cold water: ನಿಮ್ಮ ಮನೆಯಲ್ಲಿನ ಹಳೆಯ ಮಣ್ಣಿನ ಮಡಿಕೆಯಲ್ಲಿ ನೀರು ತಣ್ಣಗಾಗದಿದ್ದರೆ ಈ ತಂತ್ರ ಬಳಸಿ; ಫ್ರಿಜ್‌ನಷ್ಟೇ ತಂಪಾಗುತ್ತದೆ
ಮನೆ ಬಿಟ್ಟು ಹೊರಗಡೆ ಕಾಲಿಟ್ಟರೆ ಸಾಕು ರಣ ಬಿಸಲು.. ಕಾಲು ಕಿತ್ತು ಎತ್ತಿ ಇಡಲಾರದಂತಹ ಸ್ಥಿತಿ. ಮಧ್ಯಾಹ್ನಾ ರಸ್ತೆಯಲ್ಲಿ ತಿರುಗಾಡುವುದು ಎಂದರೆ ಹಿಂಸೆ. ಬಿಸಿಲಿನಲ್ಲಿ ತಿರುಗಾಡಿ ಮನೆಗೆ ಬಂದಾಗ ತಣ್ಣನೆಯ ಒಂದು ಗ್ಲಾಸ್ ನೀರು ಸಿಕ್ಕರೆ ಪರಮಾನಂದ.
ಈಗ ಬೆಸೆಗೆಯ ಸಮಯ ಹೀಗಾಗಿಯೇ ಜನರು ಫ್ರಿಡ್ಜ್‌ಗಳ ಮೊರೆ ಹೋಗುತ್ತಾರೆ. ಇನ್ನು ಕೆಲವರು ಮಣ್ಣಿನ ಮಡಿಕೆಯಲ್ಲಿ ನೀರನ್ನು ಇಡುತ್ತಾರೆ. ಮಡಕೆಯ ನೀರು ತಣ್ಣಗಿರುವುದು ಮಾತ್ರವಲ್ಲದೆ ಕುಡಿಯಲು ತುಂಬಾ ಸಿಹಿಯಾಗಿರುತ್ತದೆ. ಮಣ್ಣಿನ ಮಡಿಕೆ ನೈಸರ್ಗಿಕವಾಗಿ ನೀರನ್ನು ಹೊರಗಿನ ತಾಪಮಾನದಿಂದ ರಕ್ಷಿಸುವ ಮೂಲಕ ತಂಪಾಗಿಸುತ್ತದೆ.

ಸಾಮಾನ್ಯವಾಗಿ ಮನೆಗಳಲ್ಲಿ ಆಯಾ ಋತುಮಾನಕ್ಕೆ ತಕ್ಕಂತೆ ವಸ್ತುಗಳನ್ನು ಸಹ ಬಳಸುತ್ತೇವೆ. ಮಣ್ಣಿನ ಮಡಿಕೆ ಇಟ್ಟುಕೊಂಡವರು, ವಸಂತ ಋತು ಕಳೆಯುತ್ತಿದ್ದಂತೆ ನೀಟಾಗಿ ಒರೆಸಿ, ಮೂಲೆಯಲ್ಲಿ ಇಡುತ್ತಾರೆ. ಅಲ್ಲದೆ ಈ ಮಡಿಕೆಗಳನ್ನು ಹೆಚ್ಚಾಗಿ ಜನರು ಬೆಸಿಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ತುಂಬಾ ವರ್ಷದಿಂದ ತಂದ ಮಡಿಕೆ ಈಗ ಅಷ್ಟಾಗಿ ಕೆಲಸ ಮಾಡುತ್ತಿಲ್ಲ ಎಂಬ ಬೇಸರ ಇದೆಯಾ. ಆ ಮಡಿಕೆಯನ್ನು ಒಗೆಯುವ ಮುನ್ನ ಈ ಸುದ್ದಿ ಓದಿ. ಈ ಸಲಹೆಗಳನ್ನು ಪಾಲಿಸಿದರೆ ಹಳೆಯ ಮಡಿಕೆಯಲ್ಲೂ ಸಹ ನೀರನ್ನು ತಂಪಾಗಿಸಬಹುದು.
ಹಳೆಯ ಮಡಿಕೆಗೆ ಹೊಸ ಟಚ್ ಹೇಗೆ?
ಸಾಮಾನ್ಯವಾಗಿ ಮನೆಗಳಲ್ಲಿ ಈಗ ಯಾವ ವಸ್ತು ಪ್ರಯೋಜನಕ್ಕೆ ಬರುವುದಿಲ್ಲವೋ ಅವನ್ನು ಎಸೆಯುತ್ತಾರೆ. ಏಕೆಂದರೆ ಈಗಿನ ಮನೆಗಳಲ್ಲಿ ಹಳೆಯ ವಸ್ತುಗಳನ್ನು ಇಟ್ಟುಕೊಳ್ಳಲು ಸಹ ಸ್ಪೇಸ್ ಕಡಿಮೆ ಇರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿನ ಮಣ್ಣಿನ ಮಡಿಕೆ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಈ ಸುಲಭಾ ಉಪಯಾಗಳನ್ನು ಅನುಸರಿಸಿ.

- ಹಳೆಯ ಮಡಕೆಯನ್ನು ನೀರಿನಲ್ಲಿ ನೆನಸಿ. ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಮಡಕೆಯ ಮೇಲೆ ಉಪ್ಪನ್ನು ಸಿಂಪಡಿಸಬೇಕು. ಆನಂತರ ಪಾತ್ರೆಯನ್ನು ತೊಳೆಯುವ ಸ್ಕಾಚ್ ಬ್ರೈಟ್ ಅನ್ನು ಬಳಸಿ ಉಪ್ಪಿನ ಮೇಲೆ ಉಜ್ಜಬೇಕು. ಇದರಿಂದ ಮಡಕೆಯ ಬದಿಗಳನ್ನು ಚೆನ್ನಾಗಿ ಸ್ವಚ್ಛವಾಗುತ್ತವೆ.
- ಹೀಗೆ ಮಾಡುವುದರಿಂದ ಮಡಿಕೆ ಹೊಸತರಂತೆ ಆಗುತ್ತದೆ. ಅಲ್ಲದೆ ಸಣ್ಣ ರಂಧ್ರಗಳಿರುತ್ತವೆ, ಅದರ ಮೂಲಕ ಆಮ್ಲಜನಕವು ಚೆನ್ನಾಗಿ ಹರಿಯುತ್ತದೆ
- ಮಡಿಕೆಯ ಒಳಗಡೆ ಒಂದು ಚಮಚ ಉಪ್ಪು ಹಾಗೂ ನೀರನ್ನು ಹಾಕಿ 15 ನಿಮಿಷ ಬಿಡಿ. ಇದರಲ್ಲಿ ಸ್ಕಾಚ್ ಬ್ರೈಟ್ ಅನ್ನು ಬಳಸಿ ತಿಕ್ಕಬೇಡಿ. ನಂತರ, ಶುದ್ಧ ನೀರಿನಿಂದ ಮಡಕೆಯನ್ನು 3-4 ಬಾರಿ ತೊಳೆಯಿರಿ. ಈಗ ನಿಮ್ಮ ಮಡಕೆಯನ್ನು ಒಣಗಿಸಿ ಮತ್ತು ನೀರಿನಿಂದ ತುಂಬಿಸಿ.
- ರಣ ಬಿಸಿಲು ಮಣ್ಣಿನ ಮಡಿಕೆಯ ಮೇಲೂ ಪ್ರಭಾವ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೊರಗಿನ ತಾಪಮಾನದಿಂದ ಮಡಿಕೆಯನ್ನು ರಕ್ಷಿಸಲು ಹತ್ತಿ ಬಟ್ಟೆಯನ್ನು ಬಳಸಿ. ಮಡಕೆಯನ್ನು ಹತ್ತಿ ಬಟ್ಟೆಯಿಂದ ಸುತ್ತಿ ಮತ್ತು ದಿನದಲ್ಲಿ ನಿಯಮಿತ ಮಧ್ಯಂತರದಲ್ಲಿ ಈ ಬಟ್ಟೆಯನ್ನು ಒದ್ದೆ ಮಾಡಿ. ಇದರಿಂದಾಗಿ ಪಾತ್ರೆಯಲ್ಲಿನ ನೀರು ಬಿಸಿಯಾಗುವುದಿಲ್ಲ.
- ಮಡಕೆಯನ್ನು ನೇರವಾಗಿ ನೆಲದ ಮೇಲೆ ಇಡಬೇಡಿ. ಹೀಗೆ ಮಾಡಿದರೆ ನೀರು ತಣ್ಣಗಾಗುವುದಿಲ್ಲ. ಬೆಸಿಗೆಯಲ್ಲಿ ಬಿಸಿ ನೆಲದ ಕಾರಣದಿಂದಾಗಿ ಮಡಕೆಯು ಕೆಳಗಿನಿಂದ ಬಿಸಿಯಾಗುತ್ತದೆ. ಆದ್ದರಿಂದ, ಮಡಕೆಯ ಸ್ಟ್ಯಾಂಡ್ ಮೇಲೆ ಇಡುವು ಒಳ್ಳೆಯದು.
ಈ ತಂತ್ರಗಳನ್ನು ಬಳಸುವುದರಿಂದ ಹಳೆಯ ಮಡಿಕೆಯಲ್ಲೂ ತಂಪಾದ ನೀರನ್ನು ಪಡೆಯಬಹುದು. ನಿಮ್ಮ ಮನೆಯಲ್ಲೂ ಹಳೆಯ ಮಣ್ಣಿನ ಮಡಿಕೆ ಇದ್ದರೆ ಒಮ್ಮೆ ಟ್ರೈ ಮಾಡಿ ನೋಡಿ..












Click it and Unblock the Notifications