Nellikai Tambli Recipe: ನೆಲ್ಲಿಕಾಯಿ ತಂಬುಳಿ ರೆಸಿಪಿ: ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಚಳಿಗಾಲದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಇದರಿಂದ ಸೋಂಕು ಹಾಗೂ ರೋಗಗಳು ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡುತ್ತವೆ. ಹಾಗಾಗಿ ಔಷಧಿಯ ಗುಣಗಳನ್ನು ಹೊಂದಿರುವ ಆಹಾರ ಸೇವೆ ಮಾಡುವುದು ತುಂಬಾನೇ ಮುಖ್ಯ.

ಚಳಿಗಾಲದಲ್ಲಿ ನೀವು ಆರೋಗ್ಯಕರವಾಗಿರಬೇಕಾದರೆ ನೆಲ್ಲಿಕಾಯಿ ತಿನ್ನಬೇಕು ಎನ್ನುತ್ತಾರೆ ತಜ್ಞರು. ಹಾಗಾಗಿ ನೀವು ನಿಮ್ಮ ಅಡುಗೆಯಲ್ಲಿ ನೆಲ್ಲಿಕಾಯಿಯನ್ನು ಬಳಸಬಹುದು. ನೆಲ್ಲಿಕಾಯಿಯಿಂದ ರುಚಿಕರವಾಗಿ ತಂಬುಳಿ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

Nellikai Tambli Recipe: how to make Nellikai Tambli at home in Kannada

ನೆಲ್ಲಿಕಾಯಿ ತಂಬುಳಿ ತಯಾರಿಸಲು ಬೇಕಾಗುವ ಪದಾರ್ಥಗಳು:-

*ನೆಲ್ಲಿಕಾಯಿ 10

*ಕಾಯಿ ತುರಿ ಒಂದು ಕಪ್

*ಜೀರಿಗೆ ಅರ್ಧ ಚಮಚ

*ಕಾಳು ಮೆಣಸು ಅರ್ಧ ಚಮಚ

* ಲವಂಗ 5-7

*ಎಣ್ಣೆ ಸ್ವಲ್ಪ

*ಉಪ್ಪು

*ಅರಿಶಿಣ

* ಒಣ ಮೆಣಸಿನಕಾಯಿ

ನೆಲ್ಲಿಕಾಯಿ ತಂಬುಳಿ ಮಾಡುವ ವಿಧಾನ

* ಒಂದು ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿ ಮಾಡಿ. ಒಲೆಯನ್ನು ಸಣ್ಣ ಉರಿಯಲ್ಲಿ ಇಡಿ.

* ಇದಕ್ಕೆ ಜೀರಿಗೆ ಹಾಕಿ ಹುರಿಯಿರಿ.

* ನಂತರ ಇದಕ್ಕೆ ಕಾಳು ಮೆಣಸು, ಲವಂಗ, ಸ್ವಲ್ಪ ಅರಿಶಿಣ ಸೇರಿಸಿ ಹುರಿಯಿರಿ.

*ಬಳಿಕ ಇದಕ್ಕೆ ತುರಿದ ನೆಲ್ಲಿಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.

*ಬಳಿಕ ಇದಕ್ಕೆ ಕಾಯಿ ತುರಿ ಹಾಕಿ ಹುರಿಯಿರಿ. ಇದು ಕೂಡ ಹಸಿ ವಾಸನೆ ಹೋಗುವವರೆಗೂ ಅಂದರೆ ಸ್ವಲ್ಪ ಕೆಂಪಾಗುವವರೆಗೂ ಹುರಿಯಿರಿ.

* ಬಳಿಕ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.

* ಬಳಿಕ ಇದಕ್ಕೆ ಜೀರಿಗೆ, ಸಾಸಿವೆ, ಒಣ ಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆ ಒಗ್ಗರಣೆ ಹಾಕಿದರೆ, ರುಚಿಯಾದ ನೆಲ್ಲಿಕಾಯಿ ತಂಬುಳಿ ಸವಿಯಲು ಸಿದ್ಧ.

* ಈ ತಂಬುಳಿ ದೇವನ್ನು ತಂಪಾಗಿರಿಸುತ್ತದೆ. ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

Webmd ಪ್ರಕಾರ, ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ನೆಲ್ಲಿಕಾಯಿಯನ್ನು ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. 100 ಗ್ರಾಂ ತಾಜಾ ನೆಲ್ಲಿಕಾಯಿಯಲ್ಲಿ 20 ಕಿತ್ತಳೆ ಹಣ್ಣಿನಷ್ಟು ವಿಟಮಿನ್ ಸಿ ಇದೆ ಎನ್ನಲಾಗುತ್ತದೆ. ಇದರೊಂದಿಗೆ ಈ ಹಣ್ಣಿನಲ್ಲಿ ಶಕ್ತಿ, ಕ್ಯಾಲೋರಿಗಳು, ಫೈಬರ್, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ 50%, ಕಬ್ಬಿಣ, ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್, ವಿಟಮಿನ್‌ಗಳು ಕೂಡ ಸಮೃದ್ಧವಾಗಿದೆ.

ಇದು ಅನೇಕ ರೀತಿಯ ಅಸ್ವಸ್ಥತೆಗಳಿಂದ ನಿಮ್ಮನ್ನು ರಕ್ಷಿಸುವುದಲ್ಲದೆ, ಅವುಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ಸೇವಿಸುವ ಮೂಲಕ, ನೀವು ಅದರ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+