Copper Vessels: ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?
ತಾಮ್ರದ ಪಾತ್ರೆಗಳನ್ನು ಪ್ರತಿ ಮನೆಯಲ್ಲಿಯೂ ಬಳಸಲಾಗುತ್ತದೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಗಳಲ್ಲಿ ಇರಿಸಲಾದ ನೀರನ್ನು ಕುಡಿಯುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆರೋಗ್ಯ ಕಾಪಾಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಾಮ್ರದ ಪಾತ್ರೆಗಳನ್ನು ಅಡುಗೆಗೂ ಬಲಸಲಾಗುತ್ತದೆ.
ಆರೋಗ್ಯಕ್ಕೆ ತನ್ನದೆ ಕೊಡುಗೆ ನೀಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛವಾಗಿಡುವುದು ಕೂಡ ಒಂದು ದೊಡ್ಡ ಕೆಲಸವೇ ಸರಿ. ಮಾಮೂಲಿ ಪಾತ್ರೆಗಳಂತೆ ಈ ತಾಮ್ರದ ಪಾತ್ರೆ ಮತ್ತು ಲೋಟಗಳನ್ನು ತೊಳೆಯಲು ಸಾಧ್ಯವಿಲ್ಲ. ಹಾಗೆ ತೊಳೆದರೂ ಕೂಡ ಇವುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹೀಗಾಗಿ ತಾಮ್ರದ ಪಾತ್ರೆಗಳನ್ನು ಹೇಗೆ ತೊಳೆಯುವುದು ಎಂಬುದನ್ನು ಇಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ.

ತಾಮ್ರದ ಪಾತ್ರೆಗಳನ್ನು ಸ್ವಚ್ಛ ಮಾಡೋದು ಹೇಗೆ?
ತಾಮ್ರದ ಪಾತ್ರೆಗಳು ಅಥವಾ ವಸ್ತುಗಳನ್ನು ಹೇಗೆ ಸ್ವಚ್ಛಗೊಳಿಸುವುದು ಪ್ರಮುಖವಾದ ಕೆಲಸ. ತಾಮ್ರದ ಪಾತ್ರೆಗಳು ಅಥವಾ ವಸ್ತುಗಳನ್ನು ಉಪ್ಪು ಮತ್ತು ವಿನೆಗರ್‌ನಂತಹ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಸ್ವಚ್ಛ ಮಾಡಬಹುದು. ಅದರ ಮೊದಲ ಹೊಳಪನ್ನೇ ಮತ್ತೆ ನೀಡಬಹುದು.
ಉಪ್ಪು ಮತ್ತು ವಿನೆಗರ್ ತಾಮ್ರದ ವಸ್ತುಗಳನ್ನು ಸ್ವಚ್ಛಗೊಳಿಸಸುವುದು ತುಂಬಾ ಸುಲಭ ಮತ್ತು ಪಟ್ ಎಂದು ಆಗಿ ಹೋಗುತ್ತದೆ. ಈ ವಿಧಾನದಿಂದ ಕೈಗಳಿಗೆ ಯಾವುದೇ ಅಪಯಾವಿಲ್ಲ. ಉಪ್ಪು ಮತ್ತು ವಿನೆಗರ್ ಬಳಸಿ ತುಂಬಾ ಗಟ್ಟಿಯಾಗಿ ಕೂಡ ಉಜ್ಜುವ ಅಗತ್ಯವಿಲ್ಲ. ಆರಾಮವಾಗಿ ಪಾತ್ರೆಗಳನ್ನು ತೊಳೆಯಬಹುದಾಗಿದೆ.

ಇನ್ನು, ಪಾತ್ರೆ ತೊಳೆಯಲು ವಿನೆಗರ್ ಇಲ್ಲದಿದ್ದರೆ, ಅದನ್ನು ನಿಂಬೆ ರಸ ಅಥವಾ ಹುಣಸೆ ಹಣ್ಣಿನ ರಸವನ್ನು ಕೂಡ ಬಳಸಬಹುದು. ಅದರೆ, ವಿನೆಗರ್ ಹೆಚ್ಚು ಉತ್ತಮ.
ತಾಮ್ರದ ಪಾತ್ರೆ ತೊಳೆಯಲು ಬೇಕಿರುವ ಪದಾರ್ಥಗಳು
* ಅಗತ್ಯವಿರುವಷ್ಟು ಉಪ್ಪು
* ಅಗತ್ಯವಿರುವಷ್ಟು ವಿನೆಗರ್ (ವಿನೆಗರ್ ಇಲ್ಲದೆ ಇದ್ದರೇ ನಿಂಬೆ ರಸ ಅಥವಾ ಹುಣಸೆಹಣ್ಣು)
* ಪಾತ್ರೆ ತೊಳೆಯುವ ಬ್ರಷ್ ಅಥವಾ ಸ್ಕ್ರಬ್ಬರ್
ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವ ವಿಧಾನ
ಕಪ್ಪಗೆ ಆಗಿರುವ ಒಂದು ತಾಮ್ರದ ಪಾತ್ರೆಯನ್ನು ತೆಗೆದುಕೊಳ್ಳಿ. ಅದರ ಮೇಲೆ ಸ್ವಲ್ಪ ಉಪ್ಪು ಹಾಕಿರಿ. ಇದಾದ ನಂತರ ಸ್ವಲ್ಪ ವಿನೆಗರ್ ಸೇರಿಸಿ, ನಿಧಾನವಾಗಿ ಸ್ಕ್ರಬ್ ಮಾಡುತ್ತಾ ಹೋಗಿ. ವಿನೆಗರ್ ಇಲ್ಲದೆ ಇದ್ದರೆ ನಿಂಬೆ ರಸ ಅಥವಾ ಹುಣಸೆ ಹಣ್ಣಿನ ರಸವನ್ನು ಉಪ್ಪಿನ ಮೇಲೆ ಹಾಕಿ ನಿಧಾನವಾಗಿ ಪಾತ್ರೆಯನ್ನು ಉಜ್ಜಿ. ಬಳಿಕ ನೀರಿನಿಂದ ತೊಳೆದರೆ ಫಲ ಫಳ ಹೊಳೆಯುವ ತಾಮ್ರದ ಪಾತ್ರೆಗಳು ನಿಮ್ಮ ಕಣ್ಣಮುಂದೆ ಇರುತ್ತವೆ.












Click it and Unblock the Notifications