ಥಟ್ ಅಂತಾ ರುಚಿಕರವಾದ ರಸಂ ಮಾಡುವುದು ಹೇಗೆ..? ಇಲ್ಲಿದೆ ಸಿಂಪಲ್ ಟಿಪ್ಸ್
ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಬರುವ ದಕ್ಷಿಣ ಭಾರತದ ಒಂದು ರುಚಿಕರ ಭಕ್ಷ್ಯ ರಸಂ. ಸೂಪ್ ಹಾಗೂ ಸಾಂಬರ್ ಎರಡರ ಪಾತ್ರವನ್ನೂ ನಿರ್ವಹಿಸುವ ರಸಂ ತನ್ನದೇ ಆದ ರುಚಿಯಿಂದ ವಿಶಿಷ್ಟವಾಗಿದೆ. ಖಾರ..ಖಾರ..ಬಿಸಿ..ಬಿಸಿ ರಸಂ ಎಂದಾಕ್ಷಣ ಒಂದು ಕ್ಷಣ ಬಾಯಲ್ಲಿ ನೀರು ಬರುವುದು ಸಹಜ ಯಾಕೆಂದರೆ ಉಪ್ಪು..ಹುಳಿ.. ಖಾರದ ಸರಿಯಾದ ಮಿಶ್ರಣವೇ ಈ ಖಾದ್ಯ.
ರಸಂ ಕೇವಲ ರುಚಿಕರವಾದ ಖಾದ್ಯ ಮಾತ್ರವಲ್ಲದೇ ಶೀತ, ಕೆಮ್ಮು ಮತ್ತು ಅಜೀರ್ಣದಂತಹ ಸಾಮಾನ್ಯ ಕಾಯಿಲೆಗಳಿಗೆ ಪರಿಹಾರವಾಗಿದೆ. ಹೀಗಾಗಿ ಅತಿಯಾದ ಶೀತ ಹಾಗೂ ಗಂಟಲಿನಲ್ಲಿ ಕಿರಿ ಕಿರಿ ಇರುವವರು ಹೆಚ್ಚಾಗಿ ರಸಂ ಕುಡಿಯುತ್ತಾರೆ. ರಸಂ ರುಚಿಯಾಗಿರುವ ಒಂದು ಔಷಧವಾಗಿದೆ. ಇನ್ನು ಈ ರಸಂ ಅನ್ನು ಥಟ್ ಅಂತಾ ತಯಾರಿಸಬಹುದು. ಕೇವಲ ಐದು ನಿಮಿಷದಲ್ಲಿ ನಾಲ್ಕರಿಂದ ಐದು ಜನರಿಗೆ ರಸಂ ಹೇಗೆ ತಯಾರಿಸಬಹುದು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ರಸಂ ಮಾಡಲು ಬೇಕಾಗಿರುವ ಸಾಮಾಗ್ರಿಗಳು
ಟೊಮೆಟೊ-1
ಸಾಸಿವೆ-1/2 ಚಮಚ
ಕರಿಬೇವಿನ ಎಲೆಗಳು-7ರಿಂದ8
ಅರಿಶಿನ ಪುಡಿ-1/4 ಚಮಚ
ಕೊತ್ತಂಬರಿ ಸೊಪ್ಪು
ಅಡುಗೆ ಎಣ್ಣೆ-1 ಚಮಚ
ಉಪ್ಪು-ರುಚಿ ತಕ್ಕಷ್ಟು
ರುಬ್ಬಿ ಮಸಾಲ ಸಿದ್ಧಪಡಿಸಲು ಬೇಕಾಗಿರುವ ಸಾಮಾಗ್ರಿ
ಕೆಂಪು ಮೆಣಸಿನಕಾಯಿಗಳು-2
ಹಸಿರು ಮೆಣಸಿನಕಾಯಿ-1
ಕರಿಮೆಣಸು-1 ಚಮಚ
ಜೀರಿಗೆ-1 ಚಮಚ
ಟೊಮೆಟೊ- 1/2
ಬೆಳ್ಳುಳ್ಳಿ-7-8 ಎಸಳು
ಕೊತ್ತಂಬರಿ ಸೊಪ್ಪು
ಹುಣಸೆಹಣ್ಣು-1 ನೆಲ್ಲಿಕಾಯಿ ಗಾತ್ರ
ರಸಂ ತಯಾರಿಸುವ ವಿಧಾನ
ರಸಂ ತಯಾರಿಸಲು ಮೊದಲು ಮಿಕ್ಸಿ ಜಾರ್‌ನಲ್ಲಿ ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಕರಿಮೆಣಸು ಮತ್ತು ಜೀರಿಗೆ ತೆಗೆದುಕೊಳ್ಳಿ. ಬಳಿಕ ಟೊಮೆಟೊ ಮತ್ತು ಬೆಳ್ಳುಳ್ಳಿ ಜೊತೆಗೆ ಕೊತ್ತಂಬರಿ ಸೊಪ್ಪು ಮತ್ತು ಹುಣಸೆಹಣ್ಣು ಸೇರಿಸಿ. ಅದಕ್ಕೆ ಬೇಕಾದ ನೀರನ್ನು ಸೇರಿಸಿ ಪೇಸ್ಟ್ ಆಗಿ ರುಬ್ಬಿಕೊಳ್ಳಿ.

ಬಳಿಕ ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ, ಕರಿಬೇವಿನ ಎಲೆಗಳನ್ನು ಸೇರಿಸಿ. ಸಾಸಿವೆ ಸಿಡಿಯುತ್ತಿದ್ದಂತೆ ಟೊಮ್ಯಾಟೊ ಸೇರಿಸಿ ಸಂಪೂರ್ಣ ಮೃದುವಾಗುವ ತನಕ ಫ್ರೈ ಮಾಡಿಕೊಳ್ಳಿ. ಬಳಿಕ ಮೊದಲೇ ರುಬ್ಬಿಟ್ಟುಕೊಂಡ ಪೇಸ್ಟ್ ಸೇರಿಸಿ.
ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಫ್ರೈ ಮಾಡಿ ಒಂದು ನಿಮಿಷ ಅದನ್ನು ಕುದಿಸಿಕೊಳ್ಳಿ. ಬಳಿಕ ಅಗತ್ಯ ಇರುವಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ರಸಂ ಚೆನ್ನಾಗಿ ಕುದಿ ಬಂದ ಬಳಿಕ ಕತ್ತರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಸೇರಿಸಿ ಸ್ಟೌವ್ ಆಫ್ ಮಾಡಿದರೆ ರುಚಿ ರುಚಿಯಾದ ಖಾರ ಖಾರ ರಸಂ ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications