Health Benefits of Quitting Sugar: ಪ್ರತಿನಿತ್ಯ ಸೇವಿಸುವ ಸಕ್ಕರೆ ಪ್ರಮಾಣ ಎಷ್ಟು ಇರಬೇಕು? ಇಷ್ಟು ಸಕ್ಕರೆ ಸೇವಿಸಬೇಡಿ
ನಾವೆಲ್ಲಾ ಸಕ್ಕರೆ ಪ್ರಿಯರು. ಒಂದಾಲ್ಲಾ ಒಂದು ರೀತಿಯಲ್ಲಿ ಸಕ್ಕರೆಯನ್ನು ಆಗಾಗ ಸೇವಿಸುತ್ತಲೇ ಇರುತ್ತೇವೆ. ಕೆಲವರಂತೂ ಸಿಹಿ ತಿನ್ನದೆ ಮಲಗುವುದೇ ಇಲ್ಲ. ಆದರೆ ಅತಿಯಾದರೆ ಅಮೃತ ಕೂಡ ವಿಷ ಅನ್ನೋ ಹಾಗೆ ಸಕ್ಕರೆ ಹೆಚ್ಚಾಗಿ ಸೇವಿಸಿದರೆ ಅದು ದೇಹಕ್ಕೆ ಒಳ್ಳೆದಲ್ಲ. ಹಾಗಾದರೆ ಪ್ರತಿನಿತ್ಯ ಸೇವಿಸುವ ಸಕ್ಕರೆ ಪ್ರಮಾಣ ಎಷ್ಟು ಇರಬೇಕು? ಎಷ್ಟು ಸಕ್ಕರೆ ನಮ್ಮ ದೇಹಕ್ಕೆ ಒಳ್ಳೆಯದು ಅನ್ನೋದನ್ನು ತಿಳಿಯೋಣ.
ಅನೇಕ ರೂಪಗಳಲ್ಲಿ ನಾವು ಸಕ್ಕರೆಯನ್ನು ಸೇವಿಸುತ್ತೇವೆ. ಸಿಹಿ ಆಹಾರ ಸೇವನೆ ಮೂಲಕ, ಪಾನೀಯಗಳನ್ನು ಕುಡಿಯುವ ಮೂಲಕ ಹಾಗೂ ಐಸ್‌ಕ್ರೀಮ್ ಅಥವಾ ಇನ್ನಿತರ ಬೇಕರಿ ತಿಂಡಿಗಳ ಮೂಲಕ ನಮ್ಮ ದೇಹಕ್ಕೆ ಸಕ್ಕರೆ ಸೇರುತ್ತದೆ. ಆರೋಗ್ಯ ಮತ್ತು ಪೌಷ್ಟಿಕಾಂಶಕ್ಕೆ ಹೆಚ್ಚು ಆದ್ಯತೆ ಕೊಡುವ ನಮ್ಮ ದೇಹಕ್ಕೆ ಸಕ್ಕರೆ ಎಷ್ಟು ಪ್ರಮಾಣದಲ್ಲಿ ಬೇಕು ಅನ್ನೋದನ್ನು ನಾವು ತಿಳಿದಿರಲೇಬೇಕು.

ಸಕ್ಕರೆ ಶತಮಾನಗಳಿಂದಲೂ ಚರ್ಚೆಯ ವಿಷಯವಾಗಿದೆ. ತೂಕ ಹೆಚ್ಚಾಗುವುದರಿಂದ ಹಿಡಿದು ಒಟ್ಟಾರೆ ಆರೋಗ್ಯದ ಮೇಲೆ ಅದರ ಪ್ರಭಾವದವರೆಗೆ, ಸಕ್ಕರೆ ಸೇವನೆಯ ಬಗ್ಗೆ ಚರ್ಚೆಗಳು ಶತಮಾನಗಳಿಂದ ನಡೆಯುತ್ತಿದೆ. ಹಾಗಾದರೆ ಸಕ್ಕರೆ ನಿಜವಾಗಿಯೂ ಅಪಾಯಕಾರಿ ವಸ್ತುವೇ? ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬೇಕು? ನಮ್ಮ ಆಹಾರದಲ್ಲಿ ಸಕ್ಕರೆಯ ಪಾತ್ರದ ಹಿಂದಿನ ಸತ್ಯವನ್ನು ತಿಳಿಯೋಣ.
ಸಕ್ಕರೆ ತೂಕ ಹೆಚ್ಚಾಗಲು ಕಾರಣವಾಗುತ್ತದೆಯೇ?
ಸಕ್ಕರೆ ನೇರವಾಗಿ ಕೊಬ್ಬಿನ ಶೇಖರಣೆಗೆ ಕಾರಣವಾಗುವ ವಸ್ತುವಲ್ಲವಾದರೂ, ಇದು ಪರೋಕ್ಷವಾಗಿ ತೂಕ ಹೆಚ್ಚಾಗಲು ಕೆಲ ಮಾಡುತ್ತದೆ. ಡಯಾಬಿಟಿಸ್ & ಮೆಟಾಬಾಲಿಕ್ ಸಿಂಡ್ರೋಮ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಸಕ್ಕರೆ ಸೇವನೆಯ ಹೆಚ್ಚಳಗೊಂಡರೆ ಅದು ಕ್ಯಾಲೋರಿಯನ್ನು ಹೆಚ್ಚಿಸುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಇದು ವಿಶೇಷವಾಗಿ ಸತ್ಯವಾದ ವಿಷಯವಾಗಿದೆ. ಸಂಸ್ಕರಿಸಿದ ಆಹಾರದಲ್ಲಿ ಸಕ್ಕರೆಯು ಪರಿಮಳವನ್ನು ಹೆಚ್ಚಿಸುವುದಲ್ಲದೆ, ಕ್ಯಾಲೊರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆಸಿದ ಸಂಶೋಧನೆಯು ಸಕ್ಕರೆ ಸೇವನೆ ಹೆಚ್ಚಾದಲ್ಲಿ ಕ್ಯಾಲರಿ ಗಮನಾರ್ಹವಾಗಿ ಏರಿಕೆಯಾಗುತ್ತದೆ ಎಂದು ಹೇಳುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಅದು ಅತಿಯಾಗಿರುತ್ತದೆ. ಅದನ್ನು ಮಿತವಾಗಿ ಸೇವಿಸದಿದ್ದರೆ ತೂಕ ಹೆಚ್ಚಾಗಬಹುದು ಎಂದು ಇದು ಸೂಚಿಸುತ್ತದೆ.
ಸಕ್ಕರೆ ಕೊಬ್ಬನ್ನು ಹೆಚ್ಚಿಸುವುದೇ?
ಸಕ್ಕರೆ ಕೊಬ್ಬನ್ನು ಹೆಚ್ಚಿಸುವುದಿಲ್ಲ. ಕೆಲ ಅಧ್ಯಯನಗಳು ತೂಕ ಹೆಚ್ಚಾಗಲು ಸಕ್ಕರೆ ಮಾತ್ರ ಕಾರಣ ಎಂಬ ಕಲ್ಪನೆಯನ್ನು ತಳ್ಳಿಹಾಕುತ್ತದೆ. ದೇಹದ ತೂಕವನ್ನು ನಿರ್ಧರಿಸುವಲ್ಲಿ ಒಟ್ಟಾರೆ ಕ್ಯಾಲೋರಿ ಸಮತೋಲನದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ಸಕ್ಕರೆಯನ್ನು ಬಳಸದಿರುವುದು ಒಳ್ಳೆಯದು. ಸಕ್ಕರೆ ಸೇವನೆ ನಿಯಂತ್ರಿಸಲು ನೀರು, ಹಣ್ಣುಗಳನ್ನು ಸೇವಿಸಿದರೆ ಸಕ್ಕರೆ ಬಯಕೆಯನ್ನು ಕಡಿಮೆ ಮಾಡಬಹುದು ಜೊತೆಗೆ ಆರೋಗ್ಯಕರ ಆಹಾರ ಸೇವಿಸಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.
ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬೇಕು?
ಸಕ್ಕರೆಯು ಕೊಬ್ಬನ್ನು ಹೊಂದಿರದಿದ್ದರೂ, ಅದನ್ನು ಮಿತವಾಗಿ ಸೇವಿಸುವುದು ಮುಖ್ಯ. ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರ, ಆಹಾರ ಮತ್ತು ಪಾನೀಯಗಳಲ್ಲಿ ಸೇರಿಸಲಾದ ಸಕ್ಕರೆಗಳಿಂದ ದೈನಂದಿನ ಕ್ಯಾಲೊರಿ ಸೇವನೆಯ ಪ್ರಮಾಣವು 5% ಮೀರಬಾರದು. ಇದರರ್ಥ ಜನರು ದಿನಕ್ಕೆ 30 ಗ್ರಾಂ ಸಕ್ಕರೆ ಅಥವಾ ಸುಮಾರು 7 ಟೀ ಚಮಚಗಳಿಗಿಂತ ಹೆಚ್ಚು ಸೇವಿಸಬಾರದು.
ಮಕ್ಕಳ ಸಕ್ಕರೆ ಸೇವನೆಯು ಕಡಿಮೆ ಇರಬೇಕು. ಶಿಫಾರಸು ಮಾಡಿದ ದೈನಂದಿನ ಮಿತಿಗಳು ವಯಸ್ಸಿನ ಆಧಾರದ ಮೇಲೆ 19g ನಿಂದ 24g ವರೆಗೆ ಇರುತ್ತದೆ. ಸಂಸ್ಕರಿಸಿದ ಆಹಾರಗಳು ಮತ್ತು ಪಾನೀಯಗಳಲ್ಲಿ ಸಕ್ಕರೆ ಪ್ರಮಾಣದ ಬಗ್ಗೆ ತಿಳಿದಿರುವುದು ಮುಖ್ಯ. ಏಕೆಂದರೆ ಈ ಮಿತಿಗಳನ್ನು ಮೀರಿದರೆ ತೂಕ ಹೆಚ್ಚಾಗಬಹುದು. ಮಧುಮೇಹ ಮತ್ತು ಹೃದ್ರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.












Click it and Unblock the Notifications