ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಗುಂಡನ ಸುಖ ದಾಂಪತ್ಯ ಜೀವನದ ಗುಟ್ಟು ರಟ್ಟು
ತಿಮ್ಮ: ನಿನ್ನ ಸುಖ ದಾಂಪತ್ಯ ಜೀವನದ ಗುಟ್ಟೇನು?
ಗುಂಡ: ತಿಂಗಳಿಗೆ ಎರಡು ಸಲ ನಾವು ರಜೆಯಲ್ಲಿ ತೆರಳುತ್ತೇವೆ. ಮೊದಲ 15 ದಿನ ನಾನು ರಜೆಯಲ್ಲಿ ಪ್ರವಾಸಕ್ಕೆ ತೆರಳಿದರೆ, ಉಳಿದ 15 ದಿನ ಅವಳು ರಜೆಯಲ್ಲಿ ತೆರಳುತ್ತಾಳೆ.
***
ಪ್ರಾಣಿ ಸಂಗ್ರಹಾಲಯದಲ್ಲಿದ್ದ ಆನೆ ಸಾವನ್ನಪ್ಪಿತು. ಗುಂಡ ಒಂದೇ ಸವನೆ ಅಳುತ್ತಿದ್ದ. ಅಲ್ಲಿಗೆ ಬಂದ ತಿಮ್ಮ
ತಿಮ್ಮ: ಯಾಕೋ ಅಳ್ತಾ ಇದ್ದೀಯಾ?
ಗುಂಡ: ಆನೆ ಸತ್ತು ಹೋಯ್ತು.
ತಿಮ್ಮ: ಆನೆ ಅಂದರೆ ನಿನಗೆ ಅಷ್ಟು ಇಷ್ಟನಾ?
ಗುಂಡ: ಇಲ್ಲ..
ತಿಮ್ಮ: ಮತ್ಯಾಕೆ ಅಳ್ತಾ ಇದ್ದೀಯಾ?
ಗುಂಡ: ಆನೆ ಸಮಾಧಿ ಮಾಡೋಕೆ ಗುಂಡಿ ತೆಗೀ ಅಂತ ಸಾಹೇಬ್ರು ಹುಕುಂ ಮಾಡಿದ್ದಾರೆ.
***
ಗುಂಡ ಮತ್ತು ಅವನ ಹೆಂಡತಿ ಬಟ್ಟೆ ಅಂಗಡಿಯಲ್ಲಿದ್ದರು.
ಗುಂಡ: ಸೀರೆ ನೀನೆ ಆರಿಸು. ನೀನೆ ತಾನೇ ಉಡೋದು..
ಗುಂಡಿ: ಪರವಾಗಿಲ್ಲ, ನೀವೇ ಆರಿಸಿ. ನೀವೇ ತಾನೇ ಒಗೆಯೋದು.
Comments
English summary
Kannada Jokes for the day. Jokes between Gunda, Thimma and Gundi.
Story first published: Monday, May 21, 2012, 20:30 [IST]