New Year Resolution 2025: ಹೊಸ ವರ್ಷದಲ್ಲಿ ಲೈಫ್‌ಚೇಂಜ್‌ಗೆ ಇಲ್ಲಿದೆ 6 ಸಿಂಪಲ್ ರೆಸ್ಯೂಲೇಷನ್
ಹೊಸ ವರ್ಷ ಶುರುವಾಗುತ್ತಿದೆ. 2025ನೇ ಸಾಲಿನ ಹೊಸ ವರ್ಷದಲ್ಲಿ ನೀವು ಹೊಸ ಸಂಕಲ್ಪವನ್ನು ಮಾಡಿಕೊಂಡು ಏನಾದರೂ ಮಾಡಲೇಬೇಕು ಅಂತ ನಿರ್ಧಸಿದ್ದರೆ, ನಿಮಗೆ ಇಲ್ಲೊಂದಷ್ಟು ಸಿಂಪಲ್ ಟಿಪ್ಸ್ ಇವೆ. ಹೊಸ ವರ್ಷದ 365 ಪುಟಗಳು ನಿಮಗಾಗಿ ಹೊಸದಾಗಿ ತೆರೆದುಕೊಳ್ಳುತ್ತಿವೆ. ಈ ಹೊಸ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನಾದರೂ ಹೊಸ ಬದಲಾವಣೆ ತರಬೇಕು ಎಂದರೆ ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ. ಹೊಸ ವರ್ಷದಲ್ಲಿ ನೀವು ಯಾವೆಲ್ಲ ಕೆಲಸ ಮಾಡಬಹುದು. ಕಳೆದ ವರ್ಷ ಮಾಡಬೇಕು ಎಂದು ಕೊಡ ಯಾವ ವಿಷಯವನ್ನು ಮಾಡಲು ಆಗಲಿಲ್ಲ ಎನ್ನುವ ಬಗ್ಗೆ ಸಣ್ಣ ಪ್ಲಾನ್ ಮಾಡಿಕೊಳ್ಳಿ. ನಿಮ್ಮಲ್ಲಿ ಹೊಸ ಬೆಳವಣಿಗೆ ಕಾಣುವುದಕ್ಕೆ ಹೊಸ ಪ್ಲಾನ್ ಮಾಡಿಕೊಳ್ಳಿ. ಆ ರೀತಿ ಮಾಡಿಕೊಂಡ ಪ್ಲಾನ್‌ಗಳನ್ನು ತಪ್ಪದೆ ಫಾಲೋ ಸಹ ಮಾಡಿ.
* ಫೋನ್ ಕಡಿಮೆ ಬಳಸುವುದಕ್ಕೆ ಪ್ಲಾನ್ ಮಾಡಿ: ಹೊಸ ವರ್ಷದಲ್ಲಿ ನೀವು ಮಾಡಬಹುದಾದ ಸಿಂಪಲ್ ಹಾಗೂ ಸರಳ ಸೂತ್ರವೆಂದರೆ ಫೋನ್ ಬಳಕೆ ಮಾಡುವುದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಸಮಯವನ್ನು ಹೆಚ್ಚು ತಿನ್ನುವುದರಲ್ಲಿ ಮೊಬೈಲ್ ಸಹ ಒಂದಾಗಿದೆ. ನೀವು ಮೊಬೈಲ್ ಕಡಿಮೆ ಬಳಸುವುದರಿಂದ ಹಲವು ಕೆಲಸಗಳನ್ನು ಮಾಡುವುದಕ್ಕೆ ನಿಮಗೆ ಟೈಮ್ ಸಿಗುತ್ತೆ. ಸೋಷಿಯಲ್ ಮೀಡಿಯಾಗಳನ್ನು ಮಿತವಾಗಿ ಬಳಸಿ. ಸೋಷಿಯಲ್ ಮೀಡಿಯಾ ಬಳಸುವುದಕ್ಕೆ ಟೈಮ್ ಫಿಕ್ಸ್ ಮಾಡಿಕೊಳ್ಳಿ. ಇದರಿಂದ ನಿಮಗೆ ಬೇರೆ ಕೆಲಸಗಳನ್ನು ಮಾಡುವುದಕ್ಕೆ ಟೈಮ್ ಸಿಗುತ್ತೆ. ಈ ಸಮಯದಲ್ಲಿ ನೀವು ರೀಲ್ಸ್ ನೋಡುವುದಕ್ಕಿಂತ ಬೇರೆ ಕೆಲಸಗಳನ್ನು ಸಹ ಮಾಡಿಕೊಳ್ಳಬಹುದಾಗಿದೆ. ಇಂದಿನ ಕಾಲದಲ್ಲಿ ಮೊಬೈಲ್ ಬಳಸದೆ ಇರುವುದು ಕಷ್ಟ. ಆದರೆ, ಮೊಬೈಲ್ ಬಳಕೆ ಮಾಡುವ ಸಮಯವನ್ನು ಕಡಿಮೆ ಮಾಡಿಕೊಳ್ಳಿ.

* ಟುಡು ಮಾಡಿಕೊಳ್ಳಿ: ಹೊಸ ವರ್ಷ 2025ರಲ್ಲಿ ನೀವು ನಿಮ್ಮಲ್ಲಿ ಹಾಗೂ ನಿಮ್ಮ ಗುರಿಯಲ್ಲಿ ಯಾವುದಾದರೂ ಬದಲಾವಣೆ ತರಬೇಕು ಎಂದಾದರೆ ಸಿಂಪಲ್ ಟಿಪ್ಸ್ ಇದು. ಪ್ರತಿ ದಿನ ಒಂದು ಟುಡು ಫಾಲೋ ಮಾಡಿ. ಟುಡು ಅಂದರೆ ನೀವು ಪ್ರತಿ ದಿನ ಏನು ಮಾಡಬೇಕು ಎನ್ನುವುದನ್ನು ಒಂದು ಲಿಸ್ಟ್ ಮಾಡಿಕೊಳ್ಳಿ. ಪ್ರತಿ ದಿನ ಅಥವಾ ಪ್ರತಿ ವಾರಕ್ಕೆ ಒಂದು ಟುಡು ಮಾಡಿಕೊಳ್ಳಿ. ಇದಕ್ಕೆ ಅಂತ ಒಂದು ಡೈಲಿ ಇಟ್ಟುಕೊಳ್ಳಿ. ಅದರಲ್ಲಿ ಪ್ರತಿ ದಿನ ಅಥವಾ ಪ್ರತಿ ವಾರ ಎನೆಲ್ಲ ಕೆಲಸ ಮಾಡಬೇಕು ಅಂತ ಬರೆದಿಟ್ಟುಕೊಳ್ಳಿ. ಇಲ್ಲ ನೀವು ಪೋನ್‌ನಲ್ಲೂ ಸಹ ಟುಡು ಟೈಪ್ ಮಾಡಿ ಇಟ್ಟುಕೊಳ್ಳಬಹುದು. ಯಾವ ಕೆಲಸ ಮಾಡಿದ್ದೇನೆ ಎನ್ನುವುದನ್ನು ದಿನದ ಕೊನೆಯಲ್ಲಿ ಟಿಕ್ ಮಾಡಿ. ನೀವು ಹಾಕಿಕೊಂಡ ಪ್ಲಾನ್‌ನಲ್ಲಿ ಎಷ್ಟು ಆಗಿದೆ. ಇನ್ನೆಷ್ಟು ಆಗಿಲ್ಲ ಎನ್ನುವ ಸಿಂಪಲ್ ಲೆಕ್ಕ ನಿಮಗೆ ಅಲ್ಲಿಂದಲೇ ಸಿಗಲಿದೆ.
* ಹಾಕಿಕೊಂಡ ಪ್ಲಾನ್ ಆಗಿದೆಯೇ ಅಂತ ನೋಡಿ: ಪ್ಲಾನ್ ಹಾಕಿಕೊಳ್ಳುವಷ್ಟೇ ಹಾಕಿಕೊಂಡ ಪ್ಲಾನ್ ಸಕ್ಸ್‌ಸ್ ಆಗಿದೆಯೇ ಎನ್ನುವುದು ಕೂಡ ಮುಖ್ಯ. ನೀವು ಯಾವುದೇ ಪ್ಲಾನ್‌ಗಳನ್ನು ಹಾಕಿಕೊಂಡರೂ, ಆ ಕೆಲಸ ಆಗಿದೆಯೇ ಅಂತನೂ ಚೆಕ್ ಮಾಡಿ. ಪ್ರತಿ ದಿನ ನೀವು ಇದನ್ನು ಮಾಡಬಹುದು. ಇಲ್ಲವೇ ವಾರದ ಕೊನೆಯಲ್ಲಿ ಟುಡು ಹಾಕಿಕೊಂಡಿದ್ದಕ್ಕೂ ಹಾಗೂ ಮಾಡಿರುವುದಕ್ಕೂ ಎಷ್ಟು ವ್ಯತ್ಯಾಸ ಇದೆ ಎಂದು ನೋಡಿ. ಈ ರೀತಿ ಮಾಡುವುದರಿಂದ ನೀವು ಪ್ಲಾನ್ ಹಾಕಿಕೊಂಡಂಗೆ ಮಾಡುತ್ತಿದ್ದೀರಾ ಅಂತ ಗೊತ್ತಾಗುತ್ತೆ.
* ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ: ಮೊಬೈಲ್ ಬಂದ ಮೇಲೆ ನಾವೆಲ್ಲ ಮನೆಯವರೊಂದಿಗೆ ಕಾಲ ಕಳೆಯುವುದೇ ಕಡಿಮೆ ಆಗಿದೆ. ಎಲ್ಲರೂ ಒಂದಾಗಿ ಮನೆಯವರೊಂದಿಗೆ ಕಾಲ ಕಳೆಯುವುದರಿಂದ ಸಿಗುವ ಖುಷಿಯೇ ಬೇರೆ. ಅಲ್ಲದೆ ಮನೆಯವರ ಜೊತೆಗೆ ಇರುವ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ. ಎಲ್ಲರೂ ಸೇರಿ ಸಿನಿಮಾ ನೋಡುವುದು ಹಾಗೂ ಊಟ ಮಾಡುವುದು. ಹೊರಗೆ ಹೋಗಿ ಬರುವ ಸಿಂಪಲ್ ಪ್ಲಾನ್‌ಗಳನ್ನು ಮಾಡಿಕೊಳ್ಳಿ. ಇದರಿಂದ ನಿಮ್ಮ ಕುಟುಂಬದ ನಡುವೆ ಬಾಂಧವ್ಯ ವೃದ್ಧಿ ಆಗುತ್ತದೆ. ಅಲ್ಲದೆ ಕೆಲಸದ ಒತ್ತಡ ಕಡಿಮೆ ಆಗುತ್ತದೆ.

* ಚಿಕ್ಕ ಚಿಕ್ಕ ಪ್ರವಾಸದ ಪ್ಲಾನ್ ಮಾಡಿಕೊಳ್ಳಿ: ಪ್ರವಾಸ ಮಾಡುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಆದರೆ, ಸಮಯ ಹಾಗೂ ಹಣಕಾಸಿನ ತೊಡಕಿನಿಂದ ಹಲವರು ಪ್ರವಾಸದ ಪ್ಲಾನ್‌ಗಳನ್ನು ಮುಂದೂಡುವುದು ಇದೆ. ಆದರೆ, ಪ್ರವಾಸವನ್ನು ಸಣ್ಣ ಖರ್ಚುಗಳಲ್ಲಿ ಹಾಗೂ ಕಡಿಮೆ ಸಮಯದಲ್ಲೂ ಮಾಡಬಹುದು. ಈ ರೀತಿ ಮಾಡುವುದರಿಂದ ಹೊಸ ವರ್ಷದಲ್ಲಿ ನೀವು ಹೊಸ ಜಾಗಗಳನ್ನು ನೋಡಬಹುದು. ಕೆಲಸದ ಒತ್ತಡದಿಂದ ಸ್ವಲ್ಪ ನಿರಾಳರಾಗುವುದಕ್ಕೂ ಇದರಿಂದ ಸಾಧ್ಯವಿದೆ. ಒಂದು ದಿನದ ಪ್ರವಾಸದ ಪ್ಲಾನ್‌ಗಳನ್ನು ಮಾಡಿಕೊಳ್ಳಿ. ಇದರಿಂದ ರಜೆಯ ಅವಶ್ಯಕತೆಯೂ ಇರುವುದಿಲ್ಲ. ಅಲ್ಲದೆ ಕಡಿಮೆ ಬಜೆಟ್‌ನಲ್ಲಿ ಪ್ರವಾಸ ಮಾಡಬಹುದು.
* ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ: ಇದು ಸಣ್ಣ ರೆಸ್ಯೂಲೆಷನ್ ಇರಬಹುದು. ಆದರೆ, ಇದರಿಂದ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಿದೆ. ಮಧ್ಯರಾತ್ರಿಯವರೆಗೆ ಮಲಗದೆ ಎಚ್ಚರವಾಗಿದ್ದರೆ ನಿಮ್ಮ ಬೆಳಗ್ಗೆಯ ಪ್ಲಾನ್‌ಗಳು ತಲೆಕೆಳಗಾಗುತ್ತವೆ. ಹೊಸ ವರ್ಷದಲ್ಲಿ ಬೇಗ ಮಲಗಿ ಬೇಗ ಏದ್ದೇಳುವುದರಿಂದ ನಿಮ್ಮ ಹಲವು ಕೆಲಸಗಳು ಆಗುತ್ತವೆ. ಕ್ರಿಯೇಟಿವ್ ಕೆಲಸಗಳು ನಡೆಯಬೇಕು ಎಂದಾದರೆ ನೀವು ಸರಿಯಾದ ಸಮಯಕ್ಕೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications