ಸುಬ್ಬುವಿನ ಸ್ತನಾತಿರೇಕ ಮತ್ತು ಡಿಬ್ಬಿಯ ಪರೀಕ್ಷೆ
ಬ್ರಹ್ಮಚಾರಿಯಾಗಿದ್ದ ಸುಬ್ಬುವಿಗೆ ಮಹಿಳೆಯರ ಸ್ತನಗಳನ್ನು ಕಂಡರೆ ಅದೇನೋ ಆಸಕ್ತಿ. ಒಂದು ಅಧ್ಯಯನದ ಪ್ರಕಾರ ಬ್ರಹ್ಮಚಾರಿಯಾಗಿರದ ಪುರುಷರಿಗೂ ಅನ್ಯ ಮಹಿಳೆಯರ ಸ್ತನಗಳ ಬಗ್ಗೆ ಒಂದು ವಿಧವಾದ ಆಸಕ್ತಿ ಇದ್ದೇ ಇರುತ್ತದೆ ಎಂದಿದ್ದರೂ, ಸುಬ್ಬುವಿನ ಸ್ತನ ಆಕರ್ಷಣೆ ವಿಪರೀತವಾಗಿ ಅನೇಕ ಬಾರಿ ಮುಜುಗರಕ್ಕೆ ಒಳಗಾಗಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಆತನಿಗೇ ಮುಜುಗರವಾಗುತ್ತಿತ್ತು.
ಇದಕ್ಕೇನಾದರೂ ಪರಿಹಾರ ಕಂಡುಕೊಳ್ಳಲೇಬೇಕೆಂದು ಸೈಕಿಯಾಟ್ರಿಸ್ಟ್ ಬಳಿ ಸುಬ್ಬು ಹೋದ. ಆತನ ವಿವರಣೆಗಳನ್ನೆಲ್ಲ ಕೂಲಂಕಷವಾಗಿ ಕೇಳಿದ ಡಾ. ಡಿಬ್ಬಿ, "ನಿನ್ನ ಸ್ತನಾತಿರೇಕದ ಮರ್ಮವನ್ನು ಅರಿಯಲು ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯಲು ಒಂದು ಪರೀಕ್ಷೆ ಮಾಡಬೇಕು" ಎಂದು ಸುಬ್ಬುವಿಗೆ ಹೇಳಿದರು. ಸುಬ್ಬುವೂ ರೆಡಿಯಾದ.
"ನಾನು ಕೆಲವೊಂದು ವಸ್ತುಗಳನ್ನು ಹೇಳುತ್ತೇನೆ. ಅದನ್ನು ಕಂಡರೆ ನಿಮಗೆ ಏನು ನಿನ್ನ ಕಲ್ಪನೆಗೆ ಬರುತ್ತದೆ ಎಂದು ಹೇಳಬೇಕು" ಎಂದು ಡಾ. ಡಿಬ್ಬಿ ಹೇಳಿದರು.
"ಕೇಳಿ ಡಾಕ್ಟರ್" ಎಂದ ಸುಬ್ಬು.
"ಕಿತ್ತಳೆ ಹಣ್ಣು"
"ಸ್ತನ"
"ಸೇಬು ಹಣ್ಣು"
"ಸ್ತನ"
"ಪಪ್ಪಾಯಿ ಹಣ್ಣು"
"ಸ್ತನ"
"ಕಲ್ಲಂಗಡಿ ಹಣ್ಣು"
"ಸ್ತನ"
"ಕಾರಿನ ವೈಪರ್ಸ್"
"ಸ್ತನ"
"ತಡಿ, ತಡಿ, ತಡಿ. ಅಲ್ಲಯ್ಯಾ, ಕಿತ್ತಳೆ, ಸೇಬು, ಪಪ್ಪಾಯಿ, ಕಲ್ಲಂಗಡಿ ಅಂದ್ರೆ ಸ್ತನ ನೆನಪಿಗೆ ಬರುತ್ತದೆ ಎಂಬುದೇನೋ ಸರಿ, ಆದರೆ, ಕಾರಿನ ಗ್ಲಾಸ್ ವೈಪರ್‌ಗೂ ಸ್ತನಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ" ಎಂದು ಆಶ್ಚರ್ಯಚಕಿತರಾಗಿ ಕೇಳಿದರು.
"ಅಷ್ಟೂ ಗೊತ್ತಾಗಲಿಲ್ಲವಾ? ಬಲಗಡೆ ಸ್ತನಕ್ಕೊಂದು ಎಡಗಡೆ ಸ್ತನಕ್ಕೊಂದು!"












Click it and Unblock the Notifications