Nuggekayi Kabab Recipe: ನುಗ್ಗೆಕಾಯಿ ಕಬಾಬ್ ಮಾಡಿ ಕೈ ಕಚ್ಚಿ ತಿಂತೀರಾ...!
ನುಗ್ಗೆಕಾಯಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ತುಂಬಾ ಜನ ಇದರಿಂದ ಸಾಂಬರ್ ಮಾಡ್ತಾರೆ, ಫ್ರೈ ಕೂಡ ಮಾಡ್ತಾರೆ. ಆದರೆ ಇದರಿಂದ ಕಬಾಬ್ ಮಾಡಬಹುದು ಅಂತ ನಿಮಗೆ ತಿಳಿದಿದಿಯಾ? ನುಗ್ಗೆಕಾಯಿಯಲ್ಲಿ ಕಬಾಬ್? ಅಂತ ಆಶ್ಚರ್ಯಗೊಳ್ಳಬೇಡಿ. ನೀವು ನುಗ್ಗೇಕಾಯಿ ಪ್ರಿಯರಾಗಿದ್ದರೆ ನಾವು ನಿಮಗೆ ರೆಸಿಪಿ ಹೇಳಿ ಕೊಡುತ್ತೇವೆ. ಮನೆಯಲ್ಲೊಮ್ಮೆ ಟ್ರೈ ಮಾಡಿ ನೋಡಿ.
ನುಗ್ಗೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾತ್ರವಲ್ಲದೆ ಇದರ ರುಚಿ ನಾಲಿಗೆಗೆ ತಾಗಿದರೆ ಇದನ್ನು ಮರಿಯೋ ಮಾತೇ ಇಲ್ಲ. ಹೀಗಾಗಿ ಇದನ್ನು ಹೆಚ್ಚು ಜನ ಇಷ್ಟುಪಟ್ಟು ತಿನ್ನುತ್ತಾರೆ. ಪ್ರತೀ ಬಾರಿ ನುಗ್ಗೆಕಾಯಿ ಸಾಂಬರ್, ಫ್ರೈ ಮಾಡಿ ನಿಮಗೆ ಬೇಜಾರಾಗಿದ್ದರೆ, ಸಂಜೆ ತಿಂಡಿಗಾಗಿ ಇದನ್ನು ಬಳಸಿ ಕಬಾಬ್ ಮಾಡಬಹುದು.

ಹಾಗಂತ ಇದಕ್ಕೆ ಚಿಕನ್ ಬಳಕೆ ಮಾಡ್ಬೇಕಾ ಅಂತ ಮುಖ ತಿರುಗಿಸಿಕೊಳ್ಳಬೇಡಿ. ಇದು ಪಕ್ಕಾ ಸಸ್ಯಹಾರಿಗಳ ರೆಸಿಪಿ. ಈ ಹಿಂದೆ, ಬೆಳ್ಳುಳ್ಳು, ಈರುಳ್ಳಿ ಹಾಗೂ ಹಲಸಿನ ಕಬಾಬ್‌ನಂತೆ ನುಗ್ಗಿಕಾಯಿಯಿಂದಲೂ ಕಬಾಬ್ ಮಾಡಬಹುದು. ಹಾಗಾದರೆ ತಡ ಮಾಡುವುದು ಬೇಡ. ನುಗ್ಗೆಕಾಯಿ ಕಬಾಬ್ ತಯಾರಿಸುವ ವಿಧಾನವನ್ನು ತಿಳಿಯೋಣ.
ನುಗ್ಗೆಕಾಯಿ ಕಬಾಬ್ ತಯಾರಿಸಲು ಬೇಕಾಗುವ ಪದಾರ್ಥಗಳು:-
*ನುಗ್ಗೆಕಾಯಿ ನಾಲ್ಕು
*ಚಿಕನ್ ಕಬಾಬ್ ಪೌಡರ್ ಎರಡು ಚಿಕ್ಕ ಪಾಕೇಟ್
*ಕೊತ್ತಂಬರಿ ಸೊಪ್ಪು ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಸ್ವಲ್ಪ
* ಖಾರದ ಪುಡಿ ನಾಲ್ಕು ಚಮಚ
* ಕಡ್ಲೆಹಿಟ್ಟು 7-8 ಟೇಬಲ್ ಸ್ಪೂನ್
* ಮೊಟ್ಟೆ ಎರಡು
* ಎಣ್ಣೆ
ನುಗ್ಗೆಕಾಯಿ ಕಬಾಬ್ ತಯಾರಿಸುವ ವಿಧಾನ:
* ಮೊದಲಿಗೆ ನುಗ್ಗೆಕಾಯಿಯನ್ನು ಬೆರಳು ಉದ್ದದಷ್ಟು ಕಟ್ ಮಾಡಿ ಚೆನ್ನಾಗಿ ತೊಳೆದು ನಂತರ ಸ್ವಲ್ಪ ಉಪ್ಪು ಹಾಕಿ ನೀರಿನಲ್ಲಿ ಕುದಿಸಬೇಕು. (ನೆನಪಿರಲಿ ನುಗ್ಗೆಕಾಯಿ ತುಂಬಾ ಬೇದಿರಬಾರದು, ಸ್ವಲ್ಪ ಗಟ್ಟಿಯಾಗಿರಬೇಕು)

* ಬಳಿಕ ಇದನ್ನು ಒಂದು ಬಟ್ಟೆ ಮೇಲೆ ಹರದಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಬೇಕು.
* ನುಗ್ಗೆಕಾಯಿ ತುಂಡುಗಳು ಸಂಪೂರ್ಣವಾಗಿ ಆರಿದ ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಇದಕ್ಕೆ ಚಿಕನ್ ಕಬಾಬ್ ಪೌಡರ್, ಕೊತ್ತಂಬರಿ ಸೊಪ್ಪು, ಉಪ್ಪು, ಅರಿಶಿಣ, ಖಾರದ ಪುಡಿ, ಕಡ್ಲೆಹಿಟ್ಟು, ಎರಡು ಮೊಟ್ಟೆ ಹಾಕಬೇಕು.
* ನಂತರ ಇದನ್ನು ನುಗ್ಗೆಕಾಯಿ ಹೋಳಾಗದಂತೆ ಕಲಿಸಿಕೊಳ್ಳಬೇಕು.
* ಇದಕ್ಕೆ ನೀರು ಅವಶ್ಯಕತೆ ಇಲ್ಲ, ಬೇಕೆನಿಸಿದಲ್ಲಿ ಸ್ವಲ್ಪ ಹಾಕಿಕೊಳ್ಳಿ.
*ಇದನ್ನು ಚೆನ್ನಾಗಿ ಕಲಸಿದ ನಂತರ ಸ್ವಲ್ಪ ಹೊತ್ತು ನುಗ್ಗೇಕಾಯಿ ಮಸಾಲ ಹೀರಿಕೊಳ್ಳಲು ಬಿಡಿ.
* ನಂತರ ಒಳೆಯ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ.
* ಎಣ್ಣೆ ಬಿಸಿಯಾದ ನಂತರ ಒಂದೊಂದೇ ನುಗ್ಗೆಕಾಯಿಯನ್ನು ಎಣ್ಣೆಯಲ್ಲಿ ಬಿಟ್ಟು ಚೆನ್ನಾಗಿ ಹುರಿದುಕೊಳ್ಳಿ.
* ಬಳಿಕ ಪ್ಲೇಟ್‌ಗೆ ತಗೆದು ತಿನ್ನಲು ಬಡಿಸಿ.












Click it and Unblock the Notifications