Tips for Dosa: ಹೋಟೆಲ್‌ನಂತೆ ಮನೆಯಲ್ಲಿ ರುಚಿಕರವಾದ ದೋಸೆ ತಯಾರಿಸಲು ಬಯಸುವಿರಾ? ಹಾಗಾದರೆ ಈ ತಪ್ಪು ಮಾಡಬೇಡಿ..

ಅನೇಕ ಜನರು ತಾವು ತಿನ್ನುವ ಆಹಾರವನ್ನು ಆನಂದಿಸಲು ಮತ್ತು ಸವಿಯಲು ಇಷ್ಟಪಡುತ್ತಾರೆ. ಹೀಗಾಗಿ ತಮಗಿಷ್ಟವಾದ ಆಹಾರ ತಯಾರಿಸುವಾಗ ಎಚ್ಚರ ವಹಿಸುತ್ತಾರೆ. ಸುಮಾರು 50-60 ವರ್ಷಗಳ ಹಿಂದೆ ಇಡ್ಲಿ ಮತ್ತು ದೋಸೆ ಹಬ್ಬದ ಆಹಾರವಾಗಿತ್ತು. ಆದರೀಗ ಗ್ರೈಂಡರ್‌ನ ಆಧುನಿಕ ಕ್ರಾಂತಿಯ ಸಹಾಯದಿಂದ ಕೆಲಸ ಮಾಡುವ ಮಹಿಳೆಯರು ವಾರಕ್ಕೊಮ್ಮೆ ದೋಸೆ ತಯಾರಿಸುತ್ತಾರೆ.

ಇಂದಿನ ಆಧುನಿಕ ಕಾಲದಲ್ಲಿ ಕೈಗೆಟಕುವ ದರದಲ್ಲಿ ಫ್ರಿಡ್ಜ್ ಸಿಗುತ್ತದೆ. ಒಮ್ಮೆ ಹಿಟ್ಟು ರುಬ್ಬಿಕೊಂಡು ಫ್ರಿಡ್ಜ್‌ನಲ್ಲಿ ಹಿಟ್ಟನ್ನು ಇಟ್ಟುಕೊಂಡರೆ ನಿತ್ಯ ಬಗೆ ಬಗೆಯ ದೋಸೆಯನ್ನು ತಯಾರಿಸಬಹುದು. ಆದರೆ ಮನೆಯಲ್ಲಿ ದಿನನಿತ್ಯ ದೋಸೆ ಮಾಡಿದರೂ ಅಂಗಡಿಗಳಲ್ಲಿ ಆರ್ಡರ್ ಮಾಡುವ ಮೊದಲ ಖಾದ್ಯವೆಂದರೆ ಅದು ದೋಸೆಯೇ. ಇದಕ್ಕೆ ಕಾರಣ ದೋಸೆ ಮಾಡುವ ವಿಧಾನ. ಮನೆಯಲ್ಲಿ ದೋಸೆ ಮಾಡುವಾಗ ನಾವು ಮಾಡುವ ತಪ್ಪುಗಳು ಹೋಟೆಲ್‌ನತ್ತ ನಮ್ಮನ್ನು ಸೆಳೆಯುತ್ತವೆ. ಹಾಗಾದರೆ ನೀವು ಹೋಟೆಲ್‌ನಂತೆ ಮನೆಯಲ್ಲಿ ರುಚಿಕರವಾದ ದೋಸೆ ತಿನ್ನಲು ಬಯಸಿದರೆ ದೋಸೆ ತಯಾರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ.

Mistakes should avoid while prepare dosa at home in kannada

ದೋಸೆ ಕಲ್ಲಿಗೆ ಸರಿಯಾಗಿ ಎಣ್ಣೆ ಹಾಕಿ

ದೋಸೆ ಹಾಕುವ ಮುನ್ನ ದೋಸೆ ಕಲ್ಲಿಗೆ ಹೆಚ್ಚಿ ಎಣ್ಣೆಯನ್ನು ಹಾಕುವುದು ಮುಖ್ಯವಾದ ವಿಷಯ. ದೋಸೆ ಕಲ್ಲಿನ ಮೇಲ್ಮೈಯಲ್ಲಿ ಚೆನ್ನಾಗಿ ಎಣ್ಣೆ, ಬೆಣ್ಣೆ ಅಥವಾ ತುಪ್ಪವನ್ನು ಹರಡಬೇಕು. ಎಣ್ಣೆ ಹಚ್ಚುವ ಮೊದಲು ದೋಸೆ ಕಲ್ಲನ್ನು ಬಿಸಿ ಮಾಡಬೇಕು. ಅಂಗಡಿಗಳಲ್ಲಿ ದೋಸೆ ಹಾಕುವ ಮುನ್ನ ದೋಸೆ ಕಲ್ಲಿನ ಮೇಲೆ ಸ್ವಲ್ಪ ನೀರು ಚಿಮುಕಿಸುವುದನ್ನು ನೋಡಿದ್ದೇವೆ. ನೀರು ಕುದಿಯುತ್ತಾ ಬೇಗ ಆವಿಯಾದರೆ ದೋಸೆ ಕಾಲ್ ದೋಸೆ ಸುರಿಯಲು ಸಿದ್ಧ ಎಂದರ್ಥ. ಮನೆಯಲ್ಲಿಯೂ ಇದನ್ನು ಎಚ್ಚರಿಕೆಯಿಂದ ಪ್ರಯತ್ನಿಸಿ. ಇನ್ನೊಂದು ಉಪಾಯವೆಂದರೆ ಅರ್ಧ ಈರುಳ್ಳಿ ಮತ್ತು ಆಲೂಗೆಡ್ಡೆಯನ್ನು ಕತ್ತರಿಸಿ ದೋಸೆ ಕಲ್ಲಿನ ಮೇಲೆ ಚೆನ್ನಾಗಿ ಉಜ್ಜಿದರೆ ಚೆನ್ನಾಗಿ ದೋಸೆ ಬರುತ್ತದೆ. ಹಿಟ್ಟನ್ನು ಹರಡಿದ ನಂತರ ದೋಸೆಯ ಬದಿಗಳಿಗೆ ಹೆಚ್ಚು ಎಣ್ಣೆ / ಬೆಣ್ಣೆಯನ್ನು ಸೇರಿಸಲು ಮರೆಯಬೇಡಿ. ನೀವು ಮಾಡುವ ಪ್ರತಿ ದೋಸೆಗೆ ಇದನ್ನು ಪುನರಾವರ್ತಿಸಿ.

ಒಣಗಿದ ತವಾವನ್ನು ಬಳಸಿ

ದೋಸೆ ಕಲ್ಲು ಸ್ವಚ್ಚವಾಗಿರಬೇಕು. ಹಳೆಯ ಆಹಾರದ ಕಣಗಳನ್ನು ಇರಬಾರದು. ದೋಸೆ ತವಾಗೆ ಅಂಟಿಕೊಂಡರೆ, ಅದನ್ನು ಸರಿಪಡಿಸಲು ಎಣ್ಣೆಯನ್ನು ಹಚ್ಚಿ. ಈ ತಂತ್ರವು ತುಂಬಾ ಸರಳವಾಗಿದೆ. ಅಥವಾ ಹಿಟ್ಟನ್ನು ಬಳಸಿ. ಸ್ವಲ್ಪ ಗೋಧಿ ಹಿಟ್ಟು ಅಥವಾ ಮೈದಾವನ್ನು ತೆಗೆದುಕೊಂಡು ಅದನ್ನು ದೋಸೆ ಕಲ್ಲಿನ ಮೇಲ್ಮೈಯಲ್ಲಿ ನಿಧಾನವಾಗಿ ಉಜ್ಜಿಕೊಳ್ಳಿ.

Mistakes should avoid while prepare dosa at home in kannada

ಕಲ್ಲಿನ ಮೇಲ್ಮೈಯನ್ನು ಹಿಟ್ಟನ್ನು ಹರಡಿ. ಬಳಿಕ ಜಿಗುಟಾದ ಹಿಟ್ಟನ್ನು ಒರೆಸಲು ಒಣ ಬಟ್ಟೆಯನ್ನು ಬಳಸಿ. ಇದು ಕಲ್ಲಿನಲ್ಲಿರುವ ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ದೋಸೆ ಅಂಟಿಕೊಳ್ಳದಂತೆ ಮಾಡುತ್ತದೆ.

ತಣ್ಣನೆಯ ಹಿಟ್ಟನ್ನು ಬಳಸುವುದು

ನೀವು ಮನೆಯಲ್ಲಿ ದೋಸೆ ಹಿಟ್ಟನ್ನು ತಯಾರಿಸಿ ಅಥವಾ ಹೊರಗಿನಿಂದ ಖರೀದಿಸಿ ಅದು ಉಳಿದರೆ ನಂತರದ ಬಳಕೆಗಾಗಿ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಹುದು. ಅದರಲ್ಲೂ ತಾಪಮಾನ ಹೆಚ್ಚಾದಾಗ ಹಿಟ್ಟನ್ನು ಹುದುಗದಂತೆ ತಡೆಯಲು ಬ್ರಿಡ್ಜ್ ನಲ್ಲಿ ಹಿಟ್ಟನ್ನು ಇಡದೆ ಬೇರೆ ದಾರಿಯಿಲ್ಲ.

Mistakes should avoid while prepare dosa at home in kannada

ತಣ್ಣಗಿರುವ ಹಿಟ್ಟನ್ನು ರೆಫ್ರಿಜರೇಟರ್ನಿಂದ ತೆಗೆದ ತಕ್ಷಣ ಬಳಸಬೇಡಿ. ಹಾಗೆ ಮಾಡಿದರೆ ದೋಸೆ ಕಲ್ಲಿಗೆ ಹಿಟ್ಟು ಹಾಕಲು ತೊಂದರೆಯಾಗುತ್ತದೆ. ತಣ್ಣಗಾದ ಹಿಟ್ಟಿನಿಂದ ದೋಸೆ ಕಲ್ಲಿಗೆ ಹಾಕಿದರೆ ಅಂಟಿಕೊಳ್ಳುವುದು, ದೋಸೆಯನ್ನು ಸರಿಯಾಗಿ ಹರಡಲು ಆಗದಿರುವುದು, ಮುದ್ದೆ ಆಗುವುದು ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ, ನೀವು ದೋಸೆಗಳನ್ನು ತಯಾರಿಸಲು ಪ್ರಾರಂಭಿಸುವ ಮೊದಲು, 15-20 ನಿಮಿಷಗಳ ಕಾಲ ತಣ್ಣಗಾಗಲು ಹಿಟ್ಟನ್ನು ಹೊರಗೆ ಇರಿಸಿ.

ದೋಸೆ ಕಲ್ಲು ಬಿಸಿ ಮಾಡುವ ವಿಧಾನ

ದೋಸೆಯನ್ನು ಚೆನ್ನಾಗಿ ಮಾಡಲು ದೋಸೆ ಕಲ್ಲು ಸರಿಯಾದ ತಾಪಮಾನದಲ್ಲಿರಬೇಕು. ಮೇಲೆ ಹೇಳಿದಂತೆ ತುಂಬಾ ತಣ್ಣಗಿರುವ ಹಿಟ್ಟನ್ನು ಬಳಸುವುದು ಒಳ್ಳೆಯದಲ್ಲ. ಅದೇ ರೀತಿ ದೋಸೆಯ ಕಲ್ಲಿನ ತಾಪಮಾನವು ದೋಸೆಯನ್ನು ಹಾಕಲು ಸರಿಯಾದ ಮಟ್ಟದಲ್ಲಿದೆಯೇ ಎಂದು ಪರೀಕ್ಷಿಸಬೇಕು.

Mistakes should avoid while prepare dosa at home in kannada

ಹಿಟ್ಟನ್ನು ಸೇರಿಸುವ ಮೊದಲು ದೋಸೆ ಕಲ್ಲು ತುಂಬಾ ಬಿಸಿಯಾಗಿದ್ದರೆ, ಅದು ಸರಿಯಾಗಿ ಆಗುವುದಿಲ್ಲ. ಬದಲಾಗಿ ನೀವು ಸ್ವಲ್ಪ ಹಿಟ್ಟು ಸೇರಿಸಿದ ತಕ್ಷಣ ಅದು ಕುದಿಯಲು ಪ್ರಾರಂಭಿಸುತ್ತದೆ. ಇದರಿಂದ ದೋಸೆ ದಪ್ಪಾಗಬಹುದು. ಹಾಗಾಗಿ ದೋಸೆ ಕಲ್ಲು ಸರಿಯಾದ ತಾಪಮಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಹಿಟ್ಟಿಗೆ ಹೆಚ್ಚು ನೀರು ಸೇರಿಸಿ

ನೀವು ಹಿಟ್ಟನ್ನು ತಯಾರಿಸುವಾಗ ಅಥವಾ ಉಳಿದ ಹಿಟ್ಟನ್ನು ಬಳಸುವಾಗ ಈ ತಪ್ಪು ಸಂಭವಿಸಬಹುದು. ನೀರ್ ದೋಸೆಯಂತಹ ಕೆಲವು ರೀತಿಯ ದೋಸೆಗಳಿಗೆ, ಹಿಟ್ಟು ಸಾಮಾನ್ಯಕ್ಕಿಂತ ಕಡಿಮೆ ಗಟ್ಟಿಯಾಗಿರಬೇಕು. ಆದಾಗ್ಯೂ, ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ಬಳಸಿ ಸಾಮಾನ್ಯ ದೋಸೆಗಳನ್ನು ಮಾಡಬಹುದು. ಆದರೆ ದೋಸೆ ಹಿಟ್ಟಿನಲ್ಲಿ ಹೆಚ್ಚು ನೀರು ಇದ್ದರೆ, ದೋಸೆ ಚೆನ್ನಾಗಿ ಬರುವುದಿಲ್ಲ. ಹೋಟೆಲ್ ಶೈಲಿಯಲ್ಲಿ ದೋಸೆ ಮಾಡಲು ಹಿಟ್ಟು ಸ್ವಲ್ಪ ಗಟ್ಟಿಯಾಗಿದ್ದರೆ ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+