Happy Holi Wishes: ಹೋಳಿ ಬಂತು ಹೋಳಿ.... ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಹೋಳಿ ಹಬ್ಬದ ಶುಭಾಶಯಗಳು ತಿಳಿಸಿ
ಜನರು ಇಡೀ ವರ್ಷ ಬಣ್ಣಗಳ ಹಬ್ಬ ಹೋಳಿಗಾಗಿ ಕಾಯುತ್ತಾರೆ. ಈ ದಿನ ಜನರು ಪರಸ್ಪರ ಬಣ್ಣಗಳನ್ನು ಹಚ್ಚುವ ಮೂಲಕ ಸಂಭ್ರಮಿಸುತ್ತಾರೆ. ಇದನ್ನು ಆಚರಿಸುವ ಮೂಲಕ ಜನರು ಪರಸ್ಪರ ಒಳ್ಳೆಯ ಸಮಯವನ್ನು ಕಳೆಯುತ್ತಾರೆ. ಹಿಂದೂಗಳು ಮಾತ್ರವಲ್ಲದೆ ಇತರ ಧರ್ಮದವರೂ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಹೋಳಿ ಹಬ್ಬವನ್ನು ಪ್ರತೀ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಹೋಳಿ ಹಬ್ಬವು ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಈ ಬಾರಿ ಹೋಳಿಯನ್ನು ಮಾರ್ಚ್ 25ರಂದು ಆಚರಿಸಲಾಗುತ್ತದೆ. ಬ್ರಹ್ಮಾಂಡದಲ್ಲೇ ಮೊದಲ ಹೋಳಿಯನ್ನು ಆಡಿದವರು ಶಿವನೆಂದು ಹೇಳಲಾಗುತ್ತದೆ.

ಕೆಲವು ಕಥೆಗಳು ಶಿವ, ಕಾಮದೇವ, ಪೂತನ ಮತ್ತು ಢುಂಢಿ ದಂತಕಥೆಗಳನ್ನು ಹೇಳುತ್ತವೆ. ಹಬ್ಬವನ್ನು ಸಾಮಾನ್ಯವಾಗಿ ಮಥುರಾ ಮತ್ತು ವೃಂದಾವನ ಪ್ರದೇಶದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ, ರಾಧಾ ಮತ್ತು ಕೃಷ್ಣನ ಪವಿತ್ರ ಪ್ರೀತಿ ಮತ್ತು ಒಕ್ಕೂಟವನ್ನು ಗೌರವಿಸಲು, ಪಾಲಿಸಲು ಮತ್ತು ನೆನಪಿಸಿಕೊಳ್ಳಲು ಇದನ್ನು ಆಚರಿಸುವುದಿದೆ.
ಅಂದಹಾಗೆ ಈ ವರ್ಷ ಹೋಲಿಕಾ ದಹನ ಮಾರ್ಚ್ 24 ರಂದು ನಡೆಯಲಿದೆ. ಹೋಳಿ ಹಬ್ಬದಂದು ನಿಮ್ಮ ಸ್ನೇಹಿತರು, ಹಿತೈಶಿಗಳಿಗೆ ಮನದ ಮಾತಿನೊಂದಿಗೆ ಶುಭಾಶಯ ಕೋರಿ. ಇದು ನಿಮ್ಮ ಸಂತೋಷವನ್ನು ಮಾತ್ರವಲ್ಲದೆ ನಿಮ್ಮ ಪ್ರೀತಿ ಪಾತ್ರರ ಸಂತೋಷವನ್ನೂ ದ್ವಿಗುಣಗೊಳಿಸಬಹುದು. ಹಾಗಾದರೆ ನಿಮ್ಮ ಪ್ರೀತಿ ಪಾತ್ರರಿಗಾಗಿ ಹೋಳಿ ಶುಭಾಶಯಗಳು ಇಲ್ಲಿದೆ...

ಹೋಳಿ ಶುಭಾಶಯಗಳು 2024: -
1. ಬಣ್ಣದ ಹಬ್ಬದಲ್ಲಿ ನಿಮ್ಮ ಕನಸುಗಳು ಈಡೇರಲಿ. ನಿಮ್ಮ ಜಗತ್ತು ಬಹಳಷ್ಟು ಸಂತೋಷದಿಂದ ತುಂಬಿರಲಿ. ಪ್ರತಿ ಬಾರಿ ದೇವರಿಗೆ ನನ್ನದೊಂದು ಪ್ರಾರ್ಥನೆ ಇದು. ನಿಮಗೆ ಹೃದಯದಿಂದ ಹೋಳಿ ಹಬ್ಬದ ಶುಭಾಶಯಗಳು!
2. ಕಾಮನಬಿಲ್ಲಿಗೆ ಬಣ್ಣಗಳನ್ನು ಸೇರಿಸುವ ಸೂರ್ಯನಂತೆ ನೀನು. ನಿನ್ನ ಉಪಸ್ಥಿತಿಯಿಂದ ನನ್ನ ಜೀವನದಲ್ಲಿ ಸಕಾರಾತ್ಮಕತೆ ಮತ್ತು ಶಕ್ತಿಯನ್ನು ಹರಡಿದೆ. ನೀನು ನನ್ನ ಜೀವನದಲ್ಲಿ ಸದಾ ಇರಲು ಬಯಸುತ್ತೇನೆ. ಈ ಅದ್ಭುತ ಬಣ್ಣದ ಹಬ್ಬದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭಾಶಯಗಳು!
3. ಹೋಳಿಯಲ್ಲಿ ಬಣ್ಣ ಇರಲಿ, ಬಣ್ಣದ ಹಬ್ಬದಂದು ನಿಮ್ಮ ಅಬ್ಬರವಿರಲಿ, ಮಾತಿನಲ್ಲಿ ಸಿಹಿಯಿರಲಿ, ಎಲ್ಲರ ಮನದಲ್ಲೂ ಪ್ರೀತಿ ಇರಲಿ, ಇದು ಆತ್ಮೀಯರ ಹಬ್ಬವಾಗಲಿ, ಹೋಳಿ ಹಬ್ಬದ ಶುಭಾಶಯಗಳು!
4. ವಸಂತ ಬಂದಿದೆ. ನಿಮ್ಮ ಆಸೆಯಂಬ ಬಣ್ಣಗಳ ಮಳೆಯಾಗಲಿ. ನಿಮ್ಮ ಆಸೆಗಳು ನೀಲಿ-ಹಸಿರು-ಕೆಂಪು ಬಣ್ಣಗಳಂತೆ ಸದಾ ನಿಮ್ಮನ್ನು ಖುಷಿ ಪಡಿಸುತ್ತಿರಲಿ. ನಿಮಗೆ ಹೋಳಿ ಹಬ್ಬದ ಶುಭಾಶಯಗಳು!
5. ನಿಮ್ಮ ಜೀವನವು ಬಣ್ಣಗಳಿಂದ ತುಂಬಿರಲಿ. ನಿಮ್ಮ ಪ್ರಪಂಚವು ಬಹಳಷ್ಟು ಸಂತೋಷದಿಂದ ಕೂಡಿರಲಿ. ಇದು ಈ ಬಾರಿ ದೇವರಿಗೆ ನನ್ನ ಪ್ರಾರ್ಥನೆ, ಹೃದಯದಿಂದ ಹೋಳಿ ಹಬ್ಬದ ಶುಭಾಶಯಗಳು!
6. ದೇವರು ನಿಮಗೆ ಜೀವನದಲ್ಲಿ ಸಂತೋಷದ ಬಣ್ಣಗಳು, ಸ್ನೇಹದ ಬಣ್ಣಗಳು, ಪ್ರೀತಿಯ ಬಣ್ಣಗಳು ಮತ್ತು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಬಣ್ಣಗಳನ್ನು ಉಡುಗೊರೆಯಾಗಿ ನೀಡಲಿ.
7. ಹೆಚ್ಚು ಆಟವಾಡಿ, ಕಡಿಮೆ ಕುಡಿಯಿರಿ, ಹೆಚ್ಚು ಆನಂದಿಸಿ, ಕಡಿಮೆ ಯೋಚಿಸಿ. ಹರ್ಷಚಿತ್ತದಿಂದ ಹೋಳಿ ಆಚರಿಸಿ!
8. ವಾಟರ್ ಬಲೂನ್‌ಗಳು, ವಾಟರ್ ಪಿಸ್ತೂಲ್‌ಗಳು, ಅದ್ಭುತ ಹಾಡುಗಳು ಮತ್ತು ರುಚಿಕರವಾದ ಸಿಹಿತಿಂಡಿಗಳು ಪರಿಪೂರ್ಣ ಹೋಳಿಗೆ ಮುಖ್ಯ ವಸ್ತುಗಳಾಗಿವೆ. ಹ್ಯಾಪಿ ಹೋಲಿ!

9. ನಾಚೋ ಅಥವಾ ಜುಮೋ, ಮಸ್ತಿ ಸೆ ಖೇಲೋ. ವರ್ಣರಂಜಿತ ಮತ್ತು ಸಂತೋಷದಾಯಕ ಹೋಳಿಯನ್ನು ಆಚರಿಸಿ.
10. ಪ್ರತಿ ದಿನವೂ ವರ್ಣರಂಜಿತವಾಗಿರಬೇಕು. ಆದರೆ ಅದು ಅಪರೂಪ. ಆದ್ದರಿಂದ ಈ ವರ್ಷದ ಸಿಹಿ ನೆನಪು ಆಚರಿಸಿ ಸಂಗ್ರಹಿಸಿ. ಹೋಳಿ ಹಬ್ಬದ ಶುಭಾಶಯಗಳು.
11. ನನ್ನಿಂದ ನಿಮಗೆ ಹೋಳಿ ಹಬ್ಬದ ಶುಭಾಶಯಗಳು. ವರ್ಣರಂಜಿತ ಜೀವನ ನಿಮ್ಮದಾಗಲಿ.
12. ದೇವರು ನಿಮ್ಮ ಜೀವನದವನ್ನು ಬಣ್ಣಗಳಿಂದ ರೂಪಿಸಿದ್ದಾನೆ. ಬಣ್ಣ ಪ್ರಕೃತಿಯಲ್ಲಿದೆ, ಸೃಷ್ಟಿಯಲ್ಲಿದೆ ನಮ್ಮಲ್ಲೂ ಇದೆ. ನಿಮಗೂ ಮತ್ತು ಕುಟುಂಬದವರಿಗೂ ಹೋಳಿ ಹಬ್ಬದ ಶುಭಾಶಯಗಳು.
13. ಹೋಳಿ ಹಬ್ಬದ ಸಂತೋಷದ ಸಂದರ್ಭದಲ್ಲಿ ನಾನು ನಿಮ್ಮಿಂದ ದೂರವಾಗಿದ್ದರೂ, ನನ್ನ ಎಲ್ಲಾ ಆಲೋಚನೆಗಳು ಮತ್ತು ಶುಭಾಶಯಗಳು ನಿಮ್ಮೊಂದಿಗೆ ಇವೆ. ಹೋಳಿ ಹಬ್ಬದ ಶುಭಾಶಯಗಳು.
14. ಈ ಹೋಳಿ ನಮ್ಮ ಹೆಮ್ಮೆ ಹೊಸ ಆರಂಭವನ್ನು ತರೋಣ. ಹೋಳಿ ಹಬ್ಬದ ಶುಭಾಶಯಗಳು!
15. ಖಿನ್ನತೆಯನ್ನು, ಕೆಟ್ಟದ್ದನ್ನು ಮತ್ತು ದುಃಖವನ್ನು ಹೋಲಿಕಾದೊಂದಿಗೆ ಸುಡೋಣ ಮತ್ತು ಹೊಸ ಆರಂಭವನ್ನು ಸ್ವಾಗತಿಸೋಣ. ಹೋಳಿ ಹಬ್ಬದ ಶುಭಾಶಯಗಳು!
16. ನೀನು ನನ್ನ ಜೀವನದ ಬಣ್ಣ ಮತ್ತು ನನ್ನ ನಗುವಿಗೆ ನೀನು ಕಾರಣ. ನಾನು ವರ್ಣರಂಜಿತ ಕನಸನ್ನು ನಿನ್ನೊಂದಿಗೆ ಕಾಣುತ್ತೇನೆ. ಹೋಳಿ ಹಬ್ಬದ ವರ್ಣರಂಜಿತ ಶುಭಾಶಯಗಳು.
17. ಸಿಹಿತಿಂಡಿಗಳ ಬಣ್ಣ ಮತ್ತು ಮಾಧುರ್ಯದ ಭವ್ಯತೆ. ನಿಮ್ಮ ಜೀವನದ ಅದ್ಭುತ ಹೋಳಿಯನ್ನು ಆಚರಿಸಿ












Click it and Unblock the Notifications