Dal Khichdi Recipe: ದಾಲ್ ಕಿಚಡಿ ರೆಸಿಪಿ- ನೀವು ತಯಾರಿಸುವುದಕ್ಕಿಂತಲೂ ಇದು ವಿಭಿನ್ನ...
ಮನೆಯಲ್ಲಿ ಸಾಮಾನ್ಯವಾಗಿ ದಾಲ್ ಕಿಚಡಿ ನೀವೆಲ್ಲಾರೂ ತಯಾರಿಸುತ್ತೀರಿ. ಆದರೆ ಅದೆಷ್ಟೋ ಗೃಹಿಣಿಯರು ತಯಾರಿಸುವ ದಾಲ್ ಕಿಚಡಿ ಹೋಟೆಲ್ ರುಚಿಯನ್ನು ಹೊಂದಿರುವುದಿಲ್ಲ. ಹೀಗಂತ ಮನೆಯಲ್ಲಿ ನೀವು ತಯಾರಿಸುವ ಈ ಖಾದ್ಯವನ್ನು ಸೇವಿಸದೇ ಇರಬಹುದು. ಇದರಿಂದಾಗಿ ನೀವು ಚಿಂತೆ ಕೂಡ ಮಾಡಬಹುದು. ನೀವು ತಯಾರಿಸುವ ದಾಲ್ ಕಿಚಡಿ ರುಚಿಯಾಗಿ ಇಲ್ಲದೆ ಇದ್ದರೆ ನಾವು ಹೇಳುವ ಸಿಂಪಲ್ ಟಿಪ್ಸ್ ಅನ್ನು ಫಾಲೋ ಮಾಡಿ. ನಿಮ್ಮ ಮನೆಯ ಸದಸ್ಯರೆಲ್ಲರೂ ಈ ಖಾದ್ಯವನ್ನು ಮೆಚ್ಚಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಹಾಗಾದರೆ ತಡ ಮಾಡುವುದು ಬೇಡ. ಹೋಟೆಲ್ ಸ್ಟೈಲ್ ದಾಲ್ ಕಿಚಡಿ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ. ನೀವು ಒಮ್ಮೆ ಇದನ್ನು ಮನೆಯಲ್ಲಿ ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಮೊದಲಿಗೆ ದಾಲ್ ಕಿಚಡಿ ಮಾಡಲು ಬೇಕಾಗುವ ಪದಾರ್ಥಗಳು ಯಾವುವು ಎನ್ನುವ ಬಗ್ಗೆ ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಅಕ್ಕಿ ಒಂದು ಕಪ್
* ಹೆಸರು ಕಾಳು ಅರ್ಧ ಕಪ್
* ಹಸಿ ಮೆಣಸಿನಕಾಯಿ 5
* ಈರುಳ್ಳಿ 1
* ಟೊಮೆಟೋ 1
* ಕಾಳುಮೆಣಸು ಅರ್ಧ ಟೇಬಲ್ ಸ್ಪೂನ್
* ಒಣ ಕೊಬ್ಬರಿ ತಂಡುಗಳು
* ಜೀರಿಗೆ ಕಾಲ್ ಚಮಚ
* ಸಾಸಿವೆ ಕಾಲ್ ಚಮಚ
* ಮೊಸರು ಅರ್ಧ ಕಪ್
* ಕೊತ್ತಂಬರಿ ಸ್ವಲ್ಪ
* ಕರಿಬೇವು ಸ್ವಲ್ಪ
* ಉಪ್ಪು ರುಚಿಗೆ
* ಅರಿಶಿಣ ಕಾಲ್ ಚಮಚ
* ಒಣಮೆಣಸಿನಕಾಯಿ
* ಎಣ್ಣೆ 5 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:-
* ಒಂದು ಕುಕ್ಕರ್ ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ, ಕಾದ ಬಳಿಕ ಜೀರಿಗೆ, ಸಾಸಿವೆ ಹಾಕಿ ಚಟಪಟ ಅಂದ ಬಳಿಕ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿಕೊಳ್ಳಿ
* ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಹುರಿದು ಹೆಚ್ಚಿದ ಟೊಮೆಟೋ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ
* ಬಳಿಕ ಇದಕ್ಕೆ ಕಾಳುಮೆಣಸು, ಸಣ್ಣಗಿ ಹೆಚ್ಚಿದ ಒಣ ಕೊಬ್ಬರಿ ತುಂಡು, ಕರಿಬೇವು, ಅರಿಶಿಣ ಹಾಕಿ ಚೆನ್ನಾಗಿ ಕಲಸಿಕೊಳ್ಳಿ
* ನಂತರ ಇದಕ್ಕೆ ಐದು ಕಪ್ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಕುದಿಯಲು ಬಿಡಿ
* ಚೆನ್ನಾಗಿ ತೊಳೆದು ನೆನೆಸಿದ ಅಕ್ಕಿ ಹಾಗೂ ಹೆಸರು ಬೇಳೆಯನ್ನು ಕುದಿಯುವ ನೀರಿಗೆ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಉರಿಯನ್ನು ನಿಧಾನಗೊಳಿಸಿ (ಉರಿ ನಿಧಾನವಾಗಿಟ್ಟು ಕುಕ್ಕರ್ ನಾಲ್ಕು ವಿಸಿಲ್ ಹಾಕುವವರೆಗೂ ಬಿಡಿ)
* ಮತ್ತೊಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಇದಕ್ಕೆ ಎಣ್ಣೆ ಹಾಕಿ ಬಿಸಿ ಆದ ಬಳಿಕ ಜೀರಿಗೆ ಸಾಸಿವೆ ಒಣ ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಂಡು, ಇದು ಆರಿದ ಬಳಿಕ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ.
* ಎಲ್ಲವೂ ಆದ ಬಳಿಕ ಕುಕ್ಕರ ಮುಚ್ಚಳ ತೆಗೆದು ದಾಲ್ ಕಿಚಡಿಯನ್ನು ಚೆನ್ನಾಗಿ ಕಲಸಿಕೊಳ್ಳಿ (ಇದು ಗಟ್ಟಿಯಾಗಿರದೆ ತೆಳುವಾಗಿದ್ದಷ್ಟು ರುಚಿಯಾಗಿರುತ್ತದೆ)
* ಒಂದು ಬೌಲ್‌ಗೆ ದಾಲ್ ಕಿಚಡಿ ಹಾಕಿ, ಮೊಸರು ಹಾಕಿ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿರುಚಿಯಾದ ಹೋಟೆಲ್ ಸ್ಟೈಲ್ ದಾಲ್ ಕಿಚಡಿ ಸವಿಯಲು ಸಿದ್ಧ.












Click it and Unblock the Notifications