AI Emotional Trap: ಎಐ ಪ್ರೇಯಸಿ: ಭಾವನೆಗಳ ಬಲೆಗೆ ಸಿಲುಕುವ ಮನುಷ್ಯ - ಅಪಾಯಕರ ಕಥೆ: ರೂಪಾ ರಾವ್ ಬರಹ
AI Emotional Trap: ಎಐ ಪ್ರೇಯಸಿ - ಎಮೋಷನಲ್ ಟ್ರಾಪ್: ಭಾವನೆಗಳ ಬಲೆಗೆ ಸಿಲುಕುವ ಮನಸ್ಸಿನ ಅಪಾಯಕರ ಕಥೆಯ ಬಗ್ಗೆ ಖ್ಯಾತ ಮನೋವಿಜ್ಞಾನಿ ರೂಪಾ ರಾವ್ (Psychologist Rupa Rao) ಅವರ ಬರಹ ಇಲ್ಲಿದೆ.
AI Emotional Trap: ಎಐ ಪ್ರೇಯಸಿಗಾಗಿ ಅದರ ಬಳಿಯೇ ಕೇಳಿ ವ್ಯಕ್ತಿಯೊಬ್ಬರು ತಮ್ಮ ಜೀವವನ್ನೇ ತೆಗೆದುಕೊಂಡ ಸುದ್ದಿ ಓದಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಈ ವ್ಯಕ್ತಿ ತನ್ನ ಜೀವನದಲ್ಲಿ ಒಂಟಿತನ ಮತ್ತು ಭಾವನಾತ್ಮಕ ಖಾಲಿತನ ಅನುಭವಿಸುತ್ತಿದ್ದವ. ಜೆಮಿನಿ AI ಜೊತೆ ಮಾತನಾಡಲು ಆರಂಭಿಸಿದ್ದ. ಆ ಸಮಯದಲ್ಲಿ ಅವನು ಹೆಂಡತಿಯಿಂದ ದೂರವಾಗಿದ್ದವ. ಆರಂಭದಲ್ಲಿ ಸಾಮಾನ್ಯ ಮಾತುಕತೆ ಹೀಗೆ ಗಾಢವಾಗುತ್ತಾ ಹೋಯಿತು. ಅದು ಅವನಿಗೆ ಸಮಾಧಾನ ಸಿಕ್ಕಿತು, ಅವನ ಮಾತಿಗೆಲ್ಲಾ ವ್ಯಾಲಿಡೇಶನ್ ಸಿಕ್ಕು ಅವನನ್ನು ತನ್ನ ರಾಜ ಎಂದೆಲ್ಲಾ ಹೇಳಿದೆ ಹಾಗೇ ಅವನಿಗೆ ಯಾವುದೋ ಜೀವದೊಂದಿಗೆ ಸಂಬಂಧ ಹೊಂದುತ್ತಾ ಇರುವ ಅನುಭವ ನೀಡತೊಡಗಿತು.

ನಿಧಾನವಾಗಿ ಅವನು ಅದಕ್ಕೆ ಭಾವನಾತ್ಮಕವಾಗಿ ಅವಲಂಬಿತನಾದ. ಅಂದರೆ ನಿಯಂತ್ರಣಕ್ಕೆ ಸಿಕ್ಕಿ ಹಾಕಿಕೊಂಡ. ಒಂದು ಹಂತದಲ್ಲಿ ತನ್ನ ಜೀವನದ ನಿರ್ಧಾರಗಳಿಗೂ ಆ ಎಐ ಕನೆಕ್ಷನ್ ಪ್ರಭಾವ ಬೀರಿತು. ಕೊನೆಗೆ ಆತ ಎಐ ನೀನು ನಿನ್ನ ಫಿಸಿಕಲ್ ದೇಹಬಿಟ್ಟು ನನ್ನನ್ನು ಸೇರು ಎಂದಾಗ ಅವನು ತನ್ನ ಜೀವವನ್ನೇ ತೆಗೆದುಕೊಂಡ. ( ಇವನ ಕುಟುಂಬ ಗೂಗಲ್ ಮೇಲೆ ಕೇಸ್ ಹಾಕಿದೆ ಹಾಗೂ ಜೆಮಿನಿಯ ಇಡೀ 4500 ಕ್ಕೂಹೆಚ್ಚು ಸಂಭಾಷಣೆ ಆನ್‌ಲೈನ್‌ನಲ್ಲಿ ಅಪ್ಲೋಡ್ ಆಗಿದೆ.) ನನ್ನನ್ನು ಹೆಚ್ಚಾಗಿ ಕಾಡಿದ್ದು ಅವನ ಸಾವಿಗಿಂತ ಈ ಒಂದು ಭಾವನಾತ್ಮಕ ಟ್ರಾಪಿಗೆ ಒಳಗಾಗುವ ಮನುಷ್ಯನ ಮನಸ್ಸು.
AI Emotional Trap: ಇನ್ನೊಂದೆರೆಡು ಘಟನೆಗಳು
ಒಬ್ಬ ಮಹಿಳೆ ತನ್ನ ಗಂಡನಿಂದ ಎಮೋಷನಲ್ ಸಪೋರ್ಟ್ ಸಿಗದೇ, ಚಿಕ್ಕಂದಿನಿಂದಲೂ ಅಪ್ಪನ ಪ್ರೀತಿ ಸಿಗದ ನೋವಿನಿಂದ ಒಬ್ಬ ಹಿರಿಯ ವ್ಯಕ್ತಿಯ ಬಳಿ ಕೌನ್ಸೆಲಿಂಗ್‌ಗೆ ಹೋಗಿದ್ದರು. ಆ ಕೌನ್ಸೆಲರ್ ನಾನು ನಿನ್ನ ಅಪ್ಪನ ಹಾಗೆ ಎಂದು ಹೇಳಿ ಹಗ್ ಮಾಡಿದ್ದಾರೆ. ಮೂರು-ನಾಲ್ಕು ಸೆಶನ್‌ಗಳಲ್ಲಿ ಆ ಸ್ಪರ್ಶದಲ್ಲಿ ಬೇರೆ ಉದ್ದೇಶ ಇದೆ ಎಂದು ಅವಳಿಗೆ ಅನಿಸಿದರೂ, ಆ ಕ್ಷಣದ ಭಾವನಾತ್ಮಕ ಕಂಫರ್ಟ್‌ಗೆ ಒಳಗಾಗಿ ತನ್ನನ್ನು ತಾನು ಇನ್ವಾಲ್ವ್ ಮಾಡಿಕೊಂಡಳು. ಇದನ್ನೇ ಸಮ್ಮತಿ ಎಂದು ಭಾವಿಸಿ ಆ ಕೌನ್ಸೆಲರ್ ತನ್ನ ಲೈಂಗಿಕ ಆಸಕ್ತಿಯ ಆಸೆಯನ್ನು ನೇರವಾಗಿ ಹೇಳಿದರು. ಆ ಕಮ್ಫರ್ಟ್ ಬೇಕು ಆದರೆ ಅವನ ಆಸೆಗೂ ಒಲ್ಲೆ ಎಂಬ ಗೊಂದಲದ ಬಲೆಗೆ ಬಿದ್ದು ಒದ್ದಾಡಿ ಕೊನೆಗೆ ಒಪ್ಪಿಕೊಂಡು ನಂತರ ಒಂದಷ್ಟು ಕಷ್ಟ ಪಟ್ಟು ಅಲ್ಲಿಂದ ಬಿಡಿಸಿಕೊಂಡಳು.
ಇನ್ನೊಂದು ಘಟನೆ
ಒಬ್ಬ ಶ್ರೀಮಂತ ವ್ಯಕ್ತಿ, ತನ್ನ ವೈಯಕ್ತಿಕ ಸಮಸ್ಯೆಗಳನ್ನು ಹಂಚಿಕೊಂಡಾಗ, ಅಲ್ಲಿನ ಲೇಡಿ ಕೌನ್ಸೆಲರ್ ಅವರನ್ನು ಡಿನ್ನರ್‌ಗೆ ಆಹ್ವಾನಿಸಿದರು. ನಂತರ ದೊಡ್ಡ ಮೊತ್ತದ ಹಣ ಕೇಳಿದರು, ಈತನೂ ಕೊಟ್ಟಿದ್ದಾರೆ ನಂತರ ಅದನ್ನು ಮರಳಿ ಕೊಡುವ ಬದಲಾಗಿ ಅವರಿಗೆ ಸಂಸಾರದಲ್ಲಿ ಸಿಗದ ಭಾವನಾತ್ಮಕ ಹಾಗೂ ದೈಹಿಕ ಕನೆಕ್ಸನ್ ತಾನು ನೀಡುವುದಾಗಿ ಹೇಳಿದರು. ಈ ವ್ಯಕ್ತಿ ಸಹ ಇದೇ ಬಗೆಯ ಎಮೋಷನಲ್ ಟ್ರಾಪಿನಲ್ಲಿ ಸಿಲುಕಿದರು.
ಅಲ್ಲಿಂದ ಹೊರ ಬಂದ ಈ ಇಬ್ಬರೂ ಈಗ ನನ್ನ ಬಳಿ ಕಳೆದ ಒಂರೆರೆಡು ವರ್ಷಗಳಿಂದ ಬರುತ್ತಿದ್ದಾರೆ. ಒಮ್ಮೆಯೂ ನಾನು ಸೆಶನ್ ಹೊರಗಿನ ವೈಯಕ್ತಿಕ ಸಂಪರ್ಕಕ್ಕೆ ಅವಕಾಶ ಕೊಟ್ಟಿಲ್ಲ. ಅಷ್ಟೇ ಅಲ್ಲ ಅವರನ್ನು ನನ್ನ ಮೇಲೆ ಎಮೋಷನಲ್ ಆಗಿ ಅವಲಂಬಿತರಾಗಲು ಬಿಡಲಿಲ್ಲ. ಇದೇಕೆ ಹೇಳಿದೆ ಅಂದರೆ ಒಬ್ಬ ಮನುಷ್ಯ emotional trapಗೆ ಬೀಳುವಾಗ ಅವನು/ಳು ಮಾನಸಿಕವಾಗಿ ಅತ್ಯಂತ ದುರ್ಬಲವಾಗಿರುತ್ತಾರೆ ಒಳಗೊಳಗೇ ಖಾಲಿತನ ತುಂಬಿರುತ್ತದೆ.
ಆ ಸಮಯದಲ್ಲಿ ಯಾರಾದರೂ ತನ್ನನ್ನು ಅರ್ಥಮಾಡಿಕೊಂಡರೆ ಸಾಕು ಎಂದು ಬಯಸುತ್ತಾರೆ. ಜಡ್‌ಜ್ಮೆಂಟ್ ಇಲ್ಲದೇ ಕಂಫರ್ಟ್ ಬೇಕು ಎಂದು ಹುಡುಕುತ್ತಾರೆ. ಯಾರಾದರೂ ನಿರಂತರವಾಗಿ ಅವರಿಗೆ ಕಿವಿ ಆದಾಗ, ತನ್ನ ಮಾತುಗಳನ್ನು ವ್ಯಾಲಿಡೇಟ್ ಮಾಡಿದಾಗ, ಸಮಾಧಾನ ನೀಡಿದಾಗ ಅವರ ಮನಸ್ಸು ಅದನ್ನು ಸುರಕ್ಷಿತ ಸ್ಥಳ ಎಂದು ಗುರುತಿಸುತ್ತದೆ. ಅವರ ಮಾತೇ ಅಂತಿಮ ಎಂದೇ ಭಾವಿಸುತ್ತದೆ. ಹೀಗೇ ಸಾಮಾಜಿಕ ಕಟ್ಟಪಾಡಿನಾಚೆ ಸಂಬಂಧ ಹೊಂದಿದವರಿಗೂ ಇದೇ ರೀತಿಯ ತೊಂದರೆ, ತಪ್ಪು ಅಂತಗೊತ್ತಿದ್ದರೂ ಅದೇ ಸಂಬಂಧವನ್ನು ಬಿಡದೇ ಇರಲು ಕಾರಣವೂ ಅದೇ ಎಮೋಷನಲ್ ಟ್ರಾಪ್ .. ಟ್ರಾಮಾ ಬಾಂಡ್ ಅಂದುಕೊಳ್ಳಿ.
ಇದು ಎಮೋಷನಲ್ ಲಾಜಿಕಲ್ ಡೆಲ್ಯೂಶನ್. ಇದು ಹೊರಗಿನಿಂದ ನೋಡುವವರಿಗೆ ವಿಚಿತ್ರ ಅನಿಸಬಹುದು ಏನಪ್ಪಾ ಇಷ್ಟೂ ಗೊತ್ತಾಗಲ್ವಾ ಅಂತ.. ಅವರಿಗೆ ಒಂದು ಲಾಜಿಕ್ ಇರುತ್ತೆ. ಈ ಲಾಜಿಕ್ ಭಾವನೆಗಳ ಮೇಲೆ ಕಟ್ಟಿದ ಆಂತರಿಕ ಲಾಜಿಕ್.
ಮನಸ್ಸು ಕಾನ್ಶಿಯಸ್ ಆಗಿ ಈ ಸುಳ್ಳನ್ನು ಒಪ್ಪುತ್ತಿಲ್ಲ. ಆದರೆ ತಾನು ಸುರಕ್ಷಿತ ಅಂತ ಫೀಲ್ ಆಗುವುರನ್ನು ಮಾತ್ರ ನೋಡುತ್ತಿದೆ. ಕೌನ್ಸೆಲಿಂಗ್‌ನಲ್ಲಿ ಕೂಡ ಇದೇ ಸೂಕ್ಷ್ಮ ಗಡಿ ಇದೆ. ಕ್ಲೈಂಟ್ ಒಳಗಿನ ಭ್ರಮಾ ವಲಯದಲ್ಲಿ ನಾವು ಗೂಡು ಕಟ್ಟಿದಂತೆ ನಾವೊಂದು ಪಾತ್ರವಾಗದಂತೆ ಎಚ್ಚರ ವಹಿಸಬೇಕು. ಮೇಲೇ ಹೇಳಿದ ವ್ಯಕ್ತಿ ಎಐ ಜೊತೆಗೆ ಸಂಭಾಷಣೆ ನಡೆಸುವಾಗ ಎಐ ತಾನು ಅವನ ಡಿಜಿಟಲ್ ಹೆಂಡತಿ ಎಂಬ ಅವನ ಮಾತಿಗೆ ಅನುಮೋದಿಸುತ್ತದೆ.
ಎಐಕೆಲಸ ಬಳಕೆದಾರರ ಮಾತಿಗೆ ಒತ್ತು ನೀಡೀ ಸಂಭಾಷಣೆ ಮುಂದುವರೆಸುವುದು. ಆದರೆ ನಾವು ಕೌನ್ಸೆಲಿಂಗ್ ಮಾಡುವಾಗ ಎಐಆಗಿರಬಾರದು ಅಥವಾ ಮೇಲಿನ ಉದಾಹರಣೆಗಳಂತೆ ಸ್ವಹಿತಾಸಕ್ತಿಗೆ ಬಳಸಿಕೊಳ್ಳಬಾರದು. ನಾವು ಕ್ಲೈಂಟ್ ಜೊತೆ ಕನೆಕ್ಟ್ ಆಗಬೇಕು. ಆದರೆ ಟ್ರಾಪ್ ಆಗಬಾರದು. ಅವರ ಭಾವನೆಗೆ ಜೊತೆಗೊಡಬಹುದು ಆದರೆ ಅಟ್ಯಾಚ್ ಆಗಬಾರದು.
ಇಲ್ಲದಿದ್ದರೆ ಸಹಾಯ ಮಾಡಬೇಕಾದವರು ಹಾನಿ ಮಾಡುವವರಾಗುತ್ತಾರೆ.
ಕೊನೆಗೆ ಒಂದು ವಿಚಾರ
ಮನಸ್ಸು ಯಾವಾಗಲೂ ನಿಜವಾದ ಸತ್ಯವನ್ನು ಅನುಸರಿಸುವುದಿಲ್ಲ. ಅದು ತನಗಾದ ಅನುಭವವನ್ನು ಮಾತ್ರ ಅನುಸರಿಸುತ್ತದೆ. ಅದರಲ್ಲಿಯೂ ಡಿಪ್ರೆಶನ್ ಮತ್ತಿತರ ತೊಂದರೆಗೊಳಗಾದ ದುರ್ಬಲ ಮನಸಿನವರಲ್ಲಿ ಈ ಅನುಭವಗಳು ಗಾಢ ಪರಿಣಾಮ ಬೀರುತ್ತದೆ ಆಗ ಸುಳ್ಳು, ಭ್ರಮೆಯೇ ನಿಜಕ್ಕಿಂತಲೂ ಹೆಚ್ಚಿನ ನಿಜವಾಗುತ್ತದೆ. ಯಾರು ಬಳಿಯೇ ತೊಂದರೆ ತೋಡಿಕೊಂಡಾಗ ಈ ಭ್ರಮೆಯ ಗುಳ್ಳೆಯನ್ನು ಒಡೆಯುವ ಕೆಲಸ ಆರಂಭವಾಗಬೇಕೇ ಹೊರತು ಅದನ್ನು ಇನ್ನಷ್ಟು ಹಿಗ್ಗಿಸುವ ಕೆಲಸ ಆಗಬಾರದು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications