ವಿಶ್ವದಲ್ಲೇ ಸಂತೋಷವಾಗಿರುವ ದೇಶ ಯಾವುದು, ಇಲ್ಲಿನ ಲೈಫ್‌ಸ್ಟೈಲ್ ಹೇಗಿದೆ ?
ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆ ದುಡಿಬೇಕು ಕಣ್ರಯ್ಯ. ಆಗಲೇ ನಮ್ಮ ದೇಶ ಉದ್ಧಾರ ಆಗೋದು ಅಂತ ಹೇಳಿರುವ ವಿಚಾರ ಈಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಆದರೆ, ಇಲ್ಲೊಂದು ದೇಶ ಅಭಿವೃದ್ಧಿನೂ ಆಗಿದೆ. ಈ ದೇಶದಲ್ಲಿನ ತುಂಬಾ ಸಂತೋಷವಾಗೂ ಇದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಈ ದೇಶ ವಿಶ್ವದಲ್ಲೇ ಹ್ಯಾಪಿ ನೇಷನ್ ಆಗಿದೆ. ಅದು ಸಹ ಒಂದಲ್ಲ ಎರಡಲ್ಲ ಸತತ 7ಬಾರಿ. ಅದೇ ಫಿನ್‌ಲ್ಯಾಂಡ್ ಈ ದೇಶದ ರಾಜಕೀಯ ವ್ಯವಸ್ಥೆ ಹಾಗೂ ಕೆಲಸದ ಪದ್ಧತಿ, ಶಿಕ್ಷಣ ಹಾಗೂ ಆರೋಗ್ಯ ಎಲ್ಲವೂ ಸೂಪರ್ ಆಗಿದೆ. ಇಲ್ಲಿನ ಜನರ ಜೀವನ ಶೈಲಿ ಹಾಗೂ ಫಾಲೋಮಾಡುವ ಸಿಂಪಲ್ ಟಿಪ್ಸ್ ವಿಶ್ವದ ಉಳಿದ ರಾಷ್ಟ್ರಗಳಿಗೂ ಪ್ರೇರಣೆದಾಯಕವಾಗಿವೆ. ಹಾಗಾದರೆ, ಈ ದೇಶದ ವಿಶೇಷತೆ ಏನು, ಇಲ್ಲಿನ ಜನರ ಲೈಫ್‌ಸ್ಟೈಲ್ ಉಳಿದ ದೇಶಗಳಿಗಿಂತ ಯಾವ ರೀತಿ ಭಿನ್ನವಾಗಿವೆ ಎನ್ನುವುದು ಇಲ್ಲಿದೆ.
ವಿಶ್ವದ ವಿವಿಧ ದೇಶಗಳಲ್ಲಿ ಒತ್ತಡದ ಜೀವನ ಹೆಚ್ಚಾಗುತ್ತಿದೆ. ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ಹಾಗೂ ಕೆಲಸದ ಅವಧಿ ಜಾಸ್ತಿ ಆಗುತ್ತಿರುವುದರಿಂದ ಸಮಸ್ಯೆ ಆಗುತ್ತಿದೆ. ಆದರೆ, ಫಿನ್‌ಲ್ಯಾಂಡ್ ಇದಕ್ಕೆ ವಿರುದ್ಧವಾಗಿದೆ. ಇಲ್ಲಿನ ಜನ ವಿಶ್ವದಲ್ಲೇ ಅತ್ಯಂತ ಸಂತೋಷವಾಗಿದ್ದಾರೆ. ಫಿನ್‌ಲ್ಯಾಂಡ್ ದೇಶದ ಜನ ಸತತ 7 ಬಾರಿ ವಿಶ್ವದಲ್ಲಿ ಸಂತೋಷದಿಂದ ಇರುವ ರಾಷ್ಟ್ರಗಳ ಸಾಲಿನ ರ್ಯಾಂಕಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಈ ದೇಶದ ಲೈಫ್‌ಸ್ಟೈನ್‌ನ ಬಗ್ಗೆ ಎಲ್ಲರಿಗೂ ಅಚ್ಚರಿ ಇದೆ.

ಈ ದೇಶದಲ್ಲಿ ಜನ ಸಂತೋಷದಿಂದ ಇರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖ ಹಾಗೂ ಮುಖ್ಯ ಕಾರಣ ಎಂದರೆ ಇಲ್ಲಿನ ಕೆಲಸದ ಅವಧಿ. ಇಲ್ಲಿ ಜನ ಕೆಲಸ ಹಾಗೂ ವೈಯಕ್ತಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಾರೆ. ಪೋಷಕರು (ತಂದೆ - ತಾಯಿ ಆದವರು) ಅವರ ಕುಟುಂಬ ಹಾಗೂ ಮಕ್ಕಳೊಂದಿಗೆ ಕಾಲ ಕಳೆಯುವುದಕ್ಕೆ ರಜೆ ನೀಡಲಾಗುತ್ತದೆ. ಅಲ್ಲದೆ ಸಾಕಷ್ಟು ರಜೆ ನೀಡುವುದರಿಂದ ಇಲ್ಲಿನ ಉದ್ಯೋಗಿಗಳು ಅವರ ಮನೆಯವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತಾರೆ. ಇದು ಪರೋಕ್ಷವಾಗಿ ಕುಟುಂಬದ ಬಾಂಧವ್ಯ ವೃದ್ಧಿ ಆಗುವುದು ಹಾಗೂ ಉದ್ಯೋಗಿಗಳಿಗೆ ಕೆಲಸದಿಂದ ಆಗುವ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಇಲ್ಲಿನ ಶಿಕ್ಷಣ ಪದ್ಧತಿಯೂ ಉತ್ತಮವಾಗಿದೆ. ಅಂಗನವಾಡಿಯಿಂದ ಇಲ್ಲಿ ಪದವಿಯ ವರೆಗೆ ಜನ ಉಚಿತ ಶಿಕ್ಷಣ ಪಡೆಯುತ್ತಾರೆ. ಅಲ್ಲದೆ ಕೆಲವು ಪ್ರಮುಖ ಆರೋಗ್ಯ ಸೇವೆಗಳು ಸಹ ಉಚಿತವಾಗಿವೆ. ಅಲ್ಲದೆ ಉದ್ಯೋಗದಲ್ಲೂ ಇಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಉದ್ಯೋಗ ಅವಕಾಶಗಳು ಸಹ ಸಿಗುತ್ತವೆ.
ವಿಶ್ರಾಂತಿಗೆ ಒತ್ತು: ಇಲ್ಲಿನ ಜನ ಕೆಲಸದ ಜೊತೆ ಜೊತೆಗೆ ವೈಯಕ್ತಿಕ ಜೀವನ ಹಾಗೂ ವಿಶ್ರಾಂತಿಗೂ ಹೆಚ್ಚು ಸಮಯ ಕೊಡುತ್ತಾರೆ. ಅದೇ ಕಾರಣಕ್ಕೆ ಇಲ್ಲಿ ಕೆಲವು ಮಸಾಜ್ ಸೆಂಟರ್‌ಗಳು ಪ್ರಸಿದ್ಧವಾಗಿವೆ. ಅಲ್ಲದೆ ಇಲ್ಲಿ ಜನ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ. ಪರಸ್ಪರ ನೆರೆಹೊರೆಯವರೊಂದಿಗೆ ಜನ ಮಾತನಾಡುವುದು ಹಾಗೂ ಅಭಿಪ್ರಾಯ ಹಂಚಿಕೊಳ್ಳುವುದು ಇದೆ. ಇದು ಸೇರಿದಂತೆ ಹಲವು ಕಾರಣಕ್ಕೆ ಫಿನ್‌ಲ್ಯಾಂಡ್ ದೇಶದ ಲೈಫ್‌ಸ್ಟೈಲ್ ಭಿನ್ನವಾಗಿದೆ.












Click it and Unblock the Notifications