Masale majjige recipe: ಬಿರು ಬಿಸಿಲಿಗೆ ತಣ್ಣಗಿನ ರುಚಿಯಾದ ಮಸಾಲಾ ಮಜ್ಜಿಗೆ ಮಾಡುವ ವಿಧಾನ

ರಾಜ್ಯದಲ್ಲಿ ಬಿಸಿಲು ತಾಂಡವವಾಡುತ್ತಿದೆ. ಬೆಳಗಿನ ಬಿಸಿಲು ಈಗ ವಿಟಮಿನ್ ಕೊಡುವ ಬದಲು ಸನ್‌ಬರ್ನ್ ಕೊಡುತ್ತಿದೆ. ಹೀಗಿರುವಾಗ ಕೆಲಸ ಕಾರ್ಯಗಳಿಗೆ ಹೊರಗಡೆ ಹೋದವರು ಮನೆಗೆ ಬಂದ ಕೂಡಲೆ ತಣ್ಣಗೆ ಏನಾದರೂ ಕುಡಿಯಲು ಕೇಳುವುದು ಸಾಮಾನ್ಯ. ಅವರಿಗೆ ಬರೀ ನೀರು ಕೊಡುವ ಬದಲು ತನ್ಣಗೆ ರುಚಿ ಮತ್ತು ತಂಪಾದ ಮಜ್ಜಿಗೆ ಕೊಟ್ಟರೆ ಸಮಾಧಾನವಾಗುತ್ತದೆ.

ಇದೇ ರೀತಿ ಈ ಮಜ್ಜಿಗೆಯನ್ನು ಮಸಾಲಾ ಮಜ್ಜಿಗೆಯಾಗಿಸಿ ಕೊಟ್ಟರೆ ಸ್ವರ್ಗವೇ ಸಿಕ್ಕ ಸಂತೋಷ ಕಾಣಬಹುದು. ಮೊಸರು, ಮಜ್ಜಿಗೆ ಈ ಬಿರು ಬೇಸಿಗೆಗೆ ತುಂಬಾ ಉಪಯುಕ್ತವಾದವುಗಳು. ಅದರಲ್ಲೂ ಮಜ್ಜಿಗೆ ಬೇಸಿಗೆಯಲ್ಲಿ ಹೆಚ್ಚು ಸೇವಿಸುವ ಪಾನಿಯ. ಈ ಮಜ್ಜಿಗೆಯನ್ನು ತುಂಬಾ ಸಿಂಪಲ್ ಆಗಿ ಟೆಸ್ಟಿಯಾಗಿ ಮಸಾಲಾ ಮಜ್ಜಿಗೆ ಅಥವಾ ಮುಂಬೈ ಶೈಲಿಯ ಮಸಾಲಾ ಮಜ್ಜಿಗೆಯನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

Masale majjige recipe How to make Masale majjige spicy buttermilk explained in step by step

ಮಸಾಲೆ ಮಜ್ಜಿಗೆ ಮಾಡಲು ಬೇಕಿರುವ ಪದಾರ್ಥಗಳು

1. 1 ಕಪ್ ಮೊಸರು ಅಥವಾ ಮಜ್ಜಿಗೆ

2. 1 ಕಪ್ ನೀರು ( ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು)

3. 1/2 - 1 ಟೀಸ್ಪೂನ್ ಕತ್ತರಿಸಿದ ಶುಂಠಿ

4. 1 ಹಸಿ ಮೆಣಸಿನಕಾಯಿ

5. 1/4 ಟೀಸ್ಪೂನ್ ಜೀರಿಗೆ ಪುಡಿ

Masale majjige recipe How to make Masale majjige spicy buttermilk explained in step by step

6. 2 ಚಮಚ ಕೊತ್ತಂಬರಿ ಸೊಪ್ಪು

7. 4 - 5 ಪುದೀನಾ ಅಥವಾ ಪುದಿನಾ ಎಲೆಗಳು

8. 1/4 ಟೀಸ್ಪೂನ್ ಕಪ್ಪು ಉಪ್ಪು

9. 1/4 ಟೀಸ್ಪೂನ್ ಚಾಟ್ ಮಸಾಲಾ

10. ರುಚಿಗೆ ತಕ್ಕಂತೆ ಉಪ್ಪು

ಮಸಾಲೆ ಮಜ್ಜಿಗೆ ಮಾಡುವ ವಿಧಾನ

1 ಕಪ್ ಮೊಸರು ಅಥವಾ ಮಜ್ಜಿಗೆಯನ್ನು ಒಂದು ಮಿಕ್ಸಿ ಜಾರ್‌ನಲ್ಲಿ ಹಾಕಿಕೊಳ್ಳಿ. ಒಂದು ಕಪ್ ನೀರು ಸೇರಿಸಿ, ಶುಂಠಿ, ಹಸಿರು ಮೆಣಸಿನಕಾಯಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳು, ಚಾಟ್ ಮಸಾಲ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಐಸ್‌ ಕ್ಯೂಬ್‌ ಜೊತೆಗೆ ಹಾಕಿ ಕುಡಿಯಲು ಕೊಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+