Badam Milkshake Recipe: ರುಚಿಯಾದ ಬಾದಾಮಿ ಮಿಲ್ಕ್ ಶೇಕ್ ಮಾಡುವ ಸರಳ ವಿಧಾನ ಹೇಗೆ ಗೊತ್ತಾ..?

ಬಾದಾಮಿ ಹಾಗೂ ಹಾಲು ಎರಡೂ ಕೂಡ ಪೌಷ್ಠಿಕಾಂಶದ ಕಣಜ. ಎರಡೂ ಕೂಡ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿಗಳು ಹೆಚ್ಚು ಪೌಷ್ಟಿಕಾಂಶಗಳಿಂದ ತುಂಬಿರುತ್ತವೆ. ಜೊತೆಗೆ ಫೈಬರ್, ಪ್ರೋಟೀನ್, ವಿಟಮಿನ್ ಇ, ಮ್ಯಾಂಗನೀಸ್, ಮೆಗ್ನೀಷಿಯಂ, ತಾಮ್ರ ಮತ್ತು ರಂಜಕದ ಅತ್ಯುತ್ತಮ ಮೂಲವನ್ನು ಹೊಂದಿದೆ.

ಹಾಲಿನಲ್ಲಿ ಅಪಾರವಾದ ಪೌಷ್ಟಿಕ ಸತ್ವಗಳು ಇರುತ್ತವೆ. ಇವುಗಳು ನಿಮ್ಮ ಮೂಳೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಜೊತೆಗೆ ಹಾಲಿನಲ್ಲಿ ಇರುವಂತಹ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಪಾಸ್ಫರಸ್ ಎಲ್ಲವೂ ದೇಹಕ್ಕೆ ಸಿಕ್ಕಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

How To Make Badam Milkshake Or Almond Milkshake Recipe

ಇಂತಹ ಹಾಲು ಹಾಗೂ ಬಾದಾಮಿಯನ್ನು ಬಳಸಿ ಮಾಡುವ ಬಾದಾಮಿ ಮಿಲ್ಕ್ ಶೇಕ್ ಈ ಬೇಸಿಗೆಯ ಸಮಯದಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾದಾಮಿ ಮಿಲ್ಕ್ ಶೇಕ್ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚಾಗುವುದರ ಜೊತೆಗೆ ದೈಹಿಕ ಆರೋಗ್ಯವನ್ನು ಸಹ ಉತ್ತಮವಾಗಿ ಕಾಪಾಡಿಕೊಳ್ಳಬಹುದು. ರುಚಿಕರವಾದ ಬಾದಾಮಿ ಮಿಲ್ಕ್ ಶೇಕ್ ಮಾಡುವ ಸರಳ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

ಬಾದಾಮಿ ಮಿಲ್ಕ್ ಶೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಬಾದಾಮಿ-20

ಏಲಕ್ಕಿ-2

ಕೇಸರಿ- 1 ಚಿಟಿಕೆ

ಹಾಲು-1 ಕಪ್

ಸಕ್ಕರೆ- 1/4 ಕಪ್ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)

ನೀರು-1 ಕಪ್

ಸಬ್ಜಾ ಬೀಜಗಳು- 2 ಚಮಚ

How To Make Badam Milkshake Or Almond Milkshake Recipe

ಬಾದಾಮಿ ಮಿಲ್ಕ್ ಶೇಕ್ ಮಾಡುವುದು ಹೇಗೆ..?

ಮೊದಲು ಬಾದಾಮಿಯನ್ನು ನೆನೆಸಿಡಿ. ಚೆನ್ನಾಗಿ ನೆನೆದ ನಂತರ ಅವುಗಳ ಸಿಪ್ಪೆ ತೆಗೆದು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ. ಒಂದು ವೇಳೆ ಬೇಗನೆ ಬಾದಾಮಿ ನೆನೆಯಬೇಕೆಂದೆರೆ ಬೀಸಿನೀರಿನಲ್ಲಿ ಬಾದಾಮಿ ನೆನೆಸಿಡಿ. ರುಬ್ಬಿಕೊಂಡ ಬಾದಾಮಿಗೆ ಸ್ವಲ್ಪ ಏಲಕ್ಕಿಯನ್ನು ಹಾಗೂ ಅಗತ್ಯವಿರುಷ್ಟು ನೀರನ್ನು ಸೇರಿಸಿ ನುಣ್ಣಗೆ ಪೇಸ್ಟ್ ಆಗುವ ರೀತಿ ರುಬ್ಬಿಕೊಳ್ಳಿ.

ಬಳಿಕ ಒಂದು ಪಾತ್ರೆಯಲ್ಲಿ ಹಾಲನ್ನು ತೆಗೆದುಕೊಳ್ಳಿ, ಅದಕ್ಕೆ ಸ್ವಲ್ವ ನೀರು ಸೇರಿಸಿ. ಬಳಿಕ ರುಬ್ಬಿಕೊಂಡ ಬಾದಾಮಿ ಪೇಸ್ಟ್‌ ಸೇರಿಸಿ. ಬಳಿಕ ಸಕ್ಕರೆ ಸೇರಿಸಿ ಪದೇ ಪದೇ ಬೆರೆಸುತ್ತಾ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ತಣ್ಣಗಾಗಲು ಬಿಟ್ಟು ನೆನೆಸಿದ ಸಬ್ಜಾ ಬೀಜಗಳನ್ನು ಸೇರಿಸಿದರೆ ಬಾದಾಮಿ ಮಿಲ್ಕ್ ಶೇಕ್ ಸವಿಯಲು ಸಿದ್ಧ. ಒಂದು ವೇಳೆ ನಿಮಗೆ ಇಷ್ಟವಾದರೆ ಫ್ರಿಡ್ಜ್‌ನಲ್ಲಿಟ್ಟು ತಣ್ಣಗಿನ ಬಾದಾಮಿ ಮಿಲ್ಕ್ ಶೇಕ್ ಕೂಡ ಕುಡಿಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+