Hesaru bele Rice Recipe: ಹೆಸರು ಬೇಳೆ ರೈಸ್ ರೆಸಿಪಿ: ಮಾಡಿ ತಿಂದವರಿಗೇ ಗೊತ್ತು ಇದರ ರುಚಿ....
ಹೆಸರು ಬೇಳೆ ಪಲ್ಯಾ, ಹೆಸರು ಬೇಳೆ ಪಾಯಿಸಾ, ಹೆಸರು ಬೇಳೆ ದೋಸೆ ಹೀಗೆ ಹೆಸರು ಬೇಳೆಯಿಂದ ಮಾಡದ ಖಾದ್ಯಗಳಿಲ್ಲ. ಹೀಗೆ ಹೆಸರು ಬೇಳೆಯಿಂದ ಹೆಸರು ಬೇಳೆ ರೈಸ್ ಕೂಡ ಮಾಡಬಹುದು.
ಇದು ಪಲಾವ್, ಪುಳಿಯೊಗರೆ, ಚಿತ್ರಕ್ಕಿಂತಲೂ ರುಚಿಯಾಗಿರುತ್ತದೆ. ಆದರೆ ಇದನ್ನು ಬಿಸಿ ಬಿಸಿಯಾಗಿರುವಾಗಲೇ ತಿನ್ಬೇಕು ಅಷ್ಟೆ. ಹಾಗಾದರೆ ಮತ್ಯಾಕ ತಡ ಹೆಸರು ಬೇಳೆ ರೈಸ್ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ. ನೀವು ಕೂಡ ಇದನ್ನು ಮನೆಯಲ್ಲೊಮ್ಮೆ ಟ್ರೈ ಮಾಡಿ. ರುಚಿ ನೋಡಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ತಯಾರಿಸಲು ಬೇಕಾಗುವ ಪದಾರ್ಥಗಳು:
* ಅಕ್ಕಿ ಒಂದು ಕಪ್
* ಹೆಸರು ಬೇಳೆ ಅರ್ಧ ಕಪ್
* ಕಾಳು ಮೆಣಸು 5-6
* ಲವಂಗಾ 1-2
* ಪಲಾವ್ ಎಲೆ 1
* ಚಕ್ಕೆ 1 ಚಿಕ್ಕ ತುಂಡು
* ಕರಿಬೇವು ಸ್ವಲ್ಪ
* ಈರುಳ್ಳಿ 1 (ಸಣ್ಣಕ್ಕೆ ಹೆಚ್ಚಿದ)
* ಹಸಿ ಮೆಣಸಿನಕಾಯಿ 1-2
* ಒಣ ಕೊಬ್ಬರಿ 1-2 ತುಂಡು
* ಟೊಮೆಟೋ 1
* ಉಪ್ಪು ರುಚಿಗೆ ತಕ್ಕಷ್ಟು
* ಅರಿಶಿಣ ಚಿಟಿಕೆ
* ಎಣ್ಣೆ 5-6 ಟೇಬಲ್ ಸ್ಪೂನ್
* ಜೀರಿಗೆ ಅರ್ಧ ಟೇಬಲ್ ಸ್ಪೂನ್
ಹೆಸರು ಬೇಳೆ ರೈಸ್ ತಯಾರಿಸುವ ವಿಧಾನ:
* ಅಕ್ಕಿ ಹಾಗೂ ಹೆಸರು ಬೇಳೆ ಎರಡನ್ನು ಒಟ್ಟಿಗೆ ತೊಳಿದು ನೀರು ಹಾಕಿ ಪಕ್ಕಕ್ಕೆ ಇಡಿ.
* ಒಲೆಯ ಮೇಲೆ ಒಂದು ಕುಕ್ಕರ್ ಇಟ್ಟು ಎಣ್ಣೆ ಹಾಕಿ. ಸ್ವಲ್ಪ ಬಿಸಿಯಾದ ನಂತರ ಜೀರಿಗೆ, ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ.
*ನಂತರ ಈರುಳ್ಳಿ ಹಾಕಿ ಸ್ವಲ್ಪ ಕೆಂಪಾದ ಬಳಿಕ ಟೊಮೆಟೊ ಹಾಕಿ.
* ಇದಾದ ನಂತರ ಕಾಳು ಮೆಣಸು, ಲವಂಗಾ, ಪಲಾವ್ ಎಲೆ, ಚಕ್ಕೆ, ಕರಿಬೇವು, ಒಣ ಕೊಬ್ಬರಿ ತುಂಡು ಹಾಗೂ ಚಿಟಿಕೆ ಅರಿಶಿಣ ಹಾಕಿ ಚೆನ್ನಾಗಿ ಬೇಯಿಸಿ.
* ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ.
*ಬಳಿಕ ಇದಕ್ಕೆ ಅಕ್ಕಿ ಹಾಗೂ ಹೆಸರು ಬೇಳೆ ಹಾಕಿ ಮೂರು ಕಪ್ ನೀರು ಹಾಕಿ ಕುಕ್ಕರ್ ಮುಚ್ಚಿ.
* ಕುಕ್ಕರ್‌ನಲ್ಲಿ ಮೂರು ವಿಸಿಲ್ ಬರುವವರೆಗೂ ಬಿಡಿ. ಬಳಿಕ ಗ್ಯಾಸ್ ಆಫ್ ಮಾಡಿ.
*ಕುಕ್ಕರ್ ಮುಚ್ಚಳ ತೆಗೆದು ನಿಮಗೆ ಬೇಕಿದ್ದಲ್ಲಿ ತುಪ್ಪ ಬಳಸಿದರೆ ರುಚಿ ರುಚಿಯಾದ ಹೆಸರು ಬೇಳೆ ರೈಸ್ ಸವಿಯಲು ಸಿದ್ಧ.












Click it and Unblock the Notifications