Heart Attack: ಹೃದಯಾಘಾತಕ್ಕೆ 5 ಪ್ರಮುಖ ಕಾರಣಗಳು & ಸರಳ ಪರಿಹಾರ
Heart Attack: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಹೃದಯಾಘಾತದಿಂದ ಸಣ್ಣ ಮಕ್ಕಳಿಂದ ಹಿರಿಯರ ವರೆಗೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಗಳು ಬರುತ್ತಿವೆ. ಅದರಲ್ಲೂ ಮುಖ್ಯವಾಗಿ ಯುವ ಸಮೂಹವೇ ಹಾರ್ಟ್ ಅಟ್ಯಾಕ್‌ಗೆ ಒಳಗಾಗುತ್ತಿದ್ದಾರೆ. ಏಕಾಏಕಿ ಯುವಕ & ಯುವತಿಯರು ಕುಸಿದು ಬಿದ್ದು ಸಾವನ್ನಪ್ಪುತ್ತಿರುವುದು ರಾಜ್ಯದ ಜನರಲ್ಲಿ ಆತಂಕವನ್ನು ಮೂಡಿಸಿದೆ. ಹಾಸನದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹಲವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತಕ್ಕೆ ಪ್ರಮುಖ ಕಾರಣಗಳೇನು ಹಾಗೂ ಇದನ್ನು ತಪ್ಪಿಸುವುದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಹೃದಯಾಘಾತ ಈಗ ಹಿರಿಯರು - ಕಿರಿಯರು ಎನ್ನದೆ ಎಲ್ಲರಿಗೂ ಸಂಭವಿಸುತ್ತಿದೆ. ಹೃದಯ ಸ್ನಾಯುವಿಗೆ ರಕ್ತ ಸಂಚರಿಸುವುದು ಕಡಿಮೆಯಾದಾಗ ಅಥವಾ ನಿರ್ಬಂಧಕ್ಕೆ ಒಳಪಟ್ಟಾಗ ಹೃದಯಾಘಾತ ಸಂಭವಿಸುತ್ತದೆ. ಸಾಮಾನ್ಯವಾಗಿ ನಿಮ್ಮ ರಕ್ತನಾಳಗಳಲ್ಲಿ (ಅಪಧಮನಿಗಳು) ಜಿಗುಟಾದ ಕೊಬ್ಬಿನ ಶೇಖರಣೆ ಆಗುವುದು ಅಥವಾ ಕೊಬ್ಬಿನಾಂಶವು ಹೆಪ್ಪುಗಟ್ಟುವಿಕೆಯಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಹೃದಯಾಘಾತಕ್ಕೆ ಐದು ಪ್ರಮುಖ ಕಾರಣಗಳು ಇಲ್ಲಿವೆ. ಈ ವಿಷಯಗಳ ಬಗ್ಗೆ ಹೆಚ್ಚು ಗಮನವಹಿಸುವುದರಿಂದ ನೀವು ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿದೆ.

ಅಧಿಕ ರಕ್ತದೊತ್ತಡ: ನಿಮ್ಮ ದೇಹದಲ್ಲಿನ ರಕ್ತವು ರಕ್ತನಾಳಗಳ (ರಕ್ತವನ್ನು ಸರಬರಾಜು ಮಾಡುವ ಪೈಪ್) ವಿರುದ್ಧವಾಗಿ ತುಂಬಾ ಬಲವಾಗಿ ತಳ್ಳಿದಾಗ ರಕ್ತನಾಳಗಳಿಗೆ ಹಾನಿಯಾಗುತ್ತದೆ. ಇದರಿಂದ ಕೊಬ್ಬಿನಾಂಶ ಶೇಖರಣೆ ಸುಲಭವಾಗುತ್ತದೆ.
ಪರಿಹಾರ: ಆಗಾಗ್ಗೆ ವ್ಯಾಯಾಮ ಮಾಡಿ, ಕಡಿಮೆ ಉಪ್ಪನ್ನು ಸೇವಿಸಿ, ಒತ್ತಡವನ್ನು ನಿರ್ವಹಿಸಿ. ಅಧಿಕ ಒತ್ತಡ ಎದುರಾಗುತ್ತಿದೆ ಎಂದು ನಿಮಗೆ ಅನಿಸಿದರೆ, ವೈದ್ಯರನ್ನು ಸಂಪರ್ಕಿಸಿ ಹಾಗೂ ವೈದ್ಯರ ಸಲಹೆಗಳನ್ನು ಅಳವಡಿಸಿಕೊಳ್ಳಿ.
ಅಧಿಕ ಕೊಲೆಸ್ಟ್ರಾಲ್: ನಿಮ್ಮ ರಕ್ತದಲ್ಲಿ ಹೆಚ್ಚು ಕೆಟ್ಟ ಕೊಬ್ಬಿನಾಂಶ ಶೇಖರಣೆ ಆಗುತ್ತದೆ. ಇದು ನಿಮ್ಮ ರಕ್ತನಾಳಗಳನ್ನು ಕಿರಿದಾಗಿಸಿ, ಕೊಬ್ಬಿನ ಗಂಟುಗಳನ್ನು ಸೃಷ್ಟಿಸುತ್ತದೆ.
ಪರಿಹಾರ: ಕಡಿಮೆ ಕೊಬ್ಬಿನಾಂಶ ಇರುವ ಆಹಾರಗಳನ್ನು ಸೇವಿಸಿ. ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ಫೈಬರ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಿ.
ಧೂಮಪಾನ: ಹೊಗೆ ನಿಮ್ಮ ರಕ್ತನಾಳಗಳ ಮೇಲೆ ಹಾನಿ ಮಾಡುತ್ತದೆ. ನಿಮ್ಮ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ನಿಮ್ಮ ಹೃದಯವನ್ನು ತಲುಪುವ ಸಾಕಷ್ಟು ಆಮ್ಲಜನಕವನ್ನು ತಡೆಯುತ್ತದೆ.
ಪರಿಹಾರ: ಧೂಮಪಾನ ಮಾಡುವುದನ್ನು ನಿಲ್ಲಿಸಿ. ಇದರಿಂದ ನಿಮ್ಮ ಆರೋಗ್ಯ ಸುಧಾರಣೆಗೆ ಸಹಕಾರಿ ಆಗಲಿದೆ.
ಶುಗರ್: ನಿಮ್ಮ ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದ್ದರೆ. ವಯಸ್ಸಾದಂತೆ ರಕ್ತನಾಳಗಳು ಮತ್ತು ನರಗಳಿಗೆ ಹಾನಿ ಮಾಡುತ್ತದೆ. ಹೃದಯ ಸಂಬಂಧಿ ಸಮಸ್ಯೆಗೆ ಇದು ಪ್ರಮುಖ ಕಾರಣವಾಗಬಹುದು.
ಪರಿಹಾರ: ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಸಕ್ಕರೆ ಪ್ರಮಾಣ ಹೆಚ್ಚಾಗಿ ಇರುವ ಆಹಾರ ಪದಾರ್ಥಗಳನ್ನು ಸೇವಿಸಿ. ಯಾವಾಗಲೂ ಸಕ್ಕರೆ ಪ್ರಮಾಣ ಕಡಿಮೆ ಇರುವಂತೆ ನೋಡಿಕೊಳ್ಳಿ.
ದೇಹದ ತೂಕವನ್ನು ನಿಯಂತ್ರಿಸಿ: ದೇಹದ ತೂಕ ಹೆಚ್ಚಾದಂತೆ ಸಮಸ್ಯೆ ಆಗುತ್ತದೆ. ಹೆಚ್ಚು ಸಮಯ ಕುಳಿತುಕೊಳ್ಳುವುದು ಸಹ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಶುಗರ್ ಬರುವುದಕ್ಕೆ ಕಾರಣವಾಗಬಹುದು.
ಪರಿಹಾರ: ಆರೋಗ್ಯಕರ ಆಹಾರವನ್ನು (ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹವು) ಸೇವಿಸಿ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಪ್ರತಿ ವಾರ ಕನಿಷ್ಠ ಎರಡೂವರೆ ಗಂಟೆಗಳ ಕಾಲ ಮಧ್ಯಮ ವ್ಯಾಯಾಮ ಮಾಡಿ.
ಕೋವಿಡ್ ನಂತರ ಹೆಚ್ಚಳ: ಇನ್ನು ಕರ್ನಾಟಕ ಸೇರಿದಂತೆ ದೇಶದಾದ್ಯಂತ ಕೋವಿಡ್ ನಂತರ ಹೃದಯಾಘಾತ ಹೆಚ್ಚಾಗುತ್ತಿದೆ ಎನ್ನುವ ವಾದವಿದೆ. ಅಲ್ಲದೇ ಕೆಲವರು ಕೋವಿಡ್ ಲಸಿಕೆಗಳ ಪರಿಣಾಮ ಇರಬಹುದೇ ಎಂದೂ ಸಹ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಇಲ್ಲಿಯ ವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನೂ ಸಹ ಸರ್ಕಾರ ಹಂಚಿಕೊಂಡಿಲ್ಲ.












Click it and Unblock the Notifications