ನೆಲ್ಲಿಕಾಯಿ ನೀರಿನಿಂದ ದಿನಾರಂಭ: ಜೀರ್ಣಕ್ರಿಯೆಯಿಂದ ತೂಕ ಇಳಿಕೆವರೆಗೆ ಪ್ರಯೋಜನಗಳು
ನೆಲ್ಲಿಕಾಯಿಯಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುತ್ತದೆ. ಇದರೊಂದಿಗೆ ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ಕ್ಯಾಲ್ಷಿಯಂ, ಫಾಸ್ಪರಸ್, ಪೊಟಾಶಿಯಂ, ಮೆಗ್ನೀಶಿಯಂ ಮತ್ತು ಕಬ್ಬಿಣದಂಶಗಳು ಸಮೃದ್ಧವಾಗಿವೆ. ಹಸಿ ನೆಲ್ಲಿಕಾಯಿ ಲಭ್ಯವಿಲ್ಲದ ಸಮಯದಲ್ಲಿ, ಒಂದು ಟೀ ಚಮಚ ನೆಲ್ಲಿಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೂ ಅಷ್ಟೇ ಪ್ರಯೋಜನಗಳು ದೊರೆಯುತ್ತವೆ.
ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಪುಡಿ ಬೆರೆಸಿದ ನೀರು
ಪ್ರಕೃತಿ ನಮಗೆ ನೀಡಿರುವ ಅದ್ಭುತ ಕೊಡುಗೆಗಳಲ್ಲಿ ನೆಲ್ಲಿಕಾಯಿ ಒಂದಾಗಿದೆ. ಇದನ್ನು ಕೇವಲ ಹಣ್ಣು ಎನ್ನುವ ಬದಲು 'ಸೂಪರ್ ಫುಡ್' ಎನ್ನುವುದೇ ಹೆಚ್ಚು ಸೂಕ್ತ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಪುಡಿಯನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ದೇಹಕ್ಕೆ ಸಿಗುವ ಪ್ರಯೋಜನಗಳು ತುಂಬಾ ಇದೆ.

ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಸಿ ಮತ್ತು ಪೌಷ್ಟಿಕಾಂಶ
ನೆಲ್ಲಿಕಾಯಿಯಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುತ್ತದೆ ಇದರೊಂದಿಗೆ ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ಕ್ಯಾಲ್ಷಿಯಂ, ಫಾಸ್ಪರಸ್, ಪೊಟಾಶಿಯಂ, ಮೆಗ್ನೀಶಿಯಂ ಮತ್ತು ಕಬ್ಬಿಣದಂಶಗಳು ಸಮೃದ್ಧವಾಗಿವೆ. ಹಸಿ ನೆಲ್ಲಿಕಾಯಿ ಲಭ್ಯವಿಲ್ಲದ ಸಮಯದಲ್ಲಿ ಒಂದು ಟೀ ಚಮಚ ನೆಲ್ಲಿಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೂ ಆರೋಗ್ಯಕ್ಕೆ ಒಳ್ಳೆಯದು.
ಆಹಾರ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳ
ಪ್ರತಿದಿನ ಬೆಳಿಗ್ಗೆ ಈ ಪಾನೀಯವನ್ನು ಸೇವಿಸುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ವಿಶೇಷವಾಗಿ ಮಲಬದ್ಧತೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಲ್ಲಿರುವ ಅಧಿಕ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ ಶೀತ, ಪ್ಲೋ ಮತ್ತು ಇತರ ಸಾಂಕ್ರಾಮಿಕ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
ತೂಕ ಇಳಿಕೆ ಮತ್ತು ಸೌಂದರ್ಯವರ್ಧಕ
ತೂಕ ಇಳಿಸಬೇಕೆಂದು ಬಯಸುವವರಿಗೆ ನೆಲ್ಲಿಕಾಯಿ ನೀರು ಅತ್ಯುತ್ತಮ ಆಯ್ಕೆ ಇದರಲ್ಲಿರುವ ಆಂಟಿ-ಇನ್ಫ್ಲಮೇಟರಿಗುಣಗಳು ಮತ್ತು ನಾರಿನಂಶವು ದೇಹದ ಅನಗತ್ಯ ಕೊಬ್ಬನ್ನು ಕರಗಿಸಲು ಸಹಕಾರಿ.
ಕೂದಲು: ಇದರಲ್ಲಿರುವ ಆಂಟಿ-ఇನ್ಫ್ಲಮೇಟರಿ (Anti-inflammatory) ಕೂದಲಿನ ಬೇರುಗಳನ್ನು ಬಲಪಡಿಸಿ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತವೆ.
ಚರ್ಮ: ಪ್ರತಿದಿನದ ಸೇವನೆಯಿಂದ ಮುಖದಲ್ಲಿ ನೈಸರ್ಗಿಕ ಮೆರುಗು ಬರುತ್ತದೆ ಹಾಗೂ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.
ಹೃದಯದ ಆರೋಗ್ಯ ಮತ್ತು ಮಧುಮೇಹ ನಿಯಂತ್ರಣ
ನೆಲ್ಲಿಕಾಯಿಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಅಲ್ಲದೆ ಇದು ರೋಗನಿರೋಧಕ ಗುಣಗಳನ್ನು ಹೊಂದಿದ್ದು ರಕ್ತದಲ್ಲಿನ ಸಕ್ಕರೆ ಮಟ್ಟ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮಾನಸಿಕ ನೆಮ್ಮದಿ ಹಾಗೂ ಶಕ್ತಿ
ದಿನದ ಆರಂಭವನ್ನು ಈ ಆರೋಗ್ಯಕರ ಪಾನೀಯದಿಂದ ಮಾಡುವುದರಿಂದ ದಿನಪೂರ್ತಿ ಉತ್ಸಾಹದಿಂದ ಇರಬಹುದು. ಇದು ದೈಹಿಕ ಆಲಸಿಕೆಯನ್ನು ಕಡಿಮೆ ಮಾಡುವುದಲ್ಲದೆ, ಒತ್ತಡ ಮತ್ತು ಆತಂಕವನ್ನು ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮೂಳೆಗಳ ಬಲವರ್ಧನೆಗೂ ಇದು ರಾಮಬಾಣ.












Click it and Unblock the Notifications