ಪೇಷಂಟ್ ರೀಟಾಗೇ ಏನು ಮಾಡಿದೆ ಹೇಳೋ!
ಆ ದಿನ ಡಾಕ್ಟರ್ ಸುಬ್ಬು ಕ್ಲಿನಿಕ್ಕಿಗೆ ಸಿಕ್ಕಾಪಟ್ಟೆ ಲೇಟಾಗಿ ಬಂದ. ವೈದ್ಯರು ಬರುವುದನ್ನೇ ಕಾಯುತ್ತ ಹಲವಾರು ರೋಗಿಗಳು ಕುಳಿತಿದ್ದರು. ಆದರೆ, ಡಾ. ಸುಬ್ಬು ಬರುವಷ್ಟರಲ್ಲಿ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದರೂ ಕೆಲ ಗಿರಾಕಿಗಳು ಜಾಗ ಖಾಲಿ ಮಾಡಿದ್ದರು.
ದುಡುದುಡು ಬಂದು ಆಸ್ಪತ್ರೆಯಲ್ಲಿ ಕಾಲಿಟ್ಟವನೇ ಡಾ. ಸುಬ್ಬು ಅಪಾಯಿಂಟ್ಮೆಂಟ್ ಪಡೆದವರ ಪಟ್ಟಿಯನ್ನು ಕಾಂಪೌಂಡರ್ ಡಿಬ್ಬಿಯಿಂದ ಇಸಿದುಕೊಂಡ. ನೋಡ್ತಾನೆ... ಮೊದಲನೇ ಮೂರು ರೋಗಿಗಳ ಹೆಸರುಗಳನ್ನು ಡಿಬ್ಬಿಯೇ ಕಾಟು ಹಾಕಿದ್ದ. ಯಾಕೆ ಕಾಟು ಹಾಕಿದೆ ಎಂದು ಡಾ. ಸುಬ್ಬು ಡಿಬ್ಬಿಯನ್ನು ಕೇಳಿದ.
ಡಿಬ್ಬಿ ಸ್ಟೈಲಾಗಿ, "ಡಾಕ್ಟ್ರೆ, ಒಬ್ಬನಿಗೆ ಸಿಕ್ಕಾಪಟ್ಟೆ ತಲೆನೋವು ಬಂದಿತ್ತು. ನಾನು ಆತನಿಗೆ ಎರಡು ಸಾರಿಡಾನ್ ಕೊಟ್ಟು ಕಳಿಸಿದೆ. ಇಲ್ಲಿದೆ ನೋಡಿ ಸಾರ್, 100 ರು." ಅಂತ ಸುಬ್ಬು ಕೈಗೆ ತುರುಕಿದ.
"ವಾವ್ ಒಳ್ಳೆ ಕೆಲಸ ಮಾಡಿದ್ದಿಯಾ ಡಿಬ್ಬಿ. ಎರಡನೇಯವನು ಎಲ್ಲಿ?" ಅಂತ ಸುಬ್ಬು ದುಡ್ಡು ಜೇಬಿಗೆ ತುರುಕಿಕೊಳ್ಳುತ್ತ ಪ್ರಶ್ನಿಸಿದ.
"ಸಾರ್, ಎರಡನೇಯವನು ಸಿಕ್ಕಾಪಟ್ಟೆ ಸೀನ್ತಿದ್ದಾ. ಅವನಿಗೆ ಕೋಲ್ಡರಿನ್ ಕೊಟ್ಟು ಸಾಗಹಾಕಿದೆ. ತಗೊಳ್ಳಿ ಡಾಕ್ಟ್ರೆ ಇನ್ನೊಂದು ನೂರು ರುಪಾಯಿ" ಅಂತ ಮತ್ತೆ 100 ರು. ನೇರವಾಗಿ ಸುಬ್ಬು ಜೇಬಿಗೆ ತುರುಕಿದ.
"ಫಂಟಾಸ್ಟಿಕ್ ಡಿಬ್ಬಿ, ನೀನೂ ವೈದ್ಯನಾಗುವ ಎಲ್ಲ ಲಕ್ಷಣ ತೋರಿಸ್ತಿದ್ದೀಯಾ. ಈ ಮೂರನೇಯವಳು ರೀಟಾ ಅಲ್ವಾ. ಅವಳದೇನು ಕಥೆ. ಅವಳ್ಯಾಕೆ ಕಾಣ್ತಿಲ್ಲ?" ಅಂತ ಸುಬ್ಬು ಅತ್ತಿತ್ತ ಕಣ್ಣಾಡಿಸುತ್ತ ಕೇಳಿದ.
"ಆ ರೀಟಾ ನಿಮ್ ಮನೆ ಹಿಂದಿರೋಳು ಅಲ್ವಾ ಡಾಕ್ಟ್ರೆ. ಆಕೆ ಒಂಥಾರಾ ವಿಚಿತ್ರವಾಗಿ ಆಡುತ್ತಿದ್ದಳು. ಅವಳು ಆಡ್ತಾ ಇದ್ದದ್ದು ನೋಡಿದ್ರೆ, ನನ್ನ ಹೃದಯದ ಮಿಡಿತವೇ ತಪ್ಪುತ್ತಿತ್ತು" ಅಂತ ತಲೆಬುಡ ಅರ್ಥವಾಗದಂತೆ ಹೇಳಿದ ಡಿಬ್ಬಿ.
"ಲೇ ಮಗನೆ, ರೀಟಾ ಏನು ಮಾಡಿದಳು, ಅದ್ಯಾಕೆ ಹಾಗೆ ಮಾಡಿದಳು ಬೊಗಳೋ" ಅಂತ ಅಸಹನೆಯಿಂದ ಸುಬ್ಬು ಕಿರುಚಿದ.
"ಡಾಕ್ಟ್ರೇ, ಇದ್ದಕ್ಕಿದ್ದಂತೆ ತನ್ನ ಮೇಲಿನ ಎಲ್ಲಾ ಬಟ್ಟೆಗಳನ್ನು ತಟಕ್ಕಂತ ಬಿಚ್ಹಾಕಿದವಳೆ, ಕಳೆದೈತು ತಿಂಗಳಿನಿಂದ ಯಾವ ಪುರುಷನನ್ನೂ ಕಂಡೇ ಇಲ್ಲ. ದಯವಿಟ್ಟು ನನ್ನ ಮೇಲೆ ಕರುಣೆ ತೋರು, ನನಗೆ ಸಹಾಯ ಮಾಡು ಅಂತ ಅಂಗಲಾಚಿದಳು" ಎಂದು ಹೇಳುವಷ್ಟರಲ್ಲಿ ವಿಪರೀತ ಬೆವತಿದ್ದ ಡಿಬ್ಬಿ ಏದುಸಿರುಬಿಡುತ್ತಿದ್ದ.
"ಅದಕ್ಕೆ ನೀನೇನು ಮಾಡಿದೆ ಹೇಳೋ ಲೋಫರ್" ಅಂತ ಸಾಲಿನಲ್ಲಿ ಕುಳಿತಿದ್ದ ಎಲ್ಲಾ ಪೇಷಂಟುಗಳು ಕಿತ್ತು ಓಡಿಹೋಗುವ ಹಾಗೆ ಡಾಕ್ಟರ್ ಸುಬ್ಬು ಪೇಷನ್ಸ್ ಕಳೆದುಕೊಂಡು ಅರಚಿದ.
"ಅವಳ ಕಣ್ಣಿಗೆ ಐ ಡ್ರಾಪ್ ಹಾಕಿ ಹಾಗೆಯೇ ಹದಿನೈದು ನಿಮಿಷ ಕುಳ್ಳಿರಿಸಿ ಕಳಿಸಿದೆ" ಉತ್ತರಿಸಿದ ಡಿಬ್ಬಿ.
ವಿಪರೀತ ಗಾಳಿ ತುಂಬಿ ಢಮಾರ್ ಅನ್ನುವ ಬಲೂನಿನಂತಾಗಿದ್ದ ಡಾಕ್ಟರ್ ಸುಬ್ಬು, ಡಿಬ್ಬಿಯ ಕೊನೆಯ ಮಾತು ಕೇಳುತ್ತಲೇ ಗಾಳಿ ಟುಸ್ ಅಂದ ಬಲೂನಿನಂತಾಗಿದ್ದ. [ಡಾಕ್ಟರ್ ಜೋಕ್ಸ್]












Click it and Unblock the Notifications