ಬಿರು ಬೇಸಿಗೆಯಲ್ಲಿ ಈ ಆಹಾರಗಳನ್ನು ಒಂದೇ ಸಮನೆ ತಿನ್ನಬೇಡಿ... ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ...!
ದೇಶದಾದ್ಯಂತ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಈಗ ಶಾಖದ ಅಲೆ ಕೆಟ್ಟದಾಗಿದೆ. ತಾಪಮಾನ ಹೆಚ್ಚಾದಂತೆ ದೇಶಾದ್ಯಂತ ಹಲವು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅತಿಯಾದ ಬಿಸಿಲು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ಬಿಸಿ ವಾತಾವರಣದಲ್ಲಿ ನಾವು ಏನು ತಿನ್ನುತ್ತೇವೆ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ.
ಈ ಋತುವಿನಲ್ಲಿ ಕೆಲ ಆಹಾರ ಸಂಯೋಜನೆಗಳು ಹಾಗೂ ಬಿಡುವಿಲ್ಲದೆ ತಿನ್ನುವುದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡಬಹುದು. ಇದು ಆಲಸ್ಯ ಮತ್ತು ಅನಾನುಕೂಲತೆಯನ್ನು ಹೆಚ್ಚಿಸಬಹುದು. ಈ ಆಹಾರ ಪದ್ಧತಿ ಹೊಟ್ಟೆ ಉಬ್ಬುವುದು ಮತ್ತು ಇತರ ಅನೇಕ ಜೀರ್ಣಕಾರಿ ಸಮಸ್ಯೆಗಳನ್ನು ತರಬಹುದು. ಹಾಗಾದರೆ ಸರಿಯಾದ ಜೀರ್ಣಕ್ರಿಯೆ ಮತ್ತು ಉತ್ತಮ ಆರೋಗ್ಯ ಯೋಗಕ್ಷೇಮಕ್ಕಾಗಿ ಬೇಸಿಗೆಯ ತಿಂಗಳುಗಳಲ್ಲಿ ಯಾವ ಆಹಾರ ಸಂಯೋಜನೆಗಳನ್ನು ಪದೇ ಪದೇ ತಿನ್ನುವುದನ್ನು ತಪ್ಪಿಸಬೇಕು ಎಂಬುದನ್ನು ತಿಳಿಯೋಣ.

ಪೌಷ್ಠಿಕ ಅಪೌಷ್ಠಿಕ ಆಹಾರ
ಹೆಚ್ಚಿನ ಪ್ರೋಟೀನ್ ಹಣ್ಣುಗಳನ್ನು ಸೇವಿಸುವುದು ಬೇಸಿಗೆಯಲ್ಲಿ ಆರೋಗ್ಯಕರ ಆಯ್ಕೆಯಾಗಿದೆ. ಆದರೆ ಹಣ್ಣುಗಳನ್ನು ಅಪೌಷ್ಠಿಕ ಆಹಾರ ಅಂದರೆ ಜಂಕ್ ಫುಡ್ ನೊಂದಿಗೆ ಸಂಯೋಜಿಸಿ ಸೇವಿಸುವುದು ಉತ್ತಮ ಆಯ್ಕೆ ಅಲ್ಲ. ಇದು ಜೀರ್ಣಕ್ರಿಯೆಗೆ ಒತ್ತಡವನ್ನು ನೀಡಬಹುದು. ಹಣ್ಣುಗಳು ತ್ವರಿತವಾಗಿ ಜೀರ್ಣವಾಗುವ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ.
ಆದರೆ ಚೀಸ್ ಹಾಗೂ ಜಂಕ್ ಫುಡ್‌ಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಈ ಎರಡನ್ನು ಒಟ್ಟಿಗೆ ಸೇವಿಸಿದಾಗ ಅವು ಹೊಟ್ಟೆ ಊತ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಹೀಗಾಗಿ ಆರೋಗ್ಯಕರ ಹಣ್ಣುಗಳನ್ನು ತಿಂದು ಜಂಕ್ ಫುಡ್ ತಿಂದರೆ ಸಮತೋಲವಾಗುತ್ತದೆ ಎಂದು ಭಾವಿಸುವುದು ತಪ್ಪು.

ಹಣ್ಣು ಮತ್ತು ಪ್ಯಾಕ್ ಮಾಡಿದ ಜ್ಯೂಸ್
ಹಣ್ಣು ಅಥವಾ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ಬೇಸಿಗೆಯಲ್ಲಿ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ರಸಕ್ಕೆ ಪರಿಮಳವನ್ನು ಸೇರಿಸಿದರೆ ಅಥವಾ ಪ್ಯಾಕ್ ಮಾಡಿದ ಜ್ಯೂಸ್ ಸೇವಿಸುವುದು ಬೇಸಿಗೆಯಲ್ಲಿ ಜೀರ್ಣಕ್ರಿಯೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮೇಲಿಂದ ಮೇಲೆ ಯಾವುದೇ ಆಹಾರ ತಿನ್ನುವುದು ಅದರೊಂದಿಗೆ ಪ್ಯಾಕ್ ಮಾಡಿದ ಜ್ಯೂಸ್ ಕುಡಿಯುವುದನ್ನು ತಪ್ಪಿಸಿ.
ಕಲ್ಲಂಗಡಿ ಮತ್ತು ಹಾಲು
ಕಲ್ಲಂಗಡಿ ಬೇಸಿಗೆಯಲ್ಲಿ ತಿನ್ನಲೇಬೇಕಾದ ಹಣ್ಣುಗಳಲ್ಲಿ ಒಂದಾಗಿದೆ. ಆದರೆ ಡೈರಿ ಉತ್ಪನ್ನಗಳೊಂದಿಗೆ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಜೀರ್ಣಕ್ರಿಯೆಯನ್ನು ಅಸಮಾಧಾನಗೊಳಿಸುತ್ತದೆ. ಇದು ಗ್ಯಾಸ್ ಮತ್ತು ಉಬ್ಬುವಿಕೆಯನ್ನು ಉಂಟುಮಾಡುತ್ತದೆ.
ಆಹಾರ ಮತ್ತು ತಂಪು ಪಾನೀಯಗಳು
ಬೇಸಿಗೆಯಲ್ಲಿ ತಂಪಾಗಿರಲು ತಂಪು ಪಾನೀಯ ಸುಲಭವಾದ ಮಾರ್ಗವಾಗಿದೆ. ಆದರೆ ಆಹಾರದೊಂದಿಗೆ ತಂಪು ಪಾನೀಯಗಳನ್ನು ಕುಡಿಯುವುದು ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ಜೀರ್ಣಕ್ರಿಯೆಯನ್ನು ಬೆಂಬಲಿಸಲು, ಊಟದ ನಂತರ ಕೊಂಚ ಬೆಚ್ಚಗಿನ ಪಾನೀಯಗಳನ್ನು ಆಯ್ಕೆಮಾಡುವುದು ಉತ್ತಮ. ಜೊತೆಗೆ ಊಟದ ನಡುವೆ ತಂಪು ಪಾನೀಯಗಳನ್ನು ತಪ್ಪಿಸುವುದು ಪ್ರಯೋಜನಕಾರಿಯಾಗಿದೆ.
ಆಮ್ಲೀಯ ಹಣ್ಣುಗಳು ಮತ್ತು ಸಿಹಿ ಹಣ್ಣುಗಳು
ಬಾಳೆಹಣ್ಣಿನಂತಹ ಸಿಹಿ ಹಣ್ಣುಗಳೊಂದಿಗೆ ಕಿತ್ತಳೆ ಅಥವಾ ಅನಾನಸ್‌ನಂತಹ ಆಮ್ಲೀಯ ಹಣ್ಣುಗಳನ್ನು ತಿನ್ನುವುದು ಜೀರ್ಣಕಾರಿ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಬೇಸಿಗೆಯಲ್ಲಿ ಹಣ್ಣುಗಳ ಪ್ರಯೋಜನಗಳನ್ನು ಪಡೆಯಲು ಆಮ್ಲೀಯತೆ ಹೊಂದಿರುವ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿರಿ.












Click it and Unblock the Notifications