ಪ್ರೇಮಿಗಳ ದಿನದಂದು ಜೀಕುತ್ತಿದೆ 'ಜೋಕು' ಜೋಕಾಲಿ!

Posted By:
Subscribe to Oneindia Kannada

ವಿಶ್ವದಾದ್ಯಂತ ಪ್ರೇಮಿಗಳ ದಿನ ಅದ್ಧೂರಿಯಾಗಿ ಆಚರಣೆಗೊಳ್ಳುತ್ತಿದೆ. ಹಲವು ಬಲಪಂಥೀಯರ ವಿರೋಧಗಳ ನಡುವಲ್ಲೂ ಭಾರತದಲ್ಲಿ ಪ್ರೇಮಿಗಳ ದಿನ ಯಾವ ಅಡೆತಡೆಗಳಿಲ್ಲದೆ ನಡೆಯುತ್ತಿದೆ.

ಕಾಲೇಜಿನ ಮೊದಲ ಕ್ರಶ್, ಮೊದಲ ಪ್ರೇಮ ಪತ್ರ, ಮೊದಲ ಭೇಟಿ, ಮೊದಲ ಮಾತು. ಮೊದಲು ಉಡುಗೊರೆ... ಹೀಗೇ ಹಲವು ಪ್ರಥಮಗಳನ್ನು ನೆನಪಿಸುವುದಕ್ಕೆ ಪ್ರೇಮಿಗಳ ದಿನ ಬುನಾದಿಯಾಗಿದೆ.

ಒಂದಷ್ಟು ಜನರ ಪಾಲಿಗೆ ಈ ಪ್ರೇಮಿಗಳ ದಿನ ಎಂದರೆ ಹೊಸ ಬದುಕಿನ ನಿರೀಕ್ಷೆ, ಮತ್ತಷ್ಟು ಜನರಿಗೆ ಬದುಕಿನ ಸಂಗಾತಿಯ ಆಯ್ಕೆಗೆ ಸಿಕ್ಕ ಅವಕಾಶ, ಮತ್ತೆಷ್ಟೋ ಜನರಿಗೆ ಟೈಮ್ ಪಾಸ್!

ಅದೇನೇ ಇರಲಿ, ಪ್ರೇಮಿಗಳ ದಿನದಂದು ಹಲವರು ತಮ್ಮ ಪ್ರೇಮಿಗೆ ಸಿಹಿ ಸಿಹಿ ಸಂದೇಶ ಕಳಿಸುತ್ತಿರುವ ಹೊತ್ತಲ್ಲೇ, ಈ ದಿನಕ್ಕೆ ಸಂಬಂಧಿಸಿದಂತೆ ಹಲವು ಜೋಕುಗಳು ಸಾಮಾಜಿಕ ತಾಣಗಳಲ್ಲಿ ಓಡಾಡುತ್ತಿವೆ. ಅವುಗಳಲ್ಲಿ ಕೆಲವು ಇಲ್ಲಿವೆ.

ತಾಜ್ ಮಹಲ್ ಕಟ್ಟಲೇ..?!

ತಾಜ್ ಮಹಲ್ ಕಟ್ಟಲೇ..?!

ಗಂಡ: ಪ್ರಿಯೆ ನಿನಗೋಸ್ಕರ ತಾಜ್ ಮಹಲ್ ಕಟ್ಟಲೇ? ಗೋಳ ಗುಮ್ಮಟ ಕಟ್ಟಲೇ?
ಹೆಂಡತಿ: ನಿನ್ ಮುಖಕ್ ಬೆಂಕಿ ಹಾಕ, ಮೊದ್ಲು ಧರ್ಮಸ್ಥಳ ಸಂಘದ ಸಾಲ ಕಟ್ಟ..!

ಮೇಕಪ್ ಇಲ್ಲಾಂದ್ರೆ ಬ್ರೇಕಪ್ಪೇ!

ಮೇಕಪ್ ಇಲ್ಲಾಂದ್ರೆ ಬ್ರೇಕಪ್ಪೇ!

ಫೆ 13 ಕ್ಕೆ ಬ್ಯೂಟಿಪಾರ್ಲರ್ ಬಂದ್ ಮಾಡಿದ್ರೆ, ಫೆ 14ಕ್ಕೆ ಎಷ್ಟೋ ಹುಡ್ಗೀರು ಮನೆಯಿಂದ ಹೊರಗಡೆನೇ ಬರಲ್ಲ!

ಯಾಕಂದ್ರೆ ಅವರಿಗೂ ಭಯ, 'ಮೇಕಪ್ ಇಲ್ಲಾಂದ್ರೆ ಬ್ರೇಕಪ್ಪೇ ಅಂತ!

ಪ್ರೇಮಿಗಳ ದಿನದ ಸುಳ್ಳುಗಳು!

ಪ್ರೇಮಿಗಳ ದಿನದ ಸುಳ್ಳುಗಳು!

ಫೆಬ್ರವರಿ 14ರಂದು ಹೇಳಲ್ಪಡುವ ಅತಿ ದೊಡ್ಡ ಸುಳ್ಳುಗಳು...
ಹುಡುಗರು: ಅಪ್ಪಾ ಎಕ್ಸಾಮ್ ಪೀಸ್
ಕಟ್ಟೋಕೆ ಹಣ ಬೇಕು.
ಹುಡುಗೀರು: ಅಮ್ಮಾ ಸ್ಪೆಷಲ್ ಕ್ಲಾಸ್ ಇದೆ.
ಬರುವಾಗ ಲೇಟ್ ಆಗುತ್ತೆ..!

ಹೊಸ ಪಂಗಡಗಳು!

ಹೊಸ ಪಂಗಡಗಳು!

ಫೆಬ್ರವರಿ ಹದಿನಾಲ್ಕರ ಮರುದಿನದ ಹುಟ್ಟಿಕೊಳ್ಳುವ ಎರಡು ಹೊಸ ಪಂಗಡಗಳು...
* ನಾರಿಗೆ ಶರಣಾದವರು
* ಬಾರಿಗೆ ಶರಣಾದವರು

ಅತೀ ಖುಷಿ ಕೊಡೋ ಮೆಸೇಜ್

ಅತೀ ಖುಷಿ ಕೊಡೋ ಮೆಸೇಜ್

ನಾವು college ಅಲ್ಲಿ ಇದ್ದಾಗ ಅನ್ಕೋತಿದ್ವಿ
'I LOVE YOU' ಅನ್ನೋದು ತುಂಬಾ ಖುಷಿ ತರುವಂತ ಮೆಸೇಜ್ ಅಂತ.
ಆದ್ರೆ ಈಗ ಅನಿಸ್ತಿದೆ ನಿಜವಾಗಿಯೂ ಖುಷಿ ತರೋ ಮೆಸೇಜ್ ಅಂದ್ರೆ
SALARY HAS BEEN CREDITED TO YOUR ACCOUNT xxxxxx1234

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Whole world is celebrating valentine's day on Feb 14th. Here are few Kannada jokes on Valentine's day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ