Vastu Tips for Money Plant: ಮನಿ ಪ್ಲಾಂಟ್ ಮಣ್ಣಿನಲ್ಲಿ ಈ 2 ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಧನ ವೃದ್ಧಿ
ಮನೆಯ ಸೌಂದರ್ಯವನ್ನು ಸುಧಾರಿಸಲು ಅನೇಕ ಜನರು ವಿವಿಧ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಇಡುತ್ತಾರೆ. ಇನ್ನೂ ಕೆಲವರು ಗಿಡಗಳನ್ನು ಬೆಳೆಸುತ್ತಾರೆ. ನೀವೂ ಸಸ್ಯ ಪ್ರಿಯರಾಗಿದ್ದರೆ, ನಿಮ್ಮ ಮನೆಯಲ್ಲಿ ವಿವಿಧ ಗಿಡಗಳನ್ನು ಬೆಳೆಸುತ್ತಿದ್ದರೆ ಕೆಲವು ವಿಚಾರಗಳನ್ನು ನೀವು ತಿಳಿದಿರಲೇಬೇಕು. ಯಾಕೆಂದರೆ ವಾಸ್ತು ಪ್ರಕಾರ, ಮನೆಯಲ್ಲಿ ಇರಿಸಲಾದ ಯಾವುದೇ ವಸ್ತುವು ಆ ಮನೆಯ ಮೇಲೆ ಪರಿಣಾಮ ಬೀರುತ್ತದೆ.
ನಿಮ್ಮ ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸಲು ನೀವು ಬಯಸಿದರೆ, ನೀವು ಹಣದ ಹರಿವನ್ನು ಹೆಚ್ಚಿಸುವ ಕೆಲವು ಸಸ್ಯಗಳನ್ನು ಖರೀದಿಸಿ ಬೆಳೆಸಬಹುದು. ಇದರಿಂದ ನಿಮಗೆ ಹಣದ ಕೊರತೆ ಇರುವುದಿಲ್ಲ. ಆ ಗಿಡಗಳ ಪೈಕಿ ಮನಿ ಪ್ಲಾಂಟ್ ಮನೆಯಲ್ಲಿ ಸಂಪತ್ತನ್ನು ಆಕರ್ಷಿಸುವ ಸಸ್ಯವಾಗಿದೆ. ಮನೆಯಲ್ಲಿ ಈ ಗಿಡವನ್ನು ಬೆಳೆಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಹೆಚ್ಚಿನ ಹಣ ಮತ್ತು ಸಮೃದ್ಧಿ ಇರುತ್ತದೆ. ಇದರಿಂದ ಮನೆಯಲ್ಲಿರುವ ಜನರು ಸಹ ಪ್ರಗತಿಯನ್ನು ಕಾಣುತ್ತಾರೆ.

ಈ ಮನಿ ಪ್ಲಾಂಟ್ ಅನ್ನು ಮನೆಯಲ್ಲಿ ಮಾತ್ರ ಇಡಬಾರದು. ಕಚೇರಿಗಳು ಮತ್ತು ಅಂಗಡಿಗಳಲ್ಲಿಯೂ ಬೆಳೆಯಬಹುದು. ನೀವು ಮುಖ್ಯವಾಗಿ ಮನಿ ಪ್ಲಾಂಟ್ ಬೆಳೆಸಲು ಬಯಸಿದರೆ ಮತ್ತು ನಿಮ್ಮ ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸಲು ಬಯಸಿದರೆ, ನೀವು ಮನಿ ಪ್ಲಾಂಟ್ ಮಣ್ಣಿನೊಂದಿಗೆ ಕೆಲವು ವಸ್ತುಗಳನ್ನು ಹಾಕಬೇಕು. ಹಾಗಾದರೆ ವಾಸ್ತು ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ಇಡುವಾಗ ಮಣ್ಣಿನಲ್ಲಿ ಯಾವ ವಸ್ತುಗಳನ್ನು ಬೆರೆಸಬೇಕು ಎಂದು ತಿಳಿಯೋಣ.
ಹಾಲು
ಮನೆಯಲ್ಲಿ ಮಣಿ ಗಿಡ ಬೆಳೆಸುವಾಗ ಗಿಡದ ಮಣ್ಣಿಗೆ ಸ್ವಲ್ಪ ಹಾಲನ್ನು ಹಾಕಿದರೆ ತುಂಬಾ ಒಳ್ಳೆಯದು. ವಾಸ್ತು ಪ್ರಕಾರ ಮನಿ ಪ್ಲಾಂಟ್ ಸಸ್ಯದ ಮಣ್ಣಿನ ಮೇಲೆ ಹಾಲನ್ನು ಹಾಕುವುದರಿಂದ ಅದು ಆರ್ಥಿಕ ಲಾಭವನ್ನು ತರುತ್ತದೆ. ನೀವು ಸಾಲದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದರಿಂದ ಮುಕ್ತಿ ಪಡೆಯುವ ಅವಕಾಶ ಸಿಗುತ್ತದೆ. ಅಲ್ಲದೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ ಮತ್ತು ಮನೆಯು ಸುಭಿಕ್ಷವಾಗಿರುತ್ತದೆ.
ಸಕ್ಕರೆ
ಮನೆಯಲ್ಲಿ ಮನಿ ಪ್ಲಾಂಟ್ ನೆಡುವಾಗ, ಮಣ್ಣಿನೊಂದಿಗೆ ಸ್ವಲ್ಪ ಸಕ್ಕರೆ ಮಿಶ್ರಣ ಮಾಡಿ. ಸಕ್ಕರೆಯನ್ನು ಹೀಗೆ ಸೇರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ವಾಸ್ತು ಪ್ರಕಾರ, ಮನಿ ಪ್ಲಾಂಟ್‌ಗೆ ಸಕ್ಕರೆ ಸೇರಿಸುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಬದಲಾಗಿ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ. ಇದಲ್ಲದೇ ರಾಹುದೋಷವಿದ್ದರೂ ನಿವಾರಣೆಯಾಗುತ್ತದೆ.
*ಮನಿ ಪ್ಲಾಂಟ್ ಅನ್ನು ಇರಿಸಲು ಉತ್ತಮವಾದ ದಿಕ್ಕು ಯಾವುದು?
ಮನೆಯಲ್ಲಿ ಇರಿಸಲಾಗಿರುವ ಯಾವುದೇ ವಸ್ತು ಅಥವಾ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮಾತ್ರ ಉತ್ತಮ ಪ್ರಯೋಜನ ನೀಡುತ್ತದೆ. ಆ ರೀತಿಯಲ್ಲಿ ವಾಸ್ತು ಪ್ರಕಾರ ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಿದರೆ ಮನೆಗೆ ಹೆಚ್ಚು ಹಣ ಆಗಮಿಸಲಿದೆ.
ಮನಿ ಪ್ಲಾಂಟ್ ಇಡಲು ಆಗ್ನೇಯ ದಿಕ್ಕು ಅಥವಾ ಮೂಲೆ ಉತ್ತಮವಾಗಿದೆ. ಗಣೇಶನು ಈ ದಿಕ್ಕಿನ ಅಧಿಪತಿಯಾಗಿದ್ದು, ಶುಕ್ರನನ್ನು ಈ ದಿಕ್ಕಿನ ಗ್ರಹವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ನೆಟ್ಟ ಮನಿ ಪ್ಲಾಂಟ್ ಮನೆಗೆ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

*ಕೆಂಪು ಹಗ್ಗವನ್ನು ಕಟ್ಟಿಕೊಳ್ಳಿ
ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟ ನಂತರ ಅದರ ಬೇರಿಗೆ ಕೆಂಪು ದಾರವನ್ನು ಕಟ್ಟಬೇಕು. ವಾಸ್ತು ಪ್ರಕಾರ ಮನಿ ಗಿಡಕ್ಕೆ ಆಸರೆಯಾಗಿ ಕೆಂಪು ದಾರ ಕಟ್ಟುವಾಗ ತುಂಬಾ ಉತ್ತಮ. ಈ ಕೆಂಪು ದಾರವನ್ನು ಕಟ್ಟಲು ವಿಶೇಷ ಪೂಜೆಯನ್ನು ಮಾಡಬೇಕು.
ಅದಕ್ಕಾಗಿ ಮುಂಜಾನೆ ಬೇಗ ಎದ್ದು ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ನಂತರ ಲಕ್ಷ್ಮಿ ದೇವಿಯ ಮುಂದೆ ಕೆಂಪು ದಾರವನ್ನು ಇಟ್ಟು ನಮಸ್ಕರಿಸಿ, ಕರ್ಪೂರವನ್ನು ಬೆಳಗಿಸಿ ಆರತಿಯನ್ನು ಮಾಡಿ, ನಂತರ ಗಿಡಕ್ಕೆ ದಾರವನ್ನು ಕಟ್ಟಬೇಕು. ಇದನ್ನು ಮಾಡಿದ ನಂತರ, ನೀವು ಕೆಲವೇ ದಿನಗಳಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications