Chanakya Niti: ಮನೆಯ ವಿಚಾರ ಇವರ ಬಳಿ ಹೇಳಿದ್ರೆ ನಿಮ್ಮ ಖುಷಿ ಸರ್ವನಾಶ! ಚಾಣಕ್ಯನ ಸಲಹೆಯೇನು?

ಎಲ್ಲರೂ ತಮ್ಮ ಮನೆಗಳಲ್ಲಿ ಪ್ರೀತಿ, ವಿಶ್ವಾಸ ಮತ್ತು ಶಾಂತಿ ಇರಲಿ ಎಂದೇ ಆಸೆ ಪಡುವುದು. ಆದರೆ ಸಣ್ಣ ಪುಟ್ಟ ಸಮಸ್ಯೆ, ಮನಸ್ತಾಪಗಳು ಉಂಟಾಗುವುದು ಸಹಜ. ಯಾವುದೋ ದೊಡ್ಡ ಕಾರಣಗಳಿಂದಾಗಿ ಸಂಬಂಧಗಳಲ್ಲಿ ಬಿರುಕು ಮೂಡೋದು ಸಾಮಾನ್ಯ. ಆದರೆ, ಒಮ್ಮೊಮ್ಮೆ ಸಣ್ಣ ವಿಚಾರಕ್ಕೆ ಸಂಬಂಧದಲ್ಲಿ ಬಿರುಕು ಬಿಡುತ್ತದೆ. ಇದಕ್ಕೆ ನಾವು ತೋರಿಸುವ ಸಣ್ಣ ನಿರ್ಲಕ್ಷ್ಯ ಕಾರಣವಾಗುತ್ತದೆ.

ಹೌದು, ನಮ್ಮ ಮನೆಯ ವಿಚಾರವನ್ನು ನಮ್ಮ ಭಾವನೆಯನ್ನು ನಮ್ಮ ವೈಯಕ್ತಿಕ ಬದುಕನ್ನು ಇದ್ದ ಬದ್ದವರವ ಮುಂದೆ ಹಂಚಿಕೊಳ್ಳುವುದೇ ಕಾರಣ. ನಮ್ಮ ಮನೆಯ ವಿಚಾರವನ್ನು ಅವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿಯೇ ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ನಮ್ಮ ಮನೆಯ ವಿಚಾರವನ್ನು ಕೆಲವರೊಂದಿಗೆ ಹಂಚಿಕೊಳ್ಳಲೇಬಾರದು ಎಂದು ಹೇಳಿದ್ದಾರೆ.

Chanakya Niti Tips

ಕುಟುಂಬದ ಪ್ರತಿಯೊಂದು ಆಗು ಹೋಗುಗಳನ್ನು ಎಲ್ಲರೊಂದಿಗೆ ಶೇರ್‌ ಮಾಡುವುದು ಬುದ್ಧಿವಂತಿಕೆ ಅಲ್ಲವೇ ಅಲ್ಲ. ಇದು ನಮ್ಮ ಕಾಲ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುವ ಕೆಲಸ. ಯಾರು ಯಾವಾಗ ನಮ್ಮ ಮನೆಯ ವಿಚಾರಗಳನ್ನು ಅವರಿಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಅಂತ ಹೇಳುವುದು ಸಾಧ್ಯವೇ ಆಗುವುದಿಲ್ಲ. ಇದು ನಮ್ಮ ಕುಟುಂಬದ ಸಂತೋಷ, ಗೌರವ ಮತ್ತು ಪರಸ್ಪರ ನಂಬಿಕೆಯ ಮೇಲೆಯೇ ಪರಿಣಾಮ ಬೀರಬಹುದು.

ಕೆಲವು ವಿಷಯಗಳು ಕುಟುಂಬಕ್ಕಷ್ಟೇ ಸೀಮಿತವಾಗಿರಲಿ

ಆಚಾರ್ಯ ಚಾಣಕ್ಯ ಭಾರತೀಯ ಇತಿಹಾಸದ ಅತ್ಯಂತ ಆಳವಾದ ಚಿಂತಕರಲ್ಲಿ ಒಬ್ಬರು. ಅವರು ರಾಜಕೀಯ ಮತ್ತು ಆಡಳಿತಕ್ಕಾಗಿ ತಂತ್ರಗಳನ್ನು ಮಾತ್ರ ಹೇಳಿಕೊಟ್ಟಿಲ್ಲ. ಬದಲಿಗೆ ನಮ್ಮ ದೈನಂದಿನ ಜೀವನವನ್ನು ಸುಧಾರಿಸಲು ಬೇಕಾಗಿರುವ ಅನೇಕ ಪ್ರಮುಖ ತತ್ವಗಳನ್ನು ಹೇಳಿಕೊಟ್ಟಿದ್ದಾರೆ. ಸಂಬಂಧಗಳು, ನಡವಳಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವುದರ ಬಗ್ಗೆ ಅವರ ತತ್ವಗಳು ಸರಿಯಾದ ಮಾರ್ಗದರ್ಶನ ನೀಡುತ್ತದೆ. ಇವರ ಪ್ರಕಾರ ನಮ್ಮ ಮನೆಯ ಕೆಲವು ವಿಷಯಗಳು ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಬೇಕು. ನಮ್ಮ ಕೌಟುಂಬಿಕ ಜಗಳಳು, ಹಣಕಾಸಿನ ಸ್ಥಿತಿ, ಅಥವಾ ವೈಯಕ್ತಿಕ ಯೋಜನೆಗಳು ಹೊರಗಿನವರಿಗೆ ತಿಳಿದಾಗ, ಈ ವಿಷಯಗಳು ಹೆಚ್ಚಾಗಿ ಕುಟುಂಬದೊಳಗಿನ ಸಂಘರ್ಷಕ್ಕೆ ಕಾರಣವಾಗಬಹುದು.

ಅನಗತ್ಯ ಸಮಸ್ಯೆಗಳು ಸೃಷ್ಟಿ!

ಕೆಲವರಿಗೆ ಬೇರೆಯವರ ವೈಯಕ್ತಿಕ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಅವರು ಮೊದಲಿಗೆ ಸಹಾನುಭೂತಿ ಇರುವಂತೆ ಕುಟುಂಬದ ಮಾಹಿತಿಯನ್ನು ಪಡೆದುಕೊಂಡು ನಂತರ ಅದನ್ನು ಬೇರೆ ಬೇರೆಯವರಿಗೆ ಹೇಳಿಕೊಂಡು ಬರುತ್ತಾರೆ. ಕೆಲವೊಮ್ಮೆ ಒಂದಕ್ಕೆ ಎರಡು ಸೇರಿಸಿ ಹೇಳುವ ಅಭ್ಯಾಸವೂ ಅವರಿಗಿರಬಹುದು. ಇದು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಅಂತಹ ಜನರಿಗೆ ಕುಟುಂಬದ ನಿರ್ಧಾರಗಳು ಅಥವಾ ಸಮಸ್ಯೆಗಳ ಬಗ್ಗೆ ಯಾವತ್ತೂ ಹೇಳಲೇಬಾರದು. ಇದು ನಿಮ್ಮ ಹೆಸರು ಕೆಡಿಸುವುದಕ್ಕೆ ಕಾರಣವಾಗುವುದಲ್ಲದೆ, ಸಂಬಂಧಗಳಲ್ಲಿ ಅನಗತ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಅಸೂಯೆಯೇ ತುಂಬಿ ಜನ ಒಳಿತಿನ ಸಲಹೆ ನೀಡಲ್ಲ

ನಿಮ್ಮ ಸಂತೋಷ ನೋಡಿ ಎಲ್ಲರೂ ಸಂತೋಷದಿಂದ ಇರಬೇಕೆಂದಿಲ್ಲ. ಕೆಲವರು ಎದುರಿಗೆ ಬಹಳ ಫ್ರಂಡ್ಲಿಯಾಗಿ ಇರುತ್ತಾರೆ. ಬೆಣ್ಣೆ ರೀತಿಯಲ್ಲಿ ಮಾತನಾಡುತ್ತಾರೆ. ಆದರೆ ಒಳಗೊಳಗೆ ನಿಮ್ಮ ಯಶಸ್ಸು ಮತ್ತು ಸಂತೋಷವನ್ನು ನೋಡಿ ಹೊಟ್ಟೆ ಉರಿದು ಕೊಳ್ಳುತ್ತಿರುತ್ತಾರೆ. ಸಲಹೆ ಕೊಡುವ ನೆಪದಲ್ಲಿ, ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ಹೆಚ್ಚಿಸುವ ಸಲಹೆಗಳನ್ನೇ ಕೊಡಬಹುದು. ಅಸೂಯೆ ತುಂಬಿಕೊಂಡಿರುವ ವ್ಯಕ್ತಿ ಯಾವತ್ತೂ ವಸ್ತುನಿಷ್ಠವಾಗಿ ಯೋಚಿಸುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ನಿಮ್ಮ ಮನೆಯಲ್ಲಿನ ಪ್ರಮುಖ ವಿಷಯಗಳ ಬಗ್ಗೆ ಅಂಥಹ ಜನರ ಸಲಹೆಯನ್ನು ಪಡೆಯದಿರುವುದೇ ಒಳ್ಲೆಯದು.

ಮನೆಯ ಸಮಸ್ಯೆಗೆ ನಿಮ್ಮ ತಾಳ್ಮೆಯೇ ಪರಿಹಾರ

ನಮ್ಮ ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳುವವರು ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದೇ ಇಲ್ಲ. ಇವರು ತಪ್ಪು ನಿರ್ಧಾರಗಳನ್ನೇ ತೆಗೆದುಕೊಂಡು ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸಬಹುದು. ಕಷ್ಟದ ಸಮಯದಲ್ಲಿ, ತಾಳ್ಮೆಯಿಂದ ಇದ್ದಷ್ಟು ನಾವು ಯೋಚಿಸುವ ರೀತಿ ಸರಿಯಿರುತ್ತದೆ. ಹಾಗಾಗಿ ತಾಳ್ಮೆ ಮತ್ತು ಉತ್ತಮ ಚಿಂತನೆ ಇರುವ ಜನರ ಸಹವಾಸ ಹೆಚ್ಚು ಪ್ರಯೋಜನಕಾರಿಯಾಗಿರುವುದು. ಆತುರ ಮತ್ತು ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಇಡೀ ಕುಟುಂಬವನ್ನು ಸಮಸ್ಯೆಯ ಸುಳಿಗೆ ನೂಕಿ ಬಿಡಬಹುದು.

ಸ್ವಾರ್ಥಿಗಳು ಮತ್ತು ದುರಾಸೆಯ ಜನರಿಂದ ದೂರವಿರಿ

ಕೆಲವು ಸಂಬಂಧಗಳು ಕೇವಲ ಸ್ವಾರ್ಥದ ಮೇಲೆಯೇ ನಿಂತಿರುತ್ತವೆ. ಅವರು ತಮಗೆ ಪ್ರಯೋಜನವಾಗುವವರೆಗೆ ಮಾತ್ರ ಒಟ್ಟಿಗೆ ನಿಲ್ಲುತ್ತಾರೆ. ತಮ್ಮ ಕೆಲಸ ಮುಗಿದ ಕೂಡಲೇ ದೂರವಾಗಿ ಬಿಡುತ್ತಾರೆ. ಅವರಿಗೆ ನಿಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ, ಆಸ್ತಿಗಳು ಅಥವಾ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಅವರು ಅವರಿಗೆ ಬೇಕಾದ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬಹುದು. ಚಾಣಕ್ಯನ ಪ್ರಕಾರ, ಕುಟುಂಬದ ಆರ್ಥಿಕ ಮಾಹಿತಿ ಮತ್ತು ಪ್ರಮುಖ ನಿರ್ಧಾರಗಳನ್ನು ವಿಶ್ವಾಸಾರ್ಹ ವ್ಯಕ್ತಿಗಳಿಗಷ್ಟೇ ಸೀಮಿತಗೊಳಿಸಬೇಕು.

ದುರಹಂಕಾರಿಗಳು ಮತ್ತು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವವರ ಬಗ್ಗೆ ಎಚ್ಚರ ಬೇಕು :
ಯಾವತ್ತೂ ದುರಹಂಕಾರ ಇರುವ ವ್ಯಕ್ತಿಯ ಸ್ನೇಹ ಒಳ್ಳೆಯದೇ ಅಲ್ಲ. ತಾವು ಮಾಡಿದ್ದೇ ಸರಿ ಎಂದು ವಾದಕ್ಕೆ ಇಳಿಯುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇವರು ಯಾವಾಗಲೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಚಾಣಕ್ಯ ನೀತಿಯ ಪ್ರಕಾರ, ಕುಟುಂಬದೊಳಗೆ ಭಿನ್ನಾಭಿಪ್ರಾಯವಿದ್ದರೆ, ಅಂತಹ ವ್ಯಕ್ತಿಯಿಂದ ದೂರ ಇರಬೇಕು.

ಮನೆಯಲ್ಲಿ ಶಾಂತಿ ನೆಲೆಸಲು ಹೀಗೆ ಮಾಡಿ

ಚಾಣಕ್ಯನ ಬೋಧನೆಗಳು ಎಲ್ಲರನ್ನು ಅನುಮಾನದಲ್ಲಿಯೇ ನೋಡಬೇಕು ಎಂದು ಹೇಳುವುದಿಲ್ಲ. ಬದಲಿಗೆ ಯಾರ ಮೇಲೆ ನಂಬಿಕೆ ಇರಬೇಕು ಎನ್ನುವುದನ್ನು ಸರಿಯಾಗಿ ತಿಳಿದಿರಬೇಕು. ಹಾಗಾಗಿ ಮನೆಯಲ್ಲಿನ ಸಮಸ್ಯೆಗಳು, ಹಣಕಾಸಿನ ವಹಿವಾಟುಗಳು, ಭವಿಷ್ಯದ ಯೋಜನೆಗಳು ಮತ್ತು ವೈಯಕ್ತಿಕ ವಿಷಯಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಯಾರಿಂದ ದೂರ ಇರಬೇಕು ಎನ್ನುವುದು ಗೊತ್ತಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+