ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು 5 ಸಿಂಪಲ್‌ ಟಿಪ್ಸ್‌

ಚಳಿಗಾಲ ಪ್ರಾರಂಭವಾಗಿದೆ. ಈ ಬಾರಿ ಉಳಿದ ಬಾರಿಗಿಂತ ಹೆಚ್ಚೇ ಚಳಿ ಇದೆ. ಚಳಿಗಾಲದಲ್ಲಿ ಹಲವರಿಗೆ ಚರ್ಮದ ಸಮಸ್ಯೆಗಳು ಆಗುವುದಿದೆ. ಈ ಸಮಯದಲ್ಲಿ ಚರ್ಮ ಒಣಗಿದಂತೆ ಆಗುವುದು ಚರ್ಮದಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಸಹ ಇದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನೀವು ಕೆಲವೊಂದು ಸಿಂಪಲ್‌ ಟಿಪ್ಸ್‌ಗಳನ್ನು ಫಾಲೋ ಮಾಡಿದರೆ ಸಾಕು ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಚಳಿಗಾಲದಲ್ಲಿ ಚರ್ಮದ ರಕ್ಷಣೆ ಯಾವ ರೀತಿ ಇರಬೇಕು, ಚಳಿಗಾಲದಲ್ಲಿ ಒಣ ಚರ್ಮ ಆಗದಂತೆ ನೋಡಿಕೊಳ್ಳುವುದು ಹೇಗೆ ಎನ್ನುವ ಸಿಂಪಲ್‌ ಟಿಪ್ಸ್‌ ಇಲ್ಲಿದೆ.

ಚಳಿಗಾಲದಲ್ಲಿ ಎದುರಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಚರ್ಮದ ಸಮಸ್ಯೆಯೂ ಒಂದು. ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಸಾಧ್ಯವಾದಷ್ಟು ಸೋಪ್ ಬಳಸದೆ ಇರುವುದು ಉತ್ತಮ. ಅಲ್ಲದೆ ಚರ್ಮದ ರಕ್ಷಣೆಗೆ ಓಟ್ ಮೀಲ್ ಬಳಸಿ ಸ್ನಾನ ಮಾಡುವುದು ಹಾಗೂ ಸ್ನಾನ ಮಾಡುವುದಕ್ಕಿಂತ ಮುಂಚೆ ತೆಂಗಿನ ಎಣ್ಣೆ ಹಚ್ಚಿಕೊಳ್ಳುವುದರಿಂದ ಚರ್ಮ ಒಣಗದಂತೆ ನೋಡಿಕೊಳ್ಳಬಹುದಾಗಿದೆ. ಚಳಿಗಾಲದಲ್ಲಿ ಸ್ನಾನ ಮಾಡುವಾಗ ಯಾವ ವಿಧಾನಗಳನ್ನು ಅನುಸರಿಸಬೇಕು ಹಾಗೂ ಚಳಿಗಾಲದಲ್ಲಿ ಚರ್ಮ ರಕ್ಷಣೆ ಮಾಡುವುದು ಹೇಗೆ ಎನ್ನುವ ವಿವರ ಮುಂದಿದೆ.

5 Simple Tips to Maintain Skin Health in Winter

ಚಳಿಗಾಲದಲ್ಲಿ ಚರ್ಮ ಒಣಗುವುದಕ್ಕೆ ಮುಖ್ಯ ಕಾರಣ ತಂಪಾಗಿ ಬೀಸುವ ಗಾಳಿಯು ಬೆಚ್ಚಗಿನ ಗಾಳಿಗಿಂತ ಕಡಿಮೆ ತೇವಾಂಶವನ್ನು ಹೊಂದಿರುತ್ತದೆ. ಅಲ್ಲದೆ ವಿಟಮಿನ್ ಡಿ, ವಿಟಮಿನ್ ಎ, ನಿಯಾಸಿನ್ ಹಾಗೂ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುವುದು ಸಹ ಚರ್ಮ ಒಣಗುವುದಕ್ಕೆ ಕಾರಣವಾಗುತ್ತದೆ.

ಸ್ನಾನದ ಅವಧಿಯನ್ನು ಕಡಿಮೆ ಮಾಡಿ: ಚಳಿಗಾಲದಲ್ಲಿ ಬಿಸಿ ನೀರಿನಿಂದ ಹೆಚ್ಚು ಸಮಯ ಸ್ನಾನ ಮಾಡಬೇಕು ಎನ್ನುವ ಆಸೆ ಬರುವುದು ಸಹಜ. ಆದರೆ ಚಳಿಗಾಲದಲ್ಲಿ ಜಾಸ್ತಿ ಸ್ನಾನ ಮಾಡುವುದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮದ ತೇವಾಂಶ ಕೊರತೆಗೆ ಇದು ಕಾರಣವಾಗುತ್ತದೆ. ಬಿಸಿ ನೀರಿನಿಂದ ಹೆಚ್ಚು ಸಮಯ ಸ್ನಾನ ಮಾಡುವುದರಿಂದ ಚರ್ಮ ಶುಷ್ಕವಾಗುವ ಸಾಧ್ಯತೆ ಇದೆ.

ಮಾಯಿಶ್ಚರೈಸರ್ ಬಳಸಿ: ಚರ್ಮ ಒಣಗದಂತೆ ನೋಡಿಕೊಳ್ಳುವುದಕ್ಕೆ ಮುಖ್ಯವಾಗಿ ಆಗಾಗ ಮಾಯಿಶ್ಚರೈಸರ್ ಬಳಸಿ. ಸ್ನಾನ ಮಾಡಿದ 5 ರಿಂದ 10 ನಿಮಿಷಗಳ ನಂತರ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಇದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಮಾಯಿಶ್ಚರೈಸರ್ ಅಥವಾ ಲೋಷನ್‌ ಬಳಸುವ ಮೂಲಕ ಒಣ ಚರ್ಮ ಆಗುವುದನ್ನು ತಪ್ಪಿಸಬಹುದಾಗಿದೆ.

ಸ್ವೆಟರ್ ಹಾಗೂ ಕೈಭಾಗ ಮುಚ್ಚುವ ಬಟ್ಟೆ ಬಳಸಿ: ಈ ಸಮಯದಲ್ಲಿ ಸಾಧ್ಯವಾದಷ್ಟು ಕೈ ಕಾಲುಗಳು ಮುಚ್ಚುವಂತಹ ಬಟ್ಟೆಗಳನ್ನು ಬಳಸಿ. ಸಂಜೆ ಅಥವಾ ರಾತ್ರಿ ಸಮಯದಲ್ಲಿ ಪ್ರಯಾಣ ಮಾಡುವುದಿದ್ದರೆ ತಪ್ಪದೆ, ಸ್ವೆಟರ್ ಹಾಗೂ ಕೈಗವಸುಗಳನ್ನು ಬಳಸಿ. ರಾತ್ರಿ ಮಲಗುವ ಸಂದರ್ಭದಲ್ಲೂ ಬೆಚ್ಚಗಿನ ಅಥವಾ ದಪ್ಪನಾದ ಬೆಡ್‌ಶಿಟ್ ಬಳಸಿ.

ಹೆಚ್ಚು ನೀರು ಕುಡಿಯಿರಿ: ಹೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ದೇಹ ಚರ್ಮ ಒಣಗುವುದು ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ತುಂಬಾ ಜನ ಹೆಚ್ಚು ನೀರು ಕುಡಿಯುವುದಿಲ್ಲ. ಬೇಸಿಗೆ ಸಮಯದಂತೆ ಈ ಸಮಯದಲ್ಲಿ ಬಾಯಾರಿಕೆ ಆಗದೆ ಇರುವುದು ಸಹ ಇದಕ್ಕೆ ಕಾರಣವಾಗಿದೆ. ಆದರೆ ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ತೇವಾಂಶ ಹೆಚ್ಚಾಗುತ್ತದೆ.

ಬಿಸಿ ಹಾಗೂ ತಾಜಾ ಆಹಾರ ಸೇವಿಸಿ: ಚಳಿಗಾಲದಲ್ಲಿ ಬಿಸಿ ಆಹಾರ ಹಾಗೂ ತರಕಾರಿ ಮತ್ತು ಹಣ್ಣುಗಳನ್ನು ತಿನ್ನಿ. ಇದು ಎಲ್ಲಾ ಸಮಯದಲ್ಲೂ ರೂಢಿಸಿಕೊಳ್ಳಬಹುದಾಗ ಉತ್ತಮ ಜೀವನಶೈಲಿಯಾಗಿದೆ. ತಣ್ಣಗಿನ ಊಟ ಮಾಡುವುದರಿಂದ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಈ ಸಮಯದಲ್ಲಿ ಬಿಸಿ ಆಹಾರ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+