ಕಾರಿನ ಡ್ಯಾಶ್‌ಬೋರ್ಡ್ ಮೇಲೆ ದೇವರ ವಿಗ್ರಹ ಇಟ್ಟಿದಿರಾ? ಹಾಗಾದರೆ ಇದನ್ನು ಓದಿ
ಜೀವನ ಸಮೃದ್ಧಿಯಿಂದ ಕೂಡಿರಲು ದೇವರ ವಿಗ್ರಹವನ್ನು ಜನ ಮನೆಯಲ್ಲಿಟ್ಟು ಪೂಜಿಸುತ್ತಾರೆ. ದೇವರ ವಿಗ್ರಹವನ್ನು ಎಲ್ಲಿ ಇರಿಸಲಾಗುತ್ತದೆಯೋ ಅಥವಾ ದೇವರ ಹೆಸರನ್ನು ಎಲ್ಲಿ ಬರೆಯಲಾಗುತ್ತದೆಯೋ ಆ ಸ್ಥಳವು ಪವಿತ್ರವಾಗುತ್ತದೆ. ಅದೇ ರೀತಿ ವಾಹನ ಚಾಲನೆ ಮಾಡುವಾಗ ರಕ್ಷಣೆಯ ಭಾಗವಾಗಿ ಕಾರಿನ ಡ್ಯಾಶ್‌ಬೋರ್ಡ್ ಮೇಲೆ ದೇವರ ವಿಗ್ರಹ ಅಥವಾ ಫೋಟೋವನ್ನು ಇಡಲಾಗುತ್ತದೆ.
ಆದರೆ ಈ ರೀತಿ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ವಿಗ್ರಹ ಇಟ್ಟರೆ ಅದು ಶುದ್ಧ ಮತ್ತು ಪವಿತ್ರವಾಗಿರಲು ವಿಶೇಷ ಕಾಳಜಿ ವಹಿಸಬೇಕು. ಆಗ ಮಾತ್ರ ದೇವರ ಆಶೀರ್ವಾದ, ರಕ್ಷಣೆ ಸಿಗಲು ಸಾಧ್ಯ. ಹಾಗಾದರೆ ಕಾರಿನ ಡ್ಯಾಶ್‌ಬೋರ್ಡ್ ಮೇಲೆ ದೇವರ ವಿಗ್ರಹ ಇಡುವುದು ಸರಿಯೇ? ಜ್ಯೋತಿಷ್ಯದ ನಿಯಮಗಳು ಏನು ಎಲ್ಲವನ್ನೂ ತಿಳಿಯೋಣ.

ಕಾರು ಚಾಲನೆ ಮಾಡುವಾಗ ದೇವರ ರಕ್ಷಣೆ ಇರಲೆಂದು ಜನ ದೇವರ ವಿಗ್ರಹ ಹಾಗೂ ಫೋಟೋಗಳನ್ನು ವಾಹನದಲ್ಲಿಡುತ್ತಾರೆ. ಹೀಗೆ ಇಡುವುದರಿಂದ ಸಮಸ್ಯೆಗಳಿಲ್ಲ. ಆದರೆ ಆ ಸ್ಥಳ ಸ್ವಚ್ಚತೆಯಿಂದ ಇರುವಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ.
ಹೌದು ದೇವರ ವಿಗ್ರಹ ಅಥವಾ ಫೊಟೋ ಇಟ್ಟಿರುವ ಸ್ಥಳದಲ್ಲಿ ಯಾವುದೇ ಕೊಳಕು ಇರಬಾರದು. ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೊಳಕು ಕೈಗಳಿಂದ ದೇವರನ್ನು ಮುಟ್ಟಬಾರದು. ದೇವರಿಗೆ ಅವಮಾನವಾಗದಂತೆ ವಿಶೇಷ ಕಾಳಜಿ ವಹಿಸಬೇಕು. ದೇವರನ್ನು ಗೌರವಿಸುವುದರಿಂದ ಆತನ ಕೃಪೆಯು ಭಕ್ತರ ಮೇಲೆ ಇರುತ್ತದೆ.
ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ವಿಗ್ರಹವನ್ನು ಇಡುವುದಕ್ಕೆ ಜ್ಯೋತಿಷ್ಯ ನಿಯಮಗಳು:-
*ನಿಮ್ಮ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ಪ್ರತಿಮೆಯನ್ನು ಇರಿಸಿದ್ದರೆ, ಕಾರಿನಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯವನ್ನು ಸೇವಿಸದಂತೆ ಎಚ್ಚರ ವಹಿಸಿ.
*ದೇವರ ವಿಗ್ರಹದ ಮುಂದೆ ಕಾರಿನಲ್ಲಿ ಕುಳಿತಾಗ ಮಾಂಸಾಹಾರಿ ಆಹಾರವನ್ನು ಸೇವಿಸಬಾರದು
*ಕಾರಿನಲ್ಲಿ ಸಿಗರೇಟ್ ಸೇದಬಾರದು ಅಥವಾ ಮದ್ಯಪಾನ ಮಾಡಬಾರದು.

*ನಿಮ್ಮ ಕಾರನ್ನು ವಿಶೇಷವಾಗಿ ಡ್ಯಾಶ್‌ಬೋರ್ಡ್ ಅನ್ನು ಪ್ರತಿದಿನ ಸ್ವಚ್ಛಗೊಳಿಸಲು ಮರೆಯದಿರಿ.
*ವಾಸ್ತು ಶಾಸ್ತ್ರದ ಪ್ರಕಾರ ಕಾರಿನಲ್ಲಿ ಗಣೇಶನ ವಿಗ್ರಹವನ್ನು ಇಡುವುದು ಅತ್ಯಂತ ಮಂಗಳಕರ ಮತ್ತು ಉತ್ತಮವೆಂದು ಪರಿಗಣಿಸಲಾಗಿದೆ. ಗಣೇಶನನ್ನು ಅಡೆತಡೆಗಳನ್ನು ನಾಶಮಾಡುವವನೆಂದು ಪರಿಗಣಿಸಲಾಗುತ್ತದೆ.
*ವಾಯುಪುತ್ರ ಹನುಮಂತನ ವಿಗ್ರಹವನ್ನು ವಾಹನದಲ್ಲಿ ಇಡುವುದು ಕೂಡ ಶುಭ. ಕಾರಿನಲ್ಲಿ ಯಾವಾಗಲೂ ಹಾರುವ ಹನುಮಂತನ ವಿಗ್ರಹವನ್ನು ಇಟ್ಟುಕೊಳ್ಳಿ. ಹನುಮಂತನನ್ನು ವಾಯುವಿನ ಮೊದಲ ಅವತಾರವೆಂದು ಪರಿಗಣಿಸಲಾಗಿದೆ. ವಾಯುದೇವ ಗಾಳಿಯ ದೇವರು. ಕಾರು ಗಾಳಿಯ ವೇಗದಲ್ಲಿ ನಮ್ಮನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುತ್ತದೆ. ಅದಕ್ಕಾಗಿಯೇ ಕಾರಿನಲ್ಲಿ ಹನುಮಂತನ ವಿಗ್ರಹವನ್ನು ಇರಿಸಿದರೆ ತುಂಬಾ ಒಳ್ಳೆಯದು.












Click it and Unblock the Notifications