Mangoes: ಮಾವಿನಹಣ್ಣು ಖರೀದಿ ಮಾಡುವಾಗ 3 ತಪ್ಪು ಮಾಡ್ಬೇಡಿ! ಈ 6 ಟ್ರಿಕ್ಸ್ ತಿಳ್ಕೊಂಡಿರಿ
Mangoes: ಬೇಸಿಗೆ ಆರಂಭವಾಗುತ್ತಿದ್ದಂತೆ, ಮಾವಿನ ಹಣ್ಣುಗಳು ಭಾರತದಾದ್ಯಂತ ಮಾರುಕಟ್ಟೆಗಳಿಗೆ ಬರುತ್ತಿದೆ. ಆದರೆ ಅವೆಲ್ಲವೂ ಕಣ್ಣಿಗೆ ಕಾಣುವಷ್ಟು ಸುರಕ್ಷಿತ ಅಲ್ಲ. ಹಣ್ಣನ್ನು ರಾಸಾಯನಿಕವಾಗಿ ಹಣ್ಣಾಗಿಸಿ ಸಾವಯವ ಎಂಬ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿದೆ. ಮಾವಿನ ಹಣ್ಣುಗಳನ್ನು ಖರೀದಿ ಮಾಡುವ ಮೊದಲು ಆಕರ್ಷಕವಾಗಿ ಮತ್ತು ಹೊಳಪನ್ನು ಹೊಂದಿರುತ್ತದೆ ಆದರೆ ಇದರಿಂದ ಆರೋಗ್ಯಕ್ಕೆ ತುಂಬಾ ಪರಿಣಾಮ ಬೀರುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಸಮಸ್ಯೆಯ ಬಗ್ಗೆ ಮಾತನಾಡಿರುವ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್, ಲಾಭದ ಮೋಹದಿಂದ ಕೆಲವು ವ್ಯಾಪಾರಿಗಳು ಈ ತರಹ ಮಾಡುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣಾಗಲು ಬಿಡುವ ಬದಲು, ಅವರು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ ಇದರಿಂದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ ಇದು ಆರೋಗ್ಯಕ್ಕೆ ಅಪಾಯಕಾರಿ ಆಗಿದೆ.

ಮಾವಿನ ಹಣ್ಣುಗಳು ತಾಜಾತನದಿಂದ ಮತ್ತು ಸಂಪೂರ್ಣವಾಗಿ ಹಣ್ಣು ಆಗಿದೆ ಎಂದು ಬಾವಿಸಿಕೊಂಡು ಖರೀದಿ ಮಾಡಿದರೆ ನಿಮ್ಮ ಮನೆಗೆ ನೀವೇ ಹಾನಿಕಾರಕವಾದ ರಾಸಾಯನಿಕಗಳನ್ನು ತಂದಂತಾಗುತ್ತದೆ.
ಕೃತಕವಾಗಿ ಮಾಗಿದ ಹಣ್ಣುಗಳನ್ನು ಗುರುತಿಸುವುದು ಹೇಗೆ?
ಹಣ್ಣಿನ ಬಣ್ಣ: ನೈಸರ್ಗಿಕವಾಗಿ ಮಾಗಿದ ಹಣ್ಣುಗಳು ಒಂದೆರೂಪದ ಬಣ್ಣಗಳನ್ನು ಹೊಂದಿರುವುದಿಲ್ಲ. ಅವು ಹಸಿರು, ಹಳದಿ, ಮತ್ತು ಕೇಲವೊಮ್ಮೆ ಕೆಂಪು ಛಾಯೆಗಳ ಮಿಶ್ರಣವನ್ನು ಹೊಂದಿರುತ್ತವೆ.
ಕೃತಕವಾದ ಹಣ್ಣು: ಕೃತಕವಾಗಿ ಮಾಗಿದ ಮಾವಿನ ಹಣ್ಣು ಸಾಮಾನ್ಯವಾಗಿ ಒಂದೆತರನಾಗಿ ಕಾಣುತ್ತವೆ. ಹಳದಿ ಬಣ್ಣದಲ್ಲಿ ತುಂಬಾ ಹೊಳಪಿನಿಂದ ಕಾಣುತ್ತವೆ. ಈ ತರಹದ ಮಾವಿನ ಹಣ್ಣುಗಳು ಹೊರಗೆ ಮಾಗಿದಂತೆ ಕಾಣಿಸಬಹುದು, ಆದರೆ ಒಳಗೆ ತುಂಬಾ ಗಟ್ಟಿಯಾಗಿ ಇರುತ್ತದೆ.
ಹಣ್ಣಿನ ವಾಸನೆ: ಹಣ್ಣಿನ ವಾಸನೆಯಲ್ಲಿ ಅಸಹಜವಾದ ಅಥವಾ ರಾಸಾಯನಿಕ ವಾಸನೆ ಕಂಡುಬಂದರೆ ಎಚ್ಚರಿಕೆಯಿಂದ ಇರಬೇಕು.
ಹಣ್ಣಿನ ಸಿಪ್ಪೆ: ಹಣ್ಣಿನ ಸಿಪ್ಪೆಯ ಮೇಲೆ ವಿಚಿತ್ರ ಕಲೆಗಳು ಅಥವಾ ತೇಪೆಗಳು ಇದ್ದರೆ ಅದು ಕೃತಕವಾಗಿ ಅಂದರೆ ರಾಸಾಯನಿಕಗಳನ್ನು ಬಳಸಿ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ.
ಅಡುಗೆ ಸೋಡಾದಿಂದ ಪರೀಕ್ಷೆ: ಅಡುಗೆ ಸೋಡಾ ನೀರಿನಲ್ಲಿ ಹಣ್ಣುಗಳನ್ನು ತೊಳೆದಾಗ ಬಣ್ಣ ಅಸಾಮಾನ್ಯವಾಗಿ ಬದಲಾದರೆ ರಾಸಾಯನಿಕ ಬಳಸಲಾಗಿದೆ ಎಂದರ್ಥ.
ರುಚಿಯ ಎಚ್ಚರಿಕೆ: ವಿಚಿತ್ರ ಅಥವಾ ಕಹಿಯಾದ ರುಚಿ ಇದ್ದರೆ ತಕ್ಷಣ ಸೇವನೆ ಮಾಡದೆ ಇರುವುದು ಉತ್ತಮ. ಇವೆ ರಾಸಾಯನಿಕವಾಗಿ ಮಾಗಿದ ಹಣ್ಣುಗಳನ್ನು ಗುರುತಿಸಲು ಸುಲಭ ಮಾರ್ಗಗಳಾಗಿವೆ.
ಆರೋಗ್ಯದ ಮೇಲೆ ದುಷ್ಪರಿಣಾಮ ಏನು?
ರಾಸಾಯನಿಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಸೇವಿಸುವುದರಿಂದ ಗಂಟಲಿನಲ್ಲಿ ಕಿರಿಕಿರಿ, ವಾಕರಿಕೆ, ವಾಂತಿ ಮತ್ತು ಅತಿಸಾರದಂತಹ ತಕ್ಷಣದ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ದೀರ್ಘಾವಧಿಯಲ್ಲಿ ನರಮಂಡಲದ ತೊಂದರೆ, ಉಸಿರಾಟದ ತೊಂದರೆಗಳಂತಹ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೂ ಇದೆ.
ಆದ್ದರಿಂದ, ಮಾವಿನ ಹಣ್ಣುಗಳನ್ನು ಖರೀದಿಸುವಾಗ ಕೇವಲ ಅದರ ರೂಪಕ್ಕೆ ಮೋಸ ಹೋಗದೇ, ಸ್ವಲ್ಪ ಜಾಗರೂಕತೆ ಎಚ್ಚರ ವಹಿಸುವುದು ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಸಹಕಾರಿಯಾಗಿದೆ.












Click it and Unblock the Notifications