Chia Seeds Juice: ಕಠಿಣ ಪರಿಶ್ರಮದ ನಂತರವೂ ನೀವು ತೂಕವನ್ನು ಕಳೆದುಕೊಳ್ಳದಿದ್ದರೆ, ಚಿಯಾ ಬೀಜಗಳ ಜ್ಯೂಸ್ ಟ್ರೈ ಮಾಡಿ...
ಈ ಬೀಜಗಳಲ್ಲಿರುವ ಕರಗದ ನಾರಿನಾಂಶವು ತೂಕ ನಷ್ಟಕ್ಕೆ ಸಹಾಯ ಮಾಡಬಹುದು. ವಯಸ್ಕರಿಗೆ ಫೈಬರ್‌ನ ಆರ್‌ಡಿಎ ದಿನಕ್ಕೆ 25 ತಿಂದ 30 ಗ್ರಾಂ ಮತ್ತು ನಿಮ್ಮ ಆಹಾರದಲ್ಲಿ ಸೇರಿಸಿದಾಗ ಚಿಯಾ ಬೀಜಗಳು ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ.
ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯು ವೇಗವಾಗಿ ಬದಲಾಗುತ್ತಿದೆ. ಕೆಲಸದ ಹೊರೆ ಮತ್ತು ಬದಲಾಗುತ್ತಿರುವ ಆಹಾರ ಪದ್ಧತಿಯಿಂದಾಗಿ ಜನರು ಅನೇಕ ರೀತಿಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಹದಗೆಟ್ಟ ಜೀವನಶೈಲಿಯಿಂದಾಗಿ ಜನರು ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ.

ಸ್ಥೂಲಕಾಯತೆಯು ಈ ಸಮಸ್ಯೆಗಳಲ್ಲಿ ಒಂದಾಗಿದೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೊಂದರೆಗೊಳಗಾಗುತ್ತಿದ್ದಾರೆ. ತಮ್ಮ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ವೇಗವಾಗಿ ಹೆಚ್ಚುತ್ತಿರುವ ತೂಕದ ಬಗ್ಗೆ ಚಿಂತಿತರಾಗಿರುವ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ಚಿಯಾ ಬೀಜಗಳ ಸಹಾಯದಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಈ 5 ವಿಧಾನಗಳಲ್ಲಿ ನೀವು ತೂಕ ನಷ್ಟಕ್ಕೆ ಚಿಯಾ ಬೀಜಗಳನ್ನು ಬಳಸಬಹುದು.
ಚಿಯಾ ಬೀಜದ ಪೋಷಕಾಂಶಗಳು:-
ಚೀಯಾ ಬೀಜಗಳು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಫೈಬರ್, ಪ್ರೊಟೀನ್, ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಈ ಸಣ್ಣ ಬೀಜಗಳು ಬಹಳಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಅದರಲ್ಲಿ ತಿನ್ನಲು ಯೋಗ್ಯವಾಗಿಸುವ ಮತ್ತು ತೂಕ ನಷ್ಟಕ್ಕೆ ಕಾರಣವಾಗುವ ಅಂಶವೆಂದರೆ ಹೆಚ್ಚಿನ ಫೈಬರ್, ಪ್ರೋಟೀನ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು. ಇದು ಹೊಟ್ಟೆ ಪೂರ್ಣತೆಯ ಭಾವನೆಯನ್ನು ನೀಡುತ್ತದೆ.

ಎರಡು ಟೇಬಲ್ಸ್ಪೂನ್ ಅಥವಾ 28 ಗ್ರಾಂ ಈ ಬೀಜಗಳು ನಿಮಗೆ ಸುಮಾರು ಹತ್ತು ಗ್ರಾಂ ಪೈಬರ್ ಅನ್ನು ನೀಡುತ್ತದೆ. ಅಂದರೆ ನೀವು ಪ್ರತಿದಿನ ಮೂರು ರಿಂದ ನಾಲ್ಕು ಟೇಬಲ್ಸ್ಪೂನ್ ಚಿಯಾ ಬೀಜಗಳನ್ನು ಸೇವಿಸಿದರೆ, ನೀವು ಸೇವಿಸುವ ಇತರ ಆಹಾರಗಳೊಂದಿಗೆ ಫೈಬರ್ ಅಂಶದ ಪ್ರಮುಖ ಭಾಗವನ್ನು ರೂಪಿಸುತ್ತದೆ.
ಚಿಯಾ ಬೀಜಗಳ ಜ್ಯೂಸ್
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸಿಕೊಳ್ಳಬಹುದು. ಇದನ್ನು ನಿಮ್ಮ ಆಹಾರದ ಭಾಗವಾಗಿಸಲು ಸುಲಭವಾದ ಮಾರ್ಗವೆಂದರೆ ಅದನ್ನು ನೀರಿಗೆ ಸೇರಿಸಿ ಕುಡಿಯುವುದು. ಇದಕ್ಕಾಗಿ ಚಿಯಾ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ನಂತರ ಚಿಯಾ ಬೀಜಗಳು ಜೆಲ್ ಆಗಿ ಬದಲಾಗುತ್ತವೆ. ಬಳಿಕ ಇದನ್ನು ನೀರಿನಿಂದ ಅಥವಾ ನಿಂಬೆ ರಸ ಅಥವಾ ಕಿತ್ತಳೆ ರಸದೊಂದಿಗೆ ಬೆರೆಸಿ ಕುಡಿಯಬಹುದು.

ಚಿಯಾ ಬೀಜಗಳು ಮತ್ತು ಸಲಾಡ್
ನೀವು ಅತೀ ಹೆಚ್ಚು ತೂಕ ಹೊಂದಿದ್ದರೆ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸಿ ಸೇವಿಸಬಹುದು. ಅದನ್ನು ಸಲಾಡ್‌ಗೆ ಸೇರಿಸುವ ಮೂಲಕವೂ ತಿನ್ನಬಹುದು. ಇದಕ್ಕಾಗಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ. ಪ್ರತಿದಿನ ಸಲಾಡ್ ಮಾಡುವ ವೇಳೆ ಚಿಯಾ ಬೀಜಗಳನ್ನು ಸೇರಿಸಿ ಮತ್ತು ಅದನ್ನು ತಿನ್ನುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚಿಯಾ ಬೀಜದ ಪುಡಿ
ತೂಕವನ್ನು ಕಳೆದುಕೊಳ್ಳಲು ನೀವು ಚಿಯಾ ಬೀಜಗಳನ್ನು ಪುಡಿ ರೂಪದಲ್ಲಿ ತಿನ್ನಬಹುದು. ಇದಕ್ಕಾಗಿ ಚಿಯಾ ಬೀಜಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ನಿತ್ಯ ಸೇವಿಸಲು ನೀವು ಚಿಯಾ ಬೀಜಗಳನ್ನು ರುಬ್ಬಿ ಇಟ್ಟುಕೊಳ್ಳಬಹುದು. ಚಿಯಾ ಬೀಜದ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು.
ಚಿಯಾ ಬೀಜಗಳು ಮತ್ತು ಅಕ್ಕಿ
ಚಿಯಾ ಬೀಜಗಳನ್ನು ನಿಮ್ಮ ಆಹಾರದ ಭಾಗವಾಗಿ ಮಾಡಲು ಯೋಜಿಸುತ್ತಿದ್ದರೆ, ನೀವು ಅದನ್ನು ಅನ್ನದೊಂದಿಗೆ ಬೆರೆಸಿ ತಿನ್ನಬಹುದು. ಇದನ್ನು ಅನ್ನದೊಂದಿಗೆ ಬೇಯಿಸಬಹುದು. ಇದರೊಂದಿಗೆ ನೀವು ಚಿಯಾ ಬೀಜಗಳ ರುಚಿಯನ್ನು ಸಹ ಸವಿಯಬಹುದು.
ಚಿಯಾ ಬೀಜಗಳು ಮತ್ತು ಓಟ್ಮೀಲ್
ನೀವು ಗಂಜಿ ಜೊತೆಗೆ ಚಿಯಾ ಬೀಜಗಳನ್ನು ತಿನ್ನಬಹುದು. ಬೆಳಗಿನ ಉಪಾಹಾರಕ್ಕಾಗಿ ಗಂಜಿ ಸೇವಿಸಿದರೆ, ನೀವು ಅದಕ್ಕೆ ಚಿಯಾ ಬೀಜಗಳನ್ನು ಕೂಡ ಸೇರಿಸಬಹುದು. ಗಂಜಿ ಮಾಡಿದ ನಂತರ ಅದಕ್ಕೆ ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಿ ಅಥವಾ ಅದನ್ನು ಬೆರೆಸಿ ಗಂಜಿ ಮಾಡುವಾಗ ಬೇಯಿಸಬಹುದು.












Click it and Unblock the Notifications