Smoking: ಒಂದು ಸಿಗರೇಟ್ 10 ಆರೋಗ್ಯ ಸಮಸ್ಯೆ: ಸಿಗರೇಟ್ ಬಿಡಲು ಸಿಂಪಲ್ ಟಿಪ್ಸ್!
ಸಿಗರೇಟ್ ಸೇದುವ ಚಟವಿರುವವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಸಿಗರೇಟ್ ಸೇದುವುದರಿಂದ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು, COPD ಯಂತಹ ಗಂಭೀರ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಟೈಪ್ 2 ಮಧುಮೇಹ ಹಾಗೂ ಸಂತಾನೋತ್ಪತ್ತಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಸಿಗರೇಟ್ ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ವೈದ್ಯರು. ಸಿಗರೇಟ್ ಸೇದುವುದು ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. ಇದರಿಂದ ಬಾಯಿ, ಗಂಟಲು, ಅನ್ನನಾಳ, ಮೂತ್ರಕೋಶ, ಮೂತ್ರಪಿಂಡ, ಹೊಟ್ಟೆ ಹಾಗೂ ಗರ್ಭಕಂಠ ಸೇರಿದಂತೆ ದೇಹದ ಇತರ ಭಾಗಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗಿದೆ. ಲ್ಯುಕೇಮಿಯಾ (ಕ್ಯಾನ್ಸರ್ ತರಿಸುವ) ಅಪಾಯವನ್ನು ಹೆಚ್ಚಿಸುತ್ತದೆ.

ನೀವು ಸಿಗರೇಟು ಸೇದುತ್ತಿದ್ದರೆ ನಿಮ್ಮ ಹೃದಯದ ಅನಾರೋಗ್ಯಕ್ಕೆ ಆಹ್ವಾನ ನೀಡುತ್ತಿದ್ದೀರಿ ಅಂತಲೇ ಅರ್ಥ. ಸಿಗರೇಟ್ ಸೇದುವುದರಿಂದ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಹೃದಯ ಸಮಸ್ಯೆ, ಪಾರ್ಶ್ವವಾಯು ಮತ್ತು ಕಾಲುಗಳು ಹಾಗೂ ಪಾದಗಳ ಭಾಗದಲ್ಲಿ ರಕ್ತ ಸಂಚಾರಕ್ಕೆ ಸಮಸ್ಯೆ ಆಗುತ್ತದೆ. ನಿರಂತರವಾಗಿ ಸಿಗರೇಟ್ ಸೇದುವುದರಿಂದಾಗಿ ಹೃದಯಾಘಾತ ಹಾಗೂ ಪಾರ್ಶ್ವವಾಯು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮುಖ್ಯವಾಗಿ ಉಸಿರಾಟದ ಸಮಸ್ಯೆಗಳು ನಿಮಗೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಆಸ್ತಮಾ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಸಾಮಾನ್ಯವಾಗಿ ಸಿಗರೇಟು ಸೇದುವವರಲ್ಲಿ ಕೆಮ್ಮು, ಕಫ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತವೆ. ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಆಗಲು ಪ್ರಾರಂಭವಾಗುತ್ತದೆ. ನಿಮಗೆ ಅಚ್ಚರಿ ಏನಿಸಿದರೂ ಸಿಗರೇಟ್ ಸೇದುವುದರಿಂದ ಕಣ್ಣಿನ ಪೊರೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ವೈದ್ಯರು.

ಮಕ್ಕಳ ಮೇಲೆ ಪರಿಣಾಮ: ನೀವು ನಿರಂತರವಾಗಿ ಸಿಗರೇಟ್ ಸೇದುತ್ತಿದ್ದರೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಧೂಮಪಾನದಿಂದ ಕಡಿಮೆ ವಯಸ್ಸಿಗೇ ಹೆಚ್ಚು ವಯಸ್ಸಾದಂತೆ ಕಾಣಿಸಿಕೊಳ್ಳುವುದು ಸಹ ಇದೆ.
ಸಿಗರೇಟ್ ಸೇದುವುದನ್ನು ಬಿಡುವುದು ಹೇಗೆ ?
ಸಿಗರೇಟ್ ಸೇದುವುದನ್ನು ಬಿಡುವುದಕ್ಕೆ ಹಲವು ಸರಳ ಮಾರ್ಗಗಳಿವೆ. ಅದರಲ್ಲಿ ಮುಖ್ಯವಾಗಿರುವುದು ಸಿಗರೇಟ್ ಸೇದುವುದನ್ನು ಬಿಡುತ್ತೇನೆ ಎಂದು ನೀವು ಮೊದಲು ನಿರ್ಧರಿಸಿಕೊಳ್ಳುವುದು. ಹೌದು ಸಿಗರೇಟ್ ಸೇದುವುದನ್ನು ಬಿಡುವುದಕ್ಕೆ ನೀವು ಮೊದಲು ಮಾನಸಿಕವಾಗಿ ಸಿದ್ಧರಾಗಬೇಕು. ನಾನು ಸಿಗರೇಟ್ ಸೇದುವುದನ್ನು ಬಿಡುತ್ತಿದ್ದೇನೆ ಎಂದು ಮೊದಲು ಎಲ್ಲರೊಂದಿಗೂ ಹೇಳಿಕೊಳ್ಳಿ. ಇದರಿಂದ ನೀವು ಸಿಗರೇಟ್ ಮತ್ತೆ ಸೇದುವುದು ಪ್ರಾರಂಭಿಸಿದರೆ ಸುತ್ತಮುತ್ತ ಇದ್ದವರು ನಿಮಗೆ ಸಿಗರೇಟ್ ಸೇದಬೇಡಿ ಎಂದು ನೆನಪಿಸುತ್ತಾರೆ.
ಮೊದ ಮೊದಲು ಸಿಗರೇಟ್ ಸೇದುವುದನ್ನು ಬಿಡುವುದಕ್ಕೆ ಕಷ್ಟ ಎಂದು ಅನಿಸಬಹುದು. ಆದರೆ, ಕ್ರಮೇಣ ಇದು ಅಭ್ಯಾಸವಾಗಲಿದೆ. ನಿರಂತರ ಪ್ರಯತ್ನದಿಂದ ನೀವು ಸಿಗರೇಟ್ ಸೇದುವುದನ್ನು ಬಿಡುವುದಕ್ಕೆ ಸಾಧ್ಯವಿದೆ. ಸಾಮಾನ್ಯವಾಗಿ ಯಾವ ಸಂದರ್ಭದಲ್ಲಿ ಸಿಗರೇಟ್ ಸೇದುವ ಅಭ್ಯಾಸವಿದೆ ಎಂದು ತಿಳಿದುಕೊಂಡು ಆ ಸಮಯದಲ್ಲಿ ಬೇರೆ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ. ಸಿಗರೇಟು ಸೇದುವ ಚಟವನ್ನು ಕ್ರಮೇಣ ಬಿಡುವುದಕ್ಕೆ ಸಾಧ್ಯವಿದೆ.












Click it and Unblock the Notifications