Ugadi Festival: ಯುಗಾದಿ ಹಬ್ಬಕ್ಕೆ ಸಾಂಪ್ರದಾಯಿಕವಾಗಿ ಬೇವು ಬೆಲ್ಲವನ್ನ ಈ ರೀತಿ ಮಾಡಿ
ಯುಗಾದಿ ಹಬ್ಬ ಎಂದರೆ ಹೊಸ ವರ್ಷದ ಆರಂಭವಿದ್ದಂತೆ. ಯುಗಾದಿ ದಕ್ಷಿಣ ಭಾರತದ ಒಂದು ವಿಶೇಷ ಹಬ್ಬವಾಗಿದೆ ಮತ್ತು ಇದನ್ನು ಬ್ರಹ್ಮಾಂಡದ ಸೃಷ್ಟಿಯ ಮೊದಲ ದಿನವೆಂದು ಪರಿಗಣಿಸಲಾಗುತ್ತದೆ.ಈ ಹಬ್ಬದ ಸಂದರ್ಭದಲ್ಲಿ ಬಹುತೇಕವಾಗಿ ಎಲ್ಲರ ಮನೆಯಲ್ಲೂ ಸಾಂಪ್ರದಾಯಿಕ ಅಡುಗೆಗಳ ಪರಿಮಳ ತುಂಬಿಕೊಂಡಿರುತ್ತದೆ ಎಂದು ಹೇಳಬಹುದು. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ವಿಶೇಷ ಆಚರಣೆಯ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನ ಯುಗದ ಆರಂಭವಾಗುವುದು.
ಯುಗಾದಿಯ ಸಮಯ ಬರುವ ಒಳಗೆ ಪ್ರಕೃತಿಯಲ್ಲಿ ಗಿಡ-ಮರಗಳು ತಮ್ಮ ಹಳೆಯ ಎಲೆಗಳನ್ನು ಕೊಡವಿಕೊಂಡು, ಹೊಸ ಚಿಗುರುಗಳಿಂದ ಕಂಗೊಳಿಸುತ್ತವೆ. ಅಂತೆಯೇ ನಮ್ಮ ಜೀವನದಲ್ಲೂ ಹೊಸತನವನ್ನು ಪಡೆದುಕೊಳ್ಳಲು ಹೊಸ ವರ್ಷವನ್ನು ಸ್ವಾಗತಿಸಲಾಗುವುದು. ಇನ್ನೂ ಹೊಸ ವರ್ಷ ಅಂದ್ರೆ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ ರುಚಿಯಾದ ಸಂಪ್ರಾದಾಯಿಕ ತಿಂಡಿ ತಿನುಸುಗಳ ಪರಿಮಳ ಮನೆ ತುಂಬಿರುತ್ತದೆ. ಯುಗಾದಿ ಹಬ್ಬದಂದು ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಮನೆಯಲ್ಲಿ ರುಚಿಕರವಾದ ಸಾಂಪ್ರದಾಯಿಕ ಪಾಕವಿಧಾನಗಳನ್ನು ತಯಾರಿಸಲಾಗುತ್ತದೆ.

ಇನ್ನೂ ಯುಗಾದಿ ಹಬ್ಬ ಅಂದ್ರೆ ಮೊದಲು ಎಲ್ಲಾರಿಗೂ ನೆನಪಾಗುವುದು. ಬೇವು ಬೆಲ್ಲಾ, ಯುಗಾದಿ ಬೇವು ಬೆಲ್ಲಾ ತುಂಬಾನೇ ಮುಖ್ಯವಾದದ್ದು. ಇನ್ನೂ ಸಂಪ್ರಾದಾಯಿಕವಾಗಿ ಯುಗಾದಿ ಹಬ್ಬದಂದು ಬೇವು ಬೆಲ್ಲಾವನ್ನ ಮಾಡುವುದು ಹೇಗೆ ಎಂಬುದನ್ನ ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ. ಯುಗಾದಿ ಹಬ್ಬದಂದು ಬೇವು ಬೆಲ್ಲಾವನ್ನ ತಯಾರಿಸಲು ಒಂದು ಚಮಚ ಬೇವಿನ ಹೂವುಗಳು, ಎರಡು
ಈ ಹಬ್ಬಕ್ಕೆ ತುಂಬಾನೇ ಮುಖ್ಯವಾದದ್ದು ಈ ಬೇವು ಬೆಲ್ಲಾ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದನ್ನು ಮಾಡಲು ಬೇಕಾಗುವ ಸಾಮಾಗ್ರಿಗಳು: 1 ಚಮಚ ಬೇವಿನ ಹೂವುಗಳು, ನಾಲ್ಕು ಟೇಬಲ್ ಚಮಚ ಬೆಲ್ಲ, 4 ಟೇಬಲ್ ಚಮಚ ತೆಂಗಿನ ತುರಿ, ಹಾಗೂ ಅರ್ಧ ಕಪ್ ಪುಟಾಣಿ ಕಡಲೆಯನ್ನ ತೆಗೆದುಕೊಳ್ಳಿ. ಮೊದಲು ಪುಟಾಣಿ ಕಡಲೆಯನ್ನ ಮಿಕ್ಸಿಯನ್ನ ಹಾಕಿ ಸಣ್ಣಗೆ ಪೌಡರ್ ಮಾಡಿಕೊಳ್ಳಿ, ನಂತರ ಬೆಲ್ಲ ಹಾಗೂ ಒಣ ತೆಂಗಿನ ಕಾಯಿಯನ್ನ ಮಿಕ್ಸಿ ಮಾಡಿಕೊಳ್ಳಿ. ನಂತರ ಬೇವಿನ ಹೂವನ್ನ ಮಿಕ್ಸ್ ಮಾಡಿದರೆ ಯುಗಾದಿಯ ಬೇವು ಬೆಲ್ಲ ರೆಡಿಯಾಗುತ್ತದೆ.
ಇನ್ನೂ ಯುಗಾದಿ ಪಚಡಿಯನ್ನ ಮಾಡಲು ಎರಡು ಕಪ್ ನೀರನ್ನು ತೆಗೆದುಕೊಂಡು ಹುಣಸೆಹಣ್ಣನ್ನು ಸ್ವಲ್ಪ ಸಮಯದವರೆಗೆ ನೆನೆಸಿಡಿ. ನಂತರ, ತಿರುಳನ್ನು ಸಂಪೂರ್ಣವಾಗಿ ಹಿಂಡಿ, ಅದನ್ನು ಸೋಸಿ ಮತ್ತು ಹುಣಸೆ ನೀರನ್ನು ಒಂದು ಬೌಲ್ ನಲ್ಲಿ ಸಂಗ್ರಹಿಸಿ. ನಂತರ ಬೆಲ್ಲವನ್ನು ಬೌಲ್ ಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬೌಲ್ ಗೆ ತೆಂಗಿನಕಾಯಿ ಮತ್ತು ಹಸಿ ಮಾವಿನ ಹಣ್ಣಿನ ಸಣ್ಣ ತುಂಡುಗಳನ್ನು ಸೇರಿಸಿ. ನೀವು ಬಯಸಿದರೆ ಕೆಲವು ಕತ್ತರಿಸಿದ ಒಣ ಹಣ್ಣುಗಳನ್ನು ಸಹ ಸೇರಿಸಬಹುದು. ಇದಕ್ಕೆ 1 ಟೀ ಚಮಚ ಬೇವಿನ ಹೂವುಗಳನ್ನು ಸೇರಿಸಿ, ಹಸಿರು ಮೆಣಸಿನಕಾಯಿಯನ್ನು ಸೀಳಿ ಮಿಶ್ರಣ ಮಾಡಿ. ಇದನ್ನು 30 ರಿಂದ 40 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಯುಗಾದಿಯ ಪಚಡಿಯೂ ರೆಡಿಯಾಗುತ್ತದೆ.
ಯುಗಾದಿ ಹಬ್ಬಕ್ಕೆ ವಿಶೇಷವಾಗಿ ಸಂಪ್ರಾದಾಯಿಕ ತಿಂಡಿಗಳನ್ನ ಮಾಡಲಾಗುತ್ತದೆ. ವಿಶೇಷ ಹಬ್ಬದ ಸಂದರ್ಭದಲ್ಲಿ ಭೌಗೋಳಿಕವಾಗಿಯೂ ತಿಂಡಿ ತಿನಿಸುಗಳು ಬದಲಾಗುತ್ತಿರುತ್ತವೆ. ಧಾರ್ಮಿಕ, ನೈಸರ್ಗಿಕ ಹಾಗೂ ಭೌಗೋಳಿಕವಾಗಿ ವಿಭಿನ್ನ ಬದಲಾವಣೆಯನ್ನು ಸೂಚಿಸುತ್ತಾ ಹೊಸ ಯುಗವನ್ನು ತರುವ ಹಬ್ಬ ಯುಗಾದಿಯಾಗಿದೆ ಎಂದು ಹಿರಿಯರು ಹೇಳುತ್ತಾರೆ. ಈ ಹಬ್ಬದಂದು ಅಭ್ಯಂಗ ಸ್ನಾನ, ಗೃಹಾಲಂಕಾರ, ಬೇವು-ಬೆಲ್ಲದ ಹಂಚಿಕೆ, ವಿಶೇಷವಾದ ದೇವರ ಪೂಜೆ, ವಿಶೇಷ ನೈವೇದ್ಯಗಳನ್ನು ತಯಾರಿಸುವುದರ ಮೂಲಕ ಹಬ್ಬದ ಸೊಗಡನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ.












Click it and Unblock the Notifications