ಜೋಕು : ಹೆಂಡತಿ ತನ್ನ ಗಂಡನಿಗೆ ಕಳಿಸಿದ ಸಂದೇಶ

ತವರುಮನೆಗೆ ಹೋದ ಹೆಂಡತಿ ತನ್ನ ಗಂಡನಿಗೆ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸಿದಳು:

1. ಕೆಲಸದ ಮೀನಾಗೆ ಸಂಬಳ ಚುಕ್ತಾ ಮಾಡಿದ್ದೇನೆ. ನಾನು ಊರಿಂದ ಬರುವವರೆಗೂ ಅವಳು ಬರಲ್ಲ, ಅವರಮ್ಮ ಬರುತ್ತಾಳೆ.

2. 10 ದಿನಗಳ ಕಾಲ ವೈಫೈ ಕಟ್ ಮಾಡು ಅಂತ ಪ್ರೊವೈಡರ್‌ಗೆ ಹೇಳಿದ್ದೇನೆ. ಬೇಗ ಮಲಗಿ. ನಿಮ್ಮ external HDD ಕೇಬಲ್‌ಗಾಗಿ ಹುಡುಕ ಬೇಡಿ. ಅದು ನನ್ನ ಬಳಿನೇ ಹ್ಯಾಂಡ್ ಬ್ಯಾಗ್‌ನಲ್ಲಿದೆ..

3. ನೀವು ತುಂಬಾ ಹೆಲ್ತಿಯಾಗಿದ್ದೀರ. ಮಾತು ಮಾತಿಗೂ ಆ ಲೇಡಿ ಡಾಕ್ಟರ್ ಹತ್ರ ಚೆಕಪ್‌ಗೆ ಹೋಗಬೇಡಿ.

Jokes for the Day | Husband -Wife Jokes

4. ನಿಮ್ಮ ನಾದಿನಿ ಹುಟ್ಟಿದಹಬ್ಬ ಹೋದ ತಿಂಗಳಲ್ಲೇ ಆಗಿಹೋಗಿದೆ. ನಾವಿಬ್ಬರೂ ಹೋಗಿ ಬಂದಿದ್ದೆವು. ನಡುರಾತ್ರಿ ಹೋಗಿ ಅವಳಿಗೆ ಬಿಲೇಟೆಡ್ ಬರ್ತ್ ಡೇ ವಿಶಸ್ ಹೇಳಬೇಕಾದ ಅಗತ್ಯವಿಲ್ಲ. ನಮ್ಮ ಭಾಮೈದ ಕರಾಟೆ ಕಲಿಯುತ್ತಿದ್ದಾನಂತೆ. ಹುಷಾರಾಗಿರಿ.

5. ಪಕ್ಕದ ಮನೆಯವರನ್ನು ಬೆಳಗ್ಗೆಯೇ ಎಬ್ಬಿಸಿ ಪೇಪರ್ ಬಂದಿದೆಯಾ, ಹಾಲು ಬಂತಾ ಎಂದು ಕಿರಿಕಿರಿ ಮಾಡಬೇಡಿ.

6. ಬೀರುನಲ್ಲಿ ಬಲಗಡೆ ನಿಮ್ಮ ಚಡ್ಡಿಗಳಿವೆ. ಎಡಗಡೆ ಇರುವುದು ಪಾಪುದು. ಆಫೀಸಿನಿಂದ ಏನೋ ಎಲ್ಲಾ ಕಸಿವಿಸಿಯಾಗಿದೆಯೆಂದು ಹೋದಸಲ ತುಂಬಾ ರಾಮಾಯಣ ಮಾಡಿದ್ದಿರಿ ನೆನಪಿದೆಯಾ?

7. ಮೊಬೈಲ್ ಫೋನ್ ಬಾತ್ರೂಮ್ ಸೋಪ್ ಬಾಕ್ಸ್‌ನಲ್ಲಿಟ್ಟು ಮನೆಯಲ್ಲಾ ಎರಡು ದಿನ ಹುಡುಕಾಡಿದಿರಿ. ಕನ್ನಡಕ ಫ್ರಿಡ್ಜ್‌ನಲ್ಲೇ ಇತ್ತು.

8. ಇನ್ನೂ ಜಾಸ್ತಿ ಸ್ಮಾರ್ಟ್ ಆಗಿ ತಯಾರಾಗಬೇಡಿ....!!!!!
ನಮ್ಮ ಬೀದಿಯಲ್ಲಿರುವ ಮಿಸೆಸ್ ಸ್ವಾತಿ, ಜ್ಯೋತಿ, ರಾಧಿಕಾ ಮೂವರೂ ಊರಲಿಲ್ಲ.

9. ಮಾಮೂಲಿಯಂತೆ ನಾನು ಯಾವಾಗ ಬೇಕಿದ್ದರೂ ವಾಪಸ್ ಬರುವ ಸಾಧ್ಯತೆಗಳು ಇದ್ದೇ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+