Hair Care Tips: ಆಡಿನ ಹಾಲಿನಿಂದ ನಿಮ್ಮ ಕೂದಲು ಸಿನಿಮಾ ಹೀರೋಯಿನ್ ನಂತೆ ಕಾಣಿಸುತ್ತೆ..
ಸಾಮಾನ್ಯವಾಗಿ ನಮಗೆಲ್ಲಾ ಹಸುವಿನ ಹಾಲು, ಎದೆ ಹಾಲು, ಕತ್ತೆ ಹಾಗೂ ಆಡಿನ ಹಾಲಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತು. ಆಡಿನ ಹಾಲು ನಮ್ಮ ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ ಇದರಿಂದ ಕೂದಲು ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
ಆಡಿನ ಹಾಲು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳಂತಹ ಅಗತ್ಯ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹಸುವಿನ ಹಾಲಿಗೆ ಹೋಲಿಸಿದರೆ, ಇದು ಸೆಲೆನಿಯಮ್ ಮತ್ತು ಸತುವಿನಂತಹ ಕೆಲವು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದರಿಂದಾಗಿಯೇ ನಮ್ಮ ಮಹಾತ್ಮ ಗಾಂಧೀಜಿಯವರು ಆಡಿನ ಹಾಲನ್ನು ಬಳಸುತ್ತಿದ್ದರು.

ಇದು ಇತರ ಹಾಲುಗಳಿಗಿಂತ ಹೆಚ್ಚು ಪ್ರೋಟೀನ್ ಹೊಂದಿದೆ. ಈ ಕಾರಣಗಳಿಗಾಗಿಯೇ ಮೇಕೆ ಹಾಲನ್ನು ಹೆಚ್ಚಿನ ಕೂದಲು ಆರೋಗ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಮೇಕೆ ಹಾಲನ್ನು ಸೇವಿಸಿದರೆ ಕಳೆದುಹೋದ ಕೂದಲಿನ ಆರೋಗ್ಯವನ್ನು ಮರಳಿ ಪಡೆಯಬಹುದು ಎಂದು ಸೌಂದರ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಆಡಿನ ಹಾಲನ್ನು ಬಳಸಿ ಕೂದಲನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಹೇಗೆ ಎಂದು ಅನ್ನೋದನ್ನು ತಿಳಿಯೋಣ.
ಮೇಕೆ ಹಾಲಿನಿಂದ ಹೇರ್ ಮಾಸ್ಕ್ ತಯಾರಿಸಿ ಕೂದಲಿಗೆ ಹಚ್ಚು ಮೂಲಕ ನಿಮ್ಮ ಕೇಶರಾಶಿಯನ್ನು ಕಾಪಾಡಿಕೊಳ್ಳಬಹುದು.
ಮೇಕೆ ಹಾಲಿನ ಹೇರ್ ಮಾಸ್ಕ್
ಬೇಕಾಗುವ ಸಾಮಾಗ್ರಿಗಳು: ಮೇಕೆ ಹಾಲು - ½ ಕಪ್
ಬಾದಾಮಿ ಎಣ್ಣೆ - 1 ಚಮಚ
ಕ್ಯಾಸ್ಟರ್ ಆಯಿಲ್ - 1 ಚಮಚ
ರೋಸ್ ವಾಟರ್ - 1 ಚಮಚ

ಬಳಸುವ ವಿಧಾನ:-
*ಮೇಕೆ ಹಾಲು, ಬಾದಾಮಿ ಎಣ್ಣೆ, ಕ್ಯಾಸ್ಟರ್ ಆಯಿಲ್ ಮತ್ತು ರೋಸ್ ವಾಟರ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ.
*20 ರಿಂದ 30 ನಿಮಿಷಗಳ ಕಾಲ ಇರಿಸಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಮೇಕೆ ಹಾಲಿನಲ್ಲಿರುವ ವಿಟಮಿನ್ ಮತ್ತು ಖನಿಜಗಳ ಸಂಯೋಜನೆಯು ಕೂದಲಿನ ಕಿರುಚೀಲಗಳನ್ನು ಆರೋಗ್ಯವಾಗಿಡುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
*ವಿಟಮಿನ್ ಬಿ 6 ಕೆರಾಟಿನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಇದು ಕೂದಲಿನ ಬೆಳವಣಿಗೆಗೆ ಅವಶ್ಯಕವಾಗಿದೆ.
ಮೇಕೆ ಹಾಲು ಕಂಡಿಷನರ್
ಬೇಕಾಗುವ ಸಾಮಗ್ರಿಗಳು:
ಮೇಕೆ ಹಾಲು - ½ ಕಪ್
ಅಲೋವೆರಾ ಜೆಲ್ - 3 ಚಮಚ
ತೆಂಗಿನ ಹಾಲು - 2 ಚಮಚ
ಅಗಸೆ ಬೀಜಗಳು - 1 ಚಮಚ

ತಯಾರಿಸುವ ವಿಧಾನ
*ಅಗಸೆ ಬೀಜಗಳನ್ನು ಸ್ವಲ್ಪ ನೀರಿನಿಂದ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ಮಧ್ಯಮ ಶಾಖದಲ್ಲಿರುವಾಗ ಪುಡಿ ಮಾಡಿ. ನಂತರ ಆಡಿನ ಹಾಲು, ಅಲೋವೆರಾ ಜೆಲ್ ಮತ್ತು ತೆಂಗಿನ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
*ಇದನ್ನು ನಿಮ್ಮ ಕೂದಲಿಗೆ ಚೆನ್ನಾಗಿ ಉಜ್ಜಿ ಮತ್ತು 2-3 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
*ಕೂದಲ ರಕ್ಷಣೆಯಲ್ಲಿ ಆಡಿನ ಹಾಲನ್ನು ನಿಯಮಿತವಾಗಿ ಬಳಸುವುದರಿಂದ ಕೂದಲಿನ ಗುಣಮಟ್ಟ ಸುಧಾರಿಸುತ್ತದೆ. ಹೊಳಪು ಕೂಡ ಹೆಚ್ಚಾಗುತ್ತದೆ.












Click it and Unblock the Notifications