Egg Rice Recipe: ಮೊಟ್ಟೆ ವಾಸನೆ ಬಾರದಂತೆ 'ಎಗ್ ರೈಸ್' ತಯಾರಿಸುವ ವಿಧಾನ
ಮನೆಯಲ್ಲಿ ಎಗ್ ರೈಸ್ ಮಾಡಬೇಕು ಅಂದುಕೊಂಡಿದ್ದರೆ ನಿಮಗಾಗಿ ಇಲ್ಲಿದೆ ಸರಳ ವಿಧಾನ. ಸಾಮಾನ್ಯವಾಗಿ ಎಗ್‌ರೈಸ್ ಮನೆಯಲ್ಲಿ ಮಾಡುವಾಗ ಮೊಟ್ಟೆ ವಾಸನೆ ಬರುವುದು, ರುಚಿಯಾಗಿ ತಯಾರಿಸಲು ಕಷ್ಟವಾಗಬಹುದು. ಆದರೆ ಈ ವಿಧಾನವನ್ನು ನೀವು ಅನುಸರಿಸಿದರೆ ಮನೆಯಲ್ಲಿ ರುಚಿಯಾಗಿ ಮೊಟ್ಟೆ ವಾಸನೆ ಇಲ್ಲದೆ, ಅತ್ಯಂತ ಕಡಿಮೆ ಸಮಯದಲ್ಲಿ ಎಗ್‌ರೈಸ್ ತಯಾರಿಸಬಹುದು.
ಸಾಮಾನ್ಯವಾಗಿ ಮನೆಯಲ್ಲಿ ಮೊಟ್ಟೆ ತಯಾರಿಸುವ ಬದಲು ಹೊರಗಡೆ ತಿನ್ನಲು ಬಯಸುವ ಜನರೇ ಹೆಚ್ಚು. ಆದರೆ ಹೊರಗಿನ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಗೊತ್ತಿರುವ ವಿಚಾರ. ಹೀಗಾಗಿ ಮನೆಯಲ್ಲಿ ಕೆಲವೊಂದು ಪದಾರ್ಥ ಬಳಸಿ ಮಾಡುವ ಮೊಟ್ಟೆ ಅನ್ನ ತುಂಬಾ ರುಚಿಯಾಗಿರುತ್ತದೆ. ಜೊತೆಗೆ ಮೊಟ್ಟೆ ವಾಸನೆ ಕೂಡ ಬರುವುದಿಲ್ಲ. ಹಾಗಾದರೆ ತಡ ಮಾಡುವುದು ಬೇಡ ಮೊಟ್ಟೆ ರೈಸ್‌ಗೆ ಬೇಕಾಗುವ ಪದಾರ್ಥಗಳನ್ನು ಈಗ ತಿಳಿಯೋಣ.

ತಯಾರಿಸಲು ಬೇಕಾಗುವ ಪದಾರ್ಥಗಳು
* ಮೊಟ್ಟೆ 5
* ಅಕ್ಕಿ ಒಂದು ಕಪ್
* ಈರುಳ್ಳಿ 1
* ಕ್ಯಾಪ್ಸಿಕಮ್ 2
* ಟೊಮ್ಯಾಟೊ 1
* ಕರಿಬೇವು ಸ್ವಲ್ಪ
* ಕಾರದ ಪುಡಿ 1 ಟೇಬಲ್ ಸ್ಪೂನ್
* ದನಿಯಾ ಪುಡಿ ಅರ್ಧ ಟೇಬಲ್ ಸ್ಪೂನ್
* ಗರಂ ಮಸಲಾ ಪೌಡರ್ 1 ಟೇಬಲ್ ಸ್ಪೂನ್
* ಕಾಳು ಮೆಣಸು ಪೌಡರ್ 1 ಟೇಬಲ್ ಸ್ಪೂನ್
*ಅಡುಗೆ ಎಣ್ಣೆ 10 ಟೇಬಲ್ ಸ್ಪೂನ್
* ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
* ಮೊದಲು ಒಂದು ಕಪ್ ಅಕ್ಕಿಯನ್ನು ತೊಳೆದು ಉದುರಾಗುವಂತೆ ಅನ್ನವನ್ನು ತಯಾರಿಸಿ ತಣ್ಣಗಾಗಲು ಬಿಡಿ
* ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅಡುಗೆ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿಯಾಗಲು ಬಿಡಿ
* ಎಣ್ಣೆ ಬಿಸಿಯಾದ ನಂತರ ಚಿಕ್ಕದಾಗಿ ಉದ್ದವಾಗಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಬಾಡಿಸಿ
* ನಂತರ ಇದಕ್ಕೆ ಟೊಮ್ಯಾಟೊವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ
* ಬಳಿಕ ಇದಕ್ಕೆ ಉದ್ದವಾಗಿ ಹೆಚ್ಚಿದ ಕ್ಯಾಪ್ಸಿಕಮ್ ಹಾಕಿ ಸ್ವಲ್ಪ ಮಾತ್ರ ಫ್ರೈ ಮಾಡಬೇಕು.
* ಆಮೇಲೆ ಸ್ವಲ್ಪ ಕರಿಬೇವು, ಕಾರದ ಪುಡಿ, ದನಿಯಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
* ನಂತರ ಇದಕ್ಕೆ ಒಡೆದ ಐದು ಮೊಟ್ಟೆ ಹಾಕಿ ತಳ ಹಿಡಿಯದಂತೆ ಚೆನ್ನಾಗಿ ಕಲಸಿಕೊಳ್ಳಿ
* ಮೊಟ್ಟೆ ಸಂಪೂರ್ಣವಾಗಿ ಫ್ರೈ ಆಗಿ ಎಣ್ಣೆ ತೇಲುವಂತಾದರೆ ಮೊಟ್ಟೆ ಬೆಂದಿದೆ ಎಂದು ಭಾವಿಸಿ
* ಬಳಿಕ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಗರಂ ಮಸಲಾ ಪುಡಿ, ಕಾಳು ಮೆಣಸು ಪುಡಿ ಹಾಕಿ ಮಿಕ್ಸ್ ಮಾಡಿ
* ಆಮೇಲೆ ಅನ್ನವನ್ನು ಹಾಕಿ ಚೆನ್ನಾಗಿ ಕಲಸಿದರೆ ರುಚಿಯಾದ ಮೊಟ್ಟೆ ರೈಸ್ ಸವಿಯಲು ಸಿದ್ಧ












Click it and Unblock the Notifications