Christmas Ice Cream Fruit Salad Recipe: ಕ್ರಿಸ್ಮಸ್ ಐಸ್‌ಕ್ರೀಮ್ ಫ್ರೂಟ್ಸ್ ಸಲಾಡ್ ರೆಸಿಪಿ- ಆರೋಗ್ಯದಿಂದ ಹಬ್ಬ ಆಚರಿಸಿ
ಕ್ರಿಸ್ಮಸ್ ಹಬ್ಬಕ್ಕೆ ರುಚಿಯಾಗಿ ಹಾಗೂ ಆರೋಗ್ಯಕರವಾಗಿರುವ ಖಾದ್ಯವನ್ನು ತಯಾರಿಸಬೇಕು ಅಂದುಕೊಂಡಿದ್ದರೆ ಐಸ್‌ಕ್ರೀಮ್ ಫ್ರೂಟ್ಸ್ ಸಲಾಡ್ ತಯಾರಿಸಿ. ಇದು ತಿನ್ನಲು ವಿಭಿನ್ನವಾದ ರುಚಿ ನೀಡುವುದು ಮಾತ್ರವಲ್ಲದೇ ನೋಡಲು ಕೂಡ ಕಲರ್‌ಫುಲ್ಲಾಗಿ ಕಾಣಿಸುತ್ತದೆ. ಜೊತೆಗೆ ಆರೋಗ್ಯಕರವಾಗಿಯೂ ಇರುತ್ತದೆ. ಹಾಗಾದರೆ ಯಾವೆಲ್ಲಾ ಹಣ್ಣುಗಳಿಂದ ಫ್ರೂಟ್ಸ್ ಸಲಾಡ್ ತಯಾರಿಸಬಹುದು? ಹೇಗೆ ತಯಾರಿಸಿದರೆ ಅದು ರುಚಿಯಾಗಿರುತ್ತದೆ ಎಂದು ತಿಳಿಯೋಣ.
ಸಾಮಾನ್ಯವಾಗಿ ಮದುವೆಗಳಲ್ಲಿ ಅಥವಾ ವಿಶೇಷ ದಿನಗಳಲ್ಲಿ ಫ್ರೂಟ್ಸ್ ಸಲಾಡ್ ತಯಾರಿಸಲಾಗುತ್ತದೆ. ವಿಶೇಷವಾಗಿ ಮನೆಯಲ್ಲಿ ಹಬ್ಬಕ್ಕೆ ಸ್ನೇಹಿತರನ್ನು ಹಾಗೂ ಸಂಬಂಧಿಕರನ್ನು ಆಹ್ವಾನಿಸಿದಾಗ ಕೆಲವು ಖಾದ್ಯಗಳು ನೀವು ಬಡಿಸುವ ಆಹಾರದ ಅಂದವನ್ನು ಹೆಚ್ಚಿಸುತ್ತವೆ. ಅದರಲ್ಲಿ ಐಸ್ ಕ್ರೀಮ್ ಫ್ರೂಟ್ಸ್ ಸಲಾಡ್ ಕೂಡ ಒಂದು. ಇದನ್ನು ತುಂಬಾ ರುಚಿಕರವಾಗಿ ತಯಾರಿಸಬೇಕು ಅಂದರೆ ಕೆಲ ಹಣ್ಣುಗಳನ್ನು ಮಾತ್ರ ಇದರಲ್ಲಿ ಬಳಸಬೇಕು. ಹಾಗಾದರೆ ಇದನ್ನು ತಯಾರಿಸಲು ಬೇಕಾಗುವ ಹಣ್ಣುಗಳು ಹಾಗೂ ಅದನ್ನು ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ.

ಬೇಕಾಗುವ ಹಣ್ಣುಗಳು:-
*ಕಿವಿ ಹಣ್ಣು 5
* ಸ್ಟ್ರಾಬರಿ ಹಣ್ಣು 5
* ಪಪ್ಪಾಯ 1
* ಪೈನಾಪಲ್ 1(ಚಿಕ್ಕ ಗಾತ್ರ)
* ಬಟರ್ ಫ್ರೂಟ್ 1(ಹಣ್ಣಾದ)
* ಆಪಲ್ 1
* ಚರಿ 10
* ಐಸ್‌ಕ್ರೀಮ್ 1 ಕಪ್ (ವೆನಿಲ್)
* ಗೋಡಂಬಿ 5
* ಜೇನು ತುಪ್ಪ (ಅಗತ್ಯವಿರುವಷ್ಟು)

ತಯಾರಿಸುವ ವಿಧಾನ:-
*ಮೊದಲಿಗೆ ಕಿವಿ ಹಣ್ಣನ್ನು ಅರ್ಧ ಚಂದ್ರನ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಇದನ್ನು ಐಸ್‌ಕ್ರೀಮ್ ಗ್ಲಾಸ್‌ನ ಸುತ್ತಲು ಇಡಿ.
* ಬಳಿಕ ಸ್ಟ್ರಾಬರಿ ಹಣ್ಣನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಅದನ್ನು ಕಿವಿ ಹಣ್ಣಿನ ಮೇಲೆ ಗ್ಲಾಸ್ ಸುತ್ತಲೂ ಸರಿಯಾಗಿ ಜೋಡಿಸಿ.
* ಇದಾದ ಬಳಿಕ ಪಪ್ಪಾಯ ಹಣ್ಣನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಂಡು ಗ್ಲಾಸ್ ಸುತ್ತಲು ಇರಿಸಿ. ನಂತರ ನಿಮಗಿಷ್ಟವಾದ ಐಸ್‌ಕ್ರೀಮ್ ಅನ್ನು ಹಾಕಿ.
* ಬಳಿಕ ಆಪಲ್ ಅನ್ನು ಮತ್ತೊಂದು ಆಕಾರದಲ್ಲಿ ಕತ್ತರಿಸಿ ಐಸ್‌ಕ್ರೀಮ್ ಮೇಲೆ ಇಡಿ.
* ನಂತರ ಪೈನಾಪಲ್, ಬಟರ್ ಫ್ರೂಟ್ ಕತ್ತರಿಸಿ ಅದರ ಮೇಲೆ ಗೋಪುರದ ಆಕಾರದಲ್ಲಿ ಇಟ್ಟು, ಅದರ ಮೇಲೆ ಚರಿಯನ್ನು ಹಾಕಿ ಗೋಡಂಬಿ ಹಾಕಿ ಜೇನು ತುಪ್ಪನ್ನು ಹಾಕಿದರೆ ರುಚಿಕರವಾದ ಕಲರ್‌ಫುಲ್ಲಾದ ಫ್ರೂಟ್ಸ್ ಸಲಾಡ್ ಸವಿಯಲು ಸಿದ್ಧ.
(ಗಮನಿಸಿ: ಸಲಾಡ್ ತಯಾರಿಸುವಾಗ ಎಲ್ಲಾ ಹಣ್ಣುಗಳನ್ನು ಬಳಸುವುದು ಅದರ ರುಚಿಯನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಕೆಲವು ಹಣ್ಣುಗಳು ಮಾತ್ರ ಸಲಾಡ್ ರುಚಿಯನ್ನು ಹೆಚ್ಚಿಸಲು ಸಾದ್ಯ ಎನ್ನುವುದನ್ನು ಗಮನದಲ್ಲಿ ಇಡಿ. ವಿಶೇಷವಾಗಿ ಸಲಾಡ್‌ಗೆ ಬಳಕೆ ಮಾಡುವ ಹಣ್ಣು ಮಾಗಿದ್ದರೆ ತುಂಬಾ ಒಳ್ಳೆಯದು)












Click it and Unblock the Notifications