರಸದೊಂದಿಗೆ ಬೆರೆಸಿದಾಗ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ದಪ್ಪವಾಗಿರುತ್ತದೆ.

ಈರುಳ್ಳಿ ರಸ ಮತ್ತು ಆಲಿವ್ ಎಣ್ಣೆ

3 ಚಮಚ ಈರುಳ್ಳಿ ರಸ ಮತ್ತು 1½ ಚಮಚ ಆಲಿವ್ ಎಣ್ಣೆಯ ಮಿಶ್ರಣ ಮಾಡಿ. ಇದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ ಮತ್ತು ವೃತ್ತಾಕಾರದ ಚಲನೆಯಲ್ಲಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. 2 ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

onion juice benefits for hair know here how to use it

ಎರಡು ದಿನಕ್ಕೊಮ್ಮೆ ಈ ಎಣ್ಣೆಯನ್ನು ಹಚ್ಚುವುದರಿಂದ ಬಹಳಷ್ಟು ಪ್ರಯೋಜನವನ್ನು ಪಡೆಯುತ್ತೀರಿ. ಆಲಿವ್ ಎಣ್ಣೆಯು ತಲೆಹೊಟ್ಟು ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದೆ. ಅಲ್ಲದೆ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ ಇದು ನಿಮ್ಮ ಕೂದಲನ್ನು ಕಂಡೀಷನ್ ಮಾಡುತ್ತದೆ.

ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ

ಸಣ್ಣ ಬೌಲ್ ತೆಗೆದುಕೊಂಡು ಅದರಲ್ಲಿ 2 ಚಮಚ ಈರುಳ್ಳಿ ರಸ, 2 ಚಮಚ ತೆಂಗಿನ ಎಣ್ಣೆ ಮತ್ತು 5 ಹನಿ ಟೀ ಟ್ರೀ ಎಣ್ಣೆಯನ್ನು ಮಿಶ್ರಣ ಮಾಡಿ. ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, ಈ ಎಣ್ಣೆಯನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ. 2 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಶವರ್ ಕ್ಯಾಪ್ನಿಂದ ಮುಚ್ಚಿ.

onion juice benefits for hair know here how to use it

30 ನಿಮಿಷಗಳ ಕಾಲ ಬಿಟ್ಟು ನಂತರ ಸೌಮ್ಯವಾದ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ. ತೆಂಗಿನ ಎಣ್ಣೆಯು ವಿಶೇಷವಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾದ ತಲೆಹೊಟ್ಟು ತೆಗೆದುಹಾಲು ಕೆಲಸ ಮಾಡುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಈ ಮಾಹಿತಿಯನ್ನು ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+