Banana Bread Bajji Recipe: ಮಳೆ ಮೋಡ ನಡುವೆ ಬಿಸಿ ಬಿಸಿ ಬಾಳೆಕಾಯಿ ಬ್ರೆಡ್ ಬಜ್ಜಿ ತಿಂದರೆ ಆಹಾ... ಅದ್ಬುತ!
ನಿಮ್ಮ ಮಕ್ಕಳು ಸಂಜೆ ತಿಂಡಿ ಕೇಳಿದರೆ ಏನ್ ಮಾಡೋದು ಅಂತ ಯೋಚನೆ ಆಗುತ್ತಾ? ನಿಮ್ಮ ಮನೆಯಲ್ಲಿ ಬ್ರೆಡ್, ಬಾಳೆಹಣ್ಣು ಮತ್ತು ಗೋಧಿ ಹಿಟ್ಟು ಇದ್ದರೆ ಈ ತಿಂಡಿಯನ್ನು ಒಮ್ಮೆ ಟ್ರೈ ಮಾಡಿ.
ಈ ಬಾಳೆಹಣ್ಣಿನ ಬ್ರೆಡ್ ಬಜ್ಜಿ ಮಾಡುವುದು ತುಂಬಾ ಸುಲಭ. ಮಕ್ಕಳಿಂದ ವಯಸ್ಸಾದವರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಮುಖ್ಯವಾಗಿ ಈ ಬ್ರೆಡ್ ಬಜ್ಜಿಯನ್ನು ಸಂಜೆಯ ತಿಂಡಿಯಾಗಿ ಮಾತ್ರವಲ್ಲದೆ ಬೆಳಗಿನ ಉಪಾಹಾರವಾಗಿಯೂ ಸೇವಿಸಬಹುದು. ಇದಲ್ಲದೇ ಈ ಬಾಳೆಹಣ್ಣಿನ ಬ್ರೆಡ್ ಬಜ್ಜಿಗಳನ್ನು ಮಕ್ಕಳೊಂದಿಗೆ ಶಾಲೆಗೆ ಟಿಫನ್ ಬಾಕ್ಸ್‌ನಲ್ಲೂ ಕಳುಹಿಸಬಹುದು.

ಹಾಗಾದರೆ ತಡ ಮಾಡುವುದು ಬೇಡ ಬಾಳೆಹಣ್ಣಿನ ಬ್ರೆಡ್ ಬಜ್ಜಿಯನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ. ನೀವು ಕೂಡ ಮನೆಯಲ್ಲಿ ಬಾಳೆಕಾಯಿ ಬಜ್ಜಿಯನ್ನು ತಯಾರಿಸಿ, ಅದರ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಅಗತ್ಯವಿರುವ ವಸ್ತುಗಳು:
* ಚೆನ್ನಾಗಿ ಮಾಗಿದ ಬಾಳೆಹಣ್ಣು - 2
* ಗೋಧಿ ಹಿಟ್ಟು - 1 ಕಪ್
* ಉಪ್ಪು - 1/4 ಟೀಸ್ಪೂನ್
* ಸಕ್ಕರೆ - 2 ಟೇಬಲ್ ಸ್ಪೂನ್
* ಹಾಲು - ಅಗತ್ಯವಿರುವ ಪ್ರಮಾಣ
* ಸೋಡಾ ಉಪ್ಪು - 1 ಚಿಟಿಕೆ
* ಬ್ರೆಡ್ - 5 ತುಂಡುಗಳು
* ಎಣ್ಣೆ - ಕರಿಯಲು ಬೇಕಾದ ಪ್ರಮಾಣ

ಪಾಕವಿಧಾನ:
* ಮೊದಲು ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಮಿಕ್ಸರ್ ಜಾರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ.
* ನಂತರ ಇದಕ್ಕೆ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಹಾಲು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
* ನಂತರ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಇದು ಬಜ್ಜಿ ಹಿಟ್ಟಿನ ಹದಕ್ಕೆ ಇರಬೇಕು.
* ನಂತರ ಅದಕ್ಕೆ ಸೋಡಾ ಹಾಕಿ ಮಿಕ್ಸ್ ಮಾಡಿ. 20 ನಿಮಿಷ ಪಾತ್ರೆ ಮುಚ್ಚಿ ಬಿಟ್ಟುಬಿಡಿ.
* ನಂತರ ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ಎರಡು ತುಂಡುಗಳಾಗಿ ಕತ್ತರಿಸಿ.
* ನಂತರ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
* ಎಣ್ಣೆ ಬಿಸಿಯಾದಾಗ ಬ್ರೆಡ್ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ ಒಂದೊಂದಾಗಿ ತೆಗೆದುಕೊಂಡು ಎಣ್ಣೆಯಲ್ಲಿ ಬಿಡಿ. ಎಣ್ಣೆಯಲ್ಲಿ ಬ್ರೆಡ್ ಹಾಕಿ ಮಧ್ಯಮ ಉರಿಯಲ್ಲಿ ಇಟ್ಟು ಹೊಂಬಣ್ಣ ಬರುವವರೆಗೆ ಕರಿದರೆ ಬನಾನಾ ಬ್ರೆಡ್ ಬಜ್ಜಿ ಸವಿಯಲು ಸಿದ್ಧ.












Click it and Unblock the Notifications