ನಾ ಮಾಡಿದ್ದಲ್ಲಾ.. ನಾ ಮಾಡಿದ್ದಲ್ಲಾ.. ಹಾಗಾದ್ರೆ ಯೂಸ್ ಮಾಡಿದ್ದು ಯಾರು? ಕರ್ಮ ರಿಟರ್ನ್ಸ್
ಮನೆಯ ಫೋನ್ ಬಿಲ್ ತುಂಬಾನೇ ಜಾಸ್ತಿ ಬಂದಿತ್ತು. ಪ್ರತಿ ತಿಂಗಳು ಜಾಸ್ತಿನೇ ಬರುತ್ತಿತ್ತು. ಆದರೆ, ಈ ತಿಂಗಳು, ಹೋದ ತಿಂಗಳಿಗಿಂತ ಜಾಸ್ತಿ ಬಂದಿತ್ತು. ಮನೆಯ ಯಜಮಾನ ಮನೆಯವರನ್ನೆಲ್ಲಾ ಕೂಗಿ ಕರೆದ.
ಯಜಮಾನ : ನಾನು ಮನೆ ಫೋನ್ ಯೂಸ್ ಮಾಡೋದೇ ಇಲ್ಲ ಆಫೀಸ್ ಫೋನನ್ನೇ ಬಳಸೋದು. ಯಾರು ಇಷ್ಟೊಂದು ಕಾಲ್ ಮಾಡಿದ್ದು?
ಹೆಂಡತಿ : ನಾನೂ ಆಫೀಸ್ ಫೋನಲ್ಲೇ ಮಾತಾಡುವುದು. ನೆಂಟರಿಸ್ಟರಿಗೆಲ್ಲಾ ಮನೆ ಫೋನಿಂದ ಮಾತಾಡಿದರೆ ಹೇಗೆ ನಡೆಯುತ್ತೆ?

ಮಗ : ಅಮ್ಮಾ.. ನಿನಗೆ ಗೊತ್ತೇ ಇದೆ. ನಾನು ಬೆಳಿಗ್ಗೆ 7 ಗಂಟೆಗೆ ಆಫೀಸ್ ಗೆ ಹೋಗುತ್ತೇನೆ. ಆಫೀಸ್ ಫೋನನ್ನೇ ಯೂಸ್ ಮಾಡುವುದು.
ಮಗಳು : ಕಂಪನಿ ನನಗಾಗಿ ಫೋನ್ ಕೊಟ್ಟಿದೆ. ಸೋ ಅದನ್ನೇ ಯೂಸ್ ಮಾಡೋದು. ಅಂದ ಹಾಗೇ.. ನಾವು ಯಾರೂ ಮನೆ ಫೋನ್ ಬಳಸುವುದಿಲ್ಲ ಎಂದರೆ, ಫೋನ್ ಬಿಲ್ ಯಾಕೆ ಇಷ್ಟೊಂದು ಬಂತು!!
ಮನೆ ಕೆಲಸದವಳು ನೆಲ ಒರಿಸುತ್ತಾನೇ.. ಕಳ್ಳಿ ತರ ಎಲ್ಲಾ ಕೇಳುತ್ತಾ ಇದ್ದಳು... ಮನೆಯವರೆಲ್ಲರ ದೃಷ್ಟಿ ಅವಳ ಕಡೆ ಹೋಯಿತು...
ಕೆಲಸದವಳು : ಮತ್ತಿನ್ನೇನು.. ನೀವೆಲ್ಲರೂ.. ನೀವ್ ನೀವ್ ಕೆಲಸ ಮಾಡೋ ಜಾಗದಲ್ಲಿಯ ಫೋನ್ ತಾನೆ ಯೂಸ್ ಮಾಡೋದು? ನಾನೂ ಅದನ್ನೇ ಮಾಡಿದ್ದು .... ತಪ್ಪಾ?
ಕರ್ಮ ರಿಟರ್ನ್ಸ್..











Click it and Unblock the Notifications