ದಾಸವಾಳ ಬರೀ ಹೂವಲ್ಲ ಇದು ಔಷಧೀಯ ಗುಣಗಳ ಭಂಡಾರ

ಮನೆಯಂಗಳದಲ್ಲಿ ಬೆಳೆಯುವ ದಾಸವಾಳ ಕೇವಲ ಹೂ ಬಿಟ್ಟು ಮನೆಗೆ ಶೋಭೆ ತರುವುದು ಮಾತ್ರವಲ್ಲದೆ, ಇದರ ಹೂವು, ಎಲೆ, ತೊಗಟೆ, ಬೇರು ಎಲ್ಲದರಲ್ಲೂ ಔಷಧೀಯ ಗುಣಗಳಿರುವುದು ಅದರ ಮಹತ್ವವೇನು ಎಂಬುದಕ್ಕೆ ಸಾಕ್ಷಿಯಾಗಿದೆ. ಮೊದಲೆಲ್ಲ ಮನೆಗಳಲ್ಲಿ ಅಲಂಕಾರದ ಬದಲಿಗೆ ಉಪಯೋಗಕ್ಕಿರಲಿ ಎಂದು ಹೂಗಿಡಗಳನ್ನು ನೆಡುತ್ತಿದ್ದರು. ಅದರಲ್ಲಿ ದಾಸವಾಳಕ್ಕೆ ಹೆಚ್ಚಿನ ಸ್ಥಾನ ನೀಡಲಾಗುತ್ತಿತ್ತು.

ಇವತ್ತು ಹಿಂದಿನ ಕಾಲದ ದಾಸವಾಳ ಹೂಗಿಡಗಳ ಬದಲಾಗಿ ಸುಧಾರಿತ ಗಿಡಗಳು ಬಂದಿದ್ದು ಅವು ಹೂಬಿಟ್ಟು ಆಕರ್ಷಿಸುತ್ತವೆ. ಆದರೆ ಹಿಂದಿನ ಕಾಲದ ಗಿಡಗಳು ಈಗಲೂ ಇದ್ದು ಅವು ಔಷಧೀಯ ಗುಣಗಳನ್ನು ಹೊಂದಿ ಗಮನಸೆಳೆಯುತ್ತಿವೆ. ಈ ದಾಸವಾಳದಿಂದ ಮನೆಗೆ ಮೆರಗು ತರುವ ಹೂವುಗಳು ಮಾತ್ರವಲ್ಲದೆ, ಯಾವ ರೀತಿಯಲ್ಲಿ ಆರೋಗ್ಯಕ್ಕೂ ಔಷಧಿಯಾಗಿದೆ ಎಂಬುದನ್ನು ನೋಡುತ್ತಾ ಹೋದರೆ ಇದರಲ್ಲಿರುವ ಔಷಧೀಯ ಗುಣಗಳು ಅಚ್ಚರಿ ಮೂಡಿಸುತ್ತವೆ.

Discover the Remarkable Medicinal Properties of Hibiscus Herb for Health and Wellness

ಮನುಷ್ಯರ ದೇಹವನ್ನು ತಂಪಾಗಿಸುವ ಗುಣ ಕೇವಲ ಹಣ್ಣು ತರಕಾರಿಯಲ್ಲಿ ಮಾತ್ರವಲ್ಲದೆ ಹೂಗಿಡಗಳಲ್ಲಿಯೂ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ದಾಸವಾಳವಂತು ಹತ್ತು ಹಲವು ರೀತಿಯಲ್ಲಿ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಇದು ಸುಂದರ ಹೂಗಳನ್ನು ನೀಡುವುದಲ್ಲದೆ, ಉತ್ತಮ ಆರೋಗ್ಯವನ್ನು ನೀಡುವಲ್ಲಿಯೂ ಸಹಕಾರಿ ಎಂಬುದನ್ನು ನಾವು ಮರೆಯಬಾರದು.

ಹೂ ಎಲೆ ಬೇರು ಸರ್ವ ವಿಧದಲ್ಲಿಯೂ ಉಪಕಾರಿ

ದಾಸವಾಳ ಹೂ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನರಿತು ಸಕಾಲದಲ್ಲಿ ಅದನ್ನು ಬಳಸಿಕೊಂಡಿದ್ದೇ ಆದರೆ ಹಲವು ರೋಗಗಳಿಂದ ದೂರವಿರಲು ಸಾಧ್ಯವಾಗಲಿದೆ. ದಾಸವಾಳದಲ್ಲಿ ಹಲವು ಜಾತಿಯ ಗಿಡಗಳಿದ್ದು ಅವುಗಳಲ್ಲಿ ಬಿಳಿದಾಸವಾಳ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಹೂ ಎಲೆ ಬೇರು ಸರ್ವ ವಿಧದಲ್ಲಿಯೂ ಉಪಯೋಗಕಾರಿಯಾಗಿದೆ. ದಾಸವಾಳದಲ್ಲಿ ತಂಪುಕಾರಕ ಗುಣಗಳು ಅಧಿಕ ಪ್ರಮಾಣದಲ್ಲಿರುವ ಕಾರಣ ಇದನ್ನು ಬೇಸಿಗೆಯ ದಿನಗಳಲ್ಲಿ ಬಳಸಿಕೊಳ್ಳುವುದು ಒಳ್ಳೆಯದು.

Discover the Remarkable Medicinal Properties of Hibiscus Herb for Health and Wellness

ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು ಸಹಜ. ಇದರಿಂದ ತಲೆನೋವು, ಉರಿಮೂತ್ರ, ಸಮರ್ಪಕವಾಗಿ ಮಲವಿಸರ್ಜನೆಯಾಗದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ. ತಲೆಯಲ್ಲಿ ಏನೋ ಭಾರವಾದಂತೆ ಕೆಲವೊಮ್ಮೆ ಭಾಸವಾಗುತ್ತಿರುತ್ತದೆ. ಜೊತೆಗೆ ತುರಿಕೆಯೂ ಕಾಣಿಸಿಕೊಳ್ಳಬಹುದು. ಇನ್ನು ದೇಹದ ಉಷ್ಣಾಂಶವು ಹೆಚ್ಚಾಗಬಹುದು ಇದನ್ನು ಕಡಿಮೆ ಮಾಡಿ ಹಗುರವಾಗಬೇಕಾದರೆ ದಾಸವಾಳದ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಅದನ್ನು ಕಿವುಚಿ ಎಲೆಗಳನ್ನು ಬೇರ್ಪಡಿಸಿ ಲೋಳೆಯಾದ ನೀರನ್ನು ಶೇಖರಿಸಿಟ್ಟುಕೊಂಡು ಸ್ನಾನ ಮಾಡುವ ವೇಳೆ ಮೊದಲಿಗೆ ಆ ನೀರನ್ನು ತಲೆಗೆ ಸುರಿದುಕೊಂಡರೆ ತಂಪಾದ ಅನುಭವವಾಗುತ್ತದೆ.

ಬಿಳಿದಾಸವಾಳದ ಬೇರು ಗರ್ಭಧಾರಣೆಗೆ ಸಹಕಾರಿ

ಒಂದೈದು ನಿಮಿಷಗಳ ಕಾಲ ನೀರು ಹಾಕಿ ತೊಳೆದು ಬಳಿಕ ಸ್ನಾನ ಮಾಡಿದರೆ ತಲೆಯೆಲ್ಲ ಹಗುರವಾಗುತ್ತದೆ. ದೇಹದಲ್ಲಿ ಉಲ್ಲಾಸವಿರುತ್ತದೆ. ಇದು ಕೂದಲು ಉದುರುವುದು, ಹೊಟ್ಟಿನ ಸಮಸ್ಯೆಗೂ ಸಹಕಾರಿಯಾಗುತ್ತದೆ. ಶಾಂಪುಗಳು ಇನ್ನೂ ಮಾರುಕಟ್ಟೆಯನ್ನು ಆಕ್ರಮಿಸದ ಕಾಲದಲ್ಲಿ ಹಳ್ಳಿಗಳಲ್ಲಿ ಹಿಂದಿನ ಕಾಲದವರು ಇದನ್ನೇ ಬಳಸುತ್ತಿದ್ದರು.

ದಾಸವಾಳದಲ್ಲಿ ಗರ್ಭವೃದ್ಧಿ ಮಾಡುವ, ಕೂದಲನ್ನು ಬೆಳೆಸುವ, ದಾಹ ತಣಿಸುವ, ಧಾತು ವೃದ್ಧಿಸುವ ಗುಣವೂ ಇದೆ ಎನ್ನಲಾಗುತ್ತಿದೆ. ಹೂಗಳು, ಬೇರು, ಎಲೆಗಳು ಉಪಯುಕ್ತವಾಗಿದ್ದು, ಎಲೆಗಳನ್ನು ಹಿಂಡಿ ಪ್ರತಿದಿನ ಐದಾರು ಚಮಚದಷ್ಟು ರಸವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಇನ್ನು ಇದೇ ರಸದೊಂದಿಗೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ. ಬಿಳಿದಾಸವಾಳದ ಬೇರನ್ನು ಹಸುವಿನ ಹಾಲಿನಲ್ಲಿ ಅರೆದು ಸೇವಿಸಿದರೆ ಗರ್ಭಧಾರಣೆಗೆ ಸಹಕಾರಿ.

ಬಿಳಿದಾಸವಾಳದಲ್ಲಿದೆ ಆರೋಗ್ಯಕಾರಿ ಗುಣ

ಬೇರಿನ ರಸವನ್ನು ಗೋಪಿ ಚಂದನದ ಜೊತೆ ಸೇವಿಸಿದರೆ ಗರ್ಭಸ್ರಾವ ತಡೆಯಲು ಸಾಧ್ಯವಾಗುತ್ತದೆ. ದಾಸವಾಳದ ಎಲೆಯನ್ನು ಅರೆದು ತಲೆಗೆ ಲೇಪಿಸಿದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ಬಿಳಿದಾಸವಾಳದ ಹೂವುಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಿಸಬಹುದಾಗಿದೆ. ಎಲೆ ಮತ್ತು ಹೂಗಳನ್ನು ಕಲ್ಲು ಸಕ್ಕರೆಯೊಂದಿಗೆ ಅರೆದು ಸೇವಿಸುತ್ತಾ ಬಂದರೆ ಹೊಟ್ಟೆಯಲ್ಲಿ ಕಾಣಿಸುವ ಕೆಲವೊಂದು ತೊಂದರೆಗಳು ಮಾಯವಾಗುವುವು.

ಹಳ್ಳಿಗಳಲ್ಲಿ ದಾಸವಾಳವನ್ನು ತಮ್ಮ ಮನೆಯ ಸುತ್ತ ನೆಟ್ಟು ಬೆಳೆಸುತ್ತಾರೆ. ಇವು ಸುಂದರ ಹೂಗಳನ್ನು ನೀಡುತ್ತಿದ್ದು, ಈ ಹೂಗಳು ದೇವರ ಪೂಜೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ದಾಸವಾಳದಲ್ಲಿರುವ ಔಷಧೀಯ ಗುಣಗಳನ್ನು ಅರಿತು ಅದನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+