ನಿಮ್ಮಿಷ್ಟದ ಹುಡುಗಿ ನಿಮ್ಮ ಹೃದಯದ ಬಾಗಿಲನ್ನು ತಟ್ಟಿದ್ದಾಳಾ? ಇದನ್ನು ತಿಳಿಯುವುದೇಗೆ?-ಇಲ್ಲಿವೆ ಸರಳ ಮಾರ್ಗಗಳು
ಸಾಮಾನ್ಯವಾಗಿ ಕಾಲೇಜಿನ ದಿನಗಳಲ್ಲಿ ಹಲವು ಮಂದಿ ಹುಡುಗ, ಹುಡುಗಿಯರು ಪ್ರೀತಿ, ಪ್ರೇಮದ ಬಲೆಗೆ ಬಿದ್ದೇ ಬಿಡ್ತಾರೆ. ಆದರೆ ಈ ಪೈಕಿ ಕೆಲವೇ ಕೆಲವರ ಪ್ರೇಮಕಥೆ ಮುಂದುವರೆಯುತ್ತದೆ. ಇನ್ನುಳಿದವರು ಬ್ರೇಕ್ ಅಪ್ ಆಯ್ಕೆಗೆ ಬಂದು ಬಿಡುತ್ತಾರೆ. ಹೇಳಬೇಕೆಂದರೆ ಕಾಲೇಜಿನ ದಿನಗಳಲ್ಲಿ ಆಗುವ ಬಹುತೇಕ ಪ್ರೇಮಕತೆಗಳು ನೀಜವಾದ ಪ್ರೀತಿ ಆಗಿರುವುದಿಲ್ಲ, ಬದಲಿಗೆ ಅವರದ್ದು ಕೇವಲ ಆಕರ್ಷಣೆ ಮಾತ್ರ ಎಂದು ಹಲವು ತಜ್ಞರ ಅಭಿಪ್ರಾಯ ಆಗಿದೆ.
ಅದರಲ್ಲೂ 25 ವರ್ಷ ದಾಟಿದ ಬಹುತೇಕರ ಪ್ರೀತಿ ನಿಜವಾಗಿರುತ್ತದೆ ಅಂತಲೂ ಹೇಳುತ್ತಾರೆ. ಇನ್ನು ಇದರೊಳೊಳಗೆ ಹುಟ್ಟುವ ಪ್ರೇಮಕತೆಗಳು ನಿಜವಾಗುವುದೇ ಅಪರೂಪ. ಹಾಗಾದರೆ ಇನ್ನೂ ಹುಡುಗಿಯರು ನಿಮಗೆ ಆಕರ್ಷಿತರಾಗುತ್ತಾರಾ ಎಂದು ತಿಳಿದುಕೊಳ್ಳುವುದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕೆಲವರ ಮನಸ್ಸಿನಲ್ಲಿ ಹೇಳಿಕೊಳ್ಳಲಾರದಷ್ಟು ಪ್ರೀತಿ, ಆಕರ್ಷಣೆ ಅಡಗಿರುತ್ತದೆ. ಆದರೆ ಅದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ, ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡು ಕೊರಗುತ್ತಾರೆ. ಪ್ರೀತಿ ಹುಟ್ಟಿದ ಆರಂಭದ ದಿನಗಳಲ್ಲೂ ಹೀಗೆ ಆಗುವುದು ಸಹಜವಾಗಿರುತ್ತದೆ. ಆದರೆ ಮಹಿಳೆಯರಿಗೆ ಒಮ್ಮೆಲೆ ಈ ಪ್ರೀತಿಯ ವಿಚಾರವನ್ನು ಹೇಳಿಕೊಳ್ಳುವುದು ತುಸು ಕಷ್ಟ. ಮತ್ತೊಂದೆಡೆ ಪ್ರೀತಿಯ ಬಗ್ಗೆ ಹೇಳಿಕೊಂಡರೆ ಮನಸ್ಸಿನ ಪ್ರೇಯಸ್ಸಿ ಎಲ್ಲಿ ದೂರವಾಗಿಬಿಡುತ್ತಾಳೋ ಎಂಬ ಸಂಕೋಚ, ಹಿಂಜರಿಕೆ, ನಿರಾಕರಣೆ ಭಯವೂ ಹುಡುಗರಲ್ಲಿ ಇರುತ್ತದೆ.
ಮತ್ತೊಂದೆಡೆ ಬಹುತೇಕ ಹುಡುಗಿಯರು ತಮ್ಮ ಮನಸ್ಸಿನೊಳಗೆ ಅಗಾದ ಪ್ರೀತಿಯಿದ್ದರೂ ಕೂಡ ಅದನ್ನು ಹುಡುಗನಿಗೆ ಬಾಯಿಯಿಂದ ಹೇಳಲು ಹಿಂಜರಿಯುತ್ತಾರೆ. ಆದರೂ ಅವರು ಕಣ್ಣುಗಳಿಂದಲೇ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತರಾರೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದ್ದು, ಈ ಸನ್ನೆಯನ್ನು ಹುಡುಗರು ತಿಳಿದುಕೊಳ್ಳುವುದು ಮುಖ್ಯ ಆಗಿರುತ್ತದೆ.
ನಿಮ್ಮಿಷ್ಟದ ಹುಡುಗಿಯರು ನಿಮ್ಮೊಂದಿಗೆ ಉತ್ತಮ ಸಂಭಾಷಣೆ ಮಾಡುತ್ತಿದ್ದರೆ, ನೀವು ಅವರ ಕಣ್ಸನ್ನೆಗಳನ್ನು ಗಮನಿಸಬೇಕಾಗುತ್ತದೆ. ಅಲ್ಲದೆ ಅವಳು ಫೋನ್ ಮುಖಾಂತರ ಮಾತನಾಡುತ್ತಿದ್ದರೆ, ನಿಮ್ಮ ಆಲೋಚನೆಗಳು, ಅಭಿರುಚಿಗಳಿಗೆ ತಕ್ಕಂತೆ ಮಾತನಾಡುತ್ತಿದ್ದಾರೆಯೇ ಎಂದು ಆಸಕ್ತಿಯಿಂದ ಆಲಿಸಬೇಕಾಗುತ್ತದೆ.
ನೀವು ಅಂದುಕೊಂಡತೆ ನಿಮತ್ತ ಆಕರ್ಷಿತರಾಗಿರುವ ನಿಮ್ಮಿಷ್ಟದ ಹುಡುಗಿಯರು ನಿಮ್ಮ ಪ್ರತಿಯೊಂದು ಬಾಡಿ ಲಾಂಗ್ವೇಜ್ ಅನ್ನು ಕೂಡ ಫಾಲೋ ಮಾಡುತ್ತಾರೆ. ಉದಾಹರಣೆಗೆ ನೀವು ಮಾತನಾಡುವ ಶೈಲಿಯಲ್ಲೇ ಅವಳು ಮಾತನಾಡುವುದು, ನೀವು ಯಾವ ಬಣ್ಣದ ಬಟ್ಟೆಗಳನ್ನು ಹಾಕಿರುತ್ತೀರೋ ಅವಳು ಕೂಡ ಅದೇ ರೀತಿ ಬಟ್ಟೆಗಳನ್ನು ಅನುಸರಿಸುವುದಾಗಿರಬಹುದು. ಹೀಗೆ ನಿಮ್ಮನ್ನು ಹಂತಹಂತವಾಗಿ ತಿಳಿದುಕೊಳ್ಳುತ್ತಿರುತ್ತಾಳೆ.
ಹೀಗೆ ನಿಜವಾಗಿಯೂ ನಿಮಗೆ ಆಕರ್ಷಿತವಾದ ಹುಡುಗಿಯು ನಿಮ್ಮಿಷ್ಟದಂತೆ ಜೀವನಕ್ಕೆ ಹೊಂದಿಕೊಳ್ಳಲು ಮುಂದಾಗುತ್ತಾಳೆ. ನಿಮ್ಮೆಲ್ಲ ಕಷ್ಟ, ಸುಖಗಳಲ್ಲೂ ಬಾಗಿಯಾಗುತ್ತಾಳೆ. ಅಲ್ಲದೇ, ಅವಳ ಜೀವನದಲ್ಲಿ ನಡೆದಿರುವ ಕೆಲವೊಂದು ವಿಚಾರಗಳನ್ನು ಹೇಳಿಕೊಳ್ಳುತ್ತಾಳೆ. ಆದರೆ ಈ ವಿಚಾರಗಳನ್ನು ಹುಡುಗಳು ಗಮನಿಸಬೇಕಾಗುತ್ತದೆ. ಹುಡುಗಿಯರ ಮನಸ್ಸಿನಲ್ಲಿ ಪ್ರೀತಿ ಇದ್ದರೂ ಮಾತಿನ ಮುಖಾಂತರ ಹೇಳಲಾಗದೇ, ಕಣ್ಸನ್ನೆಯಲ್ಲಿ ವ್ಯಕ್ತಪಡಿಸಿದರೆ, ಹುಡುಗರು ಇಂತಹ ವಿಚಾರವನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೇಮವನ್ನು ವ್ಯಕ್ತಪಡಿಸುವುದು ತುಸು ಬದಲಾಗಿಬಿಟ್ಟಿದೆ. ಹೇಗೆಂದರೆ, ತಮ್ಮಿಷ್ಟದ ಹುಡುಗಿಯ ಇಷ್ಟಗಳನ್ನು ತಿಳಿದುಕೊಂಡು ಅತೀ ಬೇಗನೇ ಹುಡುಗರು ಪ್ರೀತಿ ವ್ಯಕ್ತಪಡಿಸಲು ಮುಂದಾಗುತ್ತಾರೆ. ಇಂತಹ ಪ್ರೇಮ ಕತೆಗಳಲ್ಲಿ ಕೆಲವು ಕತೆಗಳು ಮಾತ್ರ ಸಕ್ಸರ್ ಆದರೆ, ಬಹುತೇಕ ಕತೆಗಳು ಫೆಲ್ಯೂರ್ ಆಗಿಬಿಡುತ್ತವೆ. ನಂತರ ಲವ್ ಫೆಲ್ಯೂರ್ ಆದ ಬಹುತೇಕ ಹುಡುಗರು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಈ ಪೈಕಿ ಇನ್ನು ಕೆಲವರು ಲವ್ ಫೆಲ್ಯೂರ್‌ನಿಂದ ಬೇಸತ್ತಿರುತ್ತಾರೆ ನಿಜ, ಆದರೆ ಅವರು ತಮ್ಮ ಕುಟುಂಬದ ಬಗ್ಗೆ ಆಲೋಚನೆ ಮಾಡಿ ಸಕ್ಸಸ್ ಲೈಫ್‌ನತ್ತ ಹೆಜ್ಜೆಯಿಡುತ್ತಾರೆ.
ಅದಕ್ಕೇ ದೊಡ್ಡೋರು ಹೇಳೋದು ಇಷ್ಟ ಇಲ್ಲ ಅಂದ್ರೆ ಬಿಟ್ಬಿಡಿ, ಮುಂದಿನ ದಾರಿ ನೋಡಿಕೊಂಡು ಯಶಸ್ಸಿನತ್ತ ನಡೆಯಿರಿ ಎಂದು. ಈ ಒಳ್ಳೇ ಮಾತನ್ನು ಫಾಲೋ ಮಾಡುವವರ ಸಂಖ್ಯೆ ತುಸು ಕಡಿಮೆಯಾಗಿದ್ದು, ಅವರ ಜೀವನ ಉತ್ತಮ ರೀತಿಯಲ್ಲಿ ಸಾಗಿತ್ತಿರುತ್ತದೆ.












Click it and Unblock the Notifications