Bellulli Kabab: ಮನೆಯಲ್ಲಿಯೇ ಸುಲಭವಾಗಿ ಮಾಡಿ ಸಕತ್ ಟೆಸ್ಟಿ, ಟ್ರೆಂಡಿ 'ಬೆಳ್ಳುಳ್ಳಿ ಕಬಾಬ್'

ಈಗ ಎಲ್ಲಿ ನೋಡಿದರೂ ಕೂಡ 'ಬೆಳ್ಳುಳ್ಳಿ ಕಬಾಬ್'ದೆ ಸುದ್ದಿ. ಕಬಾಬ್‌ನಲ್ಲಿ ಸಾಕಷ್ಟು ವಿಧಗಳಿವೆ. ವೆಜ್, ನಾನ್ ವೆಜ್ ಸೇರಿ ಹಲವು ರೀತಿಯ ಕಬಾಬ್‌ಗಳಿದ್ದು, ಇದಕ್ಕೆ ಸದ್ಯ ಬೆಳ್ಳುಳ್ಳಿ ಕಬಾಬ್ ಹೊಸ ಸೇರ್ಪಡೆಯಾಗಿದೆ. ಬಾಣಸಿಗ ಚಂದ್ರು ಅವರ ವಿಡಿಯೋಗಳು ಸಕತ್ ಟ್ರೆಂಡ್ ಸೃಷ್ಟಿ ಮಾಡಿದ ಹಾಗೆಯೇ ಅವರ 'ಬೆಳ್ಳುಳ್ಳಿ ಕಬಾಬ್' ಕೂಡ ಸಕತ್ ಟ್ರೆಂಡಿಂಗ್‌ನಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಎಲ್ಲಿ ನೋಡಿದರೂ ಚಂದ್ರು ಬೆಳ್ಳುಳ್ಳಿ ಕಬಾಬ್ ವಿಡಿಯೋ ಕಾಣಿಸುತ್ತಿದೆ. ತುಂಬಾ ಸರಳವಾಗಿ ಹಲವು ರೆಸಿಪಿಗಳನ್ನು ಇವರು ಹೇಳಿಕೊಡುತ್ತಾರೆ. ಅದರಲ್ಲಿ ಬೆಳ್ಳುಳ್ಳಿ ಕಬಾಬ್ ಕೂಡ ಒಂದು. ಹಲವು ಮಂದಿ ಈ 'ಬೆಳ್ಳುಳ್ಳಿ ಕಬಾಬ್' ಅನ್ನು ಟ್ರೈ ಮಾಡುತ್ತಿದ್ದು, ನೀವು ಒಮ್ಮೆ ಟ್ರೈ ಮಾಡಿ. ಅದರ ಸುಲಭ ವಿಧಾನ ಇಲ್ಲಿದೆ.

Bellulli Kabab Recipe: How to prepare trending and sensation Bellulli Kabab in home

ಚಂದ್ರು ಸ್ಟೈಲ್ ಬೆಳ್ಳುಳ್ಳಿ ಕಬಾಬ್ ಮಾಡಲು ಬೇಕಾದ ಪದಾರ್ಥಗಳು

* ಒಂದೂವರೆ ಕೆಜಿ ಚಿಕನ್‌

*ನಾಲ್ಕು ಬೆಳ್ಳುಳ್ಳಿ

* ಹನ್ನೇರಡು ಹಸಿ ಮೆಣಸಿನ ಕಾಯಿ

* ಸ್ವಲ್ಪ ಶುಂಠಿ

* ಕರಿಬೇವಿನ ಸೋಪ್ಪು

* ನಾಲ್ಕು ಲವಂಗ, ಒಂದು ತುಂಡು ಚಕ್ಕೆ

* ನಾಲ್ಕು ಸ್ಪೂನ್ ಜೋಳದ ಹಿಟ್ಟು

* ಒಂದು ಅಥವಾ ಎರಡು ಸ್ಪೂನ್ ಮೈದಾ

* ಒಂದು ಸ್ಪೂನ್ ಅಕ್ಕಿ ಹಿಟ್ಟು

*ಒಂದು ಸ್ಪೂನ್ ಕಡಲೇಹಿಟ್ಟು

* ಸ್ವಲ್ಪ ಅರಿಶಿಣ ಪುಡಿ

* ಒಂದು ಮೊಟ್ಟೆ

* ಒಂದು ಸಣ್ಣ ಬಟ್ಟಲು ಮೊಸರು

* ಸ್ವಲ್ಪ ಕಸ್ತೂರಿ ಮೇಥಿ

* ಕಬಾಬ್ ಕರಿಯಲು ಎಣ್ಣೆ

ಬೆಳ್ಳುಳ್ಳಿ ಕಬಾಬ್ ಮಾಡಲು ಮೊದಲು ಒಂದು ಪೇಸ್ಟ್ ತಯಾರಿಸಬೇಕು. ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಕರಿಬೇವು, ಹಸಿಮೆಣಸಿನ ಕಾಯಿಯನ್ನು ಹಾಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಕೊಂಡು ರೆಡಿ ಮಾಡಿಕೊಳ್ಳಬೇಕು.

ಬೆಳ್ಳುಳ್ಳಿ ಕಬಾಬ್ ಮಾಡುವ ವಿಧಾನ

ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಜೋಳದ ಹಿಟ್ಟು, ಅಕ್ಕಿಹಿಟ್ಟು, ಮೈದಾ ಹಿಟ್ಟು, ಕಡಲೇಹಿಟ್ಟು, ಕಸ್ತೂರಿ ಮೇಥಿ, ಅರಿಶಿಣ, ಎಣ್ಣೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ರುಬ್ಬಿಕೊಂಡ ಮಸಾಲೆ ಮಿಶ್ರಣವನ್ನು ಸೇರಿಸಬೇಕು. ಚೆನ್ನಾಗಿ ಮಿಕ್ಸ್ ಮಾಡಿದ ಮಿಶ್ರಣಕ್ಕೆ ಒಂದು ಮೊಟ್ಟೆ ಸೇರಿಸಬೇಕು. ನೀರು ಬಳಸಬಾರದು.

Bellulli Kabab Recipe: How to prepare trending and sensation Bellulli Kabab in home

ಈ ಮಿಶ್ರಣಕ್ಕೆ ಚೆನ್ನಾಗಿ ತೊಳೆದ ಚಿಕನ್ ಹಾಕಿ ಚೆನ್ನಾಗಿ ಕಲಸಬೇಕು. ಬಳಿಕ ಇದನ್ನು ಅರ್ಧ ಗಂಟೆ ಮ್ಯಾರಿನೇಟ್ ಮಾಡಬೇಕು. ಮ್ಯಾರಿನೇಟ್ ಆದ ಚಿಕನ್ ಅನ್ನು ಕಾದ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಬೇಕು. ಒಮ್ಮೆ ಫ್ರೈ ಮಾಡಿದ ಬಳಿಕ ತೆಗೆದು ಅದು ತನ್ಣಗಾದ ಬಳಿಕ ಮತ್ತೊಮ್ಮೆ ಎನ್ಣೆಯಲ್ಲಿ ಕರಿಯಬೇಕು. ಇದರ ಮೇಲೆ ಕೊಂಚ ಕರಿಬೇವು ಕೂಡ ಹಾಕಿಕೊಳ್ಳಬೇಕು. ಚೆನ್ನಾಗಿ ಕರಿದ ಮೇಲೆ ಎಣ್ಣೆಯಿಂದ ಹೊರ ತೆಗೆದು ಬಿಸಿ ಬಿಸಿಯಾದ ಬೆಳ್ಳುಳ್ಳಿ ಕಬಾಬ್ ಸವಿಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+